ಬಿಡುಗಡೆಗೊಂಡ ಮಿನಿ ಕಂಟ್ರಿಮನ್ ಬ್ಲ್ಯಾಕ್ ಎಡಿಷನ್

ಭಾರತದಲ್ಲಿನ ಹಬ್ಬದ ಶುಭ ಸಂದರ್ಭದಲ್ಲಿ ಮಿನಿ ಇಂಡಿಯಾ ಕಂಪನಿಯು, ಲಿಮಿಟೆಡ್ ಎಡಿಷನ್‍‍ನ ಕಂಟ್ರಿಮನ್‌ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಮಿನಿ ಕಂಟ್ರಿಮನ್ ಬ್ಲಾಕ್ ಎಡಿಷನ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.42.40 ಲಕ್ಷಗಳಾಗಿದೆ.

ಬಿಡುಗಡೆಗೊಂಡ ಮಿನಿ ಕಂಟ್ರಿಮನ್ ಬ್ಲ್ಯಾಕ್ ಎಡಿಷನ್

ಭಾರತದಲ್ಲಿ ಈ ಕಾರಿನ ಕೇವಲ 24 ಯುನಿ‍‍ಟ್‍‍ಗಳನ್ನು ಮಾರಾಟ ಮಾಡಲಾಗುವುದು. ಕಂಟ್ರಿಮನ್ ಬ್ಲ್ಯಾಕ್ ಎಡಿಷನ್ ಕಾರನ್ನು ಕೂಪರ್ ಎಸ್ ಜಾನ್ ಕೂಪರ್ ವರ್ಕ್ಸ್ (ಜೆಸಿಡಬ್ಲ್ಯೂ) ಆಧಾರದ ಮೇಲೆ ಅಭಿವೃದ್ಧಿಪಡಿಸಲಾಗಿದೆ.

ಬಿಡುಗಡೆಗೊಂಡ ಮಿನಿ ಕಂಟ್ರಿಮನ್ ಬ್ಲ್ಯಾಕ್ ಎಡಿಷನ್

ಸ್ಟ್ಯಾಂಡರ್ಡ್ ಮಾದರಿಯ ಕಾರುಗಳಿಗಿಂತ ಈ ಕಾರು ರೂ.1 ಲಕ್ಷ ಹೆಚ್ಚು ಬೆಲೆಯನ್ನು ಹೊಂದಿರಲಿದೆ. ಹೆಸರೇ ಸೂಚಿಸುವಂತೆ, ಹೊಸ ಲಿಮಿಟೆಡ್ ಎಡಿಷನ್ ಕಾರು ಬ್ರಿಟಿಷ್ ಎಸ್‍‍ಯುವಿಯ ಸ್ಟೆಲ್ತ್ ಅಂಶವನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ ಹಲವಾರು ಕಾಸ್ಮೆಟಿಕ್ ಅಪ್‍‍‍ಡೇಟ್‍‍ಗಳನ್ನು ಪಡೆದಿದೆ.

ಬಿಡುಗಡೆಗೊಂಡ ಮಿನಿ ಕಂಟ್ರಿಮನ್ ಬ್ಲ್ಯಾಕ್ ಎಡಿಷನ್

ಮಿನಿ ಕಂಟ್ರಿಮನ್ ಬ್ಲ್ಯಾಕ್ ಎಡಿಷನ್ ಕಾರಿನಲ್ಲಿ ಹೊಸ ಕಪ್ಪು ಬಣ್ಣದ ಗ್ರಿಲ್, ಜೆಸಿಡಬ್ಲ್ಯೂ ಕಾರ್ಬನ್ ಫೈಬರ್‍‍ನಿಂದ ತಯಾರಿಸಲಾಗಿರುವ ಒಆರ್‍‍ವಿಎಂ, ಹೆಡ್‌ಲೈಟ್ ಹಾಗೂ ಟೇಲ್‌ಲೈಟ್‌ಗಳಿಗಾಗಿ ಪಿಯಾನೋ ಬ್ಲ್ಯಾಕ್ ಟ್ರಿಮ್, ಜೊತೆಗೆ ಟೇಲ್‌ಗೇಟ್‌ನಲ್ಲಿ ಪಿಯಾನೋ ಬ್ಲ್ಯಾಕ್ ಕಂಟ್ರಿಮನ್ ಮಾನಿಕರ್‍‍ಗಳಿವೆ.

ಬಿಡುಗಡೆಗೊಂಡ ಮಿನಿ ಕಂಟ್ರಿಮನ್ ಬ್ಲ್ಯಾಕ್ ಎಡಿಷನ್

ಕಂಟ್ರಿಮನ್ ಬ್ಲ್ಯಾಕ್ ಕಾರಿನಲ್ಲಿ ಕಪ್ಪು ಬಣ್ಣದ ಬಾನೆಟ್ ಸ್ಟ್ರೈಪ್‍‍ಗಳಿವೆ. ಇದರ ಜೊತೆಗೆ ರೂಫ್ ರೇಲ್‍‍ಗಳೂ ಸಹ ಕಪ್ಪು ಬಣ್ಣವನ್ನು ಹೊಂದಿವೆ. ಈ ಎಸ್‌ಯುವಿ 18 ಇಂಚಿನ ಜೆಸಿಡಬ್ಲ್ಯೂ ಅಲಾಯ್ ವ್ಹೀಲ್‍‍ಗಳನ್ನು ಹೊಂದಿದ್ದು, ಫ್ಲಾಟ್ ಟಯರ್‌ಗಳಲ್ಲಿ ಚಲಿಸುತ್ತದೆ.

ಬಿಡುಗಡೆಗೊಂಡ ಮಿನಿ ಕಂಟ್ರಿಮನ್ ಬ್ಲ್ಯಾಕ್ ಎಡಿಷನ್

ಮಿನಿ ಕಂಟ್ರಿಮನ್ ಬ್ಲ್ಯಾಕ್ ಎಡಿಷನ್ ಕಾರಿನ ಕ್ಯಾಬಿನ್ ಒಳಗೆ ಹಲವಾರು ಫೀಚರ್‍‍ಗಳನ್ನು ಅಳವಡಿಸಲಾಗಿದೆ. ಈ ಫೀಚರ್‍‍ಗಳಲ್ಲಿ ಹೆಡ್ ಅಪ್ ಡಿಸ್‍‍ಪ್ಲೇ, ಮಿನಿ ವೈಯರ್ಡ್ ಪ್ಯಾಕೇಜ್, ಎಲೆಕ್ಟ್ರಿಕ್ ಸ್ಪೋರ್ಟ್ಸ್ ಸೀಟುಗಳು, ಪನೋರಮಿಕ್ ಗ್ಲಾಸ್ ರೂಫ್, ಹರ್ಮನ್ - ಕಾರ್ಡನ್ ಸೌಂಡ್ ಸಿಸ್ಟಂಗಳು ಸೇರಿವೆ.

ಬಿಡುಗಡೆಗೊಂಡ ಮಿನಿ ಕಂಟ್ರಿಮನ್ ಬ್ಲ್ಯಾಕ್ ಎಡಿಷನ್

ಕ್ಯಾಬಿನ್ ಸಹ ಜೆಸಿಡಬ್ಲ್ಯೂ ಸ್ಟೀಯರಿಂಗ್ ವ್ಹೀಲ್ ಹಾಗೂ ಇಂಟೀರಿಯರ್ ಟ್ರಿಮ್ ಸೇರಿದಂತೆ ಕಪ್ಪು ಬಣ್ಣವನ್ನು ಹೊಂದಿದೆ. ಸ್ಪೋರ್ಟಿಯರ್ ಆವೃತ್ತಿಯಾಗಿರುವುದರಿಂದ, ಈ ಎಸ್‍‍ಯುವಿ ಜೆಸಿಡಬ್ಲ್ಯೂ ಏರೋ ಕಿಟ್, ಆಟೋಮ್ಯಾಟಿಕ್ ಟೇಲ್‌ಗೇಟ್ ಆಕ್ಸೆಸ್, ಸೀಟುಗಳಿಗೆ ಮೆಮೊರಿ ಫಂಕ್ಷನ್‍‍ಗಳನ್ನು ಹೊಂದಿದೆ.

ಬಿಡುಗಡೆಗೊಂಡ ಮಿನಿ ಕಂಟ್ರಿಮನ್ ಬ್ಲ್ಯಾಕ್ ಎಡಿಷನ್

ಮಿನಿ ಕಂಟ್ರಿಮನ್ ಬ್ಲ್ಯಾಕ್ ಎಡಿಶನ್‌ನಲ್ಲಿ 2.0-ಲೀಟರಿನ ನಾಲ್ಕು ಸಿಲಿಂಡರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ ಅಳವಡಿಸಲಾಗಿದೆ. ಈ ಎಂಜಿನ್ 189 ಬಿಹೆಚ್‌ಪಿ ಪವರ್ ಹಾಗೂ 280 ಎನ್‌ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಬಿಡುಗಡೆಗೊಂಡ ಮಿನಿ ಕಂಟ್ರಿಮನ್ ಬ್ಲ್ಯಾಕ್ ಎಡಿಷನ್

ಈ ಎಂಜಿನ್‍‍ಗೆ ಪ್ಯಾಡಲ್ ಶಿಫ್ಟರ್‌ಗಳನ್ನು ಹೊಂದಿರುವ 8 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ ಜೋಡಿಸಲಾಗಿದೆ. ಕಂಟ್ರಿಮನ್ 0-100 ಕಿ.ಮೀ ವೇಗವನ್ನು 7.5 ಸೆಕೆಂಡುಗಳಲ್ಲಿ ಆಕ್ಸೆಲೆರೇಟ್ ಮಾಡುತ್ತದೆ. ಈ ಎಸ್‍‍ಯುವಿ ಪ್ರತಿ ಲೀಟರ್ ಪೆಟ್ರೋಲಿಗೆ 14.41 ಕಿ.ಮೀ ಮೈಲೇಜ್ ನೀಡುತ್ತದೆ.

ಬಿಡುಗಡೆಗೊಂಡ ಮಿನಿ ಕಂಟ್ರಿಮನ್ ಬ್ಲ್ಯಾಕ್ ಎಡಿಷನ್

ಹಲವು ಕಾಂಪ್ಯಾಕ್ಟ್ ಐಷಾರಾಮಿ ಎಸ್‍ಯುವಿಗಳ ಮಧ್ಯೆ ವಿಭಿನ್ನವಾಗಿ ಕಾಣುವ ಮಿನಿ ಕಂಟ್ರಿಮನ್ ದೇಶಿಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಜ್ ಜಿಎಲ್‌ಎ, ಆಡಿ ಕ್ಯೂ 3, ವೋಲ್ವೋ ಎಕ್ಸ್‌ಸಿ 40 ಹಾಗೂ ಬಿಎಂಡಬ್ಲ್ಯು ಎಕ್ಸ್ 1 ಕಾರುಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Wednesday, October 30, 2019, 13:42 [IST]
English summary
Mini countryman Black Edition launched in India - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+