ಸ್ಪಾಟ್ ಟೆಸ್ಟಿಂಗ್‌ನಲ್ಲಿ ಮಿಂಚಿದ ಎಂಜಿ ಮೋಟಾರ್ ಹೆಕ್ಟರ್ ಎಸ್‌ಯುವಿ..!

ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಹೊಸ ಕಾರು ಉತ್ಪಾದನಾ ಸಂಸ್ಥೆಗಳ ಪ್ರವೇಶ ಜೋರಾಗಿದ್ದು, ಎಂಜಿ ಮೋಟಾರ್, ಕಿಯಾ ಮೋಟಾರ್ಸ್, ಪಿಎಸ್ಎ ಗ್ರೂಪ್ ಸೇರಿದಂತೆ ಹಲವು ಹೊಸ ಕಾರು ಉತ್ಪಾದನಾ ಸಂಸ್ಥೆಗಳು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿವೆ. ಇದರಲ್ಲಿ ಎಂಜಿ ಮೋಟಾರ್ ತನ್ನ ವಿನೂತನ ಮಾದರಿಯ ಎಸ್‌ಯುವಿಗಳ ಮೂಲಕ ಗ್ರಾಹಕರ ಆಕರ್ಷಣೆ ಕಾರಣವಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆಯ ಉದ್ದೇಶದಿಂದ ವಿವಿಧ ಹಂತದ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.

ಸ್ಪಾಟ್ ಟೆಸ್ಟಿಂಗ್‌ನಲ್ಲಿ ಮಿಂಚಿದ ಎಂಜಿ ಮೋಟಾರ್ ಹೆಕ್ಟರ್ ಎಸ್‌ಯುವಿ..!

ಸದ್ಯ ತನ್ನ ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿರುವ ಎಂಜಿ ಮೋಟಾರ್ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಕಾರು ಉತ್ಪನ್ನಗಳನ್ನು ಸಿದ್ದಗೊಳಿಸಿ ಮಾರಾಟಕ್ಕೆ ಅಣಿಯಾಗುತ್ತಿದೆ. ಹೀಗಾಗಿ ಮೊದಲ ಹಂತದಲ್ಲಿ ಬಿಡುಗಡೆಯಾಗುವ ಹೆಕ್ಟರ್ ಎಸ್‌ಯುವಿಯನ್ನು ಮೊನ್ನೆಯಷ್ಟೇ ಅನಾವರಣಗೊಳಿಸಿರುವ ಎಂಜಿ ಮೋಟಾರ್ ಸಂಸ್ಥೆಯು ಹೊಸ ಕಾರಿನ ಉತ್ಪಾದನೆಗೆ ಇದೇ ತಿಂಗಳು 29ರಿಂದ ಅಧಿಕೃತವಾಗಿ ಚಾಲನೆ ನೀಡಿರುವುದಾಗಿ ಮಾಹಿತಿ ಹಂಚಿಕೊಂಡಿದೆ.

ಸ್ಪಾಟ್ ಟೆಸ್ಟಿಂಗ್‌ನಲ್ಲಿ ಮಿಂಚಿದ ಎಂಜಿ ಮೋಟಾರ್ ಹೆಕ್ಟರ್ ಎಸ್‌ಯುವಿ..!

ಹೀಗಾಗಿ ಹೊಸ ಕಾರುನ್ನು ಯಾವುದೇ ಮಸುಕು ಇಲ್ಲದೆಯೇ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿರುವ ಎಂಜಿ ಮೋಟಾರ್ ಸಂಸ್ಥೆಯು ದೇಶದ ಪ್ರಮುಖ ಎಸ್‌ಯುವಿ ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ಸುಳಿವು ನೀಡಿದ್ದು, ಇ-ಸಿಮ್ ಪ್ರೇರಿತ ಗೂಗಲ್ ಆಂಡ್ರಾಯಿಡ್ ಆಪರೇಟಿಂಗ್ ಸಿಸ್ಟಂ ಪಡೆದುಕೊಂಡ ದೇಶದ ಮೊದಲ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸ್ಪಾಟ್ ಟೆಸ್ಟಿಂಗ್‌ನಲ್ಲಿ ಮಿಂಚಿದ ಎಂಜಿ ಮೋಟಾರ್ ಹೆಕ್ಟರ್ ಎಸ್‌ಯುವಿ..!

ಇನ್ನು ಬ್ರಿಟಿಷ್ ಮೂಲದ ಎಂಜಿ ಮೋಟಾರ್ ಸಂಸ್ಥೆಯು ಮೊದಲ ಬಾರಿಗೆ ದೇಶಿಯ ಮಾರುಕಟ್ಟೆಯ ಪ್ರವೇಶ ಪಡೆಯುತ್ತಿದ್ದು, ಈ ನಿಟ್ಟಿನಲ್ಲಿ ಬೃಹತ್ ಬಂಡವಾಳದೊಂದಿಗೆ ಕಳೆದ ವರ್ಷವಷ್ಟೇ ತನ್ನ ಮೊದಲ ಉತ್ಪಾದನಾ ಘಟಕವನ್ನು ಆರಂಭಗೊಳಿಸಿದ್ದಲ್ಲೇ ಇದೀಗ ಬಿಡುಗಡೆಯಾಗಲಿರುವ ಮೊದಲ ಕಾರನ್ನು ಅನಾವರಣಗೊಳಿಸಿ ಎಸ್‌ಯುವಿ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದೆ.

ಸ್ಪಾಟ್ ಟೆಸ್ಟಿಂಗ್‌ನಲ್ಲಿ ಮಿಂಚಿದ ಎಂಜಿ ಮೋಟಾರ್ ಹೆಕ್ಟರ್ ಎಸ್‌ಯುವಿ..!

ಹೆಕ್ಟರ್ ಹೆಸರಿನಲ್ಲಿ ಭಾರತೀಯ ರಸ್ತೆಗಳಲ್ಲಿ ಸದ್ದು ಮಾಡಲಿರುವ ಹೊಸ ಎಂಜಿ ಮೋಟಾರ್ ಸಂಸ್ಥೆಯ ಹೊಸ ಕಾರು ಜೀಪ್ ಕಂಪಾಸ್ ಎಸ್‌ಯುವಿ ಮಾದರಿಯಲ್ಲೇ ಬಾಡಿ ಕಿಟ್ ಹೊಂದಿದ್ದು, 2019ರ ಮಧ್ಯಂತರದಲ್ಲಿ ಹೊಸ ಕಾರು ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ. ಜೊತೆಗೆ ಮುಂಬರುವ ದಿನಗಳಲ್ಲಿ ಜಾರಿಗೆ ಬರಲಿರುವ ಬಿಎಸ್-6 ಎಂಜಿನ್ ಸೌಲಭ್ಯ ಹೊಂದಿರುವ ಹೊಸ ಹೆಕ್ಟರ್ ಕಾರು 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್(ಎಫ್‌ಸಿಎ ಯಿಂದ ಎರವಲು) ಪಡೆದುಕೊಂಡಿದೆ.

ಸ್ಪಾಟ್ ಟೆಸ್ಟಿಂಗ್‌ನಲ್ಲಿ ಮಿಂಚಿದ ಎಂಜಿ ಮೋಟಾರ್ ಹೆಕ್ಟರ್ ಎಸ್‌ಯುವಿ..!

ಈ ಮೂಲಕ ಪೆಟ್ರೋಲ್ ಆವೃತ್ತಿಯು 160-ಬಿಎಚ್‌ಪಿ, 200-ಎನ್ಎಂ ಉತ್ಪಾದಿಸಿದ್ದಲ್ಲಿ ಡೀಸೆಲ್ ಆವೃತ್ತಿಯು 170-ಬಿಎಚ್‌ಪಿ, 340-ಎನ್ಎಂ ಟಾರ್ಕ್ ಉತ್ಪಾದನೆ ಸಾಮಾರ್ಥ್ಯ ಹೊಂದಿದ್ದು, ಕಾರಿನ ಬೆಲೆಗಳು ಕೂಡಾ ಆಕರ್ಷಕವಾಗಿರಲಿವೆ ಎನ್ನಲಾಗಿದೆ.

ಸ್ಪಾಟ್ ಟೆಸ್ಟಿಂಗ್‌ನಲ್ಲಿ ಮಿಂಚಿದ ಎಂಜಿ ಮೋಟಾರ್ ಹೆಕ್ಟರ್ ಎಸ್‌ಯುವಿ..!

ಹೆಕ್ಟರ್ ಕಾರು ಸದ್ಯ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ವುಲಿಂಗ್ ಅಲ್ಮಾಜ್ ಹೆಸರಿನೊಂದಿಗೆ ಮತ್ತು ಚೀನಾದಲ್ಲಿ ಬಾಔನ್ 530 ಹೆಸರಿನಲ್ಲಿ ಮಾರಾಟವಾಗುತ್ತಿದ್ದು, ಇದೇ ಕಾರು ಕೆಲವು ತಾಂತ್ರಿಕ ಬದಲಾವಣೆಗಳೊಂದಿಗೆ ಭಾರತದಲ್ಲಿ ಹೆಕ್ಟರ್ ಹೆಸರಿನೊಂದಿಗೆ ರಸ್ತೆಗಿಳಿಯುತ್ತಿದೆ. ಇದು ಎಸ್‌ಯುವಿ ಮಾದರಿಗಳಲ್ಲೇ ವಿಶೇಷ ಸೌಲಭ್ಯ ಹೊಂದಿದ್ದು, ಸಿ ಸೆಗ್ಮೆಂಟ್ ಎಸ್‌ಯುವಿ ಆವೃತ್ತಿಗಳಲ್ಲಿ ಭಾರೀ ಬೇಡಿಕೆ ಗಿಟ್ಟಿಸಿಕೊಳ್ಳುವ ನೀರಿಕ್ಷೆಯಲ್ಲಿದೆ.

ಸ್ಪಾಟ್ ಟೆಸ್ಟಿಂಗ್‌ನಲ್ಲಿ ಮಿಂಚಿದ ಎಂಜಿ ಮೋಟಾರ್ ಹೆಕ್ಟರ್ ಎಸ್‌ಯುವಿ..!

ಕಾರಿನ ಬೆಲೆಗಳು(ಅಂದಾಜು)

ಎಂಜಿ ಮೋಟಾರ್ ಹೆಕ್ಟರ್ ಕಾರುಗಳು ಸಿ ಸೆಗ್ಮೆಂಟ್ ಎಸ್‌ಯುವಿ ಕಾರುಗಳಲ್ಲೇ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಹೊಸ ಕಾರಿನ ಬೆಲೆಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 15 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 19 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

MOST READ: ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ- ಸೇನೆಗೆ ಶೀಘ್ರದಲ್ಲೇ ಬಾಂಬ್ ನಿರೋಧಕ ವಾಹನಗಳು..!

ಸ್ಪಾಟ್ ಟೆಸ್ಟಿಂಗ್‌ನಲ್ಲಿ ಮಿಂಚಿದ ಎಂಜಿ ಮೋಟಾರ್ ಹೆಕ್ಟರ್ ಎಸ್‌ಯುವಿ..!

ಗ್ರಾಹಕರ ಬೇಡಿಕೆಯಂತೆ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಪ್ರೇರಿತ ಹ್ಯಾಚ್‌ಬ್ಯಾಕ್. ಸೆಡಾನ್, ಎಸ್‌ಯುವಿ ಕಾರುಗಳನ್ನು ಅಷ್ಟೇ ಅಲ್ಲದೇ ಎಲೆಕ್ಟ್ರಿಕ್ ಕಾರುಗಳನ್ನು ಸಹ ಅಭಿವೃದ್ದಿ ಮಾಡಲಿರುವ ಎಂಜಿ ಮೋಟಾರ್ ಸಂಸ್ಥೆಯು ಭಾರತದಲ್ಲಿ ಬೃಹತ್ ಪ್ರಮಾಣದ ಹೂಡಿಕೆ ಮಾಡಿದ್ದು, 2019ರ ಎರಡನೇ ತ್ರೈಮಾಸಿಕ ಅವಧಿಗೆ ತನ್ನ ಹೊಸ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಬಗ್ಗೆ SAIC ಸಂಸ್ಥೆಯು ಸುಳಿವು ನೀಡಿದೆ.

ಸ್ಪಾಟ್ ಟೆಸ್ಟಿಂಗ್‌ನಲ್ಲಿ ಮಿಂಚಿದ ಎಂಜಿ ಮೋಟಾರ್ ಹೆಕ್ಟರ್ ಎಸ್‌ಯುವಿ..!

ಇದಕ್ಕಾಗಿಯೇ ಗುಜರಾತ್‌ನಲ್ಲಿ 170 ಎಕರೆ ಭೂಮಿಯನ್ನು ಕೂಡಾ ಖರೀದಿಸಿರುವ ಎಂಜಿ ಮೋಟಾರ್ ಸಂಸ್ಥೆಯು ಹೊಸ ಕಾರು ಉತ್ಪಾದನಾ ಘಟಕಕ್ಕೆ ಈಗಾಗಲೇ ಚಾಲನೆ ನೀಡಿದ್ದು, ಪ್ರತಿ ವರ್ಷ 80 ಸಾವಿರ ಕಾರುಗಳ ಉತ್ಪಾದನೆಯ ಗುರಿಯೊಂದಿಗೆ ಭಾರತದಲ್ಲಿ ಹಲವು ಕಾರು ಉತ್ಪಾದನಾ ಸಂಸ್ಥೆಗಳಿಗೆ ಪ್ರಬಲ ಪೈಪೋಟಿ ನೀಡಲು ಯೋಜನೆ ರೂಪಿಸಿದೆ.

Source: Nirmalbhalia5777

Article Published On: Monday, April 29, 2019, 14:44 [IST]
English summary
Spy Video: MG Hector Spotted Testing Undisguised Ahead Of Launch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+