ದುಬಾರಿ ಬೆಂಝ್ ಕಾರನ್ನು ಹೆಲಿಕಾಪ್ಟರ್ ಮೂಲಕ ಪುಡಿ ಮಾಡಿದ ಭೂಪ

ವಿಶ್ವದಲ್ಲಿ ಅತ್ಯಂತ ದುಬಾರಿ ಕಾರು ಬ್ರ್ಯಾಂಡ್‍‍ಗಳಲ್ಲಿ ಮರ್ಸಿಡಿಸ್ ಬೆಂಝ್ ಅಗ್ರಸ್ಥಾನದಲ್ಲಿದೆ. ಮರ್ಸಿಡಿಸ್ ಬೆಂಝ್ ಕಾರು ಖರೀದಿಸುವ ಕನಸು ಇರಲಿ, ಅದರಲ್ಲಿ ಒಮ್ಮೆಯಾದರೂ ಪ್ರಯಾಣ ಮಾಡಬೇಕೆಂಬ ಕನಸು ಹಲವರಿಗಿದೆ. ಇಂತಹ ದುಬಾರಿ ಬೆಂಝ್ ಕಾರನ್ನು ಒಬ್ಬ ಭೂಪ ಸಾವಿರ ಅಡಿಯಿಂದ ಹೆಲಿಕಾಪ್ಟರ್ ಮೂಲಕ ಕೆಳಗೆ ಹಾಕಿದ್ದಾನೆ.

ದುಬಾರಿ ಬೆಂಝ್ ಕಾರನ್ನು ಹೆಲಿಕಾಪ್ಟರ್ ಮೂಲಕ ಪುಡಿ ಮಾಡಿದ ಭೂಪ

ಇದು ವಿಚಿತ್ರವಾದರೂ ಸತ್ಯವಾಗಿದೆ. ಇಲ್ಲಿ ಜನರು ಸಾಮಾನ್ಯ ಕಾರು ಖರೀದಿಸಲು ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಸಾಮಿಯೊಬ್ಬ ತನ್ನ ಬೆಂಝ್ ಕಾರ್ ಅನ್ನು ಧ್ವಂಸಗೊಳಿಸಿರುವ ಸುದ್ದಿ ಇದೀಗ ಪ್ರಪಂಚಾದ್ಯಂತ ಸಖತ್ ಸೌಂಡ್ ಮಾಡುತ್ತಿದೆ. ಕಾರ್ ಅನ್ನು ಹೆಲಿಕಾಪ್ಟರ್ ಮೂಲಕ ಬಿಸಾಡಿರುವ ವೀಡಿಯೋವನ್ನು ಯೂಟ್ಯೂಬ್‍‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ದುಬಾರಿ ಬೆಂಝ್ ಕಾರನ್ನು ಹೆಲಿಕಾಪ್ಟರ್ ಮೂಲಕ ಪುಡಿ ಮಾಡಿದ ಭೂಪ

ರಷ್ಯಾ ಮೂಲದ ಇಗೋರ್ ಮೊರಾಜ್ ಎಂಬ ಅಸಾಮಿಯೇ ತನ್ನ ಮರ್ಸಿಡಿಸ್ ಬೆಂಝ್ ಎಎಂಜಿ ಜಿ 63 ಬೆಂಝ್ ಕಾರ್ ಅನ್ನು ಧ್ವಂಸಗೊಳಿಸಿದವನು. ಮರ್ಸಿಡಿಸ್ ಬೆಂಝ್ ಕಾರಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ.

ದುಬಾರಿ ಬೆಂಝ್ ಕಾರನ್ನು ಹೆಲಿಕಾಪ್ಟರ್ ಮೂಲಕ ಪುಡಿ ಮಾಡಿದ ಭೂಪ

ಇಗೋರ್ ಮೊರಾಝ್ ಕೂಡ ಬೆಂಝ್ ಕಾರಿನ ಅಭಿಮಾನಿಯಾಗಿದ್ದಾನೆ. ಬೆಂಝ್ ಮೇಲೆ ಇರುವ ಅಭಿಮಾನಕ್ಕೆ ಇವರು ಬೆಂಝ್ ಎಎಂಜಿ ಜಿ63 ಎಸ್‍ಯುವಿಯನ್ನು ಖರೀದಿಸಿದ್ದರು. ಇಗೋರ್ ಅವರು 2018ರಲ್ಲಿ ಬೆಂಝ್ ಎಎಂಜಿ ಜಿ63 ಎಸ್‍ಯುವಿಯನ್ನು ಖರೀದಿಸಿದ್ದರು.

ದುಬಾರಿ ಬೆಂಝ್ ಕಾರನ್ನು ಹೆಲಿಕಾಪ್ಟರ್ ಮೂಲಕ ಪುಡಿ ಮಾಡಿದ ಭೂಪ

ಆದರೆ ಇವರು ಖರೀದಿಸಿದ ಹೊಸ ಕಾರಿನಲ್ಲಿ ಪ್ರತಿ ಬಾರಿಯು ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿತ್ತು ಎನ್ನುವುದು ಇಗೋರ್ ಅವರ ಆರೋಪವಾಗಿದೆ. ಇಗೋರ್ ಅವರು ಪ್ರೀತಿಯಿಂದ ರೈಡ್ ಮಾಡಲು ಈ ಕಾರ್ ಅನ್ನು ಖರೀದಿಸಿದ್ದರು.

ದುಬಾರಿ ಬೆಂಝ್ ಕಾರನ್ನು ಹೆಲಿಕಾಪ್ಟರ್ ಮೂಲಕ ಪುಡಿ ಮಾಡಿದ ಭೂಪ

ಆದರೆ ಪ್ರತಿ ಬಾರಿ ತಾಂತ್ರಿಕ ತೊಂದರೆಯಿಂದಾಗಿ ಈ ಕಾರು ಹೆಚ್ಚಿನ ಕಾಲ ಗ್ಯಾರೇಜ್‍ನಲ್ಲಿ ಇರುತ್ತಿತ್ತು ಎಂದು ವರದಿಯಾಗಿದೆ. ವಾರಂಟಿಯನ್ನು ನೀಡಿದರೂ ಅದಕ್ಕೆಅನುಗುಣವಾಗಿ ಸರಿಮಾಡಲು ಡೀಲರ್‍‍ಗಳು ನಿರಾಕರಿಸಿದ್ದಾರೆ.

ದುಬಾರಿ ಬೆಂಝ್ ಕಾರನ್ನು ಹೆಲಿಕಾಪ್ಟರ್ ಮೂಲಕ ಪುಡಿ ಮಾಡಿದ ಭೂಪ

ಬಹಳ ಕನಸನ್ನು ಕಟ್ಟಿಕೊಂಡು ಕಾರನ್ನು ಖರೀದಿಸಿದ ಇಗೋರ್‍‍ಗೆ ಕಾರು ಪ್ರತಿ ಬಾರಿಯು ತಾಂತ್ರಿಕ ತೊಂದರೆ ಉಂಟಾಗುತ್ತಿದ್ದರಿಂದ ಬಹಳ ನಿರಾಸೆಯಾಗಿದೆ. ಇದರಿಂದ ಕಾರನ್ನು ಹೆಲಿಕಾಪ್ಟರ್ ನಲ್ಲಿ 1000 ಅಡಿ ಎತ್ತರಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಂದ ಅದನ್ನು ಕೆಳಗೆ ಬೀಳಿಸಿ ಸಂಪೂರ್ಣವಾಗಿ ಧ್ವಂಸ ಮಾಡಿದ್ದಾನೆ.

MOST READ: ಪ್ರತಿ ಲೀಟರ್ ನೀರಿಗೆ 35 ಕಿ.ಮಿ ಮೈಲೇಜ್ ನೀಡುವ ಕಾರ್ ಎಂಜಿನ್ ಸಿದ್ದಪಡಿಸಿದ 21 ವರ್ಷದ ಯುವಕ

ದುಬಾರಿ ಬೆಂಝ್ ಕಾರನ್ನು ಹೆಲಿಕಾಪ್ಟರ್ ಮೂಲಕ ಪುಡಿ ಮಾಡಿದ ಭೂಪ

ಕಾರ್ ಅನ್ನು ಹೆಲಿಕಾಪ್ಟರ್ ಮೇಲಿನಿಂದ ಕೆಳಗೆ ಬೀಳಿಸಿ ಪುಡಿಗೊಳಿಸುವ 7 ನಿಮಿಷಗಳ ವೀಡಿಯೋ ಮಾಡಿ ಯೂಟ್ಯೂಬ್‍ಗೆ ಆಪ್ಲೋಡ್ ಮಾಡಿರುವ ಮೊರಾಜ್, ಈ ವಿಡಿಯೋದಲ್ಲಿ ಕಾರು ಖರೀದಿಸಿದ ನಂತರ ಕಾರು ಹೆಚ್ಚು ಸಮಯ ಗ್ಯಾರೆಜ್‍ನಲ್ಲೇ ಇರುತ್ತಿತ್ತು ಎಂದು ಹೇಳಿದ್ದಾನೆ.

MOST READ: ನವೆಂಬರ್ ತಿಂಗಳಲ್ಲಿ ಮಾರಾಟವಾದ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳೆಷ್ಟು ಗೊತ್ತಾ?

ದುಬಾರಿ ಬೆಂಝ್ ಕಾರನ್ನು ಹೆಲಿಕಾಪ್ಟರ್ ಮೂಲಕ ಪುಡಿ ಮಾಡಿದ ಭೂಪ

ಇಗೊರ್ ಮೊರಾಜ್‍ಗೆ ಯೂಟ್ಯೂಬ್‍ಗೆ ಆಪ್ಲೋಡ್ ಮಾಡಿರುವ ವಿಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ವೀಡಿಯೋ ವೈರಲ್ ಆಗುತ್ತಿದ್ದಂತೆ ಈ ಘಟನೆಯ ಸಂಬಂಧ ರಷ್ಯಾದ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಆದರೆ ಪೊಲೀಸ್ ತನಿಖೆಯಲ್ಲಿ ಹೊಸ ತಿರುವು ಪಡೆದುಕೊಂಡಿದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಕಾರಿನಲ್ಲಿ ಯಾವ ರೀತಿಯ ತೊಂದರೆಯೂ ಇರಲಿಲ್ಲ. ಬದಲಿಗೆ ಇಗೊರ್ ಮೊರಾಜ್ ಬಹಳ ಶೋಕಿ ವ್ಯಕ್ತಿಯಾಗಿದ್ದು, ಆತ ಯುಟ್ಯೂಬ್‍‍ನಲ್ಲಿ ಸ್ಟಾರ್ ಆಗಬೇಕೆಂದು ಈ ರೀತಿ ಮಾಡಿದ್ದಾನೆ ಎಂದು ಕೆಲವು ರಷ್ಯಾ ಮಾಧ್ಯಮಗಳು ಸುದ್ದಿ ಮಾಡಿವೆ.

ದುಬಾರಿ ಬೆಂಝ್ ಕಾರನ್ನು ಹೆಲಿಕಾಪ್ಟರ್ ಮೂಲಕ ಪುಡಿ ಮಾಡಿದ ಭೂಪ

ಪ್ರಪಂಚಾದ್ಯಂತ ಭಾರೀ ವೈರಲ್ ಆಗುತ್ತಿರುವ ಈ ವೀಡಿಯೊ ಸಖತ್ ಸೌಂಡ್ ಮಾಡುತ್ತಿದೆ. ಆದರೆ ಈ ಪ್ರಕರಣದ ಬಗ್ಗೆ ಪೂರ್ಣ ಪ್ರಮಾಣದ ಸತ್ಯಾಸತ್ಯಾತೆ ಇನ್ನೂ ಬಹಿರಂಗಗೊಂಡಿಲ್ಲ.

ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಹಿಂದೆ ಸ್ವಾಜಿಲ್ಯಾಂಡ್ ಎಂದು ಕರೆಯಲಾಗುತ್ತಿದ್ದ, ಎಸ್ವಾಟಿನಿ ದೇಶದ ರಾಜ ಹಾಗೂ ಸ್ವಾಜಿ ರಾಜಮನೆತನದ ಮುಖ್ಯಸ್ಥ ಎಂಸ್ವತಿ 3 ತನ್ನ 15 ಜನ ಮಡದಿಯರಿಗಾಗಿ 19 ರೋಲ್ಸ್ ರಾಯ್ಸ್ ಸೂಪರ್ ಐಷಾರಾಮಿ ಕಾರುಗಳನ್ನು ಖರೀದಿಸಲು ರೂ.175 ಕೋಟಿ ಅಂದರೆ 24.4 ಮಿಲಿಯನ್ ಅಮೇರಿಕನ್ ಡಾಲರ್‍‍ಗಳನ್ನು ಖರ್ಚು ಮಾಡಿದ್ದಾರೆ.

ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಈ 19 ರೋಲ್ಸ್ ರಾಯ್ಸ್ ಕಾರುಗಳಲ್ಲಿ ತಮಗಾಗಿ ವಿಶೇಷವಾಗಿ ಮಾಡಿಫೈ ಮಾಡಲಾದ ರೋಲ್ಸ್ ರಾಯ್ಸ್ ಕುಲಿನನ್ ಎಸ್‍‍ಯುವಿಯು ಸೇರಿರುವುದು ವಿಶೇಷ. ಅಂದ ಹಾಗೆ ಈ ರಾಜನಿರುವ ದೇಶವು ಆಫ್ರಿಕಾದ ಬಡ ರಾಷ್ಟ್ರಗಳಲ್ಲಿ ಒಂದಾಗಿದೆ.

ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ರಾಜನು 120 ಬಿಎಂಡಬ್ಲ್ಯು ಸೆಡಾನ್ ಮತ್ತು ಎಸ್‌ಯುವಿಗಳನ್ನು ಬಳಸಲು ಸ್ವಾಜಿ ರಾಯಲ್ ಫ್ಯಾಮಿಲಿಗೆ ಆದೇಶಿಸಿದ್ದಾರೆ. ಈ ರಾಯಲ್ ಫ್ಯಾಮಿಲಿಯಲ್ಲಿ ಆತನ 23 ಮಕ್ಕಳೂ ಇರುವುದು ವಿಶೇಷ. ರೋಲ್ಸ್ ರಾಯ್ಸ್ ಹಾಗೂ ಬಿಎಂಡಬ್ಲ್ಯು ಕಾರುಗಳು ಎಂಸ್ವತಿ 3ರ ಐಷಾರಾಮಿ ಕಾರ್ ಗ್ಯಾರೇಜಿಗೆ ಹೊಸ ಸೇರ್ಪಡೆಯಾಗಿವೆ.

ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಈ ಗ್ಯಾರೇಜಿನಲ್ಲಿ ಈಗಾಗಲೇ 20 ಮರ್ಸಿಡಿಸ್ ಮೇಬ್ಯಾಕ್ ಪುಲ್ಮಾನ್ಸ್, ಮೇಬ್ಯಾಕ್ 62 ಹಾಗೂ ಬಿಎಂಡಬ್ಲ್ಯು ಎಕ್ಸ್ 6 ಕಾರುಗಳಿವೆ. ಇದರ ಜೊತೆಗೆ ಈ ರಾಜನ ಬಳಿ ವೈಯಕ್ತಿಕ ಬಳಕೆಗಾಗಿ ಒಂದೆರಡು ಖಾಸಗಿ ಜೆಟ್‌ಗಳಿವೆ.

ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಈ ಎಲ್ಲಾ ವಾಹನಗಳನ್ನು ಖರೀದಿಸುವುದಕ್ಕೆ ಸಾಕಷ್ಟು ವೆಚ್ಚವಾಗುವುದಲ್ಲದೆ ನಿರ್ವಹಣೆಯು ಸಹ ದುಬಾರಿಯಾಗಿದೆ. ರೋಲ್ಸ್ ರಾಯ್ಸ್, ಮೇಬ್ಯಾಚ್ಸ್ ಹಾಗೂ ಬಿಎಂಡಬ್ಲ್ಯು ಕಾರುಗಳ ನಿರ್ವಹಣೆಗಾಗಿ ದೊಡ್ಡ ಸರ್ವಿಸ್ ಸೆಂಟರ್‍‍ಗಳ ಅಗತ್ಯವಿದೆ.

ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಈ ಹಿಂದೆ ಹಿಂದೆ ಸ್ವಾಜಿಲ್ಯಾಂಡ್ ಎಂದು ಕರೆಯಲಾಗುತ್ತಿದ್ದ ಎಸ್ವಾಟಿನಿ ದೇಶವು ದಕ್ಷಿಣ ಆಫ್ರಿಕಾ ಹಾಗೂ ಮೊಜಾಂಬಿಕ್ ದೇಶಗಳ ಮಧ್ಯದಲ್ಲಿದೆ. ರಾಜನ ಕಾರು ಖರೀದಿಯ ಶೋಕಿಯನ್ನು ಅಲ್ಲಿರುವ ವಿರೋಧ ಪಕ್ಷಗಳು ತೀವ್ರವಾಗಿ ಟೀಕಿಸಿವೆ.

ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಪೀಪಲ್ಸ್ ಯುನೈಟೆಡ್ ಡೆಮಾಕ್ರಟಿಕ್ ಮೂವ್‍‍ಮೆಂಟ್ ವಿರೋಧ ಪಕ್ಷದ ಪ್ರಧಾನ ಕಾರ್ಯದರ್ಶಿ ವಾಂಡಿಲೆ ಡುಡ್ಲು, ರಾಜನ ಕಾರು ಶೋಕಿಗಳ ಬಗ್ಗೆ ಮಾತನಾಡಿ, ನವೆಂಬರ್ ಆರಂಭದಲ್ಲಿ, ರಾಜ, ಆತನ ತಾಯಿ ಹಾಗೂ ಆತನ ಹೆಂಡತಿಯರ ವಿಶೇಷ ಬಳಕೆಗಾಗಿ ಒಟ್ಟು 19 ರೋಲ್ಸ್ ರಾಯ್ಸ್ ಕಾರುಗಳನ್ನು ಸ್ವಾಜಿಲ್ಯಾಂಡ್‌ಗೆ ತರಲಾಯಿತು.

ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಇದು ದುರಹಂಕಾರದ ಪ್ರದರ್ಶನವಾಗಿದ್ದು, ಸ್ವಾಜಿಲ್ಯಾಂಡ್‌ನ ರಾಜನು ಬಡ ಜನರನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದ್ದಾನೆ. ಒಂದು ಪಕ್ಷವಾಗಿ ನಾವು ಆತನಿಗೆ ಎಷ್ಟು ಹೆಂಡತಿಯರು ಹಾಗೂ ಮಕ್ಕಳಿದ್ದಾರೆ ಎಂಬ ಬಗ್ಗೆ ಕನಿಷ್ಠ ಕಾಳಜಿ ವಹಿಸುತ್ತೇವೆ.

ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ದೊಡ್ಡ ರಾಜಕೀಯ ವಿಷಯವೆಂದರೆ ಆಧುನಿಕ ರಾಜಕೀಯದಲ್ಲಿ ಸಾಮಾನ್ಯವಾಗಿ ಅವರ ಖಾಸಗಿ ಸಂಪನ್ಮೂಲಗಳು ಹಾಗೂ ಸಾರ್ವಜನಿಕ ಹಣದ ನಡುವೆ ಪ್ರತ್ಯೇಕತೆಯಿರಬೇಕಾದರೆ ಜನರ ಹಣದಿಂದ ಇನ್ನೊಬ್ಬರ ಮಕ್ಕಳನ್ನು ನೋಡಿಕೊಳ್ಳಬೇಕು. ಸ್ವಾಜಿ ರಾಜಕೀಯ ವ್ಯವಸ್ಥೆಯಲ್ಲಿ ರಾಜಪ್ರಭುತ್ವ ಹಾಗೂ ಅದರ ಸಹಚರರು ಉದ್ದಾರವಾಗುತ್ತಿದ್ದಾರೆಯೇ ಹೊರತು ಸಾಮಾನ್ಯ ಜನರಲ್ಲ ಎಂದು ಹೇಳಿದರು.

More from DriveSpark

Article Published On: Wednesday, December 25, 2019, 18:32 [IST]
English summary
Mercedes G Class owner drops SUV from 1,000 ft using helicopter - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+