ಮೂರೇ ಗಂಟೆಗಳಲ್ಲಿ ಕಾರು ಸರ್ವಿಸ್ ಮಾಡಲಿದೆ ಮರ್ಸಿಡಿಸ್ ಬೆಂಝ್

ಮರ್ಸಿಡಿಸ್ ಬೆಂಝ್ ತನ್ನ ಪ್ರೀಮಿಯರ್ ಎಕ್ಸ್ ಪ್ರೆಸ್ ಪ್ರೈಮ್ ಎಂಬ ಮಾರಾಟದ ನಂತರದ ಸೇವೆಯನ್ನು ಆರಂಭಿಸಿದೆ. ಈ ಸೇವೆಯಿಂದಾಗಿ ಮರ್ಸಿಡಿಸ್ ಕಾರುಗಳ ಮಾಲೀಕರು ತಮ್ಮ ಕಾರುಗಳನ್ನು ಮೂರು ಗಂಟೆಗಳಲ್ಲಿ ಸರ್ವಿಸ್ ಮಾಡಿಸಿಕೊಳ್ಳಬಹುದಾಗಿದೆ.

ಮೂರೇ ಗಂಟೆಗಳಲ್ಲಿ ಕಾರು ಸರ್ವಿಸ್ ಮಾಡಲಿದೆ ಮರ್ಸಿಡಿಸ್ ಬೆಂಝ್

ಮೂರು ಗಂಟೆಗಳ ಒಳಗಾಗಿ ಸರ್ವಿಸ್ ಮುಗಿಯದಿದ್ದರೆ ಯಾವುದೇ ಸರ್ವಿಸ್ ಚಾರ್ಜ್ ನೀಡುವಂತಿಲ್ಲ. ಮರ್ಸಿಡಿಸ್ ತಮ್ಮ ಸರ್ವಿಸ್ ಔ‍‍ಟ್‍‍ಲೆಟ್‍‍ಗಳಲ್ಲಿ ಮೂರು ಗಂಟೆಗಳಲ್ಲಿ ಸರ್ವಿಸ್ ನೀಡಲು ಸಾಧ್ಯವಾಗುವಂತೆ ಡೆಡಿಕೇಟೆಡ್ ವರ್ಕ್ ಬೇ, ಎಕ್ವಿಪ್‍‍ಮೆಂಟ್ ಹಾಗೂ ಹಲವಾರು ಟೂಲ್‍‍ಗಳನ್ನು ಹೊಂದಿದೆ.

ಮೂರೇ ಗಂಟೆಗಳಲ್ಲಿ ಕಾರು ಸರ್ವಿಸ್ ಮಾಡಲಿದೆ ಮರ್ಸಿಡಿಸ್ ಬೆಂಝ್

ಇದರ ಜೊತೆಗೆ, ಅಧಿಕೃತ ಸರ್ವಿಸ್ ಔ‍‍ಟ್‍‍ಲೆಟ್‍‍ಗಳಲ್ಲಿ ಈ ಕೆಲಸಕ್ಕಾಗಿಯೇ ಮೀಸಲಾದ ಮೂರು ಜನರ ತಂಡವಿರಲಿದೆ. ಈ ತಂಡದಲ್ಲಿ ಟೀಂ ಲೀಡರ್ ಹಾಗೂ ಸರ್ವಿಸ್ ಟೆಕ್ನಿಶಿಯನ್‍‍ಗಳಿರಲಿದ್ದು, ಸರ್ವಿಸ್ ಬೇಗ ಆಗುವಂತೆ ಮಾಡಲಿದ್ದಾರೆ.

ಮೂರೇ ಗಂಟೆಗಳಲ್ಲಿ ಕಾರು ಸರ್ವಿಸ್ ಮಾಡಲಿದೆ ಮರ್ಸಿಡಿಸ್ ಬೆಂಝ್

ಪ್ರೀಮಿಯರ್ ಎಕ್ಸ್‌ಪ್ರೆಸ್ ಪ್ರೈಮ್, ಟೈಪ್ ಎ ಹಾಗೂ ಟೈಪ್ ಬಿ ಎಂಬ ಎರಡು ರೀತಿಯ ಸೇವಾ ಆಯ್ಕೆಗಳನ್ನು ಒಳಗೊಂಡಿದೆ. ಟೈಪ್ ಎ ಸರ್ವಿಸ್‍‍ನಲ್ಲಿ ಆಯಿಲ್, ಆಯಿಲ್ ಫಿಲ್ಟರ್ ಪರಿಶೀಲಿಸಿ ಅವಶ್ಯಕತೆ ಇದ್ದರೆ ಬದಲಿಸಲಾಗುವುದು.

ಮೂರೇ ಗಂಟೆಗಳಲ್ಲಿ ಕಾರು ಸರ್ವಿಸ್ ಮಾಡಲಿದೆ ಮರ್ಸಿಡಿಸ್ ಬೆಂಝ್

ಇದರ ಜೊತೆಗೆ ಬ್ರೇಕ್ ಫ್ಲೂಯಿಡ್ ಬದಲಾವಣೆ, ಡಸ್ಟ್ ಫಿಲ್ಟರ್ ಬದಲಾವಣೆ, ವ್ಹೀಲ್ ರೋಟೆಷನ್, ಕೂಲೆಂಟ್ ಆಂಟಿಫ್ರೀಜ್ ಮಿಕ್ಸರ್ ರೆಶಿಯೊ ಪರಿಶೀಲನೆ, ವಾಶಿಂಗ್, ಇಂಟಿರಿಯರ್ ಹಾಗೂ ಎಕ್ಸ್ ಟಿರಿಯರ್ ಕ್ಲೀನಿಂಗ್‍‍ಗಳು ಸೇರಿವೆ.

ಮೂರೇ ಗಂಟೆಗಳಲ್ಲಿ ಕಾರು ಸರ್ವಿಸ್ ಮಾಡಲಿದೆ ಮರ್ಸಿಡಿಸ್ ಬೆಂಝ್

ಟೈಪ್ ಬಿ ಸರ್ವಿಸ್‍‍ನಲ್ಲಿ ಆಯಿಲ್, ಆಯಿಲ್ ಫಿಲ್ಟರ್ ಪರಿಶೀಲನೆ ಹಾಗೂ ಬದಲಾವಣೆ, ಬ್ರೇಕ್ ಫ್ಲೂಯಿಡ್ ಬದಲಾವಣೆ, ಡಸ್ಟ್ ಫಿಲ್ಟರ್ ಬದಲಾವಣೆ, ವ್ಹೀಲ್ ರೊಟೇಷನ್, ಕೂಲೆಂಟ್ ಆಂಟಿಫ್ರೀಜ್ ಮಿಕ್ಸರ್ ರೆಶಿಯೊ ಪರಿಶೀಲನೆ, ವಾಶಿಂಗ್, ಇಂಟಿರಿಯರ್, ಎಕ್ಸ್ ಟಿರಿಯರ್ ಕ್ಲೀನಿಂಗ್, ಡೀಸೆಲ್ ಫ್ಯೂಯಲ್ ಫಿಲ್ಟರ್ ಪರಿಶೀಲನೆ ಹಾಗೂ ಬದಲಾವಣೆ, ಡಿಸ್ಕ್ ಬ್ರೇಕ್ ಕ್ಲೀನಿಂಗ್ ಹಾಗೂ ವ್ಹೀಲ್ ಬ್ಯಾಲೆಂನ್ಸಿಗ್‍‍ಗಳು ಸೇರಿವೆ.

ಮೂರೇ ಗಂಟೆಗಳಲ್ಲಿ ಕಾರು ಸರ್ವಿಸ್ ಮಾಡಲಿದೆ ಮರ್ಸಿಡಿಸ್ ಬೆಂಝ್

ಪ್ರೀಮಿಯರ್ ಎಕ್ಸ್‌ಪ್ರೆಸ್ ಸರ್ವಿಸ್‍‍ನಲ್ಲಿ ಮುಖ್ಯವಾದ ಸರ್ವಿಸ್, ರಿಪೇರಿ, ವಾರಂಟಿಯ ಮೂಲಕ ಮಾಡಲಾಗುವ ರಿಪೇರಿ ಹಾಗೂ ಎಎಂಜಿ ಮಾದರಿಗಳಲ್ಲಿನ ಸರ್ವಿಸ್‍‍ಗಳಿರುವುದಿಲ್ಲ. ಪ್ರೀಮಿಯರ್ ಎಕ್ಸ್ ಪ್ರೆಸ್ ಪ್ರೈಮ್ ಸೇವೆಯನ್ನು ಸದ್ಯಕ್ಕೆ ಬೆಂಗಳೂರಿನಲ್ಲಿ ಮಾತ್ರ ನೀಡಲಾಗುತ್ತಿದೆ.

ಮೂರೇ ಗಂಟೆಗಳಲ್ಲಿ ಕಾರು ಸರ್ವಿಸ್ ಮಾಡಲಿದೆ ಮರ್ಸಿಡಿಸ್ ಬೆಂಝ್

ಶೀಘ್ರದಲ್ಲೇ ದೆಹಲಿ, ಮುಂಬೈ, ಹೈದರಾಬಾದ್ ಹಾಗೂ ಅಹಮದಾಬಾದ್‍‍ಗಳಲ್ಲಿಯೂ ಈ ಸೇವೆಯನ್ನು ಆರಂಭಿಸಲಾಗುವುದು. ಮರ್ಸಿಡಿಸ್ ಬೆಂಜ್ ಇಂಡಿಯಾದ ಗ್ರಾಹಕ ಸೇವೆ ಹಾಗೂ ಕಾರ್ಪೊರೇಟ್ ವ್ಯವಹಾರಗಳ ಉಪಾಧ್ಯಕ್ಷರಾದ ಶೇಖರ್ ಭಿಡ್‍‍ರವರು ಈ ಬಗ್ಗೆ ಮಾತನಾಡಿದ್ದಾರೆ.

ಮೂರೇ ಗಂಟೆಗಳಲ್ಲಿ ಕಾರು ಸರ್ವಿಸ್ ಮಾಡಲಿದೆ ಮರ್ಸಿಡಿಸ್ ಬೆಂಝ್

ಆಟೋಮೋಟಿವ್ ಕಂಪನಿಗಳ ದೀರ್ಘಾವಧಿಯ ಯಶಸ್ಸನ್ನು, ವಿಶೇಷವಾಗಿ ಭಾರತದ ಐಷಾರಾಮಿ ಕಾರುಗಳ ಸೆಗ್‍‍ಮೆಂಟಿನಲ್ಲಿ, ಸೇವಾ ಶ್ರೇಷ್ಠತೆ ಹಾಗೂ ತೊಂದರೆರಹಿತ ಮಾಲೀಕತ್ವದ ಅನುಭವಗಳಿಂದ ನಿರ್ಧರಿಸಲಾಗುತ್ತದೆ ಎಂದು ಹೇಳಿದರು.

ಮೂರೇ ಗಂಟೆಗಳಲ್ಲಿ ಕಾರು ಸರ್ವಿಸ್ ಮಾಡಲಿದೆ ಮರ್ಸಿಡಿಸ್ ಬೆಂಝ್

ಮರ್ಸಿಡಿಸ್ ಬೆಂಜ್ ಗ್ರಾಹಕರಿಗೆ ಸಂತೋಷದಾಯಕವಾದ, ವಿಶೇಷವಾದ ಹಾಗೂ ಅತ್ಯುತ್ತಮವಾದ ಸೇವಾ ಅನುಭವದ ಮೂಲಕ ಗ್ರಾಹಕರ ಮನಸ್ಸನ್ನು ಗೆಲ್ಲಬಹುದು ಎಂಬ ನಂಬಿಕೆಯನ್ನು ಹೊಂದಿದೆ. ಪ್ರೀಮಿಯರ್ ಎಕ್ಸ್‌ಪ್ರೆಸ್ ಪ್ರೈಮ್ ಆರಂಭಿಸುವುದರೊಂದಿಗೆ ನಾವು ಕಾರುಗಳನ್ನು ಮೂರು ಗಂಟೆಗಳಲ್ಲಿ ಸರ್ವಿಸ್ ಮಾಡುತ್ತೇವೆ ಎಂದು ಅವರು ಹೇಳಿದರು.

ಮೂರೇ ಗಂಟೆಗಳಲ್ಲಿ ಕಾರು ಸರ್ವಿಸ್ ಮಾಡಲಿದೆ ಮರ್ಸಿಡಿಸ್ ಬೆಂಝ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಮಾರಾಟದ ನಂತರದ ಸರ್ವಿಸ್ ಯಾವುದೇ ವಾಹನ ತಯಾರಕ ಕಂಪನಿಗೆ ಪ್ರಮುಖವಾದ ಸಂಗತಿಯಾಗಿದೆ. ಮೂರು ಗಂಟೆಗಳಲ್ಲಿ ಕಾರುಗಳನ್ನು ಸರ್ವಿಸ್ ಮಾಡುವುದರಿಂದ ಖಂಡಿತವಾಗಿಯೂ ಅಸ್ತಿತ್ವದಲ್ಲಿರುವ ಗ್ರಾಹಕರ ಜೊತೆಗೆ ಇನ್ನಷ್ಟು ಗ್ರಾಹಕರನ್ನು ಸೆಳೆಯಬಹುದು.

More from DriveSpark

Article Published On: Tuesday, December 24, 2019, 16:32 [IST]
English summary
Mercedes-Benz launches Premiere Express Service: To Service Cars In Three Hours - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+