ಬಿಡುಗಡೆಗೂ ಮೊದಲೇ ಡೀಲರ್‍‍ಗಳ ಬಳಿ ತಲುಪಿದೆಯಾ ವಿಟಾರಾ ಬ್ರಿಝಾ?

2020ರ ಮಾರುತಿ ವಿಟಾರಾ ಬ್ರಿಝಾ ಬಿಎಸ್-6 ಪೆಟ್ರೋಲ್ ಆವೃತ್ತಿಯ ಕಾರ್ ಅನ್ನು ಈಗಾಗಲೇ ಡೀಲರ್‍‍ಗಳಿಗೆ ವಿತರಿಸಲು ಪ್ರಾರಂಭಿಸಿದ್ದು, ಕೆಲವು ಡೀಲರ್‍‍ಗಳಿಗೆ ಬಿಎಸ್-6 ವಿಟಾರಾ ಬ್ರಿಝಾ ಕಾರು ತಲುಪಿದೆ ಎಂದು ರಶ್‍‍ಲೇನ್ ವರದಿ ಮಾಡಿದೆ.

ಬಿಡುಗಡೆಗೂ ಮೊದಲೇ ಡೀಲರ್‍‍ಗಳ ಬಳಿ ತಲುಪಿದೆಯಾ ವಿಟಾರಾ ಬ್ರಿಝಾ?

2020ರಲ್ಲಿ ನಡೆಯಲ್ಲಿರುವ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾದ ವಿಟಾರಾ ಬ್ರಿಝಾ ಡೀಲರ್‍‍ಗಳಿಗೆ ತಲುಪಲು ಪ್ರಾರಂಭವಾಗಿದೆ ಎಂದು ರಶ್‍‍ಲೇನ್ ವರದಿ ಮಾಡಿದೆ. ಸ್ಪಾಟ್ ಟೆಸ್ಟ್ ನಲ್ಲಿ ಕಂಡುಬಂದಿರುವ ರೀತಿಯಲ್ಲೇ ಡೀಲರ್‍‍ಗಳಿಗೆ ತಲುಪಿರುವ ಸಾಧ್ಯತೆಗಳಿವೆ.

ಬಿಡುಗಡೆಗೂ ಮೊದಲೇ ಡೀಲರ್‍‍ಗಳ ಬಳಿ ತಲುಪಿದೆಯಾ ವಿಟಾರಾ ಬ್ರಿಝಾ?

ಆದರೆ ಡೀಲರ್‍‍ಗಳ ಬಳಿ ತಲುಪಿರುವ ಹೊಸ ವಿಟಾರಾ ಬ್ರಿಝಾ ನೋಡಿದಾಗ ಅದು ಉತ್ಪಾದನಾ ಹಂತದ ಮಾದರಿ ಎಂದು ನಿರೀಕ್ಷಿಸಬಹುದು. ಹೊಸ ವಿಟಾರಾ ಬ್ರಿಝಾದಲ್ಲಿ ಹೆಡ್‍ಲ್ಯಾಂಪ್‍‍ನಲ್ಲಿ ಗಮನಾರ್ಹ ಬದಲಾವಣೆ ಮಾಡಲಾಗಿದೆ.

ಬಿಡುಗಡೆಗೂ ಮೊದಲೇ ಡೀಲರ್‍‍ಗಳ ಬಳಿ ತಲುಪಿದೆಯಾ ವಿಟಾರಾ ಬ್ರಿಝಾ?

ಇನ್ನೂ ಈ ಕಾರಿನ ಮುಂಭಾಗ ಎಲ್‍ಇಡಿ ಹೆಡ್‍ಲ್ಯಾಂಪ್‍‍ಗಳನ್ನು ಹೊಂದಿದ್ದು, ಹೊಸ ಡಿ‍ಆರ್‍ಎಲ್‍‍ಗಳಿಂದ ಕೂಡಿದೆ. ಹೊಸ ಬ್ರಿಝಾ ಕಾರು ಕ್ರೋಮ್ ಗ್ರಿಲ್ ಅದೇ ರೀತಿ ಇದೆ. ಫಾಗ್ ಲ್ಯಾಂಪ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಗೂ ಮೊದಲೇ ಡೀಲರ್‍‍ಗಳ ಬಳಿ ತಲುಪಿದೆಯಾ ವಿಟಾರಾ ಬ್ರಿಝಾ?

ಹೊಸ ಕಾರಿನಲ್ಲಿ ಯಾವುದೇ ಶೀಟ್ ಮೆಟಲ್ ಬದಲಾವಣೆಗಳನ್ನು ಮಾಡಿಲ್ಲ ಮತ್ತು ಆದ್ದರಿಂದ ಫ್ರೊಫೈಲ್ ಬದಲಾವಣೆ ಮಾಡಲಾಗಿಲ್ಲ. ಹೊಸ ಎಸ್‍‍ಯುವಿಯ ಇಂಟಿರಿಯರ್‍‍ನಲ್ಲಿ ಕೆಲ ಬದಲಾವಣೆಗಳಾಗುವ ಸಾಧ್ಯತೆಗಳಿವೆ.

ಬಿಡುಗಡೆಗೂ ಮೊದಲೇ ಡೀಲರ್‍‍ಗಳ ಬಳಿ ತಲುಪಿದೆಯಾ ವಿಟಾರಾ ಬ್ರಿಝಾ?

ಆ್ಯಪಲ್ ಕಾರ್‍‍ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಹೊಂದಿರುವ ಹೊಸ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅಳವಡಿಸಲಾಗುವುದು. ಮಾರುಕಟ್ಟೆಯಲ್ಲಿರುವ ಎಸ್‍‍ಯುವಿಯ ಇಂಟಿರಿಯರ್‍‍ನಲ್ಲಿರುವುದಕ್ಕಿಂತ ಹೆಚ್ಚಿನ ಪ್ರೀಮಿಯಂ ಅಂಶಗಳನ್ನು ಹೊಸ ಎಸ್‍‍ಯುವಿಯಲ್ಲಿ ನೀಡಲಾಗುವುದು.

ಬಿಡುಗಡೆಗೂ ಮೊದಲೇ ಡೀಲರ್‍‍ಗಳ ಬಳಿ ತಲುಪಿದೆಯಾ ವಿಟಾರಾ ಬ್ರಿಝಾ?

2020ರ ವಿಟಾರಾ ಬ್ರಿಝಾ, ಮಾರುತಿ ಸುಜುಕಿ ಕಂಪನಿಯ 1.5 ಲೀಟರಿನ ಸ್ಮಾರ್ಟ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿರುತ್ತದೆ. ಈ ಎಂಜಿನ್ ಅನ್ನು ಕಂಪನಿಯ ಇತರ ಮಾದರಿಗಳಲ್ಲಿ ಅಳವಡಿಸಲಾಗಿದೆ.

MOST READ: ದುಬಾರಿ ಬೆಂಝ್ ಕಾರನ್ನು ಹೆಲಿಕಾಪ್ಟರ್ ಮೂಲಕ ಪುಡಿ ಮಾಡಿದ ಭೂಪ

ಬಿಡುಗಡೆಗೂ ಮೊದಲೇ ಡೀಲರ್‍‍ಗಳ ಬಳಿ ತಲುಪಿದೆಯಾ ವಿಟಾರಾ ಬ್ರಿಝಾ?

ಈ ಎಂಜಿನ್ 103.5 ಬಿ‍‍ಹೆಚ್‍‍ಪಿ ಪವರ್ ಹಾಗೂ 138 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಪೆಟ್ರೋಲ್ ಎಂಜಿನ್‍‍ಗಳನ್ನು ಬಿ‍ಎಸ್ 6 ನಿಯಮಗಳಿಗೆ ತಕ್ಕಂತೆ ನವೀಕರಿಸಲಾಗಿರುತ್ತದೆ. ಇದರ ಜೊತೆಗೆ ಕಂಪನಿಯು ಬಿ‍ಎಸ್6 ನಿಯಮಗಳು ಜಾರಿಗೆ ಬಂದ ನಂತರ ಡೀಸೆಲ್ ಎಂಜಿನ್ ವಾಹನಗಳಿಗೆ ಬೇಡಿಕೆ ಹೆಚ್ಚಿದರೆ ಬಿ‍ಎಸ್6 ಡೀಸೆಲ್ ಎಂಜಿನ್‍‍ಗಳ ಮಾದರಿಗಳನ್ನು ಬಿಡುಗಡೆ ಮಾಡಲಾಗುತ್ತದೆ.

MOST READ: ಕಳ್ಳತನವಾಗಿದ್ದ ಕಾರು ಫಾಸ್ಟ್‌ಟ್ಯಾಗ್‌‍‍ನಿಂದಾಗಿ ವಾಪಸ್ ಸಿಕ್ಕಿದ್ದೆ ಒಂದು ರೋಚಕ

ಬಿಡುಗಡೆಗೂ ಮೊದಲೇ ಡೀಲರ್‍‍ಗಳ ಬಳಿ ತಲುಪಿದೆಯಾ ವಿಟಾರಾ ಬ್ರಿಝಾ?

ಮಾರುತಿ ಸುಜುಕಿ ವಿಟಾರಾ ಬ್ರಿಝಾ ಎಸ್‍‍ಯುವಿಯನ್ನು ಮೊದಲ ಬಾರಿಗೆ 2016ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾಗಿತ್ತು. ಬಿಡುಗಡೆಯಾದ ಕೆಲವು ತಿಂಗಳುಗಳಲ್ಲಿಯೇ ಈ ಎಸ್‍‍ಯುವಿ ಜನಪ್ರಿಯವಾಗಿತ್ತು.

MOST READ: ನವೆಂಬರ್ ತಿಂಗಳಲ್ಲಿ ಮಾರಾಟವಾದ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳೆಷ್ಟು ಗೊತ್ತಾ?

ಬಿಡುಗಡೆಗೂ ಮೊದಲೇ ಡೀಲರ್‍‍ಗಳ ಬಳಿ ತಲುಪಿದೆಯಾ ವಿಟಾರಾ ಬ್ರಿಝಾ?

ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿ ಹೆಚ್ಚು ಮಾರಾಟವಾಗುತ್ತಿದ್ದ ಫೋರ್ಡ್ ಇಕೋಸ್ಪೋರ್ಟ್ ಅನ್ನು ಹಿಂದಿಕ್ಕಿದ ಬ್ರಿಝಾ ನಂ. 1 ಸ್ಥಾನಕ್ಕೇರಿತ್ತು. ಮಾರುತಿ ಸುಜುಕಿ ವಿಟಾರಾ ಬ್ರಿಝಾ ಎಸ್‍‍ಯುವಿಯು ಮಾರಾಟದಲ್ಲಿ ಕುಸಿತ ಕಂಡಿರುವುದರಿಂದ ಪೆಟ್ರೋಲ್ ಮಾದರಿಯಲ್ಲಿ ಬಿಡುಗಡೆಗೊಳಿಸಲು ಕಂಪನಿಯು ಸಜ್ಜಾಗಿದೆ.

ಬಿಡುಗಡೆಗೂ ಮೊದಲೇ ಡೀಲರ್‍‍ಗಳ ಬಳಿ ತಲುಪಿದೆಯಾ ವಿಟಾರಾ ಬ್ರಿಝಾ?

ವಿಟಾರಾ ಬ್ರಿಝಾ ಬಿಎಸ್-6 ಎಂಜಿನ್ ಅನ್ನು ಹೊಂದಿರಲಿದೆ. 2020ರ ಮಾರುತಿ ವಿಟಾರಾ ಬ್ರಿಝಾ ಬಿಎಸ್-6 ಪೆಟ್ರೋಲ್ ಆವೃತ್ತಿಯು ಈಗಾಗಲೇ ಡೀಲರ್‍‍ಗಳಿಗೆ ವಿತರಿಸಲು ಪ್ರಾರಂಭಿಸಿದೆ ಎಂದು ವರದಿಯಾಗಿದೆ. ಆದರೆ ಡೀಲರ್‍‍ಗಳ ಬಳಿ ತಲುಪಿರುವ ಹೊಸ ವಿಟಾರಾ ಬ್ರಿಝಾ ನೋಡಿದಾಗ ಅದು ಉತ್ಪಾದನ ಹಂತದ ಮಾದರಿ ಎಂದು ನಿರೀಕ್ಷಿಸಬಹುದು. ಆದರೆ ನಿಜಕ್ಕೂ ಬಿಡುಗಡೆ ಮೊದಲು ಡೀಲರ್‍‍ಗಳಿಗೆ ವಿತರಣೆಯಾಗಿರುವುದು ಆಶ್ಚರ್ಯದ ವಿಷಯವಾಗಿದೆ.

Article Published On: Friday, December 27, 2019, 15:50 [IST]
English summary
2020 Maruti Brezza petrol BS6 facelift spied undisguised at dealer? - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+