ಧಂತೇರಸ್‍‍ಗೆ ಸಿಹಿ ನೀಡಿದ ಎಂಜಿ ಹೆಕ್ಟರ್

ದೇಶದಲ್ಲಿ ಧಂತೇರಸ್ ಸಂದರ್ಭದಲ್ಲಿ ಎಂಜಿ ಹೆಕ್ಟರ್ ಎಸ್‍ಯು‍ವಿಯ 700 ಯು‍‍ನಿ‍ಟ್‍ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಡೆಲಿವರಿ ಮಾಡಲಾಗಿದೆ ಎಂದು ಎಂಜಿ ಮೋಟಾರ್ ಕಂಪನಿಯು ತಿಳಿಸಲಾಗಿದೆ. ಕಂಪನಿಯು ಎಂಜಿ ಹೆಕ್ಟರ್ 200 ಯು‍ನಿ‍ಟ್‍ಗಳನ್ನು ದೆಹಲಿಯಲ್ಲಿ ಒಂದೇ ಹಂತದಲ್ಲಿ ಡೆಲಿವರಿಯನ್ನು ಮಾಡಿದರು. ಇದು ಇಲ್ಲಿಯವರೆಗಿನ ಅತಿದೊಡ್ಡ ಪ್ರಮಾಣದ ವಾಹನ ಡೆಲಿವರಿ ದಾಖಲೆಗಳಲ್ಲಿ ಒಂದಾಗಿದೆ.

ಧಂತೇರಸ್‍‍ಗೆ ಸಿಹಿ ನೀಡಿದ ಎಂಜಿ ಹೆಕ್ಟರ್

ಎಂಜಿ ಮೋಟಾರ್ ದೇಶಾದ್ಯಂತ ವಿವಿಧ ಕಡೆಗಳಲ್ಲಿ ಡೆಲಿವರಿ ಕಾರ್ಯಕ್ರಮಗಳನ್ನು ಆಯೋಜಿಸಿತು. ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ತನ್ನ ಗ್ರಾಹಕರಿಗೆ ನೀಡಿದ ಕೊಡುಗೆಗಳ ಪ್ರಯೋಜನೆಯನ್ನು ಬಳಸುತ್ತಿದ್ದಾರೆ. ಕಂಪನಿಯು ಇತ್ತೀಚೆಗೆ ಎನ್‍‍ಜಿಒ ಜೊತೆಯಲ್ಲಿ ಪಾಲುದಾರಿಕೆ ಹೊಂದಿದ್ದು, ಭಾರತದಲ್ಲಿ ಮಾರಾಟವಾಗುವ ಪ್ರತಿ ಹೆಕ್ಟರ್‍ ಅನುಗುಣವಾಗಿ ಒಂದು ಹೆಣ್ಣು ಮಗುವಿಗೆ ಪ್ರಾಯೋಜಕತ್ವ ನೀಡುವುದಾಗಿ ತಿಳಿಸಿದೆ.

ಧಂತೇರಸ್‍‍ಗೆ ಸಿಹಿ ನೀಡಿದ ಎಂಜಿ ಹೆಕ್ಟರ್

ಬ್ರಿಟಿಷ್ ಬ್ರ್ಯಾಂಡ್ ಭಾರತದಲ್ಲಿ 'ವರ್ತ್ ವೇಟಿಂಗ್ ಫಾರ್' ಕಾರ್ಯಕ್ರಮವನ್ನು ಸಹ ನಡೆಸುತ್ತಿದೆ. ಈ ಉಪಕ್ರಮದ ಭಾಗವಾಗಿ ಗ್ರಾಹಕರು ಪಡೆಯುವ ಪ್ರತಿ ಎರಡು ವಾರಗಳ ವೈಟಿಂಗ್ ಪಿರೇಡ್‍ನಲ್ಲಿ ಅಥವಾ ಕಾಯುವ ಅವಧಿಗೆ ಎಂಜಿ ಮೋಟಾರ್ ಒಂದು ಹೆಣ್ಣು ಮಗುವಿನ ಶಿಕ್ಷಣಕ್ಕೆ ಅನುದಾನ ನೀಡಲಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಹೆಕ್ಟರ್ ಅನ್ನು ಪ್ರಾರಂಭಿಸಿದಾಗ ಅವರು ದೇಶದ ಒಟ್ಟು 35 ಸಾವಿರ ಬಾಲಕಿಯರ ಶಿಕ್ಷಣಕ್ಕೆ ಅನುದಾನವನ್ನು ನೀಡಿದ್ದಾರೆ.

ಧಂತೇರಸ್‍‍ಗೆ ಸಿಹಿ ನೀಡಿದ ಎಂಜಿ ಹೆಕ್ಟರ್

ಎಂಜಿ ಮೋಟಾರ್ ಇಂಡಿಯಾದ ಮಾರಾಟ ನಿರ್ದೇಶಕರಾದ ರಾಕೇಶ್ ಸಿದಾನಾ ಅವರು ಮಾತನಾಡಿ, ಎಂಜಿ ಮೋಟಾರ್ ಇಂಡಿಯಾ ನಡೆಸುವ ಕಾರ್ಯಕ್ರಮಗಳು ಗ್ರಾಹಕರು ಮತ್ತು ಸಮುದಾಯಕ್ಕೆ ಪ್ರಯೋಜನವಾಗಲಿದೆ. ನಮ್ಮ ಎಂಜಿ ಮೋಟಾರ್ ಹೆಕ್ಟರ್ ಒಂದೇ ದಿನದಲ್ಲಿ 700 ವಾಹನಗಳ ವಿತರಣೆಯಾಗಿದೆ. ಗ್ರಾಹಕರಿಗೆ ಉತ್ತಮ ಗುಣಮಟ್ಟದ ಕಾರುಗಳನ್ನು ನಾವು ನೀಡುತ್ತಿದ್ದೇವೆ. ಎನ್‍‍ಜಿಒ ಜೊತೆಗಿನ ನಮ್ಮ ಸಹಭಾಗಿತ್ವವು ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಧಂತೇರಸ್‍‍ಗೆ ಸಿಹಿ ನೀಡಿದ ಎಂಜಿ ಹೆಕ್ಟರ್

ಎಂಜಿ ಹೆಕ್ಟರ್‍‍ಗೆ ದೇಶಿಯ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಂಪನಿಯು ಇತ್ತೀಚೆಗೆ ಭಾರತದಲ್ಲಿ ಎರಡು ಮೈಲಿಗಲ್ಲನ್ನು ಸೃಷ್ಟಿಸಿದೆ. ಮೊದಲನೆಯದು ಹೆಕ್ಟರ್ ಎಸ್‍‍ಯು‍ವಿ ಬಿಡುಗಡೆಯಾದಾಗಿನಿಂದ ಭಾರತದಲ್ಲಿ 38,000 ಕ್ಕೂ ಹೆಚ್ಚು ಬುಕ್ಕಿಂಗ್‍‍ಗಳು ದಾಖಲಾಗಿದೆ. ಎರಡನೆಯದು ಕಂಪನಿಯು ಇತ್ತೀಚೆಗೆ ಎಂಜಿ ಹೆಕ್ಟರ್‍‍‍ನ 10,000 ಯುನಿಟ್‍ಗಳನ್ನು ಉತ್ಪಾದಿಸಿದೆ.

ಧಂತೇರಸ್‍‍ಗೆ ಸಿಹಿ ನೀಡಿದ ಎಂಜಿ ಹೆಕ್ಟರ್

ಕಂಪನಿಯು ಈಗ ತನ್ನ ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತಿದೆ. ಇದು ಮಾರುಕಟ್ಟೆಯಲ್ಲಿ ಹೆಕ್ಟರ್‍‍ಗೆ ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಪೊರೈಸಲು ನೆರವಾಗುತ್ತದೆ. ದೇಶಿಯ ಮಾರುಕಟ್ಟೆಯಲ್ಲಿ ಎಂಜಿ ಹೆಕ್ಟರ್ ದಾಖಲೆಯ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ.

ಧಂತೇರಸ್‍‍ಗೆ ಸಿಹಿ ನೀಡಿದ ಎಂಜಿ ಹೆಕ್ಟರ್

ಎಂಜಿ ಹೆಕ್ಟರ್ ಕಾರು ಪೆಟ್ರೋಲ್ ಆವೃತ್ತಿಯಲ್ಲಿ 1.5 ಲೀಟರ್ ಎಂಜಿನ್‍‍ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ 143ಬಿಹೆಚ್‍‍ಪಿ ಪವರ್ ಮತ್ತು 250ಎನ್‍ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಡೀಸೆಲ್ ಮಾದರಿಯಲ್ಲಿ 2.0 ಲೀಟರ್ ಟಬೋಜಾರ್ಜ್ಡ್ ಎಂಜಿನ್‍‍ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಮೂಲಕ 170ಬಿಹೆಚ್‍‍ಪಿ ಪವರ್ ಮತ್ತು 350 ಎನ್‍ಎಂ ಟಾರ್ಕ್ ಉತ್ಪಾದಿಸುವ ಗುಣ ಹೊಂದಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಧಂತೇರಸ್‍‍ಗೆ ಸಿಹಿ ನೀಡಿದ ಎಂಜಿ ಹೆಕ್ಟರ್

ಇದರಲ್ಲಿ ಬ್ಲ್ಯಾಕ್ ಕಲರ್ ಥೀಮ್ ಹೊಂದಿರುವ ಇಂಟರಿಯರ್‍‍ನೊಂದಿಗೆ ಆಡಿಯೋ ಸಿಸ್ಟಂ, ಕ್ಲೈಮೆಟ್ ಕಂಟ್ರೋಲ್, ಇನ್ಪೋಟೈನ್‍‍‍ಮೆಂಟ್ ಕಂಟ್ರೋಲ್, ಆಟೋ ಎಸಿ, ಪವರ್ ವಿಂಡೋ, ಫಾಸ್ಟ್ ಚಾರ್ಜಿಂಗ್, ಆಟೋಮ್ಯಾಟಿಕ್ ಹೆಡ್‍‍‍ಲ್ಯಾಂಪ್, 10.4 ಇಂಚಿನ ಟಚ್‍‍ಸ್ಕ್ರೀನ್ ಇನ್ಪೋಟೈನ್‍‍ಮೆಂಟ್ ಡಿಸ್‍‍ಪ್ಲೈ ಸೌಲಭ್ಯವಿದೆ. ಎಂಜಿ ಹೆಕ್ಟರ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 12.18 ಲಕ್ಷಗಳಾಗಿದ್ದು, ಟಾಪ್ ಎಂಡ್ ಮಾದರಿಯ ಬೆಲೆ ಎಕ್ಸ್ ಶೋರೂಂ ಪ್ರಕಾರ ರೂ. 16.68 ಲಕ್ಷಗಳಾಗಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಧಂತೇರಸ್‍‍ಗೆ ಸಿಹಿ ನೀಡಿದ ಎಂಜಿ ಹೆಕ್ಟರ್

ಎಂಜಿ ಹೆಕ್ಟರ್ ಕಡಿಮೆ ಅವಧಿಯಲ್ಲಿ ಮಧ್ಯಮ ಗಾತ್ರದ ಎಸ್‍‍ಯು‍ವಿ ವಿಭಾಗದಲ್ಲಿ ಅತ್ಯಂತ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ. ಕಂಪನಿಯು ಬೇಡಿಕೆಗೆ ಅನುಗುಣವಾಗಿ ಉತ್ಪಾದನೆಯನ್ನು ಹೆಚ್ಚಿಸುತ್ತಿದೆ. ದೇಶಿಯ ಮಾರುಕಟ್ಟೆಯಲ್ಲಿ ಎಂಜಿ ಹೆಕ್ಟರ್ ದಾಖಲೆಯ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ.

Article Published On: Friday, October 25, 2019, 19:54 [IST]
English summary
MG Hector Deliveries Create A New Record: Company Delivers 700 Units On Occasion Of Dhanteras - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+