ಭಾರೀ ಪ್ರಮಾಣದಲ್ಲಿ ಕುಸಿತಗೊಂಡ ಮಾರುತಿ ಬ್ರಿಝಾ ಮಾರಾಟ

ಮಾರುತಿ ಸುಜುಕಿ ಕಂಪನಿಯ ಕಾರುಗಳ ಮಾರಾಟ ಪ್ರಮಾಣವು ದೇಶಿಯ ಮಾರುಕಟ್ಟೆಯಲ್ಲಿ ಗಣನೀಯವಾಗಿ ಕುಸಿಯುತ್ತಿದೆ. ಕಂಪನಿಯ ಮಾರಾಟದಲ್ಲಿ ಕಳೆದ ತಿಂಗಳು 36%ನಷ್ಟು ಕುಸಿತ ಉಂಟಾಗಿದೆ. ಇದು ಕಂಪನಿಯ ಇದುವರೆಗಿನ ಕಳಪೆ ಸಾಧನೆಯಾಗಿದೆ.

ಭಾರೀ ಪ್ರಮಾಣದಲ್ಲಿ ಕುಸಿತಗೊಂಡ ಮಾರುತಿ ಬ್ರಿಝಾ ಮಾರಾಟ

ಮಾರಾಟದ ಕುಸಿತದ ಪರಿಣಾಮವಾಗಿ, ಮಾರುತಿ ಸುಜುಕಿ ಕಂಪನಿಯ ಮಾರುಕಟ್ಟೆಯಲ್ಲಿನ ಒಟ್ಟಾರೆ ಷೇರುಗಳ ಪ್ರಮಾಣದಲ್ಲಿಯೂ ಕುಸಿತ ಉಂಟಾಗಿದೆ. ಈ ಮೊದಲು ಮಾರುಕಟ್ಟೆಯಲ್ಲಿ 50%ನಷ್ಟು ಷೇರು ಹೊಂದಿದ್ದ ಮಾರುತಿ ಸುಜುಕಿ ಕಂಪನಿಯು ಈಗ 47%ನಷ್ಟು ಷೇರು ಹೊಂದಿದೆ.

ಭಾರೀ ಪ್ರಮಾಣದಲ್ಲಿ ಕುಸಿತಗೊಂಡ ಮಾರುತಿ ಬ್ರಿಝಾ ಮಾರಾಟ

ಮಾರಾಟದಲ್ಲಿನ ಕುಸಿತವು ಕಂಪನಿಯ ಜನಪ್ರಿಯ ವಾಹನವಾದ ವಿಟಾರಾ ಬ್ರಿಝಾಗೂ ತಟ್ಟಿದೆ. 2019ರ ಜುಲೈ ತಿಂಗಳಿನಲ್ಲಿ ವಿಟಾರಾ ಬ್ರಿಝಾ ಕಾರಿನ ಮಾರಾಟದಲ್ಲಿ 63%ನಷ್ಟು ಕುಸಿತವಾಗಿದೆ. 2018ರ ಜುಲೈ ತಿಂಗಳಿನಲ್ಲಿ 14,181 ಕಾರುಗಳ ಮಾರಾಟವಾಗಿದ್ದರೆ, ಈ ವರ್ಷದ ಜುಲೈ ತಿಂಗಳಿನಲ್ಲಿ 5,302 ಕಾರುಗಳನ್ನು ಮಾರಾಟ ಮಾಡಲಾಗಿದೆ.

ಭಾರೀ ಪ್ರಮಾಣದಲ್ಲಿ ಕುಸಿತಗೊಂಡ ಮಾರುತಿ ಬ್ರಿಝಾ ಮಾರಾಟ

ವಿಟಾರಾ ಬ್ರಿಝಾದ ಮಾರಾಟದಲ್ಲಿ ಕುಸಿತವಾಗಲು ಮತ್ತೊಂದು ಕಾರಣವೆಂದರೆ, ಕಂಪನಿಯ ಪ್ರಮುಖ ಪ್ರತಿಸ್ಪರ್ಧಿಯಾದ ಹ್ಯುಂಡೈ ಕಂಪನಿಯ ವೆನ್ಯೂ ಕಾರಿಗೆ ಸಿಗುತ್ತಿರುವ ಜನಪ್ರಿಯತೆ. ಬ್ರಿಝಾ ಕಾರಿಗಿಂತ, ವೆನ್ಯೂವಿನ ಸುಮಾರು 4,000ಕ್ಕೂ ಹೆಚ್ಚು ಕಾರುಗಳು ಮಾರಾಟವಾಗಿವೆ.

ಭಾರೀ ಪ್ರಮಾಣದಲ್ಲಿ ಕುಸಿತಗೊಂಡ ಮಾರುತಿ ಬ್ರಿಝಾ ಮಾರಾಟ

ಮಾರುತಿ ಸುಜುಕಿ ಕಂಪನಿಯು ತನ್ನ ಪ್ರಬಲ ಪ್ರತಿಸ್ಪರ್ಧಿಯಾದ ಹ್ಯುಂಡೈನ ವೆನ್ಯೂ ಕಾರಿಗೆ ಪೈಪೋಟಿ ನೀಡಲು ಬ್ರಿಝಾ ಕಾರಿನ ಸ್ಪೋರ್ಟ್ಸ್ ಆವೃತ್ತಿಯನ್ನು ಬಿಡುಗಡೆಗೊಳಿಸಿತ್ತು. ಆದರೂ ಸಹ ಹೊಸ ಆವೃತ್ತಿಯ ಕಾರು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಲಿಲ್ಲ.

ಭಾರೀ ಪ್ರಮಾಣದಲ್ಲಿ ಕುಸಿತಗೊಂಡ ಮಾರುತಿ ಬ್ರಿಝಾ ಮಾರಾಟ

ಮಾರುತಿ ಕಂಪನಿಯು, ವಿಟಾರಾ ಬ್ರಿಝಾ ಸ್ಪೋರ್ಟ್ಸ್ ಎಡಿಷನ್ ಕಾರಿನಲ್ಲಿ ಹಲವಾರು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಿ, ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ತನ್ನತ್ತ ಸೆಳೆಯುವ ಪ್ರಯತ್ನವನ್ನು ಮಾಡಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ.

ಭಾರೀ ಪ್ರಮಾಣದಲ್ಲಿ ಕುಸಿತಗೊಂಡ ಮಾರುತಿ ಬ್ರಿಝಾ ಮಾರಾಟ

ಮಾರುತಿ ಸುಜುಕಿಯ ಬ್ರಿಝಾ ಕಾರು ಬಿಡುಗಡೆಯಾದಾಗಿನಿಂದ ದೇಶಿಯ ಮಾರುಕಟ್ಟೆಯ ಕಾರು ಮಾರಾಟದಲ್ಲಿ ಹೆಚ್ಚು ಮಾರಾಟವಾಗುವ ಕಾರು ಎಂಬ ಹೆಗ್ಗಳಿಕೆಯನ್ನು ಪಡೆದಿತ್ತು. ಪ್ರತಿ ತಿಂಗಳ ಮಾರಾಟದಲ್ಲೂ ಮುಂಚೂಣಿಯಲ್ಲಿರುತ್ತಿತ್ತು.

MOST READ: ಈ ಮೆಕಾನಿಕಲ್ ಎಂಜಿನಿಯರ್ ಈಗ ಮುಂಬೈನ ಮೊದಲ ಮಹಿಳಾ ಚಾಲಕಿ

ಭಾರೀ ಪ್ರಮಾಣದಲ್ಲಿ ಕುಸಿತಗೊಂಡ ಮಾರುತಿ ಬ್ರಿಝಾ ಮಾರಾಟ

ಆದರೆ ಜುಲೈ ತಿಂಗಳ ಮಾರಾಟದಲ್ಲಿ ಟಾಪ್ 10 ಪಟ್ಟಿಯಲ್ಲಿಯೂ ಸಹ ಸ್ಥಾನ ಪಡೆಯಲು ವಿಫಲವಾಗಿದೆ. ಮಾರುತಿ ಕಂಪನಿಯು, ವಿಟಾರಾ ಬ್ರಿಝಾವನ್ನು 1.3 ಲೀಟರ್‍‍ನ ಡೀಸೆಲ್ ಎಂಜಿನ್‍‍ನೊಂದಿಗೆ ಮಾರಾಟ ಮಾಡುತ್ತಿದೆ.

MOST READ: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅಪಘಾತ..!

ಭಾರೀ ಪ್ರಮಾಣದಲ್ಲಿ ಕುಸಿತಗೊಂಡ ಮಾರುತಿ ಬ್ರಿಝಾ ಮಾರಾಟ

ಈ ಎಂಜಿನ್ 89 ಬಿ‍‍ಹೆಚ್‍‍ಪಿ ಪವರ್ ಹಾಗೂ 220 ಎನ್‍‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರಿನಲ್ಲಿ 5 ಸ್ಪೀಡ್‍‍ನ ಮ್ಯಾನುವಲ್ ಅಥವಾ ಎ‍ಎಂ‍‍ಟಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅಯ್ಕೆಗಳಿರಲಿದ್ದು, ಫ್ರಂಟ್ ವ್ಹೀಲ್‍‍ಗಳಿಗೆ ಪವರ್ ಕಳುಹಿಸುತ್ತದೆ.

MOST READ: ಹತ್ತು ಸಾವಿರಕ್ಕೆ ಎಲೆಕ್ಟ್ರಿಕ್ ಬೈಕ್ ತಯಾರಿಸಿದ ಮೆಕಾನಿಕ್

ಭಾರೀ ಪ್ರಮಾಣದಲ್ಲಿ ಕುಸಿತಗೊಂಡ ಮಾರುತಿ ಬ್ರಿಝಾ ಮಾರಾಟ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ವಿಟಾರಾ ಬ್ರಿಝಾ ದೇಶಿಯ ಮಾರುಕಟ್ಟೆಯಲ್ಲಿರುವ ಜನಪ್ರಿಯ ವಾಹನಗಳಲ್ಲಿ ಒಂದಾಗಿದೆ. ಈ ಕಾರು ಮಾರುತಿ ಸುಜುಕಿ ಕಂಪನಿಗೆ ಮಾತ್ರವಲ್ಲದೇ, ದೇಶಿಯ ಮಾರುಕಟ್ಟೆಯ ಜನಪ್ರಿಯ ಕಾರು ಸಹ ಹೌದು. ಹ್ಯುಂಡೈ ವೆನ್ಯೂ ಕಾರಿನ ಪೈಪೋಟಿ ಸೇರಿದಂತೆ ವಿವಿಧ ಕಾರಣಗಳಿಗಾಗಿ ಮಾರಾಟದಲ್ಲಿ ಕುಸಿತವನ್ನು ಕಾಣುತ್ತಿದೆ. ಇದರ ಪರಿಣಾಮವಾಗಿ ಬ್ರಿಝಾ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಕಳೆದುಕೊಂಡಿದೆ.

Most Read Articles

Kannada
English summary
Maruti Suzuki Vitara Brezza Sales Decline By 63 Percent In July 2019 - Read in kannada
Story first published: Wednesday, August 7, 2019, 16:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X