ಇನ್ಮುಂದೆ ಮಾಡಿಫೈ ವಾಹನಗಳ ಮಾರಾಟ ಮತ್ತು ಖರೀದಿ ಸಾಧ್ಯವೇ ಇಲ್ಲ..!

ನಗರ ಪ್ರದೇಶಗಳಲ್ಲಿ ಇತ್ತೀಚೆಗೆ ಹೆಚ್ಚು ಟ್ರೆಂಡ್ ಸೃಷ್ಠಿಸುತ್ತಿರುವ ಕಾರು, ಬೈಕ್‌ ಮಾಡಿಫಿಕೇಷನ್ ಹೊಸತೆನಲ್ಲ. ಆದ್ರೆ ಮಾಡಿಫೈಗೊಂಡ ವಾಹನಗಳಿಂದ ಮಾಲೀಕರಿಗೆ ಏನೇ ಅನುಕೂಲಕಲತೆಗಳಿದ್ದರೂ, ಅದು ಇತರರಿಗೆ ಕಿರಿಕಿರಿ ಅಂದ್ರೆ ತಪ್ಪಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಮಾಡಿಫೈ ವಾಹನಗಳಿಗೆ ಬ್ರೇಕ್ ಹಾಕುತ್ತಿರುವ ಕೇರಳ ಪೊಲೀಸರು ಮಾಡಿಫೈ ವಾಹನ ಮಾಲೀಕರ ವಿರುದ್ಧ ಕಠಿಣ ನಿಯಮವೊಂದನ್ನು ಜಾರಿಗೊಳಿಸಿದ್ದಾರೆ.

ಇನ್ಮುಂದೆ ಮಾಡಿಫೈ ವಾಹನಗಳ ಮಾರಾಟ ಮತ್ತು ಖರೀದಿ ಸಾಧ್ಯವೇ ಇಲ್ಲ..!

ಕಾರ್ ಮತ್ತು ಬೈಕ್‌ ಮಾಡಿಫಿಕೇಷನ್ ಹಾವಳಿಯಿಂದಾಗಿ ಸಾರ್ವಜನಿಕರಿಗೆ ಸಾಕಷ್ಟು ಕಿರಿಕಿರಿಯಾಗುತ್ತಿದ್ದು, ಪೊಲೀಸರು ಎಷ್ಟೇ ಕಠಿಣ ಕ್ರಮಕೈಗೊಂಡರು ಕೂಡಾ ಮಾಡಿಫೈ ವಾಹನಗಳು ಮಾತ್ರ ಕಡಿಮೆಯಾಗುತ್ತಿಲ್ಲ. ಹೀಗಾಗಿ ಇದರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸುತ್ತಿರುವ ಕೇರಳ ಪೊಲೀಸರು ಮಾಡಿಫೈ ಪ್ರಿಯರ ಹಾವಳಿಗೆ ಬ್ರೇಕ್ ಹಾಕುವ ಸಂಬಂಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.

ಇನ್ಮುಂದೆ ಮಾಡಿಫೈ ವಾಹನಗಳ ಮಾರಾಟ ಮತ್ತು ಖರೀದಿ ಸಾಧ್ಯವೇ ಇಲ್ಲ..!

ಸಾರಿಗೆ ನಿಯಮಗಳಿಗೆ ವಿರುದ್ಧವಾಗಿ ಮಾಡಿಫೈಗೊಂಡ ವಾಹನಗಳ ಮರುಮಾರಾಟವನ್ನು ತಡೆಯಲು ಹೊಸ ಅಸ್ತ್ರ ಪ್ರಯೋಗಿಸುತ್ತಿರುವ ಕೇರಳ ಪೊಲೀಸರು, ಆರ್‌ಸಿ ವರ್ಗಾವಣೆಕ್ಕೆ ಬ್ರೇಕ್ ಹಾಕಿದ್ದಾರೆ. ಹೀಗಾಗಿ ಮಾಡಿಫೈ ವಾಹನಗಳ ಮನಬಂದಂತೆ ಮರುಮಾರಾಟ ಮಾಡುತ್ತಿದ್ದ ವಾಹನ ಮಾಲೀಕರಿಗೆ ಇದು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಇನ್ಮುಂದೆ ಮಾಡಿಫೈ ವಾಹನಗಳ ಮಾರಾಟ ಮತ್ತು ಖರೀದಿ ಸಾಧ್ಯವೇ ಇಲ್ಲ..!

ಇದರಿಂದ ಕೆಲವು ಮಾಡಿಫೈ ವಾಹನ ಸವಾರರು ಈಗಾಗಲೇ ಪೊಲೀಸರ ವಿರುದ್ಧವೇ ಪ್ರತಿಭಟನೆ ನಡೆಸಿ ಜೈಲು ಸೇರಿದ್ದು, ಮಾಡಿಫೈ ವಾಹನಗಳನ್ನು ಸಂಪೂರ್ಣವಾಗಿ ಬಂದ್ ಮಾಡುವತ್ತ ಹಲವು ಹೊಸ ಹೊಸ ಪ್ರಯೋಗಗಳನ್ನು ಪ್ರಯೋಗಿಸಲಾಗುತ್ತಿದೆ.

ಇನ್ಮುಂದೆ ಮಾಡಿಫೈ ವಾಹನಗಳ ಮಾರಾಟ ಮತ್ತು ಖರೀದಿ ಸಾಧ್ಯವೇ ಇಲ್ಲ..!

ಇಲ್ಲಿ ಇನ್ನೊಂದು ಇಂಟ್ರಸ್ಟಿಂಗ್ ವಿಚಾರ ಅಂದ್ರೆ, ಯಾವಾಗ ಮಾಡಿಫೈ ವಾಹನಗಳ ಮರು ಮಾರಾಟಕ್ಕೆ ಬ್ರೇಕ್ ಹಾಕಲಾಯ್ತೊ ಆಗ ಮಾಡಿಫೈ ಪ್ರಿಯರು ತಮ್ಮ ವಾಹನಗಳನ್ನು ಮಾರಾಟ ಮಾಡಲು ಓಎಲ್ಎಕ್ಸ್ ಮತ್ತು ಎಂವಿಡಿ ಅಂತಹ ಬಳಸಿದ ಕಾರುಗಳ ಮಾರಾಟ ಜಾಲತಾಣಗಳತ್ತ ಮುಖಮಾಡಿದ್ದರು. ಆದ್ರೆ ಇದಕ್ಕೂ ಇದೀಗ ಬೀಗ ಹಾಕಿರುವ ಕೇರಳ ಪೊಲೀಸರು ಮಾಡಿಫೈಗೊಂಡ ವಾಹನಗಳ ಮರು ಮಾರಾಟ ಮಾಡಲು ಕೆಲವು ಕಠಿಣ ನಿಯಮಗಳನ್ನು ಪಾಲಿಸುವಂತೆ ಆದೇಶ ಹೊರಡಿಸಿದೆ.

ಇನ್ಮುಂದೆ ಮಾಡಿಫೈ ವಾಹನಗಳ ಮಾರಾಟ ಮತ್ತು ಖರೀದಿ ಸಾಧ್ಯವೇ ಇಲ್ಲ..!

ಒಂದು ವೇಳೆ ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಓಎಲ್ಎಕ್ಸ್ ಮತ್ತು ಎಂವಿಡಿ ಜಾಲತಾಣಗಳಲ್ಲಿ ಮಾರಾಟ ಮಾಡುವ ಮುನ್ನ ಎನ್ಒಸಿ ಪ್ರಮಾಣ ಪತ್ರವನ್ನು ಕಡ್ಡಾಯ ಪಡೆದಿರಬೇಕಿದ್ದು, ಈ ಪ್ರಮಾಣ ಪತ್ರ ಪಡೆಯಲು ಕಡ್ಡಾಯವಾಗಿ ಸಂಚಾರಿ ನಿಯಮಕ್ಕೆ ವಿರುದ್ಧ ಮಾಡಿಫೈ ವಿನ್ಯಾಸವನ್ನು ತೆಗೆದುಹಾಕಿಬೇಕಿದೆ.

MOST READ: ಕಾನೂನು ಬಾಹಿರ ಮಾಡಿಫೈ ಮಾಡಿಸಿದ ಕಾರು ಮಾಲೀಕನಿಗೆ ಬರೋಬ್ಬರಿ 5 ಲಕ್ಷ ದಂಡ..!

ಇನ್ಮುಂದೆ ಮಾಡಿಫೈ ವಾಹನಗಳ ಮಾರಾಟ ಮತ್ತು ಖರೀದಿ ಸಾಧ್ಯವೇ ಇಲ್ಲ..!

ಹೀಗಾಗಿ ಪೊಲೀಸರ ಕಠಿಣ ನಿಯಮಗಳಿಂದಾಗಿ ಕೇರಳದಲ್ಲಿ ಮಾಡಿಫೈ ವಾಹನಗಳ ಮಾಫಿಯಾಕ್ಕೆ ದೊಡ್ಡ ಹೊಡೆತ ಬಿದ್ದಿದ್ದು, ಬ್ಯಾನ್‌ಗೊಂಡ ನಂತರ ಇಷ್ಟು ದಿನ ಆನ್‌ಲೈನ್‌ನಲ್ಲಿ ಕಳ್ಳ ವ್ಯವಹಾರಕ್ಕೂ ಇದೀಗ ಪೊಲೀಸರು ಫುಲ್ ಸ್ಟಾಪ್ ಇಟ್ಟಿದ್ದಾರೆ.

ಇನ್ಮುಂದೆ ಮಾಡಿಫೈ ವಾಹನಗಳ ಮಾರಾಟ ಮತ್ತು ಖರೀದಿ ಸಾಧ್ಯವೇ ಇಲ್ಲ..!

ಇನ್ನು ವಾಹನಗಳ ಹಾವಳಿಯಿಂದ ಅಪಘಾತಗಳ ಸಂಖ್ಯೆ ಕೂಡಾ ಹೆಚ್ಚುತ್ತಿದ್ದು, ಇಲ್ಲಿ ತಪ್ಪು ಮಾಡಿದವರಿಗಿಂತ ಅಮಾಯಕರೇ ಹೆಚ್ಚು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಮಾಡಿಫೈ ಎಕ್ಸಾಸ್ಟ್ ಹಾಕಿಕೊಂಡು ತಿರುಗುವ ಕಾರು, ಬೈಕ್ ಸವಾರರ ಹಾವಳಿಯಿಂದಾಗಿ ವೃದ್ದರು ಮತ್ತು ಮಕ್ಕಳು ರಸ್ತೆ ದಾಟುವುದೇ ಒಂದು ದುಸ್ತರವಾಗಿದೆ.

MOST READ: ಟಾಪ್ ಸ್ಪೀಡ್ ಶೋಕಿ- ಯುಟ್ಯೂಬ್‌ನಲ್ಲಿ ಲೈವ್ ಮಾಡಿ ಜೈಲು ಸೇರಿದ ಫೋರ್ಡ್ ಮಸ್ಟಾಂಗ್ ಮಾಲೀಕ..!

ಇನ್ಮುಂದೆ ಮಾಡಿಫೈ ವಾಹನಗಳ ಮಾರಾಟ ಮತ್ತು ಖರೀದಿ ಸಾಧ್ಯವೇ ಇಲ್ಲ..!

ಇದರ ವಿರುದ್ಧ ಈಗಾಗಲೇ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದರೂ, ಕೆಲವು ಮಾಡಿಫೈ ವಾಹನ ಸವಾರರು ಮಾತ್ರ ಪೊಲೀಸರಿಗೂ ಡೋಂಟ್ ಕೇರ್ ಎನ್ನುತ್ತಿದ್ದಾರೆ. ಆದ್ರೆ ಕೇರಳ ಪೊಲೀಸರು ಮಾತ್ರ ಇತರೆ ರಾಜ್ಯಗಳ ಪೊಲೀಸರಿಂದ ಒಂದು ಹೆಜ್ಜೆ ಮುಂದೆ ಹೋಗಿ ಮಾಡಿಫೈ ವಾಹನ ಮಾಲೀಕರಿಗೆ ಸರಿಯಾಗಿಯೇ ಬಿಸಿ ಮುಟ್ಟಿಸುತ್ತಿದ್ದಾರೆ ಎನ್ನಬಹುದು.

Most Read Articles

Kannada
English summary
Modified vehicles can’t be sold; won’t allow RC transfer: RTO
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X