ಡಿಸಿ ಡಿಸೈನ್‌ ಪರಿಕಲ್ಪನೆಯಲ್ಲಿ ಮೂಡಿಬಂದ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ವ್ಯಾನ್

ವಾಹನಗಳ ಇಂಟಿರಿಯರ್ ಡಿಸೈನ್‌ನಲ್ಲಿ ಸಾಕಷ್ಟು ಜನಪ್ರಿಯವಾಗಿರುವ ಡಿಸಿ ಡಿಸೈನ್ ಸಂಸ್ಥೆಯು ಈಗಾಗಲೇ ನೂರಾರು ಕಾರು ಮಾದರಿಗಳ ಒಳ ವಿನ್ಯಾಸವನ್ನು ಕಾರು ಉತ್ಪಾದಕರಿಗಿಂತೂ ಅತ್ಯುತ್ತಮ ರೀತಿಯಲ್ಲಿ ವಿನ್ಯಾಸಗಳಿಸಿ ಬಿಡುಗಡೆಗೊಳಿಸುವ ಮೂಲಕ ಮಾಡಿಫೈ ಪ್ರಿಯರ ಆಕರ್ಷಣೆ ಕಾರಣವಾಗಿದ್ದು, ಕಳೆದ ಕೆಲ ದಿನಗಳ ಹಿಂದಷ್ಟೇ ಬಿಡುಗಡೆ ಮರ್ಸಿಡಿಸ್ ಬೆಂಝ್ ನಿರ್ಮಾಣದ ವಿ-ಕ್ಲಾಸ್ ವ್ಯಾನ್ ಮಾದರಿಯನ್ನು ಸಹ ವಿನೂತನ ಮಾದರಿಯಲ್ಲಿ ಮಾಡಿಫೈಗೊಳಿಸಿ ಗ್ರಾಹಕರನ್ನು ಆಕರ್ಷಿಸುತ್ತಿದೆ.

ಡಿಸಿ ಡಿಸೈನ್‌ ಪರಿಕಲ್ಪನೆಯಲ್ಲಿ ಮೂಡಿಬಂದ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ವ್ಯಾನ್

ಡಿಸಿ ಡಿಸೈನ್ ಸಂಸ್ಥೆಯು ಗ್ರಾಹಕರ ಆದ್ಯತೆ ಮೇರೆಗೆ ವಾಹನಗಳ ಇಂಟಿರಿಯರ್ ವಿನ್ಯಾಸಗಳನ್ನು ಅಭಿವೃದ್ಧಿಗೊಳಿಸುವುದರಲ್ಲಿ ಸಾಕಷ್ಟು ಬೇಡಿಕೆ ಹೊಂದಿದ್ದು, ಬಹುತೇಕ ಐಷಾರಾಮಿ ಕಾರು ಮಾಲೀಕರು ಡಿಸಿ ಡಿಸೈನ್ ಹೊಂದಿದ್ದಾರೆ. ಹೀಗಾಗಿ ಇತ್ತೀಚೆಗೆ ಬಿಡುಗಡೆಯಾದ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ವ್ಯಾನ್ ಮಾದರಿಗೂ ಹೊಸ ಮಾದರಿಯ ಡಿಸೈನ್ ಒಂದನ್ನು ಸಿದ್ದಗೊಳಿಸಿರುವ ಡಿಸಿ ಡಿಸೈನ್ ಸಂಸ್ಥೆಯು, ಕಾರ್ಪೊರೆಟ್ ವಲಯದಲ್ಲಿ ಭಾರೀ ಸದ್ದು ಮಾಡುವ ನೀರಿಕ್ಷೆಯಲ್ಲಿದೆ.

ಡಿಸಿ ಡಿಸೈನ್‌ ಪರಿಕಲ್ಪನೆಯಲ್ಲಿ ಮೂಡಿಬಂದ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ವ್ಯಾನ್

ಮರ್ಸಿಡಿಸ್ ಬೆಂಝ್ ಸಂಸ್ಥೆಯು ಇದೇ ಮೊದಲ ಬಾರಿಗೆ ಭಾರತದಲ್ಲಿ ಐಷಾರಾಮಿ ವ್ಯಾನ್ ಪರಿಚಯಿಸಿದ್ದು, ಎಸ್‌ಯುವಿ ಮಾದರಿಯಲ್ಲಿ ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಈ ವಾಹನವು ವಿಶೇಷವಾಗಿ ಕಾರ್ಪೊರೆಟ್ ವಲಯ ಬೇಡಿಕೆಗೆ ಅನುಗುಣವಾಗಿ ಬಿಡುಗಡೆ ಮಾಡಲಾಗಿದೆ.

ಡಿಸಿ ಡಿಸೈನ್‌ ಪರಿಕಲ್ಪನೆಯಲ್ಲಿ ಮೂಡಿಬಂದ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ವ್ಯಾನ್

ಅದೇ ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಂಡು ಡಿಸಿ ಡಿಸೈನ್ ಸಹ ವಿಶೇಷ ಮಾದರಿಯಲ್ಲಿ ಒಳವಿನ್ಯಾಸವನ್ನು ಮರುಜೋಡಣೆ ಮಾಡಿದ್ದು, ಉತ್ಕೃಷ್ಟ ಗುಣಮಟ್ಟದ ಲೆದರ್ ಸೀಟುಗಳು ಮತ್ತು ಹಿಂಭಾಗದಲ್ಲಿ ಕೂರುವ ಪ್ರಯಾಣಿಕರಿಗಾಗಿ ಇನ್ಪೋಟೈನ್‌ಮೆಂಟ್, ವುಡ್ ಫ್ಲೋರ್ ಮತ್ತು ಹೊರ ಭಾಗವು ಕಾಣದಂತೆ ಸಂಪೂರ್ಣವಾಗಿ ಮುಚ್ಚಿಕೊಳ್ಳಬಹುದಾದ ಆಟೋಮ್ಯಾಟಿಕ್ ಕರ್ಟನ್‌ಗಳನ್ನು ಜೋಡಿಸಲಾಗಿದೆ.

ಡಿಸಿ ಡಿಸೈನ್‌ ಪರಿಕಲ್ಪನೆಯಲ್ಲಿ ಮೂಡಿಬಂದ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ವ್ಯಾನ್

ಈ ಮೂಲಕ ಪ್ರಯಾಣದ ವೇಳೆಯೇ ಸಣ್ಣದಾಗಿ ಸಭೆ ಸಡೆಸಬಹುದಾದಷ್ಟು ವ್ಯವಸ್ಥೆ ಕಲ್ಪಿಸಲಾಗಿದ್ದು, ಮೇಲೆ ಹೇಳಿದಂತೆ ಇದು ಕಾರ್ಪೊರೇಟ್ ವಲಯದ ಗ್ರಾಹಕರಿಗೆ ಹೆಚ್ಚು ಅನುಕೂಲಕಲವಾಗಲಿದೆ. ಜೊತೆಗೆ ಮರ್ಸಿಡಿಸ್ ಬೆಂಝ್ ಸಂಸ್ಥೆಯು ಸಹ ಅದೇ ಪರಿಕಲ್ಪನೆ ಮೇಲೆ ವಿ-ಕ್ಲಾಸ್ ವ್ಯಾನ್‌ಗಳನ್ನು ಅಭಿವೃದ್ಧಿಗೊಳಿಸಿದ್ದು, ಗ್ರಾಹಕರ ಬೇಡಿಕೆಯೆಂತೆ 6 ಸೀಟರ್ ಹಾಗೂ 7 ಸೀಟರ್ ಸೌಲಭ್ಯಗಳನ್ನು ಒದಗಿಸುತ್ತದೆ. ಮತ್ತೊಂದು ಪ್ರಮುಖ ವಿಚಾರ ಅಂದ್ರೆ, ಡಿಸಿ ಡಿಸೈನ್ ಮಾಡಿರುವ ವಿ-ಕ್ಲಾಸ್ ಇಂಟಿರಿಯರ್ ವಿನ್ಯಾಸಕ್ಕೂ ಮರ್ಸಿಡಿಸ್ ಬೆಂಝ್ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲವಾದರೂ ಕಾರುಗಳ ಇಂಟಿರಿಯರ್‌ಗಳಲ್ಲಿ ಜನಪ್ರಿಯತೆ ಹೊಂದಿರುವ ಡಿಸಿ ಸಂಸ್ಥೆಗೆ ಈಗಾಗಲೇ ನೂರಾರು ವಿ-ಕ್ಲಾಸ್ ಗ್ರಾಹಕರು ಹೊಸ ವಿನ್ಯಾಸದಂತೆ ಇಂಟಿರಿಯರ್ ಪುನರ್ ನಿರ್ಮಾಣ ಮಾಡಿಕೊಡುವಂತೆ ಬೇಡಿಕೆ ಬಂದಿದೆ.

ಡಿಸಿ ಡಿಸೈನ್‌ ಪರಿಕಲ್ಪನೆಯಲ್ಲಿ ಮೂಡಿಬಂದ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ವ್ಯಾನ್

ಆದ್ರೆ ಹೊಸ ವಿನ್ಯಾಸಗಳ ಬೆಲೆ ಬಗೆಗೆ ಮಾಹಿತಿ ಇಲ್ಲವಾದರೂ ಉತ್ಕೃಷ್ಟ ಗುಣಮಟ್ಟದ ಇಂಟಿರಿಯರ್ ಸೌಲಭ್ಯಗಳನ್ನು ಜೋಡಣೆ ಮಾಡಿರುವ ಹಿನ್ನಲೆಯಲ್ಲಿ ಕಾರಿನ ಬೆಲೆಗಳಿಗೆ ತಕ್ಕಂತೆ ರೂ. 6 ಲಕ್ಷ ರೂ.8 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ. ಇನ್ನು ವಿ-ಕ್ಲಾಸ್ ಎಕ್ಸ್‌ಪ್ರಿಷನ್ ಮಾದರಿಯ 7 ಸೀಟರ್ ಮಾದರಿಯಾಗಿದ್ದು ಇದರ ಬೆಲೆಯು ಎಕ್ಸ್‌‌ಶೋರೂಂ ಪ್ರಕಾರ ರೂ. 68.04 ಲಕ್ಷ ಬೆಲೆ ಹೊಂದಿದೆ. ಹಾಗೆಯೇ ವಿ-ಕ್ಲಾಸ್ ಎಕ್ಸ್‌ಕ್ಲೂಸಿವ್ ಮಾದರಿಯು 6 ಸೀಟರ್ ಮಾದರಿಯೊಂದಿಗೆ ಎಕ್ಸ್‌ಶೋರೂಂ ಪ್ರಕಾರ ರೂ. 81.90 ಲಕ್ಷಕ್ಕೆ ಖರೀದಿಗೆ ಲಭ್ಯವಿದೆ.

ಡಿಸಿ ಡಿಸೈನ್‌ ಪರಿಕಲ್ಪನೆಯಲ್ಲಿ ಮೂಡಿಬಂದ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ವ್ಯಾನ್

ವಿ-ಕ್ಲಾಸ್ 7 ಸೀಟರ್‌ಗಿಂತಲೂ ಹೆಚ್ಚಿನ ಬೆಲೆ ಹೊಂದಿರುವ 6-ಸೀಟರ್ ಮಾದರಿಯಲ್ಲಿ ಕೆಲವು ವಿಶೇಷ ಸೌಲಭ್ಯಗಳನ್ನು ನೀಡಲಾಗಿದ್ದು, ಕಾರಿನ ಒಳಭಾಗದಲ್ಲೇ ಕುಳಿತು ಸಭೆ ನಡೆಸಬಹುದಾದ ಟೆಬಲ್ ಪ್ಯಾಕೇಜ್, ಎಲೆಕ್ಟ್ರಿಕ್ ಸ್ಲಿಡಿಂಗ್ ಡೋರ್, 17-ಇಂಚಿನ ಅಲಾಯ್ ವೀಲ್ಹ್‌ಗಳು ಮತ್ತು ಒಳಭಾಗದಲ್ಲೇ ಕಾರಿನ ಸುತ್ತ ನೋಡಬಹುದಾದ 360 ಡಿಗ್ರಿ ಕ್ಯಾಮೆರಾ ಸೌಲಭ್ಯವಿದೆ.

ಡಿಸಿ ಡಿಸೈನ್‌ ಪರಿಕಲ್ಪನೆಯಲ್ಲಿ ಮೂಡಿಬಂದ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ವ್ಯಾನ್

ಪ್ರಮುಖವಾಗಿ ಕಾರಿನ ನೋಟವನ್ನು ಹೆಚ್ಚಿಸುವ ಹೈ ಪರ್ಫಾಮೆನ್ಸ್ ಎಲ್‌ಇಡಿ ಹೆಡ್‌ಲ್ಯಾಂಪ್ ಜೊತೆ ಇಂಟಲಿಜೆಂಟ್ ಲೈಟ್ ಸಿಸ್ಟಂ, ಆ್ಯಂಬಿಯೆಂಟ್ ಲೈಟಿಂಗ್ ಸಿಸ್ಟಂ, ನಪ್ಪಾ ಲೆದರ್ ಪ್ರೇರಿತ ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್ಹ್ ಮತ್ತು ಸುರಕ್ಷತೆಗಾಗಿ 6 ಏರ್‌ಬ್ಯಾಗ್ ಪಡೆದುಕೊಂಡಿದೆ.

ಡಿಸಿ ಡಿಸೈನ್‌ ಪರಿಕಲ್ಪನೆಯಲ್ಲಿ ಮೂಡಿಬಂದ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ವ್ಯಾನ್

ಹಾಗೆಯೇ 7 ಸೀಟರ್ ಮಾದರಿಯಲ್ಲೂ ಸಹ 16-ಇಂಚಿನ ಅಲಾಯ್ ವೀಲ್‌ಗಳು, ಕಂಫರ್ಟ್ ಸಸ್ಷೆಷನ್, ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್ಹ್, ಸ್ಪೋಟ್ ಪೆಡಲ್, ಡೈನಾಮಿಕ್ ಎಲ್ಇಡಿ ಹೆಡ್‌ಲ್ಯಾಂಪ್ ಜೊತೆ ಇಂಟಲಿಜೆಂಟ್ ಲೈಟ್ ಸಿಸ್ಟಂ ಜೊತೆಗೆ ಸ್ಮಾರ್ಟ್ ಎಂಟ್ರಿ ಸೌಲಭ್ಯಗಳನ್ನು ಎರಡು ಮಾದರಿಯಲ್ಲೂ ಇರಿಸಲಾಗಿದೆ.

ಡಿಸಿ ಡಿಸೈನ್‌ ಪರಿಕಲ್ಪನೆಯಲ್ಲಿ ಮೂಡಿಬಂದ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ವ್ಯಾನ್

ಎಂಜಿನ್ ಸಾಮರ್ಥ್ಯ

ಭಾರತದಲ್ಲಿ 2020ರ ಏಪ್ರಿಲ್ 1ರಿಂದ ಕಡ್ಡಾಯಗೊಳ್ಳಲಿರುವ ಬಿಎಸ್-6 ಎಂಜಿನ್ ಮಾದರಿಯನ್ನು ಈಗಲೇ ಅಳವಡಿಸಿಕೊಂಡಿರುವ ವಿ-ಕ್ಲಾಸ್ ಕಾರುಗಳು 2.0-ಲೀಟರ್ ಡೀಸೆಲ್ ಎಂಜಿನ್‌ ಪಡೆದಿದ್ದು, 7-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್‌ಮಿಷನ್‌ನೊಂದಿಗೆ 160-ಬಿಎಚ್‌ಪಿ ಮತ್ತು 380-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಡಿಸಿ ಡಿಸೈನ್‌ ಪರಿಕಲ್ಪನೆಯಲ್ಲಿ ಮೂಡಿಬಂದ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ವ್ಯಾನ್

ಒಂದು ವೇಳೆ ನೀವು ಕಾರು ಮಾಲೀಕರಾಗಿದ್ದು, ಕಾರುಗಳ ಒಳವಿನ್ಯಾಸವನ್ನು ಬದಲಿಸುವ ಯೋಚನೆಯಿದ್ದಲ್ಲಿ ಡಿಸಿ ಡಿಸೈನ್ ಸಂಪರ್ಕಿಸಬಹುದು. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಲವಾರು ವಿನೂತನ ತಂತ್ರಜ್ಞಾನ ಪ್ರೇರಣೆಯೊಂದಿಗೆ ಇಂಟಿರಿಯರ್ ಸೌಲಭ್ಯಗಳನ್ನು ಜೋಡಣೆ ಮಾಡಲಿದ್ದು, ಡಿಸೈನ್‌ಗಳಿಗೆ ಅನುಗುಣವಾಗಿ ಚಾರ್ಜ್ ಮಾಡಲಾಗುತ್ತದೆ.

Source:DC Design

Article Published On: Friday, April 26, 2019, 17:42 [IST]
English summary
DC design company is all set to release customise option for Mercedes Benz V Class luxury MPV car soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+