ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮರ್ಸಿಡಿಸ್ ಬೆಂಝ್ ಇ ಕ್ಲಾಸ್

ಜರ್ಮನಿಯ ಲಗ್ಷುರಿ ಕಾರು ತಯಾರಕ ಕಂಪನಿ ಮರ್ಸಿಡಿಸ್ ಬೆಂಝ್ ಇತ್ತೀಚಿಗಷ್ಟೆ ಬಿ‍ಎಸ್ 6 ನಿಯಮಕ್ಕನುಸಾರವಾಗಿ, ತಯಾರಿಸಲಾಗಿರುವ ಉದ್ದ ವ್ಹೀಲ್ ಬೇಸ್ ನ ಇ ಕ್ಲಾಸ್ ಸೆಡಾನ್ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸೆಡಾನ್ ಕಾರುಗಳ ಬೆಲೆಯನ್ನು ಭಾರತದ ಎಕ್ಸ್ ಶೋರೂಂ ದರದಂತೆ ರೂ 57.5 ಲಕ್ಷಗಳಿಂದ ರೂ.62.5 ಲಕ್ಷಗಳವರೆಗೆ ನಿಗದಿಪಡಿಸಲಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮರ್ಸಿಡಿಸ್ ಬೆಂಝ್ ಇ ಕ್ಲಾಸ್

ಮರ್ಸಿಡಿಸ್ ಬೆಂಝ್ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿ‍ಇ‍ಒ ಮಾರ್ಟಿನ್ ಶ್ವೆಂಕ್ ರವರು ಮಾತನಾಡಿ, ಕಂಪನಿಯು ಬಿ‍ಎಸ್ 6ಕ್ಕೆ ನಿಯಮಕ್ಕನುಸಾರವಾಗಿ ನಿರ್ಮಿಸಿದ ಮೊದಲ ದೇಶಿಯ ನಿರ್ಮಿತ ಕಾರನ್ನು ಜನವರಿ 2018ರಲ್ಲಿ ಬಿಡುಗಡೆಗೊಳಿಸಿತ್ತು. ಆಗಿನಿಂದ ನಾವು ನಮ್ಮ ಕಾರ್ಯ ತಂತ್ರಗಳನ್ನು ಬಿಎಸ್6ಗೆ ಅನುಸಾರವಾಗಿ ಬದಲಿಸುತ್ತಾ ಬಂದೆವು, ಈಗ ಬಿ‍ಎಸ್ 6 ನಿಯಮಗಳನ್ನು ಹೊಂದಿರುವ ಉದ್ದ ವ್ಹೀಲ್ ಬೇಸ್ ಇ ಕ್ಲಾಸ್ ನ ಬಿಡುಗಡೆಯೊಂದಿಗೆ ನಾವು ನಮ್ಮ ಬದ್ದತೆಯನ್ನು ತೋರಿಸಿದ್ದೇವೆ ಎಂದು ತಿಳಿಸಿದರು.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮರ್ಸಿಡಿಸ್ ಬೆಂಝ್ ಇ ಕ್ಲಾಸ್

ಹೊಸ ಮಾಲಿನ್ಯ ನಿಯಮಗಳು ಏಪ್ರಿಲ್ 2020ರಿಂದ ಜಾರಿಗೆ ಬರಲಿವೆ. ಹೊಸ ಮರ್ಸಿಡಿಸ್ ಬೆಂಝ್ ಇ ಕ್ಲಾಸ್ ಎಲ್‍‍‍ಡಬ್ಲು‍‍ಬಿ ವಾಹನದಲ್ಲಿ ಅದ್ಭುತವಾದ ಸುರಕ್ಷಾ ಫೀಚರ್‍‍ಗಳಿವೆ. ಇದರಲ್ಲಿ 7 ಏರ್‍‍ಬ್ಯಾಗ್‍‍ಗಳು, ಆಕ್ಟಿವ್ ಪಾರ್ಕಿಂಗ್ ಅಸಿಸ್ಟ್ ಹೊಂದಿರುವ ಪಾರ್ಕಿಂಗ್ ಪೈಲಟ್ ಹಾಗೂ ಬ್ರೇಕ್ ಲೈಟ್‍‍ಗಳಿವೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮರ್ಸಿಡಿಸ್ ಬೆಂಝ್ ಇ ಕ್ಲಾಸ್

ಇದರಲ್ಲಿ ಮೊಬೈಲ್ ಫೋನ್‍‍ಗಳಿಗಾಗಿ ಮುಂಭಾಗ ಹಾಗೂ ಹಿಂಭಾಗದಲ್ಲಿ ಎರಡೂ ಕಡೆ ವೈರ್‍‍ಲೆಸ್ ಚಾರ್ಜರ್ ಮತ್ತು ಹಿಂಭಾಗದಲ್ಲಿರುವ ಪ್ರಯಾಣಿಕರಿಗಾಗಿ ಟಚ್‍‍ಸ್ಕ್ರೀನ್‍‍ಗಳಿದ್ದು, ಮೀಡಿಯಾ, ಕ್ಲೈಮೆಟ್ ಹಾಗೂ ವೆಹಿಕಲ್ ಫಂಕ್ಷನ್‍‍ಗಳನ್ನು ನಿಯಂತ್ರಿಸಬಹುದಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮರ್ಸಿಡಿಸ್ ಬೆಂಝ್ ಇ ಕ್ಲಾಸ್

ಶ್ವೆಂಕ್ ರವರ ಪ್ರಕಾರ ಕಳೆದ ಎರಡು ದಶಕಗಳಲ್ಲಿ ಸುಮಾರು 41,000 ಕ್ಕೂ ಹೆಚ್ಚು ಇ-ಕ್ಲಾಸ್ ವಾಹನಗಳನ್ನು ಭಾರತದಲ್ಲಿ ಮಾರಾಟ ಮಾಡಲಾಗಿದೆ. ಉದ್ದ ವ್ಹೀಲ್ ಬೇಸ್‍‍ನ ಇ-ಕ್ಲಾಸ್ ವಾಹನವು ಸಹ, ಈ ಸೆಗ್‍‍ಮೆಂಟಿನಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಲಿದೆ. ಮರ್ಸಿಡಿಸ್ ಬೆಂಝ್ ಇಂಡಿಯಾ ಪ್ರಕಾರ, ಉದ್ದವಾದ ವ್ಹೀಲ್ ಬೇಸ್ ಗಳನ್ನು ಹೊಂದಿರುವ ಇ-ಕ್ಲಾಸ್ ನಲ್ಲಿ ಹೊಸ ಇಂಟೀರಿಯರ್ ಫೀಚರ್‍‍ಗಳ ಜೊತೆಗೆ ಬಿ‍ಎಸ್ 6 ನಿಯಮಗಳಿಗೆ ಹೊಂದಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‍‍ಗಳನ್ನು ಅಳವಡಿಸಲಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮರ್ಸಿಡಿಸ್ ಬೆಂಝ್ ಇ ಕ್ಲಾಸ್

ಪೆಟ್ರೋಲ್ ಮಾದರಿಯ ವಾಹನವು 2.0 ಲೀಟರಿನ ಎಂಜಿನ್ ಹೊಂದಿದ್ದು, 197 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸುತ್ತದೆ. ಇದು ಎರಡು ಬಗೆಗಳಲ್ಲಿ ಭಾರತದಲ್ಲಿ ದೊರೆಯಲಿದ್ದು, ಕ್ರಮವಾಗಿ ಭಾರತದ ಎಕ್ಸ್ ಶೋರೂಂ ದರದಂತೆ ರೂ.57.5 ಲಕ್ಷ ಮತ್ತು ರೂ.61.5 ಲಕ್ಷಗಳ ಬೆಲೆಯನ್ನು ಹೊಂದಿದೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮರ್ಸಿಡಿಸ್ ಬೆಂಝ್ ಇ ಕ್ಲಾಸ್

ಡೀಸೆಲ್ ಮಾದರಿಯ ವಾಹನವು 2.0 ಲೀಟರಿನ ಎಂಜಿನ್ ಹೊಂದಿದ್ದು, 194 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸುತ್ತದೆ. ಇದು ಸಹ ಎರಡು ಬಗೆಗಳಲ್ಲಿ ದೊರೆಯಲಿದ್ದು, ಕ್ರಮವಾಗಿ ಭಾರತದ ಎಕ್ಸ್ ಶೋರೂಂ ದರದಂತೆ ರೂ.58.5 ಲಕ್ಷ ಮತ್ತು ರೂ.62.5 ಲಕ್ಷಗಳ ಬೆಲೆಯನ್ನು ಹೊಂದಿದೆ.

MOST READ: ಅನಾವರಣಗೊಂಡ ಆಲ್ ಎಲೆಕ್ಟ್ರಿಕ್ ಬೋಲ್ಟ್ ಬಿ ವಾಹನ

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮರ್ಸಿಡಿಸ್ ಬೆಂಝ್ ಇ ಕ್ಲಾಸ್

ಹೊಸದಾಗಿ ಬಿಡುಗಡೆಯಾದ ಇ-ಕ್ಲಾಸ್ ಎಲ್‍‍ಡಬ್ಲು‍ಬಿ ವಾಹನದ ಹೊರತಾಗಿ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಸದ್ಯಕ್ಕೆ ನಾಲ್ಕು ಮಾದರಿಗಳಲ್ಲಿ ದೊರೆಯುತ್ತಿದೆ. ಎರಡು ಪೆಟ್ರೋಲ್ ಎಂಜಿನ್ ಮತ್ತು ಎರಡು ಡೀಸೆಲ್ ಎಂಜಿನ್ ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಇ-ಕ್ಲಾಸಿನ ಇ 200 ವಾಹನವು, 2.0 ಲೀಟರಿನ ಪೆಟ್ರೋಲ್ ಎಂಜಿನ್ ಹೊಂದಿದ್ದು, 181 ಬಿಹೆಚ್‍‍ಪಿ ಪವರ್ ಮತ್ತು 300 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 9 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮರ್ಸಿಡಿಸ್ ಬೆಂಝ್ ಇ ಕ್ಲಾಸ್

ಇ-ಕ್ಲಾಸಿನ ಇ 63 ಎ‍ಎಂ‍‍ಜಿ ವಾಹನವು, 4.0 ಲೀಟರಿನ ಪೆಟ್ರೋಲ್ ಎಂಜಿನ್ ಹೊಂದಿದ್ದು, 612 ಬಿಹೆಚ್‍‍ಪಿ ಪವರ್ ಮತ್ತು 850 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 9 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮರ್ಸಿಡಿಸ್ ಬೆಂಝ್ ಇ ಕ್ಲಾಸ್

ಪೆಟ್ರೋಲ್ ಮಾದರಿಯ ವಾಹನಗಳ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.59.12 ಲಕ್ಷಗಳಿಂದ, ರೂ.1.50 ಕೋಟಿಗಳವರೆಗೆ ಇದೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮರ್ಸಿಡಿಸ್ ಬೆಂಝ್ ಇ ಕ್ಲಾಸ್

ಇನ್ನುಳಿದ ಎರಡು ಮಾದರಿಗಳು ಡೀಸೆಲ್ ಎಂಜಿನ್‍‍ಗಳನ್ನು ಹೊಂದಿವೆ. ಮರ್ಸಿಡಿಸ್ ಬೆಂಜ್ ಇ ಕ್ಲಾಸಿನ ಇ 220 ಡಿ ವಾಹನವು, 2.0 ಲೀಟರಿನ ಡೀಸೆಲ್ ಎಂಜಿನ್ ಹೊಂದಿದ್ದು, 192 ಬಿಹೆಚ್‍‍ಪಿ ಪವರ್ ಮತ್ತು 41 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 9 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮರ್ಸಿಡಿಸ್ ಬೆಂಝ್ ಇ ಕ್ಲಾಸ್

ಕೊನೆಯ ಮಾದರಿಯಾದ ಇ ಕ್ಲಾಸಿನ ಇ 350 ಡಿ ವಾಹನವು, 3.0 ಲೀಟರಿನ ಪೆಟ್ರೋಲ್ ಎಂಜಿನ್ ಹೊಂದಿದ್ದು, 255 ಬಿಹೆಚ್‍‍ಪಿ ಪವರ್ ಮತ್ತು 620 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 9 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಡೀಸೆಲ್ ಮಾದರಿಯ ವಾಹನಗಳ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.60.12 ಲಕ್ಷಗಳಿಂದ, ರೂ.73.21 ಲಕ್ಷಗಳಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮರ್ಸಿಡಿಸ್ ಬೆಂಝ್ ಇ ಕ್ಲಾಸ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹೊಸ ಮರ್ಸಿಡಿಸ್ ಕಾರಿನಲ್ಲಿ ಹೆಚ್ಚು ಕ್ಯಾಬಿನ್ ಸ್ಪೇಸ್ ಮತ್ತು ಕಾಲು ಚಾಚಲು ಹೆಚ್ಚು ಜಾಗವಿರಲಿದೆ. ಈಗ ಲಭ್ಯವಿರುವ ಮರ್ಸಿಡಿಸ್ ಇ ಕ್ಲಾಸ್ ಕಾರುಗಳು ಸಹ ಉದ್ದವಿದ್ದವು. ಈಗ ಬಿಡುಗಡೆಯಾದ ಹೊಸ ಎಲ್‍‍ಡಬ್ಲುಬಿ ವಾಹನವು ಇನ್ನೂ ಹೆಚ್ಚಿನ ಜಾಗವನ್ನು ಹೊಂದಿದೆ.

More from DriveSpark

Article Published On: Monday, May 20, 2019, 17:42 [IST]
English summary
Mercedes-Benz E-Class Long Wheelbase Launched In India — Prices, Specs, Features & Details - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+