ಮಾರುತಿ ಸುಜುಕಿ ಎಕ್ಸ್ಎಲ್6 ಖರೀದಿಗಾಗಿ ಇನ್ನಷ್ಟು ಕಾಯಲೇಬೇಕು

ಮಾರುತಿ ಸುಜುಕಿ ಇತ್ತೀಚಿಗೆ ತನ್ನ ಎಕ್ಸ್ಎಲ್6 ಎಂಪಿವಿಯನ್ನು ಬಿಡುಗಡೆ ಮಾಡಿದೆ. ಮಾರುತಿ ಪ್ರೀಮಿಯಂ ನೆಕ್ಸಾ ಡೀಲರ್‍‍ಗಳ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಮಾರಟವಾಗುತ್ತಿದೆ. ಭಾರತದ 20 ನಗರಗಳಲ್ಲಿ ಮಾರುತಿ ಸುಜುಕಿ ಎಕ್ಸ್ಎಲ್6 ಕಾರಿಗಾಗಿ ಕಾಯುವಿಕೆ ಅವಧಿಯನ್ನು ಹೆಚ್ಚಿಸಿದೆ, ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಾರುತಿ ಸುಜುಕಿ ಎಕ್ಸ್ಎಲ್6 ಖರೀದಿಗಾಗಿ ಇನ್ನಷ್ಟು ಕಾಯಲೇಬೇಕು

ಕೆಲವು ಪ್ರಮುಖ ನಗರಗಳಲ್ಲಿ ಗ್ರಾಹಕರು ಎಕ್ಸ್ಎಲ್6 ಕಾರಿಗಾಗಿ ಕಾಯುವಿಕೆ ಅವಧಿಯನ್ನು ಹೆಚ್ಚಿಸಿದೆ, ಇನ್ನೂ ಕೆಲವು ನಗರಗಳಲ್ಲಿ ಕಾಯುವಿಕೆ ಅವಧಿ ಕಡಿಮೆ ಇದ್ದರೆ, ಕೆಲವು ಕಡೆ ಯಾವುದೇ ಕಾಯುವಿಕೆ ಅವಧಿ ಇಲ್ಲ. ದೇಶದ ಕೆಲವು ಪ್ರಮುಖ ನಗರಗಳಾದ ದೆಹಲಿ, ಚೆನ್ನೈ, ಜೈಪುರ, ಅಹಮದಾಬಾದ್, ಲಕ್ನೋ, ಚಂಡೀಗಢ ಮತ್ತು ನೋಯ್ಡಾ ದಲ್ಲಿ ಯಾವುದೇ ಕಾಯುವಿಕೆ ಅವಧಿ ಹೊಂದಿಲ್ಲ.

ಮಾರುತಿ ಸುಜುಕಿ ಎಕ್ಸ್ಎಲ್6 ಖರೀದಿಗಾಗಿ ಇನ್ನಷ್ಟು ಕಾಯಲೇಬೇಕು

ಗುರುಗ್ರಾಮ್ ಮತ್ತು ಪಾಟ್ನಾ, ಕೊಯಮತ್ತೂರು ಮತ್ತು ಫರಿದಾಬಾದ್ ಮತ್ತು ಗಾಜಿಯಾಬಾದ್‌ನಲ್ಲಿ ಮಾರುತಿ ಸುಜುಕಿ ಎಕ್ಸ್‌ಎಲ್6 ಕಾರಿಗಾಗಿ ಕಾಯುವಿಕೆ ಅವಧಿ ಹೊಂದಿದ್ದು, ಎರಡು ವಾರದಿಂದ ಮೂರು ವಾರ ಅಥವಾ 45 ದಿನಗಳ ಕಾಲ ವಿಭಿನ್ನವಾದ ಕಾಯುವಿಕೆ ಅವಧಿಯನ್ನು ಕೂಡ ಹೊಂದಿದೆ.

ಮಾರುತಿ ಸುಜುಕಿ ಎಕ್ಸ್ಎಲ್6 ಖರೀದಿಗಾಗಿ ಇನ್ನಷ್ಟು ಕಾಯಲೇಬೇಕು

ಥಾಣೆ, ಕೋಲ್ಕತಾ ಮತ್ತು ಮುಂಬೈನಲ್ಲಿ ಎರಡು ಮತ್ತು ನಾಲ್ಕು ವಾರಗಳ ಕಾಯುವಿಕೆ ಅವಧಿ ಇದ್ದರೆ ಪುಣೆ ಮತ್ತು ಬೆಂಗಳೂರಿನಲ್ಲಿ ಕಾಯುವಿಕೆ ಅವಧಿ ನಾಲ್ಕು ವಾರಗಳ ತನಕ ಇದೆ.

ಮಾರುತಿ ಸುಜುಕಿ ಎಕ್ಸ್ಎಲ್6 ಖರೀದಿಗಾಗಿ ಇನ್ನಷ್ಟು ಕಾಯಲೇಬೇಕು

ಸೂರತ್‌ನಲ್ಲಿರುವ ಗ್ರಾಹಕರು ನಾಲ್ಕರಿಂದ ಆರು ವಾರಗಳವರೆಗೆ ಕಾಯಬೇಕಾಗಿದೆ ಮತ್ತು ಇಂದೋರ್‌ನ ಗ್ರಾಹಕರು ತಮ್ಮ ಮಾರುತಿ ಎಕ್ಸ್‌ಎಲ್ 6 ಎಂಪಿವಿಗಳ ವಿತರಣೆಗೆ ಆರು ವಾರಗಳವರೆಗೆ ಕಾಯುವಿಕೆ ಅವಧಿಯನ್ನು ಹೆಚ್ಚಿಸಿದೆ. ಆಟೋಮ್ಯಾಟಿಂಗ್ ರೂಪಾಂತರಗಳಿಗಾಗಿ ಮಾತ್ರ ಹೈದರಾಬಾದ್‌ನಲ್ಲಿ ಎರಡು ವಾರಗಳ ಕಾಯುವಿಕೆ ಅವಧಿ ಹೊಂದಿದೆ.

ಮಾರುತಿ ಸುಜುಕಿ ಎಕ್ಸ್ಎಲ್6 ಖರೀದಿಗಾಗಿ ಇನ್ನಷ್ಟು ಕಾಯಲೇಬೇಕು

ಮಾರುತಿ ಸುಜುಕಿ ಎಕ್ಸ್ಎಲ್6 1.5 ಲೀಟರ್ ಕೆ15 ಪೆಟ್ರೋಲ್ ಎಂಜಿನ್ 103 ಬಿಎಚ್‍ಪಿ ಪವರ್ ಮತ್ತು138 ಎನ್‍ಎಂ ಪೀಕ್ ಟಾರ್ಕ್ ಉತ್ಪಾದಿಸುವ ಗುಣ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಜೋಡಿಸಿದೆ. ಕಂಪನಿಯು 4-ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಹೊಂದಿಕೊಂಡಿದೆ.

ಮಾರುತಿ ಸುಜುಕಿ ಎಕ್ಸ್ಎಲ್6 ಖರೀದಿಗಾಗಿ ಇನ್ನಷ್ಟು ಕಾಯಲೇಬೇಕು

ಹೆಚ್ಚು ಪ್ರೀಮಿಯಂ ಸೌಲಭ್ಯಗಳನ್ನು ಪಡೆದುಕೊಂಡಿರುವ ಎಕ್ಸ್ಎಲ್6 ಕಾರು ಹೊಸ ಡಿಸೈನ್ ಪ್ರೇರಿತ ಫ್ರಂಟ್ ಗ್ರಿಲ್, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಹೆಡ್‌ಲ್ಯಾಂಪ್ ಕ್ಲಸ್ಟರ್, ಎಲ್‌ಇಡಿ ಡಿಆರ್‌ಎಸ್ ಟರ್ನ್ ಇಂಡಿಕೇಟರ್, 15-ಇಂಚಿನ ಅಲಾಯ್ ವೀಲ್ಹ್ ಮತ್ತು ಎಲ್ಇಡಿ ಟೈಲ್ ಲೈಟ್ಸ್ ಸೌಲಭ್ಯ ಹೊಂದಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಮಾರುತಿ ಸುಜುಕಿ ಎಕ್ಸ್ಎಲ್6 ಖರೀದಿಗಾಗಿ ಇನ್ನಷ್ಟು ಕಾಯಲೇಬೇಕು

ಭಾರತೀಯ ಎಕ್ಸ್ ಶೋ ರೂಂ ಪ್ರಕಾರ ಕಾರಿನ ಬೆಲೆ ರೂ. 9.79 ಲಕ್ಷ ಮತ್ತು 11.46 ಲಕ್ಷ ದರವನ್ನು ಹೊಂದಿದೆ, ಪ್ರಯಾಣಿಕರ ಸುರಕ್ಷತೆಗಾಗಿ ಕಾರಿನಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಬ್ರೇಕ್ ಅಸಿಸ್ಟ್, ಚೈಲ್ಡ್ ಸೀಟ್ ಮೌಂಟ್, ಕ್ರೂಸ್ ಕಂಟ್ರೋಲರ್, ಎಲೆಕ್ಟ್ರಾನಿಕ್ ಸ್ಟಾಬಿಲಿಟಿ ಪ್ರೋಗ್ರಾಂ, ಹಿಲ್ ಅಸಿಸ್ಟ್, ರೇರ್ ಪಾರ್ಕಿಂಗ್ ಸೆನ್ಸಾರ್, ಸೆಂಟ್ರಲ್ ಲಾಕಿಂಗ್, ಫ್ರಂಟ್ ಮತ್ತು ರೇರ್ ಸ್ಕಿಡ್ ಪ್ಲೇಟ್, ರೇರ್ ಪಾರ್ಕಿಂಗ್ ಕ್ಯಾಮೆರಾ ಸೌಲಭ್ಯವನ್ನು ಅಳವಡಿಸಲಾಗಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಮಾರುತಿ ಸುಜುಕಿ ಎಕ್ಸ್ಎಲ್6 ಖರೀದಿಗಾಗಿ ಇನ್ನಷ್ಟು ಕಾಯಲೇಬೇಕು

ದೇಶಿಯ ಮಾರುಕಟ್ಟೆಯಲ್ಲಿ ಕುಸಿತ ಕಂಡಿರುವ ಹಿನ್ನಲೆಯಲ್ಲಿ ಕಾಯುವಿಕೆ ಅವಧಿಯನ್ನು ಹೆಚ್ಚಿಸುವುದು ಸರಿಯಾಗಿದೆ. ಕಂಪನಿ ಕಾಯುವಿಕೆ ಅವಧಿಯು ಹೆಚ್ಚಿಸಿರುವುದರಿಂದ ಕಾರಿನ ಉತ್ಪಾದನೆಯನ್ನು ಸರಿಯಾದ ಅವಧಿಯಲ್ಲಿ ಮಾಡಲು ಕಾಲಾವಕಾಶ ಲಭಿಸುತ್ತದೆ. ಕಾರಿನ ಬೇಡಿಕೆ ಹೆಚ್ಚಾದರೆ ಕಾಯುವಿಕೆ ಅವಧಿಯನ್ನು ಕಡಿಮೆ ಮಾಡುವ ಸಾಧ್ಯತೆಗಳಿವೆ.

Article Published On: Thursday, September 5, 2019, 12:19 [IST]
English summary
Waiting For Your XL6? It Could Take Up To Six Weeks! - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+