ಪೆಟ್ರೋಲ್ ಮತ್ತು ಹೈಬ್ರಿಡ್ ವರ್ಷನ್‌ನಲ್ಲೂ ಬಿಡುಗಡೆಯಾಗಲಿದೆ ಎಂಜಿ ಜೆಡ್ಎಸ್ ಎಸ್‌ಯುವಿ

ಎಂಜಿ ಮೋಟಾರ್ ಸಂಸ್ಥೆಯು ಹೆಕ್ಟರ್ ಎಸ್‌ಯುವಿ ಬಿಡುಗಡೆಯ ಯಶಸ್ವಿ ನಂತರ ಮತ್ತಷ್ಟು ಹೊಸ ಕಾರು ಉತ್ಪನ್ನಗಳನ್ನು ಬಿಡುಗಡೆ ಮಾಡುವುದಕ್ಕೆ ಸಜ್ಜುಗೊಳ್ಳುತ್ತಿದ್ದು, ಇದೇ ವರ್ಷ ಡಿಸೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿರುವ ಜೆಡ್ಎಸ್ ಎಸ್‌ಯುವಿ ಕಾರು ಎಲೆಕ್ಟ್ರಿಕ್ ಎಂಜಿನ್‌ನಲ್ಲಿ ಮಾತ್ರವಲ್ಲದೇ ಪೆಟ್ರೋಲ್ ಹಾಗೂ ಹೈಬ್ರಿಡ್ ಎಂಜಿನ್ ಆಯ್ಕೆಯನ್ನು ಹೊಂದಿರುವ ಮಾಹಿತಿ ಲಭ್ಯವಾಗಿದೆ.

ಪೆಟ್ರೋಲ್ ಮತ್ತು ಹೈಬ್ರಿಡ್ ವರ್ಷನ್‌ನಲ್ಲೂ ಬಿಡುಗಡೆಯಾಗಲಿದೆ ಎಂಜಿ ಜೆಡ್ಎಸ್ ಎಸ್‌ಯುವಿ

ಎಂಜಿ ಸಂಸ್ಥೆಯು ಹೆಕ್ಟರ್ ನಂತರ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಸಜ್ಜಾಗುತ್ತಿರುವ ಬೆನ್ನಲ್ಲೇ ಹೊಸ ಕಾರು ಪೆಟ್ರೋಲ್ ಮತ್ತು ಹೈಬ್ರಿಡ್ ಎಂಜಿನ್ ಆಯ್ಕೆಯನ್ನು ಸಹ ಹೊಂದಿರುವ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿದ್ದು, ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆಯ ಕುರಿತಾಗಿ ಕೇಂದ್ರ ಸಾರಿಗೆ ಇಲಾಖೆಯಿಂದ ಪ್ರಮಾಣ ಪತ್ರವನ್ನು ಸಹ ಪಡೆದುಕೊಂಡಿರುವುದು ಹೊಸ ಕಾರು ವಿವಿಧ ಮಾದರಿಯ ಎಂಜಿನ್ ಆಯ್ಕೆಯನ್ನು ಹೊಂದಿರುವುದು ಬಹುತೇಕ ಖಚಿತವಾಗಿದೆ.

ಪೆಟ್ರೋಲ್ ಮತ್ತು ಹೈಬ್ರಿಡ್ ವರ್ಷನ್‌ನಲ್ಲೂ ಬಿಡುಗಡೆಯಾಗಲಿದೆ ಎಂಜಿ ಜೆಡ್ಎಸ್ ಎಸ್‌ಯುವಿ

ಬಿಡುಗಡೆಯಾಗಲಿರುವ ಜೆಡ್ಎಸ್ ಎಸ್‌ಯುವಿ ಕಾರು ಹೆಕ್ಟರ್ ಮಾದರಿಯಲ್ಲೇ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಜೊತೆಗೆ ಎಲೆಕ್ಟ್ರಿಕ್ ವರ್ಷನ್‌ನಲ್ಲೂ ಬಿಡುಗಡೆಯಾಗಲಿದೆ.

ಪೆಟ್ರೋಲ್ ಮತ್ತು ಹೈಬ್ರಿಡ್ ವರ್ಷನ್‌ನಲ್ಲೂ ಬಿಡುಗಡೆಯಾಗಲಿದೆ ಎಂಜಿ ಜೆಡ್ಎಸ್ ಎಸ್‌ಯುವಿ

ಪೆಟ್ರೋಲ್ ಮತ್ತು ಹೈಬ್ರಿಡ್ ಎರಡು ಎಂಜಿನ್‌ಗಳು ಬಿಎಸ್-6 ವೈಶಿಷ್ಟ್ಯತೆಗೆ ಸಮನಾದ ಯುರೋ-6 ನಿಯಮ ಅನುಸಾರ ಅಭಿವೃದ್ದಿ ಹೊಂದಿದ್ದು, ಹೊಸ ಕಾರು 4,314-ಎಂಎಂ ಉದ್ದ, 1,890-ಎಂಎಂ ಅಗಲ, 1,611-ಎಂಎಂ ಎತ್ತರ ಮತ್ತು 2,589-ಎಂಎಂ ವೀಲ್ಹ್‌ಬೆಸ್ ಪಡೆದುಕೊಂಡಿದೆ.

ಪೆಟ್ರೋಲ್ ಮತ್ತು ಹೈಬ್ರಿಡ್ ವರ್ಷನ್‌ನಲ್ಲೂ ಬಿಡುಗಡೆಯಾಗಲಿದೆ ಎಂಜಿ ಜೆಡ್ಎಸ್ ಎಸ್‌ಯುವಿ

ಇದರೊಂದಿಗೆ ಹೊಸ ಕಾರು ಹೆಕ್ಟರ್ ಕಾರಿಗಿಂತಲೂ ತಳಮಟ್ಟದ ಕಾರು ಮಾದರಿಯಾಗಿ ರಸ್ತೆಗಿಳಿಯಲಿದ್ದು, ಸಿಗ್ನೆಚರ್ ಹನಿಕೊಂಬ್ ಗ್ರಿಲ್, ಎಲ್ಇಡಿ ಹೆಡ್‌ಲ್ಯಾಂಪ್ ಜೊತೆ ಡಿಆರ್‌ಎಲ್ಎಸ್, ಎಲ್ಇಡಿ ಟೈಲ್‌ಲ್ಯಾಂಪ್, ಅಲ್ಯುನಿಯಂ ಸ್ಕಿಡ್ ಪ್ಲೇಟ್, 17-ಇಂಚಿನ ಡೈಮೆಂಡ್ ಕಟ್ ಅಲಾಯ್ ವೀಲ್ಹ್, ಪ್ರೀಮಿಯಂ ಕ್ಯಾಬಿನ್, ಎಂಟು ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ ಜೊತೆ ಅಂಡ್ರಾಯಿಡ್ ಆಟೋ, ರೈನ್ ಸೆನ್ಸಾರ್ ವೈಪರ್, ವೆಂಟಿಲೆಟೆಡ್ ಲೆದರ್ ಸೀಟುಗಳು, ಕ್ಲೈಮೆಟ್ ಕಂಟ್ರೊಲ್ ಮತ್ತು ಸ್ಟಾರ್ಟ್/ಸ್ಟಾಪ್ ಬಟನ್ ಫೀಚರ್ಸ್ ಹೊಂದಿದೆ.

ಪೆಟ್ರೋಲ್ ಮತ್ತು ಹೈಬ್ರಿಡ್ ವರ್ಷನ್‌ನಲ್ಲೂ ಬಿಡುಗಡೆಯಾಗಲಿದೆ ಎಂಜಿ ಜೆಡ್ಎಸ್ ಎಸ್‌ಯುವಿ

ಹಾಗೆಯೇ ಹೊಸ ಕಾರಿನಲ್ಲಿ ಇಕೊ, ನಾರ್ಮಲ್ ಮತ್ತು ಸ್ಪೋರ್ಟ್ ಡ್ರೈವ್ ಮೋಡ್‌ಗಳನ್ನು ಸಹ ನೀಡಲಾಗಿದ್ದು, ಪನೆರೊಮಿಕ್ ಸನ್‌ರೂಫ್ ಸೌಲಭ್ಯವು ಕಾರಿಗೆ ಮತ್ತಷ್ಟು ಪ್ರೀಮಿಯಂ ಲುಕ್ ನೀಡಲಿದೆ. ಜೊತೆಗೆ ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಎರ್ಮಜೆನ್ಸಿ ಬ್ರೇಕಿಂಗ್, ಲೈನ್ ಕೀಪ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ಎಬಿಎಸ್ ಜೊತೆ ಇಬಿಡಿ, 4 ಏರ್‌ಬ್ಯಾಗ್, ಹಿಲ್ ಲಾಂಚ್ ಅಸಿಸ್ಟ್ ಸೌಲಭ್ಯ ಹೊಂದಿದೆ.

ಪೆಟ್ರೋಲ್ ಮತ್ತು ಹೈಬ್ರಿಡ್ ವರ್ಷನ್‌ನಲ್ಲೂ ಬಿಡುಗಡೆಯಾಗಲಿದೆ ಎಂಜಿ ಜೆಡ್ಎಸ್ ಎಸ್‌ಯುವಿ

ಈ ಮೂಲಕ ಹೊಸ ಕಾರು ಸದ್ಯ ಮಾರುಕಟ್ಟೆಯಲ್ಲಿರುವ ಹ್ಯುಂಡೈ ಕ್ರೆಟಾ, ಮಹೀಂದ್ರಾ ಎಕ್ಸ್‌ಯುವಿ500, ಕಿಯಾ ಸೆಲ್ಟೊಸ್ ಮತ್ತು ಟಾಟಾ ಹ್ಯಾರಿಯರ್‌ ಕಾರುಗಳಿಗೆ ಮತ್ತಷ್ಟು ಪೈಪೋಟಿ ನೀಡಲಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ರೂ. 9.50 ಲಕ್ಷದಿಂದ ರೂ. 12.50 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ.

MOST READ: ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್‍‍ ಆಯ್ಕೆ ಸಂಬಂಧ ಹೊಸ ಆದೇಶ

ಪೆಟ್ರೋಲ್ ಮತ್ತು ಹೈಬ್ರಿಡ್ ವರ್ಷನ್‌ನಲ್ಲೂ ಬಿಡುಗಡೆಯಾಗಲಿದೆ ಎಂಜಿ ಜೆಡ್ಎಸ್ ಎಸ್‌ಯುವಿ

ಸದ್ಯ ಮಾರುಕಟ್ಟೆಯಲ್ಲಿರುವ ಹೆಕ್ಟರ್ ಕಾರು 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.12.18 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.16.88 ಲಕ್ಷ ಬೆಲೆ ಹೊಂದಿದೆ.

MOST READ: ಮುಂದಿನ ಒಂದು ವರ್ಷದೊಳಗೆ ಏಳು ಹೊಸ ಕಾರು ಬಿಡುಗಡೆ ಮಾಡಲಿದೆ ಮಹೀಂದ್ರಾ

ಪೆಟ್ರೋಲ್ ಮತ್ತು ಹೈಬ್ರಿಡ್ ವರ್ಷನ್‌ನಲ್ಲೂ ಬಿಡುಗಡೆಯಾಗಲಿದೆ ಎಂಜಿ ಜೆಡ್ಎಸ್ ಎಸ್‌ಯುವಿ

ಈ ಹಿನ್ನೆಲೆಯಲ್ಲಿ ರೂ.9 ಲಕ್ಷ ಬೆಲೆ ಅಂತರದಲ್ಲಿ ಖರೀದಿಗೆ ಲಭ್ಯವಿರುವ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್ ಮತ್ತು ನಿಸ್ಸಾನ್ ಕಿಕ್ಸ್ ಕಾರುಗಳಿಗೆ ಪೈಪೋಟಿಯಾಗಿ ಜೆಡ್ಎಸ್ ಕಾರು ಮಾರಾಟಕ್ಕೆ ಲಭ್ಯವಾಗಲಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ.

MOST READ: ಮಾಲಿನ್ಯ ತಡೆಗೆ ಹೊಸ ಉಪಕರಣ ಅಭಿವೃದ್ಧಿಪಡಿಸಿದ ಐಐಟಿ ಎಂಜಿನಿಯರ್

ಪೆಟ್ರೋಲ್ ಮತ್ತು ಹೈಬ್ರಿಡ್ ವರ್ಷನ್‌ನಲ್ಲೂ ಬಿಡುಗಡೆಯಾಗಲಿದೆ ಎಂಜಿ ಜೆಡ್ಎಸ್ ಎಸ್‌ಯುವಿ

ಇದಲ್ಲದೇ ಜೆಡ್ಎಸ್ ಕಾರು ಪೆಟ್ರೋಲ್ ಮತ್ತು ಹೈಬ್ರಿಡ್ ವರ್ಷನ್‌ಗಳಲ್ಲಿ ಮಾತ್ರವಲ್ಲದೇ ಎಲೆಕ್ಟ್ರಿಕ್ ವರ್ಷನ್‌ನಲ್ಲೂ ಖರೀದಿ ಲಭ್ಯವಾಗಲಿದ್ದು, ಹೊಸ ಕಾರು ಬಿಡುಗಡೆಗಾಗಿ ಈಗಾಗಲೇ ಹಲವು ಸುತ್ತಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದೆ.

ಪೆಟ್ರೋಲ್ ಮತ್ತು ಹೈಬ್ರಿಡ್ ವರ್ಷನ್‌ನಲ್ಲೂ ಬಿಡುಗಡೆಯಾಗಲಿದೆ ಎಂಜಿ ಜೆಡ್ಎಸ್ ಎಸ್‌ಯುವಿ

ಜೆಡ್ಎಸ್ ಎಲೆಕ್ಟ್ರಿಕ್ ಕಾರು 44.5kWh ಲೀಥಿಯಂ ಅಯಾನ್ ಬ್ಯಾಟರಿ ಸೌಲಭ್ಯದೊಂದಿಗೆ ಪ್ರತಿ ಚಾರ್ಜ್‌ಗೆ 320ರಿಂದ 350ಕಿ.ಮೀ ಮೈಲೇಜ್ ಸಾಮರ್ಥ್ಯ ಹೊಂದಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.18 ಲಕ್ಷದಿಂದ ರೂ.20 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರು 2020ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಮೇಳದ ನಂತರ ಅಧಿಕೃತವಾಗಿ ಬಿಡುಗಡೆಯಾಗಲಿದೆ.

Article Published On: Wednesday, October 23, 2019, 13:11 [IST]
English summary
MG Motor Could Introduce ZS SUV With Petrol & Hybrid Engine Options In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+