Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಮೈಲೇಜ್ ನೀಡುವ ಬಜಾಜ್ ಕ್ಯೂಟ್ ಬಿಡುಗಡೆ
ಬಜಾಜ್ ಸಂಸ್ಥೆಯು ತನ್ನ ಜನಪ್ರಿಯ ಕ್ವಾಡ್ರಿಸೈಕಲ್ ಮಾದರಿಯಾದ ಕ್ಯೂಟ್ ವಾಹನಗಳನ್ನು ದೇಶಾದ್ಯಂತ ಹಂತಹಂತವಾಗಿ ಬಿಡುಗಡೆಗೊಳಿಸುತ್ತಿದ್ದು, ಅತ್ಯುತ್ತಮ ತಾಂತ್ರಿಕ ಸೌಲಭ್ಯವನ್ನು ಹೊಂದಿರುವ ಹೊಸ ಕ್ಯೂಟ್ ವಾಹನವು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದೆ.

ಬಜಾಜ್ ಆಟೋ ಸಂಸ್ಥೆಯು ಭಾರತದಲ್ಲಿ ವಿವಿಧ ಕಾನೂನು ಹೋರಾಟದ ನಂತರ ತಮ್ಮ ಹೊಸ ಕ್ಯೂಟ್ ಕ್ವಾಡ್ರಿಸೈಕಲ್ ವಾಹನವನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ದೆಹಲಿಯ ಎಕ್ಸ್ ಶೋರೂಂ ಪ್ರಕಾರ ಪೆಟ್ರೋಲ್ ಮಾದರಿಗೆ ಎಕ್ಸ್‌ಶೋರೂಂ ಪ್ರಕಾರ ರೂ. 2.63 ಲಕ್ಷ ಮತ್ತು ಸಿಎನ್‌ಜಿ ಆವೃತ್ತಿಗೆ ರೂ.2.83 ಲಕ್ಷ ಬೆಲೆ ಪಡೆದುಕೊಂದಿದೆ.

2015ರಿಂದಲೇ ಭಾರತದಲ್ಲೇ ಉತ್ಪಾದನೆಗೊಳ್ಳುತ್ತಿರುವ ಬಜಾಜ್ ಕ್ಯೂಟ್ ಕೆಲವು ಕಾರಣಾಂತರಗಳಿಂದ ಭಾರತವನ್ನು ಹೊರತುಪಡಿಸಿ ಆಫ್ರಿಕಾದ ಪ್ರಮುಖ ರಾಷ್ಟ್ರಗಳು ಸೇರಿದಂತೆ ಆಸ್ಟ್ರೇಲಿಯಾದಲ್ಲೂ ಕೂಡಾ ಈ ವಾಹನವನ್ನು ಉತ್ತಮ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ.

ಆದ್ರೆ ಭಾರತದಲ್ಲಿನ ಕೆಲವು ಸಾರಿಗೆ ನಿಯಮಗಳ ಅನ್ವಯ ಬಜಾಜ್ ಕ್ಯೂಟ್ ಬಿಡುಗಡೆಗೆ ಇಷ್ಟು ದಿನಗಳ ಕಾಲ ಅವಕಾಶ ನೀಡಿರದ ಕೇಂದ್ರ ಸಾರಿಗೆ ಇಲಾಖೆ ಈ ಬಾರಿ ಕ್ವಾಡ್ರಿಸೈಕಲ್ ವಿಭಾಗದಲ್ಲಿ ಕ್ಯೂಟ್ ಮಾರಾಟಕ್ಕೆ ಅವಕಾಶ ನೀಡಿದ್ದು, ಇದು ಮೂರು ಚಕ್ರಗಳ ಆಟೋರಿಕ್ಷಾ ಮತ್ತು ಎಂಟ್ರಿ ಲೆವೆಲ್ ಕಾರುಗಳ ಮಧ್ಯದ ಸ್ಥಾನ ಪಡೆದುಕೊಂಡಿರಲಿದೆ.

ಸ್ವಂತ ಬಳಕೆಗೂ ಸೈ ಮತ್ತು ವಾಣಿಜ್ಯ ಬಳಕೆಗೂ ಸೈ
ಹೌದು, ಬಿಡುಗಡೆಗೊಂಡ ಬಜಾಜ್ ಕ್ಯೂಟ್ ವಾಹನವು ಸ್ವಂತ ಬಳಕೆಯ ಜೊತೆ ವ್ಯಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳಬಹುದು ಎಂದು ಹೇಳಿದ್ದು, ಆಟೋ ರಿಕ್ಷಾಗಳ ಬೆಲೆ ಬೆಲೆಯಲ್ಲಿ ಹೊಸ ಕ್ಯೂಟ್ ವಾಹನ ವಾಹನವು ಬಿಡುಗಡೆಯಾಗಿರುವುದು ಹಲವರಲ್ಲಿ ಅಚ್ಚರಿ ಮೂಡಿಸಿದೆ.

ಇನ್ನು ಬಜಾಜ್ ಸಂಸ್ಥೆಯು ಕ್ಯೂಟ್ ವಾಹನವನ್ನು ವಿವಿಧ ರಾಷ್ಟ್ರಗಳಿಗೆ ಪ್ರತಿ ತಿಂಗಳು 5 ಸಾವಿರ ಯೂನಿಟ್‌ಗಳನ್ನು ರಫ್ತು ಮಾಡುತ್ತಿದ್ದು, ನಾಲ್ಕು ಚಕ್ರಗಳನ್ನು ಪಡೆದುಕೊಂಡಿರುವ ಕ್ಯೂಟ್ ವಾಹನವು ಆಟೋ ರಿಕ್ಷಾಗಳಿಂತಲೂ ಹೆಚ್ಚು ಹೆಚ್ಚು ಶಕ್ತಿಶಾಲಿಯಾಗಿವೆ.

ಹಾಗೆಯೇ ವಿಶೇಷ ತಂತ್ರಜ್ಞಾನ ಪ್ರೇರಣೆ ಹೊಂದಿರಿರುವ ಕ್ಯೂಟ್ ವಾಹನವು 452 ಕಿಲೋಗ್ರಾಂನ ತೂಕವನ್ನು ಪಡೆದುಕೊಂಡಿದ್ದು, ಇದರಲ್ಲಿ ಚಾಲಕ ಸೇರಿ ನಾಲ್ಕು ಮಂದಿ ಯಾವುದೇ ತೊಂದರೆಯಿಲ್ಲದೇ ಅರಾಮವಾಗಿ ಕೂರಬಹುದಾಗಿದಿದೆ.

ಕ್ಯೂಟ್ ಉದ್ದಳತೆ
ಪ್ರಸ್ತುತ ಮಾರುಕಟ್ಟೆಯಲ್ಲಿರುವ ಟಾಟಾ ನ್ಯಾನೊ ಕಾರಿನಂತೆಯೇ ಇದರಲ್ಲಿಯು ಸಹ ಮುಂಭಾಗದಲ್ಲಿ ಬೂಟ್ ಸ್ಪೇಸ್ ಇರಿಸಲಾಗಿದ್ದು, ಹೆಚ್ಚುವರಿ ಸ್ಥಳವಕಾಶ ಬೇಕಿದ್ದಲ್ಲಿ ಹಿಂಬದಿಯ ಸೀಟ್‍ನ್ನು ಮಡಿಚಿಕೊಳ್ಳುವ ಮೂಲಕ ಮತ್ತಷ್ಟು ಲಗೇಜ್ ತುಂಬಿಕೊಳ್ಳಲು ಇದರಲ್ಲಿ ಅವಕಾಶವಿದೆ.
MOST READ: ಭಾರತದಲ್ಲೂ ಬಿಡುಗಡೆಯಾಗುತ್ತಾ ಲೆಕ್ಸಸ್ ಎಲ್ಎಂ ಲಗ್ಷುರಿ ವ್ಯಾನ್?

ಬಜಾಜ್ ಸಂಸ್ಥೆಯು ನೀಡಿರುವ ಮಾಹಿತಿ ಪ್ರಕಾರ ಕ್ಯೂಟ್ ವಾಹನವು 2,750-ಎಂಎಂ ಉದ್ದ, 1,312-ಎಂಎಂ ಅಗಲ ಮತ್ತು 1,652-ಎಂಎಂ ಎತ್ತರ ಹೊಂದಿದ್ದು, 12-ಇಂಚಿನ ಸ್ಟಿಲ್ ವೀಲ್ಹ್‌ನೊಂದಿಗೆ ಉತ್ತಮವಾದ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿರುವುದು ಸ್ವಂತ ಬಳಕೆಗೂ ಆಕರ್ಷಕವಾಗಿದೆ.

ತಾಂತ್ರಿಕ ವೈಶಿಷ್ಟ್ಯತೆಗಳು
ಕ್ಯೂಟ್ ವಾಹನದಲ್ಲಿ ಡ್ಯಾಶ್ ಬೋರ್ಡ್ ಮಧ್ಯಭಾಗದಲ್ಲಿ ಸ್ಪೀಡೋಮೀಟರ್ ಅನ್ನು ಕಾಣಬಹುದಾಗಿದ್ದು, ಇದು ಅನಾಲಾಗ್ ಮತ್ತು ಡಿಜಿಟಲ್ ಡಿಸ್ಪ್ಲೇಯನ್ನು ಹೊಂದಿದೆ. ಇವಿಗಳ ಜೊತೆಗೆ ಈ ವಾಹನದಲ್ಲಿ ಎಂಪಿ3 ಪ್ಲೇಯರ್, ಯುಎಸ್‍ಬಿ ಪೋರ್ಟ್ಸ್ ಹಾಗು ಆಕ್ಸ್ ಕೇಬಲ್‍ಗಳನ್ನು ಕನೆಕ್ಟ್ ಮಾಡಿಕೊಳ್ಳಬಹುದಾದ ಸೌಕರ್ಯ ಇದರಲ್ಲಿದೆ.
MOST READ: ಇನ್ಮುಂದೆ ಮಾಡಿಫೈ ವಾಹನಗಳ ಮಾರಾಟ ಮತ್ತು ಖರೀದಿ ಸಾಧ್ಯವೇ ಇಲ್ಲ..!

ಎಂಜಿನ್ ಸಾಮರ್ಥ್ಯ
ಕ್ಯೂಟ್ ವಾಹನವು 216-ಸಿಸಿ 4-ಸ್ಟ್ರೋಕ್ಸ್, ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಲಿಕ್ವಿಡ್ ಕೂಲ್ ಫ್ಯುಯಲ್ ಇಂಜೆಕ್ಷನ್ ಸಹಾಯದಿಂದ 13-ಬಿಹೆಚ್‍ಪಿ ಮತ್ತು 20-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿರಲಿದೆ.

ಇದರಲ್ಲಿ ಸಿಎನ್‍ಜಿ ಆಧಾರಿತ ಕ್ಯೂಟ್ ಮಾದರಿಯು 10.8-ಬಿಹೆಚ್‍ಪಿ ಮತ್ತು 16.1-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 5 ಸ್ಪೀಡ್ ಸೀಕ್ವೆಂಟಲ್ ಗೇರ್‍ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

ಮೈಲೇಜ್
ಬಜಾಜ್ ಕ್ಯೂಟ್ 8 ಲೀಟರ್ ಫ್ಯುಯಲ್ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದ್ದು, 35 ಕಿಲೋಗ್ರಾಂ ಸಾಮರ್ಥ್ಯದ ಸಿಎನ್‍ಜಿ ಟ್ಯಾಂಕ್ ಅನ್ನು ಜೋಡಣೆ ಹೊಂದಿದೆ. ಈ ಮೂಲಕ ಪ್ರತಿ ಲೀಟರ್ ಪೆಟ್ರೋಲ್‌ಗೆ ಸುಮಾರು 35 ಕಿಮೀ ಮೈಲೇಜ್ ಹಿಂದಿರುಗಿಸುವ ಕ್ಯೂಟ್ ಮಾದರಿಯು ಸಿಎನ್‍ಜಿ ಆವೃತ್ತಿಯಲ್ಲಿ ಪ್ರತೀ ಕಿ.ಗ್ರಾಂ ಸಿಎನ್‌ಜಿಗೆ ಬರೋಬ್ಬರಿ 43 ಕಿ.ಮಿ ಮೈಲೇಜ್ ನೀಡಬಲ್ಲದು.