ಶಾಂಘೈ ಮೋಟಾರ್ ಶೋನಲ್ಲಿ ಅನಾವರಣಗೊಂಡ ಹೊಸ ಮಿನಿ ಕ್ಲಬ್‍ಮ್ಯಾನ್
ಬ್ರಿಟಿಷ್ ಕಾರು ತಯಾರಕ ಕಂಪನಿ ಮಿನಿ ತನ್ನ ಹೊಸ ಹ್ಯಾಚ್ ಬ್ಯಾಕ್ ಕ್ಲಬ್‍ಮ್ಯಾನ್ ಕಾರನ್ನು 2019ರ ಶಾಂಘೈ ಮೋಟಾರ್ ಶೋ ನಲ್ಲಿ ಅನಾವರಣಗೊಳಿಸಿತು. ಹೊಸ 2019ರ ಮಿನಿ ಕ್ಲಬ್‍ಮ್ಯಾನ್ ಕಾರು ಅಪ್ ಡೇಟೆಡ್ ಡಿಸೈನ್ ಮತ್ತು ವಿಭಿನ್ನ ಬಗೆಯ 6 ಎಂಜಿನ್ ವಿಧಗಳನ್ನು ಒಳಗೊಂಡಿದೆ.

ಅನಾವರಣಗೊಂಡ ಹ್ಯಾಚ್ ಬ್ಯಾಕ್ ಮಿನಿ ಕ್ಲಬ್‍ಮ್ಯಾನ್ ಕಾರು ಹಲವು ಹೊಸ ಡಿಸೈನ್ ಗಳಿಂದ ಕೂಡಿರುತ್ತದೆ. ರೇಡಿಯೆಟರ್ ನಲ್ಲಿ ಹೊಸ ವಿನ್ಯಾಸವನ್ನು ಮಾಡಲಾಗಿದೆ. ಎದುರುಗಡೆ ಬರುತ್ತಿರುವ ವಾಹನ ಸವಾರರ ಕಣ್ಣುಗಳಿಗೆ ಬೆಳಕು ಬಿದ್ದು ತೊಂದರೆಯಾಗದಂತೆ ಎಲ್ಇಡಿ ಹೆಡ್ ಲೈಟ್ ಗಳನ್ನು ವಿನ್ಯಾಸಗೊಳಿಸಲಾಗಿದೆ. ಹಗಲು ಹೊತ್ತಿನಲ್ಲಿ ಉರಿಯುವ ಎಲ್ಇಡಿ ಫಾಗ್ ಲ್ಯಾಂಪ್ ಗಳನ್ನು ಹೊಸದಾಗಿ ಅಳವಡಿಸಲಾಗಿದೆ.

ಮಿನಿ ಕ್ಲಬ್‍ಮ್ಯಾನ್ ನ ವ್ಹೀಲ್ ಗಳನ್ನು ಹೊಸದಾಗಿ ವಿನ್ಯಾಸಗೊಳಿಸಲಾಗಿದ್ದು, ಹೊಸ ವಿನ್ಯಾಸವು 16 ಮತ್ತು 17 ಇಂಚಿನ ಅಲಾಯ್ ವ್ಹೀಲ್ ಗಳನ್ನು ಒಳಗೊಂಡಿದೆ. ದೊಡ್ದ ಗಾತ್ರದ ವ್ಹೀಲ್ ಗಳನ್ನು ಬಯಸುವವರಿಗಾಗಿ 18 ಮತ್ತು 19 ಇಂಚಿನ ಲೈಟ್ ಅಲಾಯ್ ವ್ಹೀಲ್ ಗಳನ್ನು ನೀಡಲಾಗಿದೆ. ಮಿನಿ ಕ್ಲಬ್ ಮನ್ ಕಾರಿನ ಹಿಂಬದಿಯಲ್ಲಿ ಎಲ್ಇಡಿ ಟೈಲ್ ಲ್ಯಾಂಪ್ ಗಳನ್ನು ಯೂನಿಯನ್ ಜ್ಯಾಕ್ ಫ್ಲ್ಯಾಗ್ ಸ್ಟೈಲ್ ನಲ್ಲಿ ಹಾಕಲಾಗಿದೆ.

ಮಿನಿ ಕ್ಲಬ್‍ಮ್ಯಾನ್ ಕಾರು ಇಂಡಿಯನ್ ಸಮ್ಮರ್ ರೆಡ್ ಮೆಟಾಲಿಕ್, ಬ್ರಿಟಿಷ್ ರೇಸಿಂಗ್ ಗ್ರೀನ್ ಮೆಟಾಲಿಕ್ ಮತ್ತು ಮಿನಿ ಯುವರ್ಸ್ ಎನಿಗ್ ಮ್ಯಾಟಿಕ್ ಬ್ಲ್ಯಾಕ್ ಮೆಟಾಲಿಕ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ. ರೂಫ್ ಮಾದರಿಯೂ ಸಹ ಬ್ಲ್ಯಾಕ್, ವೈಟ್, ಸಿಲ್ವರ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ.

ಕಾರಿನ ಒಳಭಾಗದಲ್ಲಿ ಹೊಸ 2019ರ ಮಿನಿ ಕ್ಲಬ್‍ಮ್ಯಾನ್ ಹೆಚ್ಚಿನ ಸೌಲಭ್ಯಗಳನ್ನು ಒಳಗೊಂಡಿದೆ. 6.5 ಇಂಚಿನ ಟಚ್ ಸ್ಕ್ರೀನ್ ಡಿಸ್ ಪ್ಲೇ ಸ್ಯಾಟಲೈಟ್ ನ್ಯಾವಿಗೇಷನ್ ಹೊಂದಿದ್ದು, ಆಪಲ್ ಕಾರ್ ಪ್ಲೇ ಮತ್ತು ಚಾಲಕರಿಗೆ ಟ್ರಾಫಿಕ್ ಜ್ಯಾಮ್ ಬಗ್ಗೆ ಮಾಹಿತಿಯನ್ನು ನೀಡುವ ಸೌಲಭ್ಯ ಒದಗಿಸಲಾಗಿದೆ.

8.8 ಇಂಚಿನ ಇನ್ಫೋಟೈನ್ಮೆಂಟ್ ಡಿಸ್ ಪ್ಲೇ, ಪ್ರಿಮೀಯಂ ಹಾರ್ಮೊನ್ ಕಾರ್ಡನ್ ಆಡಿಯೋ ಸಿಸ್ಟಮ್, ಹೆಡ್ಸ್ ಅಪ್ ಡಿಸ್ ಪ್ಲೇ, ಸ್ಪೊರ್ಟ್ಸ್ ಸ್ಟೀಯರಿಂಗ್ ವ್ಹೀಲ್, ಸ್ಪೊರ್ಟ್ಸ್ ಸೀಟ್, ಇಲ್ಯುಮಿನಿಟೇಡ್ ಡೋರ್ ಬೆಜೆಲ್, ಪೆಡಲ್ ಲೈಟ್, ಡೋರ್ ಹ್ಯಾಂಡಲ್ ಮತ್ತು ಆಂಬಿಯೆಂಟ್ ಲೈಟ್ ಸೌಲಭ್ಯಗಳನ್ನು ತುಸು ಹೆಚ್ಚು ಖರ್ಚು ಮಾಡಿ ಪಡೆಯಬಹುದಾಗಿದೆ.
MOST READ: ಭಾರತದಲ್ಲೂ ಬಿಡುಗಡೆಯಾಗುತ್ತಾ ಲೆಕ್ಸಸ್ ಎಲ್ಎಂ ಲಗ್ಷುರಿ ವ್ಯಾನ್?

2019ರ ಮಿನಿ ಕ್ಲಬ್‍ಮ್ಯಾನ್ ಕಾರನ್ನು 6 ನಮೂನೆಯ ಎಂಜಿನ್ ಗಳ ಜೊತೆಯಲ್ಲಿ ನೀಡಲಾಗುತ್ತಿದೆ. ಅವುಗಳಲ್ಲಿ ಮೂರು ಪೆಟ್ರೊಲ್ ಮತ್ತು ಮೂರು ಡೀಸೆಲ್. ಅವುಗಳಲ್ಲಿ ಮೂರನ್ನು 1.5 ಲೀಟರ್ ಪೆಟ್ರೋಲ್ ಮತ್ತು2.0 ಲೀಟರ್ ಟರ್ಬೋ ಪೆಟ್ರೊಲ್ ಮತ್ತು ಡೀಸೆಲ್ ಎಂಜಿನ್ ಗಳ ಜೊತೆ ನೀಡಲಾಗುವುದು.

1.5 ಲೀಟರಿನ ಪೆಟ್ರೋಲ್ ಇಂಜಿನ್ 134 ಬಿಹೆಚ್‍ಪಿ ಸಾಮರ್ಥ್ಯ ಹೊಂದಿದ್ದರೆ, 2.0 ಲೀಟರಿನ ಟರ್ಬೋ ಪೆಟ್ರೋಲ್ 189 ಬಿಹೆಚ್‍ಪಿ ಹೊಂದಿದ್ದು 0 ರಿಂದ 100 ಕಿ.ಮೀ ವೇಗವನ್ನು 7.3 ಸೆಕೆಂಡ್ ಗಳಲ್ಲಿ ಮುಗಿಸುವ ಸಾಮರ್ಥ್ಯ ಹೊಂದಿದೆ. 2.0 ಲೀಟರ್ ಡೀಸೆಲ್ 148 ಬಿಹೆಚ್‍ಪಿ ಸಾಮರ್ಥ್ಯ ಹೊಂದಿದೆ. ಎಲ್ಲಾ ಎಂಜಿನ್ ಗಳು 7 ಅಥವಾ 8 ಸ್ಪೀಡಿನ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಳಿಗೆ ಬದಲಾಗಿ ಸ್ಟಾಂಡರ್ಡ್ 6 ಸ್ಪೀಡಿನ ಮ್ಯಾನುವಲ್ ಗೇರ್ ಬಾಕ್ಸ್ ಗಳನ್ನು ಹೊಂದಿವೆ.


Click it and Unblock the Notifications








