ಕಾನೂನು ಬಾಹಿರ ಮಾಡಿಫೈ ಮಾಡಿಸಿದ ಕಾರು ಮಾಲೀಕನಿಗೆ ಬರೋಬ್ಬರಿ 5 ಲಕ್ಷ ದಂಡ..!

ಮೋಟಾರ್ ವೆಹಿಕಲ್ ಕಾಯ್ದೆ ಪ್ರಕಾರ ಪ್ರತಿವೊಂದು ವಾಹನವು ಕೂಡಾ ಇಂತಿಷ್ಟು ಪ್ರಮಾಣದಲ್ಲಿ ಮಾಡಿಫೈ ಹೊಂದಿರಬಹುದು ಎಂದು ಸ್ಪಷ್ಟವಾಗಿ ಹೇಳುತ್ತದೆ. ಆದ್ರೆ ಇಲ್ಲೊಬ್ಬ ಕಾರು ಮಾಲೀಕನು ಮಾತ್ರ ನಿಯಮ ಮೀರಿ ಮಾಡಿಫಿಕೇಷನ್ ಮಾಡಿಸಿದ ತಪ್ಪಿಗೆ ಬರೋಬ್ಬರಿ 5 ಲಕ್ಷ ರೂಪಾಯಿ ದಂಡ ಜಡಿಸಿಕೊಂಡಿದ್ದಾನೆ.

ಕಾನೂನು ಬಾಹಿರ ಮಾಡಿಫೈ ಮಾಡಿಸಿದ ಕಾರು ಮಾಲೀಕನಿಗೆ ಬರೋಬ್ಬರಿ 5 ಲಕ್ಷ ದಂಡ..!

ಹೌದು, ಭಾರತದಲ್ಲಿ ಅತಿ ವೇಗವಾಗಿ ಬೆಳೆದುಕೊಳ್ಳುತ್ತಿರುವ ಆಟೋ ಮಾಡಿಫಿಕೇಷನ್ ಕ್ರೇಜ್ ಹಲವು ರೀತಿಯ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತಿದ್ದು, ಕಾನೂನು ಬಾಹಿರವಾಗಿ ಮಾಡಿಫಿಕೇಷನ್ ಹೊಂದಿರುವ ವಾಹನ ಸವಾರರ ವಿರುದ್ದ ಭರ್ಜರಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ವೇಳೆ ಮಿನಿ ಕೂಪರ್ ಕಾರು ಮಾಲೀಕ ಕೂಡಾ ಸಿಕ್ಕಿಬಿದ್ದಿದ್ದು, ಕಾನೂನು ಬಾಹಿರವಾಗಿ ಮಾಡಿಫೈ ಮಾಡಿಸಿದ ತಪ್ಪಿಗೆ ಭಾರೀ ಪ್ರಮಾಣದ ದಂಡ ಹಾಕಿಕೊಂಡಿದ್ದಾನೆ.

ಕಾನೂನು ಬಾಹಿರ ಮಾಡಿಫೈ ಮಾಡಿಸಿದ ಕಾರು ಮಾಲೀಕನಿಗೆ ಬರೋಬ್ಬರಿ 5 ಲಕ್ಷ ದಂಡ..!

ಮಾಡಿಫೈ ವಾಹನಗಳಿಂದಲೇ ಅತಿ ಹೆಚ್ಚು ಸದ್ದು ಮಾಡುತ್ತಿರುವ ಪಕ್ಕದ ರಾಜ್ಯ ಕೇರಳ ಕೊಚ್ಚಿಯಲ್ಲಿ ಈ ಘಟನೆ ನಡೆದಿದ್ದು, ವಾಹನ ತಪಾಸಣೆ ವೇಳೆ ಮಿನಿ ಕೂಪರ್ ಕಾರು ಮಾಲೀಕನ ಅಸಲಿಯತ್ತು ಕಂಡ ಪೊಲೀಸರು ಸರಿಯಾಗಿ ದಂಡ ಜಡಿದಿದ್ದಾರೆ.

ಕಾನೂನು ಬಾಹಿರ ಮಾಡಿಫೈ ಮಾಡಿಸಿದ ಕಾರು ಮಾಲೀಕನಿಗೆ ಬರೋಬ್ಬರಿ 5 ಲಕ್ಷ ದಂಡ..!

ಪೊಲೀಸರು ದಿನನಿತ್ಯದಂತೆ ತಪಾಸಣೆ ನಡೆಸುತ್ತಿರುವ ವೇಳೆ ಮಿನಿ ಕೂಪರ್ ಐಷಾರಾಮಿ ಕಾರು ಮಾಲೀಕ ಸಿಕ್ಕಿಬಿದ್ದಿದ್ದು, ತಪಾಸಣೆಗೆ ಮುಂದಾದಾಗ ಕಾರು ನಿಲ್ಲಿಸದೇ ತಪ್ಪಿಸಲು ಮುಂದಾಗಿದ್ದ. ಈ ವೇಳೆ ಕಾರನ್ನು ಬೆನ್ನಟ್ಟಿ ಮಿನಿ ಕೂಪರ್ ಕಾರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿವಿಧ ಸೆಕ್ಷನ್‌ಗಳ ಅಡಿ ಕೇಸ್ ದಾಖಲಿಸಿದ್ದಾರೆ.

ಕಾನೂನು ಬಾಹಿರ ಮಾಡಿಫೈ ಮಾಡಿಸಿದ ಕಾರು ಮಾಲೀಕನಿಗೆ ಬರೋಬ್ಬರಿ 5 ಲಕ್ಷ ದಂಡ..!

ಕಾನೂನು ಬಾಹಿರ ಮಾಡಿಫಿಕೇಷನ್ ಮಾತ್ರವಲ್ಲದೇ ಜಾರ್ಖಂಡ್ ರಾಜ್ಯದ ನೋಂದಣಿ ಸಂಖ್ಯೆಯನ್ನು ಹೊಂದಿದ್ದ ಮಿನಿ ಕೂಪರ್ ಕಾರು ಕೇರಳದಲ್ಲಿ ನಿಯಮ ಬಾಹಿರವಾಗಿ ಓಡಾಡುತ್ತಿರುವುದಲ್ಲದೇ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ವೇಗದ ಕಾರು ಚಾಲನೆ ಮಾಡಿರುವುದು ಬೆಳಕಿಗೆ ಬಂದಿದೆ.

ಕಾನೂನು ಬಾಹಿರ ಮಾಡಿಫೈ ಮಾಡಿಸಿದ ಕಾರು ಮಾಲೀಕನಿಗೆ ಬರೋಬ್ಬರಿ 5 ಲಕ್ಷ ದಂಡ..!

ಹೀಗಾಗಿ ಕಾನೂನು ಬಾಹಿರ ಮಾಡಿಫೈ, ಹೊರ ರಾಜ್ಯದ ನೋಂದಣಿ ಮತ್ತು ಹೈ ಸ್ಪೀಡ್ ಕಾರು ಚಾಲನೆ ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಿ ಒಟ್ಟು ರೂ. 4,89,000 ದಂಡ ವಿಧಿಸಲಾಗಿದ್ದು, ದಂಡದ ಮೊತ್ತವನ್ನು ನೋಡಿದ ಕಾರು ಮಾಲೀಕ ಕಕ್ಕಾಬಿಕ್ಕಿಯಾಗಿದ್ದಾನೆ.

ಕಾನೂನು ಬಾಹಿರ ಮಾಡಿಫೈ ಮಾಡಿಸಿದ ಕಾರು ಮಾಲೀಕನಿಗೆ ಬರೋಬ್ಬರಿ 5 ಲಕ್ಷ ದಂಡ..!

ಯಾಕೆಂದ್ರೆ ಐಷಾರಾಮಿ ಕಾರುಗಳ ಪಟ್ಟಿಯಲ್ಲಿ ಅಧಿಕ ಬೇಡಿಕೆ ಹೊಂದಿರುವ ಮಿನಿ ಕೂಪರ್ ಸದ್ಯ ಆನ್ ರೋಡ್ ಬೆಲೆಗಳ ಪ್ರಕಾರ ರೂ.33 ಲಕ್ಷ ಆರಂಭಿಕ ಬೆಲೆ ಹೊಂದಿದ್ದು, ಕಾರಿನ ಬೆಲೆಗೆ ತಕ್ಕಂತೆ ದಂಡದ ಕೂಡಾ ಸರಿಯಾಗಿಯೇ ಬಿದ್ದಿದೆ.

MOST READ: ಬರೋಬ್ಬರಿ 1 ಲಕ್ಷ ರೂಪಾಯಿ ಕೊಟ್ಟು ರೈಲ್ವೆ ಹಾರ್ನ್ ಹಾಕಿಸಿದ್ದ ಮಾಡಿಫೈ ಕಾರು ಮಾಲೀಕನಿಗೆ ಸಂಕಷ್ಟ

ಕಾನೂನು ಬಾಹಿರ ಮಾಡಿಫೈ ಮಾಡಿಸಿದ ಕಾರು ಮಾಲೀಕನಿಗೆ ಬರೋಬ್ಬರಿ 5 ಲಕ್ಷ ದಂಡ..!

ಇನ್ನು ಭಾರತದಲ್ಲಿ ಮಿನಿ ಕೂಪರ್ ಕಾರುಗಳು ಗ್ರಾಹಕರ ಬೇಡಿಕೆಯೆಂತೆ ತ್ರಿ ಡೋರ್ ಮತ್ತು ಫೈ ಡೋರ್ ಆವೃತ್ತಿಗಳು ಮಾರಾಟವಾಗುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿವೆ. ಇದರಲ್ಲಿ ಪೆಟ್ರೋಲ್ ಮಾದರಿಯು 2.0-ಲೀಟರ್ 4 ಸಿಲಿಂಡರ್ ಮಿನಿ ಟ್ವಿನ್ ಪವರ್ ಟರ್ಬೋ ಎಂಜಿನ್ ಮೂಲಕ 192-ಬಿಹೆಚ್‍‍ಪಿ ಮತ್ತು 280-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಕಾನೂನು ಬಾಹಿರ ಮಾಡಿಫೈ ಮಾಡಿಸಿದ ಕಾರು ಮಾಲೀಕನಿಗೆ ಬರೋಬ್ಬರಿ 5 ಲಕ್ಷ ದಂಡ..!

ಹಾಗೆಯೇ ಡೀಸೆಲ್ ಮಾದರಿಯು ಮಿನಿ ಕೂಪರ್‌ಗಳು 1.5 ಲೀಟರ್ 3 ಸಿಲಿಂಡರ್ ಟರ್ಬೊಚಾರ್ಜ್ಡ್ ಎಂಜಿನ್ ಸಹಾಯದೊಂದಿದೆ 114-ಬಿಹೆಚ್‍‍ಪಿ ಮತ್ತು 270-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಣೆ ಪಡೆದಿದೆ.

MOST READ: ಹೊಸ ಬೈಕ್‌ಗಳಿಗೆ ಹೊಸ ರೂಲ್ಸ್- ಸಿಬಿಎಸ್ ಮತ್ತು ಎಬಿಎಸ್ ಇಲ್ಲದ ಬೈಕ್ ಖರೀದಿ ಬೇಡವೇ ಬೇಡ..!

ಕಾನೂನು ಬಾಹಿರ ಮಾಡಿಫೈ ಮಾಡಿಸಿದ ಕಾರು ಮಾಲೀಕನಿಗೆ ಬರೋಬ್ಬರಿ 5 ಲಕ್ಷ ದಂಡ..!

ಇದಲ್ಲದೇ ಸ್ಟ್ಯಾಂಡರ್ಡ್, ಗ್ರೀನ್ ಮತ್ತು ಸ್ಪೋರ್ಟ್ ಎಂಬ ಮೂರು ಡ್ರೈವಿಂಗ್ ಮೋಡ್‍‍ಗಳನ್ನು ಸಹ ಪಡೆದಿದ್ದು, ಈ ಮೂಲಕ ಪೆಟ್ರೋಲ್ ಕಾರುಗಳು ಪ್ರತಿ ಗಂಟೆಗೆ 235-ಕಿಲೋಮೀಟರ್ ಟಾಪ್ ಸ್ಪೀಡ್ ಹೊಂದಿದ್ದರೆ, ಡೀಸೆಲ್ ಮಾದರಿಯ ಕಾರುಗಳು ಪ್ರತಿ ಗಂಟೆಗೆ 205 ಕಿಲೋಮೀಟರ್ ಟಾಪ್ ಸ್ಪೀಡ್ ಅನ್ನು ಪಡೆದುಕೊಂಡಿವೆ.

Source: e-vartha

Most Read Articles

Kannada
English summary
Modified car gets a whopping Rs 4,89,000 fine in Kerala. Read in Kannada.
Story first published: Wednesday, April 3, 2019, 19:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X