ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ವ್ಯಾಗನ್‍ಆರ್ ಎಕ್ಸ್ ಎಲ್5

ಮಾರುತಿ ಸುಜುಕಿ ವ್ಯಾಗನ್‍ಆರ್ ಎಕ್ಸ್ಎಲ್5 ಕಾರನ್ನು ಭಾರತದಲ್ಲಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ, ಇದು ಭಾರತದಲ್ಲಿ ಮಾರಾಟವಾಗುವ ಸ್ಟ್ಯಾಂಡರ್ಡ್ ವ್ಯಾಗನ್‍ಆರ್ ಪ್ರೀಮಿಯಂ ಉತ್ಪನ್ನವಾಗಿದೆ ಮತ್ತು ಮಾರುತಿ ಸುಜುಕಿಯು ನೆಕ್ಸಾ ಔಟ್ ಲೆಟ್‍‍‍ಗಳಲ್ಲಿ ಮಾರಾಟವಾಗುವ ನಿರೀಕ್ಷೆಯಿದೆ. ಮಾರುತಿ ಸುಜುಕಿ ವ್ಯಾಗನ್‍ಆರ್ ಎಕ್ಸ್ಎಲ್5 ಅನ್ನು ಸ್ಟ್ಯಾಂಡರ್ಡ್ ವ್ಯಾಗನ್‍ಆರ್ ಜೊತೆ ಸ್ಪಾಟ್ ಟೆಸ್ಟ್ ಮಾಡಲಾಗಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ವ್ಯಾಗನ್‍ಆರ್ ಎಕ್ಸ್ ಎಲ್5

ಮಾರುತಿ ಸುಜುಕಿ ಸ್ಟೇಬಲ್‍‍ನ ಪ್ರಸಿದ್ದ ಬ್ರ್ಯಾಂಡ್‍‍ಗಳಲ್ಲಿ ವ್ಯಾಗನ್ಆರ್ ಒಂದು. ಈ ಕಾರು 1999 ರಲ್ಲಿ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಟಾಲ್‍‍ಬಾಯ್ ಹ್ಯಾಚ್‍‍ಬ್ಯಾಕ್ ವಿಭಾಗಕ್ಕೆ ಬಿಡುಗಡೆಗೊಳಿಸಿದರು. ಮಾರುತಿ ಸುಜುಕಿ ವ್ಯಾಗನ್‍ಆರ್ ಕೈಗೆಟುಕುವ ದರ, ವಿಶಾಲವಾದ ಸ್ಪೆಸ್, ನಿರ್ವಹಣೆ ಸುಲಭವಾಗಿ ಈ ಎಲ್ಲಾ ಕಾರಣದಿಂದ ಇದನ್ನು ಅದ್ಭುತವಾದ ಕುಟಂಬ ಕಾರನ್ನಾಗಿ ಮಾಡಿತು. ಇದು ಇಂದಿಗೂ ಸಣ್ಣ ಕುಟಂಬಗಳ ಆದ್ಯತೆ ನೀಡುವ ಕಾರುಗಳಲ್ಲಿ ಒಂದಾಗಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ವ್ಯಾಗನ್‍ಆರ್ ಎಕ್ಸ್ ಎಲ್5

ಈ ವರ್ಷದ ಆರಂಭದಲ್ಲಿ ಮಾರುತಿ ಸುಜುಕಿ ಮೂರನೇ ಜನರೇಷನ್ ವ್ಯಾಗನ್‍ಆರ್ ಕಾರನ್ನು ದೇಶಿಯ ಮಾರುಕಟ್ಟೆಗೆ ಬಿಡುಗಡೆಮಾಡಿದ್ದರು. ಈ ಕಾರು ಬಿಡುಗಡೆಯಾಗಿ ಕಡಿಮೆ ಅವಧಿಯಲ್ಲಿ ಜನರ ಗಮನಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಹೊಸ ಮಾರುತಿ ಸುಜುಕಿ ವ್ಯಾಗನ್ಆರ್ ಬುಕ್ಕಿಂಗ್‍ ಅನ್ನು ಹೆಚ್ಚಿಸಿದೆ ಮತ್ತು ಕಂಪನಿಯು ಹೆಚ್ಚು ಪ್ರೀಮಿಯಂ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ವ್ಯಾಗನ್‍ಆರ್ ಎಕ್ಸ್ ಎಲ್5

ಪ್ರೀಮಿಯಂ ವ್ಯಾಗನ್‍ಆರ್ ಕಲ್ಪನೆಯು ಇತ್ತೀಚೆಗೆ ಬಿಡುಗಡೆಯಾದ ಎಕ್ಸ್ಎಲ್6 ಪ್ರೀಮಿಯಂ ಎಂಪಿ‍ವಿಗೆ ಹೋಲುತ್ತದೆ. ಮಾರುತಿ ಸುಜುಕಿ ಎಕ್ಸ್ಎಲ್6 ಮಾರುತಿ ಮತ್ತು ಸುಜುಕಿ ಎರ್ಟಿಗಾದ ಪ್ರೀಮಿಯಂ ಮತ್ತು ಹೆಚ್ಚು ವೈಶಿಷ್ಟ್ಯಗಳಿಂದ ಕೂಡಿದ ಆವೃತ್ತಿಯಾಗಿದೆ. ಇದು ಎರ್ಟಿಗಾ ಕಾರಿನ ವಿನ್ಯಾಸವನ್ನು ಹೋಲುವಂತಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ವ್ಯಾಗನ್‍ಆರ್ ಎಕ್ಸ್ ಎಲ್5

ಈ ಕಾರು ಎರ್ಟಿಗಾ ಕಾರುಕ್ಕಿಂತಲೂ ದೊಡ್ಡದಾಗಿದೆ ಮತ್ತು ಇಂಟಿರಿಯರ್ ಕೂಡ ಆಕರ್ಷಕರವಾಗಿರುವುದರಿಂದ ಗ್ರಾಹಕರಿಗೆ ಇಷ್ಟವಾಗುತ್ತದೆ. ಮಾರುತಿ ಸುಜುಕಿ ಎಕ್ಸ್ಎಲ್ 5 ಪ್ರೀಮಿಯಂ ಹ್ಯಾಚ್‍‍ಬ್ಯಾಕ್ ಟಾಪ್-ಸ್ಪೆಕ್ ವ್ಯಾಗನ್ಆರ್ ಅನ್ನು ಆಧರಿಸಿದೆ. ಆದರೆ ಹೆಚ್ಚಿನ ವೈಶಿಷ್ಟ್ಯ ಮತ್ತು ಹೊಸ ವಿನ್ಯಾಸಗಳೊಂದಿಗೆ ಬರಲಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ವ್ಯಾಗನ್‍ಆರ್ ಎಕ್ಸ್ ಎಲ್5

ಗಾಡಿವಾಡಿ ಸಂಸ್ಥೆ ಸ್ಪೈ ಚಿತ್ರದಲ್ಲಿ ಸ್ಟ್ಯಾಂಡರ್ಡ್ ವ್ಯಾಗನ್‍ಆರ್ ಜೊತೆಗೆ ಎಕ್ಸ್ಎಲ್ 5 ಹ್ಯಾಚ್‍‍ಬ್ಯಾಕ್ ಕಾರು ಕೂಡ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದಿರುವುದು ತಿಳಿಯುತ್ತದೆ. ಎಕ್ಸ್ಎಲ್ 5 ಕಾರು ಗಾತ್ರದಲ್ಲಿ ನೋಡಿದಾಗ ಸ್ಟ್ಯಾಂಡರ್ಡ್ ವ್ಯಾಗನ್‍ಆರ್ ಅಷ್ಟೇ ಅಗಲವಿದೆ, ಆದರೆ ಇದು ಸ್ವಲ ಮಟ್ಟದ ಎತ್ತರ ಹೊಂದಿದೆ. ಎತ್ತರದಲ್ಲಿ ಸ್ವಲ್ಪ ವ್ಯತ್ಯಾಸಕ್ಕೆ ಕಾರಣ ಎಕ್ಸ್ಎಲ್ 5 ಕಾರಿನಲ್ಲಿ ದೊಡ್ಡ ಅಲಾಯ್ ವ್ಹೀಲ್‍‍‍ಗಳನ್ನು ಹೊಂದಿದೆ. ವಿನ್ಯಾಸವನ್ನು ನೋಡಿದರೆ ಒಂದೇ ರೀತಿಯಲ್ಲಿ ಕಾಣುತ್ತೀವೆ. ಸೂಕ್ಷ್ಮವಾಗಿ ಗಮನಿಸಿದಾಗ ಬಂಪರ್‍‍ನಲ್ಲಿ ಸಣ್ಣ ಮಟ್ಟದ ಬದಲಾವಣೆ ಮಾಡಿದ್ದಾರೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ವ್ಯಾಗನ್‍ಆರ್ ಎಕ್ಸ್ ಎಲ್5

ಟೈಲ್‍‍ಗೇಟ್ ಸರಳವಾದ ವಿನ್ಯಾಸವನ್ನು ಹೊಂದಿದೆ ಮತ್ತು ನಂಬರ್ ಪ್ಲೇಟ್‍ಗಿಂತ ಮೇಲಿರುವ ಕ್ರೋಮ್ ಸ್ಟ್ರೀಪ್ ಹೊಂದಿದೆ. ಆದರೂ ಅತ್ಯಂತ ಸ್ಪಷ್ಟವಾದ ವ್ಯತ್ಯಾಸವೆಂದರೆ ಟೈಲ್ ಲೈಟ್‍ ಆಗಿದೆ. ಬಲ್ಫ್-ಲಿಟ್ ರಿಫ್ಲೆಕ್ಟರ್-ಶೈಲಿಯ ಯುನಿಟ್ ಅನ್ನು ಎಲ್‍ಇಡಿ ಟೈಲ್ ಲ್ಯಾಂಪ್‍‍ಗಳಿಂದ ಬದಲಾಯಿಸಲಾಗಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ವ್ಯಾಗನ್‍ಆರ್ ಎಕ್ಸ್ ಎಲ್5

ಮಾರುತಿ ಸುಜುಕಿ ಇಗ್ನಿಸ್‍‍ನಲ್ಲಿ ಕಂಡುಬರುವ ಕಾರುಗಳಿಗೆ ಹೋಲುವ ಅಲಾಯ್ ವ್ಹೀಲ್‍‍ಗಳು ವೆಗನ್‍ಆರ್ ಎಕ್ಸ್ಎಲ್ 5 ಕಾರಿನಲ್ಲಿ ಕಂಡು ಬಂದಿದೆ. ಮುಂಭಾಗದಲ್ಲಿ ಪ್ರೀಮಿಯಂ ಹ್ಯಾಚ್‍‍ಬ್ಯಾಕ್‍ನಲ್ಲಿ ಪ್ರೋಜೆಕ್ಟರ್ ಹೆಡ್‍‍ಲ್ಯಾಂಪ್‍ ಮತ್ತು ಬಂಪರ್ ಮತ್ತು ಗ್ರೀಲ್ ವಿನ್ಯಾಸವನ್ನು ಹೊಂದುವ ನಿರೀಕ್ಷೆಯಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ವ್ಯಾಗನ್‍ಆರ್ ಎಕ್ಸ್ ಎಲ್5

ಕಾರಿನ ಇಂಟಿರಿಯರ್‍ ಅನ್ನು ಕೂಡ ನವೀಕರಿಸಲಾಗುವುದು ಮತ್ತು ಉನ್ನತ ಮಟ್ಟದ ವಸ್ತುಗಳು, ಉತ್ತಮ ಗುಣಮಟ್ಟದ ಸೀಟ್ ಮತ್ತು ಆ್ಯಪಲ್ ಕಾರ್‍‍ಪ್ಲೆ ಮತ್ತು ಆಂಡ್ರಾಯ್ಡ್ ಆಟೋ ನೊಂದಿಗೆ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಹೊಂದಿರಲಿದೆ.

MOST READ: ಭಾರತದಲ್ಲಿ ಐಕಾನಿಕ್ ಯಜ್ಡಿ ಬೈಕ್‌ಗಳ ಮರುಬಿಡುಗಡೆ ಪಕ್ಕಾ

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಎಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ವ್ಯಾಗನ್‍ಆರ್ ಎಕ್ಸ್ ಎಲ್5ಕ್ಸ್ಎಲ್5

ಮಾರುತಿ ಸುಜುಕಿ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿದೆ. ಮಧ್ಯಮ ವರ್ಗದವರ ಮೆಚ್ಚಿನ ಕಾರು ವ್ಯಾಗನ್‍ಆರ್ ಮತಷ್ಟು ವೈಶಿಷ್ಟ್ಯಗಳೊಂದಿಗೆ ಬರಲಿದೆ. ಮಾರುತಿ ಸುಜುಕಿಯ ಮುಂದಿನ ಬಹುನಿರೀಕ್ಷಿತ ಕಾರುಗಳಲ್ಲಿ ಒಂದಾಗಿದೆ. ಪ್ರೀಮಿಯಂ ಕಾರುಗಳನ್ನು ನೆಕ್ಸಾ ಓಟ್ ಲೆಟ್‍‍ಗಳಲ್ಲಿ ಮಾರಾಟ ಮಾಡಬಹುದು.

Article Published On: Thursday, September 19, 2019, 19:32 [IST]
English summary
Maruti Suzuki WagonR-Based XL5 Premium Hatchback Spotted Testing - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+