ಮಾರುಕಟ್ಟೆಯಲ್ಲಿ ಎಂಜಿ ಹೆಕ್ಟರ್ ಎಸ್‍ಯುವಿ ಕಾರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು..!

ಎಂಜಿ ಮೋಟಾರ್ (ಮೋರಿಸ್ ಗ್ಯಾರೇಜೆಸ್) ಸಂಸ್ಥೆಯು ತಮ್ಮ ಮೊದಲ ಕಾರು ಮಾದರಿಯಾದ ಹೆಕ್ಟರ್ ಎಸ್‍ಯುವಿ ಕಾರನ್ನು ಕಳೆದ ತಿಂಗಳ ಹಿಂದಷ್ಟೇ ಬಿಡುಗಡೆ ಮಾಡಿದ್ದು, ಮಾರುಕಟ್ಟೆಯಲ್ಲಿ ದಾಖಲೆಯ ಮಾರಾಟವನ್ನು ಈ ಕಾರು ಪಡೆಯುತ್ತಿದೆ. ಕೆಲ ದಿನಗಳ ಹಿಂದಷ್ಟೆ 21,000 ಬುಕ್ಕಿಂಗ್ ಪಡೆದುಕೊಂಡಿದ್ದು, ಇದೀಗ ಸಂಸ್ಥೆಯು ನೀಡಿದ ಅಧಿಕೃತ ಮಾಹಿತಿಗಳ ಪ್ರಕಾರ ಹೆಕ್ಟರ್ ಕಾರಿಗೆ ಬರೋಬ್ಬರಿ 28,000 ಬುಕ್ಕಿಂಗ್ ಅನ್ನು ಪಡೆದುಕೊಂಡಿದೆಯೆಂತೆ.

ಮಾರುಕಟ್ಟೆಯಲ್ಲಿ ಎಂಜಿ ಹೆಕ್ಟರ್ ಎಸ್‍ಯುವಿ ಕಾರಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡ್

ಜುಲೈ 2019ರ ಅವಧಿಯಲ್ಲಿ 1,508 ಯೂನಿಟ್ ಹೆಕ್ಟರ್ ಕಾರುಗಳನ್ನು ಮಾರಾಟ ಮಾಡಲಾಗಿದ್ದು, ಅಧಿಕವಾಗುತ್ತಿರುವ ಎಂಜಿ ಹೆಕ್ಟರ್ ಕಾರಿನ ಬುಕ್ಕಿಂಗ್ ಅನ್ನು ಸಂಸ್ಥೆಯ ತಾತ್ಕಾಲಿಕವಾಗಿ ಬಂದ್ ಮಾಡಿದೆ. ಇದೀಗ ಮತ್ತೆ ಕಾರಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಪುನಃ ಆರಂಭಿಸಲು ಮುಂದಾಗಿರುವ ಎಂಜಿ ಸಂಸ್ಥೆಯು ಸದ್ಯ ಬುಕ್ಕಿಂಗ್ ಮಾಡಿಕೊಂಡು ವಿತರಣೆಗಾಗಿ ಕಾಯುತ್ತಿರುವ ಗ್ರಾಹಕರಿಗೆ ಶೀಘ್ರದಲ್ಲೇ ಕಾರು ವಿತರಣೆ ಮಾಡುವುದಾಗಿ ಹೇಳಿಕೊಂಡಿದೆ.

ಮಾರುಕಟ್ಟೆಯಲ್ಲಿ ಎಂಜಿ ಹೆಕ್ಟರ್ ಎಸ್‍ಯುವಿ ಕಾರಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡ್

ಸದ್ಯ ಗುಜರಾತ್‍ನ ಹಲಾಲ್‌ನಲ್ಲಿರುವ ಎಂಜಿ ಹೆಕ್ಟರ್ ಪ್ಲ್ಯಾಂಟ್‌ನಲ್ಲಿ ತಿಂಗಳಿಗೆ ಕೇವಲ 2 ಸಾವಿರ ಕಾರುಗಳನ್ನು ಮಾತ್ರ ಉತ್ಪಾದನೆ ಮಾಡಬಹುದಾದ ಅವಕಾಶವಿದ್ದು, ತಿಂಗಳಿಗೆ 3 ಸಾವಿರ ಯೂನಿಟ್ ಉತ್ಪಾದನೆ ಮಾಡುವ ಕಾರ್ಯವನ್ನು ಶುರು ಮಾಡಿದ್ದಲ್ಲಿ ಗ್ರಾಹಕರು ಆದಷ್ಟು ಬೇಗನೆ ತಾವು ಬುಕ್ಕಿಂಗ್ ಮಾಡಿಕೊಂಡ ಕಾರುಗಳನ್ನು ಪಡೆಯಬಹುದೆಂದು ಎಂಜಿ ಸಂಸ್ಥೆಯೇ ಮಾಹಿತಿ ಹಂಚಿಕೊಂಡಿದೆ.

ಮಾರುಕಟ್ಟೆಯಲ್ಲಿ ಎಂಜಿ ಹೆಕ್ಟರ್ ಎಸ್‍ಯುವಿ ಕಾರಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡ್

ಎಂಜಿ ಹೆಕ್ಟರ್ ಕಾರಿನ ಬೆಲೆ

ಮಾರುಕಟ್ಟೆಗೆ ಲಗ್ಗೆಯಿಟ್ಟ ಎಂಜಿ ಹೆಕ್ಟರ್ ಕಾರು ಎಕ್ಸ್‌ಶೋರೂಂ ಪ್ರಕಾರ ರೂ. 12.18 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು ಈ ಕಾರಿನ ಟಾಪ್ ಎಂಡ್ ಮಾದರಿಯು ಎಕ್ಸ್ ಶೋರುಂ ಪ್ರಕಾರ ರೂ. 16.68 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ. ಈ ಕಾರಿನ ಪೆಟ್ರೋಲ್ ಡಿಸಿಟಿ ಮಾಡಲ್‍ಗಳಿಗೆ ಡಿಮ್ಯಾಂಡ್ ಹೆಚ್ಚಿದೆ. ಹಾಗು ಈ ಕಾರು ಟಾಟಾ ಹ್ಯಾರಿಯರ್ ಮತ್ತು ಬಿಡುಗಡೆಯಾಗಲಿರುವ ಕಿಯಾ ಸೆಲ್ಟೊಸ್ ಕಾರುಗಳಿಗೆ ಪೈಪೋಟಿ ನೀಡಲಿದೆ.

ಮಾರುಕಟ್ಟೆಯಲ್ಲಿ ಎಂಜಿ ಹೆಕ್ಟರ್ ಎಸ್‍ಯುವಿ ಕಾರಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡ್

ಎಂಜಿ ಹೆಕ್ಟರ್ ಇಷ್ಟರ ಮಟ್ಟಿಗೆ ಜನಪ್ರಿಯತೆಯನ್ನು ಪಡೆಯಲು ಪ್ರಮುಖ ಕಾರಣವೆಂದರೆ ಫರ್ಸ್ಟ್ ಕ್ಲಾಸ್ ಫೀಚರ್ಸ್, ಪವರ್‍‍ಫುಲ್ ಎಂಜಿನ್, ಬೈಯ್‌ಬ್ಯಾಕ್ ಗ್ಯಾರೆಂಟಿ, 5 ವರ್ಷದ ವಾರೆಂಟಿ/ಅನಿಯಮಿತ 1 ಲಕ್ಷ ಕಿಲೋಮೀಟರ್‍, 5 ವರ್ಷದ ವರೆಗು ಲೇಬರ್ ಫ್ರೀ ಸರ್ವೀಸ್ ಎಂಬ ಆಕರ್ಷಕ ಕೊಡುಗೆಗಳನ್ನು ಸಹ ನೀಡುತ್ತಿದೆ.

ಮಾರುಕಟ್ಟೆಯಲ್ಲಿ ಎಂಜಿ ಹೆಕ್ಟರ್ ಎಸ್‍ಯುವಿ ಕಾರಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡ್

ಎಂಜಿನ್ ಸಾಮರ್ಥ್ಯ

ಹೆಕ್ಟರ್ ಹೊಸ ಕಾರು ಪೆಟ್ರೋಲ್ ಆವೃತ್ತಿಯಲ್ಲಿ 1.5 ಲೀಟರ್ ಎಂಜಿನ್‌ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 143-ಬಿಎಚ್‌ಪಿ ಮತ್ತು 250-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಡೀಸೆಲ್ ಮಾದರಿಯು ಎಫ್‌ಸಿಎ ಸಂಸ್ಥೆಯಿಂದ ಎರವಲು ಪಡೆಯಲಾದ 2.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್‌ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮೂಲಕ 170-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಮಾರುಕಟ್ಟೆಯಲ್ಲಿ ಎಂಜಿ ಹೆಕ್ಟರ್ ಎಸ್‍ಯುವಿ ಕಾರಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡ್

ಇದರಲ್ಲಿ ಸಾಮಾನ್ಯ ಮಾದರಿಯ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಜೊತೆ ಹೆಕ್ಟರ್ ಕಾರಿನ ಪೆಟ್ರೋಲ್ ಹೈ ಎಂಡ್ ಆವೃತ್ತಿಯಲ್ಲಿ 48ವೋಲ್ಟ್ ಬ್ಯಾಟರಿಯೊಂದಿಗೆ ಸ್ಮಾರ್ಟ್ ಹೈಬ್ರಿಡ್ ಎಂಜಿನ್ ಜೋಡಿಸಲಾಗಿದ್ದು, ಇದು ಉತ್ತಮ ಪರ್ಫಾಮೆನ್ಸ್‌ನೊಂದಿಗೆ ಹೆಚ್ಚಿನ ಮಟ್ಟದ ಇಂಧನ ಕಾರ್ಯಕ್ಷಮತೆಯನ್ನು ಕಾಯ್ದಕೊಳ್ಳಲು ನೆರವಾಗಲಿದೆ.

ಮಾರುಕಟ್ಟೆಯಲ್ಲಿ ಎಂಜಿ ಹೆಕ್ಟರ್ ಎಸ್‍ಯುವಿ ಕಾರಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡ್

ಕಾರಿನ ಮೈಲೇಜ್

*ಪೆಟ್ರೋಲ್ ವರ್ಷನ್(ಆಟೋಮ್ಯಾಟಿಕ್ ಗೇರ್‌ಬಾಕ್ಸ್)- ಪ್ರತಿ ಲೀಟರ್‌ಗೆ 13.96 ಕಿ.ಮಿ

*ಪೆಟ್ರೋಲ್ ವರ್ಷನ್(ಮ್ಯಾನುವಲ್ ಗೇರ್‌ಬಾಕ್ಸ್)- ಪ್ರತಿ ಲೀಟರ್‌ಗೆ 14.16 ಕಿ.ಮಿ

*ಪೆಟ್ರೋಲ್ ಎಂಜಿನ್ ಜೊತೆ 48 ವೊಲ್ಟ್ ಮೈಲ್ಡ್ ಹೈಬ್ರಿಡ್(ಮ್ಯಾನುವಲ್ ಗೇರ್‌ಬಾಕ್ಸ್) - ಪ್ರತಿ ಲೀಟರ್‌ಗೆ 15.81 ಕಿ.ಮಿ

*ಡಿಸೇಲ್ ವರ್ಷನ್(ಮ್ಯಾನುವಲ್ ಗೇರ್‌ಬಾಕ್ಸ್)- ಪ್ರತಿ ಲೀಟರ್‌ಗೆ 17.41 ಕಿ.ಮಿ

ಮಾರುಕಟ್ಟೆಯಲ್ಲಿ ಎಂಜಿ ಹೆಕ್ಟರ್ ಎಸ್‍ಯುವಿ ಕಾರಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡ್

ಫೀಚರ್ಸ್

ಜೊತೆಗೆ ಹೆಕ್ಟರ್ ಕಾರು ಮಾದರಿಯು ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊತ್ತುಬಂದಿದ್ದು, ಬ್ಲ್ಯಾಕ್ ಕಲರ್ ಥೀಮ್ ಇಂಟಿರಿಯರ್‌ನೊಂದಿಗೆ ಆಡಿಯೋ ಸಿಸ್ಟಂ, ಕ್ಲೈಮೆಟ್ ಕಂಟ್ರೋಲ್, ಇನ್ಪೋಟೈನ್‌ಮೆಂಟ್ ಕಂಟ್ರೋಲ್, ನೆವಿಗೇಷನ್ ನಿಯಂತ್ರಿಸಬಲ್ಲ 10.4-ಇಂಚಿನ ವರ್ಟಿಕಲ್ ಸ್ಟ್ರಾಕ್ಡ್ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಡಿಸ್‌ಪ್ಲೈ ನೀಡಲಾಗಿದೆ.

ಮಾರುಕಟ್ಟೆಯಲ್ಲಿ ಎಂಜಿ ಹೆಕ್ಟರ್ ಎಸ್‍ಯುವಿ ಕಾರಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡ್

ಇದರಲ್ಲಿ ಐ ಸ್ಮಾರ್ಟ್ ಕನೆಕ್ವಿವಿಟಿ ಸೌಲಭ್ಯವು ಹೆಕ್ಟರ್ ಕಾರಿಗೆ ಮತ್ತಷ್ಟು ಮೆರಗು ತಂದಿರುವುದಲ್ಲದೇ ಕಾರಿಗೂ ಗರಿಷ್ಠ ಭದ್ರತೆ ಒದಗಿಸಲಿದ್ದು, ಪ್ಯಾಕೇಜ್ ಸೌಲಭ್ಯ ಹೊಂದಿರುವ ಐ ಸ್ಮಾರ್ಟ್ ಕನೆಕ್ಟಿವಿಟಿನಲ್ಲಿ ಧ್ವನಿ ಹಿಂಬಾಲಿಸುವಿಕೆ, ಲೈವ್ ವೆಹಿಕಲ್ ಟ್ರಾಕಿಂಗ್, ವೆಹಿಕಲ್ ಸ್ಟೆಟಸ್, ಜಿಯೋ ಫೆನ್ಸ್ ಸೇರಿದಂತೆ 50ಕ್ಕೂ ಹೆಚ್ಚು ಫೀಚರ್ಸ್ ಇದರಲ್ಲಿವೆ.

ಮಾರುಕಟ್ಟೆಯಲ್ಲಿ ಎಂಜಿ ಹೆಕ್ಟರ್ ಎಸ್‍ಯುವಿ ಕಾರಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡ್

ಹಾಗೆಯೇ ಹೊಸ ಕಾರಿನಲ್ಲಿ ಆ್ಯಂಬಿಯೆಂಟ್ ಲೈಟ್ಸ್ (8 ಬಣ್ಣಗಳಲ್ಲಿ), ಲೆದರ್ ಅಪ್‌ಹೊಲಿಸ್ಟ್ರೈ( ಟಾಪ್ ಎಂಡ್ ಮಾಡೆಲ್‌ಗಳಲ್ಲಿ), 6 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಚಾಲಕ ಸೀಟು, ಪನೊರೊಮಿಕ್ ಸನ್‌ರೂಫ್, ಟಿಲ್ಟ್ ಆ್ಯಂಡ್ ಟೆಲಿಸ್ಕೊಪಿಕ್ ಸ್ಟಿರಿಂಗ್, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್, ಆಟೋ ಎಸಿ ಜೊತೆ ರಿಯರ್ ವೆಂಟ್ಸ್ , ಪ್ರೀಮಿಯಂ ಇನ್ಫಿನಿಟಿ ಸೌಂಡ್ ಸಿಸ್ಟಂ, ಫ್ರಂಟ್ ಆ್ಯಂಡ್ ರಿಯರ್ ಪವರ್ ವಿಂಡೋ, ಫಾಸ್ಟ್ ಚಾರ್ಜಿಂಗ್, ಅಂಡ್ರಾಯಿಡ್ ಆಡಿಯೋ, ಫುಶ್ ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ಪವರ್ ಅಡ್ಜೆಸ್ಟ್ ರಿಯರ್ ವ್ಯೂ ಮಿರರ್ ಸೌಲಭ್ಯಗಳಿವೆ.

ಮಾರುಕಟ್ಟೆಯಲ್ಲಿ ಎಂಜಿ ಹೆಕ್ಟರ್ ಎಸ್‍ಯುವಿ ಕಾರಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡ್

ರಿಮೋಟ್ ಕೀ ಲೆಸ್ ಎಂಟ್ರಿ, ವೆಲ್‌ಕಮ್ ಲೈಟ್, ಹೈಟ್ ಅಡ್ಜೆಸ್ಟ್ ಹೆಡ್ ರೆಸ್ಟ್, ಫ್ರಂಟ್ ಮತ್ತು ರಿಯರ್ ಫಾಸ್ಟ್-ಚಾರ್ಜಿಂಗ್ ಪೋರ್ಟ್ಸ್, ಗ್ಲೋ ಬಾಕ್ಸ್, ಡ್ರೈವರ್ ಆರ್ಮ್ ರೆಸ್ಟ್, 60:40 ಅನುಪಾತದಲ್ಲಿ ಮಡಚಬಹುದಾದ ಹಿಂಬದಿ ಆಸನ, ಆಟೋ ಎಸಿ, ಪವರ್ ಅಡ್ಜೆಸ್ಟ್ ರಿಯರ್ ವ್ಯೂ ಮಿರರ್ ಸೌಲಭ್ಯವು ಪ್ರತಿ ವೇರಿಯೆಂಟ್‌ನಲ್ಲೂ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಮಾರುಕಟ್ಟೆಯಲ್ಲಿ ಎಂಜಿ ಹೆಕ್ಟರ್ ಎಸ್‍ಯುವಿ ಕಾರಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡ್

ಸೇಫ್ಟಿ ಫೀಚರ್ಸ್

ಹೆಕ್ಟರ್ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಆರ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಬಿಎಸ್ ಜೊತೆಗೆ ಇಬಿಡಿ ಮತ್ತು ಬ್ರೇಕ್ ಅಸಿಸ್ಟ್, ಹಿಲ್ ಹೋಲ್ಡ್ ಕಂಟ್ರೋಲ್, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ರಿಯರ್ ಡಿಫಾಗರ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಮತ್ತು ISOFIX ಚೈಲ್ಡ್-ಸೀಟ್ ಮೌಂಟ್ಸ್ ಸೌಲಭ್ಯ ನೀಡಲಾಗಿದೆ.

Most Read Articles

Kannada
English summary
MG Hector SUV Sales July - India Production Increase From September Details. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X