ಬರೋಬ್ಬರಿ 1 ಲಕ್ಷ ರೂಪಾಯಿ ಕೊಟ್ಟು ರೈಲ್ವೆ ಹಾರ್ನ್ ಹಾಕಿಸಿದ್ದ ಮಾಡಿಫೈ ಕಾರು ಮಾಲೀಕನಿಗೆ ಸಂಕಷ್ಟ

ನಗರ ಪ್ರದೇಶಗಳಲ್ಲಿ ಇತ್ತೀಚೆಗೆ ಹೆಚ್ಚು ಟ್ರೆಂಡ್ ಸೃಷ್ಠಿಸುತ್ತಿರುವ ಕಾರು, ಬೈಕ್‌ ಮಾಡಿಫಿಕೇಷನ್ ಹೊಸತೆನಲ್ಲ. ಆದ್ರೆ ಮಾಡಿಫೈಗೊಂಡ ವಾಹನಗಳಿಂದ ಮಾಲೀಕರಿಗೆ ಏನೇ ಅನುಕೂಲಕಲತೆಗಳಿದ್ದರೂ, ಅದು ಇತರರಿಗೆ ಕಿರಿಕಿರಿ ಅಂದ್ರೆ ತಪ್ಪಾಗುವುದಿಲ್ಲ.

ಬರೋಬ್ಬರಿ 1 ಲಕ್ಷ ರೂಪಾಯಿ ಕೊಟ್ಟು ರೈಲ್ವೆ ಹಾರ್ನ್ ಹಾಕಿಸಿದ್ದ ಮಾಡಿಫೈ ಕಾರು ಮಾಲೀಕನಿಗೆ ಸಂಕಷ್ಟ

ಬಹುತೇಕ ವಾಹನ ಮಾಲೀಕರು ತಮ್ಮ ವಾಹನಗಳನ್ನು ವಿಭಿನ್ನವಾಗಿ ಕಾರಣಲು ಮಾಡಿಫೈ ತಂತ್ರಜ್ಞಾನದ ಮೋರೆಹೋಗುತ್ತಿದ್ದು, ಕೆಲವು ಸಂದರ್ಭಗಳಲ್ಲಿ ಮೂಲ ವಾಹನದ ಬೆಲೆಗಿಂತಲೂ ಹೆಚ್ಚಿನ ಹಣ ಸುರಿದು ಮಾಡಿಫೈ ಕ್ರೇಜ್ ತೋರಿಸಿಕೊಳ್ಳುತ್ತಾರೆ. ಹೀಗಿರುವಾಗ ಇಲ್ಲೊಬ್ಬ ಮಹೀಂದ್ರಾ ಥಾರ್ ಮಾಲೀಕ ಕೂಡಾ ತನ್ನ ಕಾರಿಗೆ ದುಬಾರಿ ಬೆಲೆಯ ರೈಲ್ವೆ ಹಾರ್ನ್ ಬಳಕೆ ಮಾಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಬರೋಬ್ಬರಿ 1 ಲಕ್ಷ ರೂಪಾಯಿ ಕೊಟ್ಟು ರೈಲ್ವೆ ಹಾರ್ನ್ ಹಾಕಿಸಿದ್ದ ಮಾಡಿಫೈ ಕಾರು ಮಾಲೀಕನಿಗೆ ಸಂಕಷ್ಟ

ಹೌದು, ನೀವು ಇಷ್ಟು ದಿನಗಳ ಕಾಲ ದೊಡ್ಡ ಕಾರಿನ ಚಕ್ರಗಳನ್ನೋ, ಕಾರಿನ ಮುಂಭಾಗದಲ್ಲಿ ಸ್ಪೋರ್ಟಿ ವಿನ್ಯಾಸವನ್ನೋ ಇಲ್ಲವೇ ಕಾರಿನ ಸನ್ ರೂಫ್ ಮಾಡಿಫಿಕೇಷನ್ ಮಾಡಿಸಿರುವುದನ್ನು ಸಾಮಾನ್ಯವಾಗಿ ಎಲ್ಲರೂ ನೋಡಿಯೇ ಇರುತ್ತಿರಿ. ಆದ್ರೆ ಈ ಕಾರು ಮಾಲೀಕ ಮಾತ್ರ ದುಬಾರಿ ಬೆಲೆಯ ರೈಲ್ವೆ ಹಾರ್ನ್ ಬಳಕೆ ಮಾಡಿದ್ದಾನೆ.

ಬರೋಬ್ಬರಿ 1 ಲಕ್ಷ ರೂಪಾಯಿ ಕೊಟ್ಟು ರೈಲ್ವೆ ಹಾರ್ನ್ ಹಾಕಿಸಿದ್ದ ಮಾಡಿಫೈ ಕಾರು ಮಾಲೀಕನಿಗೆ ಸಂಕಷ್ಟ

ಹರಿಯಾಣ ಮೂಲದ ಮಹೀಂದ್ರಾ ಥಾರ್ ಕಾರು ಮಾಲೀಕನಾಗಿರುವ ಅಜಯ್ ಬೆಸ್ಲಾ ಎಂಬುವವರೇ ತಮ್ಮ ಕಾರಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರೈಲ್ವೆ ಹಾರ್ನ್ ಹಾಕಿಸಿಕೊಂಡಿದ್ದು, ಸಾಮಾಜಿಕ ಜಾಲ ತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಬರೋಬ್ಬರಿ 1 ಲಕ್ಷ ರೂಪಾಯಿ ಕೊಟ್ಟು ರೈಲ್ವೆ ಹಾರ್ನ್ ಹಾಕಿಸಿದ್ದ ಮಾಡಿಫೈ ಕಾರು ಮಾಲೀಕನಿಗೆ ಸಂಕಷ್ಟ

ರೈಲ್ವೆಗಳಲ್ಲಿ ಬಳಸಲಾಗುವ ಈ ಹಾರ್ನ್ ಅನ್ನು ಥಾರ್ ಕಾರಿಗೆ ಜೋಡಣೆ ಮಾಡಲು ಬರೋಬ್ಬರಿ 1 ಲಕ್ಷ ರೂಪಾಯಿ ತಗುಲಿದ್ದು, ಹಾರ್ನ್ ಹೊರತುಪಡಿಸಿ ಇದೇ ಕಾರಿನ ಇತರೆ ತಾಂತ್ರಿಕ ಸೌಲಭ್ಯಗಳ ಮಾಡಿಫೈಗೂ ಲಕ್ಷ ಲಕ್ಷ ಖರ್ಚು ಮಾಡಲಾಗಿದೆಯೆಂತೆ.

ಬರೋಬ್ಬರಿ 1 ಲಕ್ಷ ರೂಪಾಯಿ ಕೊಟ್ಟು ರೈಲ್ವೆ ಹಾರ್ನ್ ಹಾಕಿಸಿದ್ದ ಮಾಡಿಫೈ ಕಾರು ಮಾಲೀಕನಿಗೆ ಸಂಕಷ್ಟ

ಕಾರಿನ ಮುಂಭಾದಲ್ಲಿ ಜೋಡಣೆ ಮಾಡಲಾಗಿರುವ ರೈಲ್ವೆ ಹಾರ್ನ್‌‌ ಕಾರಿನ ಖದರ್ ಹೆಚ್ಚಿಸಿದ್ದು, ಇದು ಖಾಸಗಿ ವಾಹನಗಳಲ್ಲಿ ಅಳವಡಿಸಲಾದ ಗರಿಷ್ಠ ಶಬ್ದ ಸಾಮರ್ಥ್ಯದ ಹಾರ್ನ್ ಎನ್ನುವ ಖ್ಯಾತಿಗೆ ಪಡೆದಿದ್ದರೂ ಈ ರೀತಿ ಹಾಕಿಸುವುದು ಸಂಚಾರಿ ನಿಯಮಕ್ಕೆ ವಿರುದ್ದವಾಗಿದೆ.

ಬರೋಬ್ಬರಿ 1 ಲಕ್ಷ ರೂಪಾಯಿ ಕೊಟ್ಟು ರೈಲ್ವೆ ಹಾರ್ನ್ ಹಾಕಿಸಿದ್ದ ಮಾಡಿಫೈ ಕಾರು ಮಾಲೀಕನಿಗೆ ಸಂಕಷ್ಟ

ಇನ್ನು ರೈಲ್ವೆಗಳಲ್ಲಿ ಬಳಸಲಾಗುವ ಈ ಹಾರ್ನ್ ಅನ್ನು ರೈಲ್ವೆಗಳಲ್ಲಿ ಹೊರತುಪಡಿಸಿ ಇತರೆ ಯಾವುದೇ ಸಾಮಾನ್ಯ ವಾಹನಗಳಿಗೆ ಬಳಸುವಂತಿಲ್ಲ ಎನ್ನುವ ನಿಯಮವಿದ್ದರೂ, ಮಾಡಿಫೈ ನೆಪದಲ್ಲಿ ಕಾರು ಮಾಲೀಕ ಅಜಯ್ ತನ್ನ ಥಾರ್‌ಗೆ ಈ ರೀತಿ ವಿಚಿತ್ರವಾಗಿ ಮಾಡಿಫೈ ಮಾಡಿಸಿರುವುದು ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದೆ.

ಬರೋಬ್ಬರಿ 1 ಲಕ್ಷ ರೂಪಾಯಿ ಕೊಟ್ಟು ರೈಲ್ವೆ ಹಾರ್ನ್ ಹಾಕಿಸಿದ್ದ ಮಾಡಿಫೈ ಕಾರು ಮಾಲೀಕನಿಗೆ ಸಂಕಷ್ಟ

ಹಾರ್ನ್ ಇದ್ರು ಬಳಸುವಂತಿಲ್ಲ..!

ಮೋಟಾರ್ ವೆಹಿಕಲ್ ಆಕ್ಟ್‌ಗೆ ವಿರುದ್ಧವಾಗಿರುವ ಈ ಹಾರ್ನ್ ಬಳಕೆ ವಿರುದ್ಧ ಖಡಕ್ ವಾರ್ನ್ ನೀಡಿರುವ ಟ್ರಾಫಿಕ್ ಪೊಲೀಸರು ರೈಲ್ವೆ ಹಾರ್ನ್ ಯಾವುದೇ ಕಾರಣಕ್ಕೂ ಬಳಸುವಂತಿಲ್ಲ ಎಂದು ಸೂಚಿಸಲಾಗಿದ್ದು, ಕೇವಲ ಆಪ್ ರೋಡ್ ಚಾಲನೆಯಲ್ಲಿ ಮಾತ್ರವೇ ಹಾರ್ನ್ ಬಳಕೆ ಮಾಡಿಕೊಳ್ಳಬಹುದು ಎನ್ನುವ ಮಾರ್ಗದರ್ಶನ ನೀಡಿದ್ದಾರೆ.

ಬರೋಬ್ಬರಿ 1 ಲಕ್ಷ ರೂಪಾಯಿ ಕೊಟ್ಟು ರೈಲ್ವೆ ಹಾರ್ನ್ ಹಾಕಿಸಿದ್ದ ಮಾಡಿಫೈ ಕಾರು ಮಾಲೀಕನಿಗೆ ಸಂಕಷ್ಟ

ಇದಕ್ಕೆ ಕಾರಣ ರೈಲ್ವೆ ಹಾರ್ನ್ 120-140 ಡಿಸೆಬಲ್‌ಗಿಂತಲೂ ಹೆಚ್ಚಿನ ಶಬ್ದ ಸಾಮರ್ಥ್ಯ ಹೊಂದಿದ್ದು, ಒಂದು ವೇಳೆ ಈ ಹಾರ್ನ್ ಮಾದರಿಯನ್ನು ಸಾಮಾನ್ಯ ವಾಹನಗಳಲ್ಲಿ ಬಳಕೆ ಮಾಡಿದ್ದೆ ಆದಲ್ಲಿ ಅದು ಇತರೆ ವಾಹನ ಸವಾರರಿಗೂ ಸೇರಿದಂತೆ ಸಾಮಾನ್ಯ ಜನತೆಗೂ ಕಿರಿಕಿರಿ ಉಂಟುಮಾಡಬಲ್ಲದು.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಬರೋಬ್ಬರಿ 1 ಲಕ್ಷ ರೂಪಾಯಿ ಕೊಟ್ಟು ರೈಲ್ವೆ ಹಾರ್ನ್ ಹಾಕಿಸಿದ್ದ ಮಾಡಿಫೈ ಕಾರು ಮಾಲೀಕನಿಗೆ ಸಂಕಷ್ಟ

ಹೀಗಾಗಿ ಥಾರ್ ಕಾರು ಮಾಲೀಕನಿಗೆ ಖಡಕ್ ವಾರ್ನ್ ಮಾಡಿರುವ ಟ್ರಾಫಿಕ್ ಪೊಲೀಸರು ಯಾವುದೇ ಕಾರಣಕ್ಕೂ ಸಾಮಾನ್ಯ ರಸ್ತೆಗಳಲ್ಲಿ ಬಳಸದಿರುವಂತೆ ಎಚ್ಚರಿಕೆ ನೀಡಿದ್ದು, ಒಂದು ವೇಳೆ ಅನಗತ್ಯವಾಗಿ ಸಾಮಾನ್ಯ ರಸ್ತೆಗಳಲ್ಲಿ ಬಳಕೆ ಮಾಡಿದ್ದು ಕಂಡುಬಂದಿದ್ದೆ ಆದಲ್ಲಿ ಕೇಸ್ ದಾಖಲಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬರೋಬ್ಬರಿ 1 ಲಕ್ಷ ರೂಪಾಯಿ ಕೊಟ್ಟು ರೈಲ್ವೆ ಹಾರ್ನ್ ಹಾಕಿಸಿದ್ದ ಮಾಡಿಫೈ ಕಾರು ಮಾಲೀಕನಿಗೆ ಸಂಕಷ್ಟ

ಪ್ರತಿ ಕಾರು ಪ್ರೇಮಿಗೂ ಮಾಡಿಫೈ ಕಾರಿನ ಬಗೆಗೆ ಎಲ್ಲಿದ ಕ್ರೇಜ್ ಇದ್ದೇ ಇರುತ್ತೆ. ಆದ್ರೆ ಮಾಡಿಫೈಗೆ ಬೇಕಾದ ಸೂಕ್ತ ಕಾರುಗಳು ಸಿಗುವುದೇ ಕಷ್ಟ. ಆದರೂ ಸಿದ್ದವಾಗುವ ಕೆಲವು ಮಾಡಿಫೈ ಕಾರುಗಳು ಮೂಲ ಕಾರಿಗೆ ಟಾಂಗ್ ನೀಡುವಷ್ಟು ತಾಂತ್ರಿಕವಾಗಿ ಬದಲಾವಣೆ ಮಾಡಲಾಗಿರುತ್ತದೆ. ಇಲ್ಲೊಂದು ಮಾಡಿಫೈ ಸಂಸ್ಥೆ ಕೂಡಾ ದುಬಾರಿ ಮೌಲ್ಯದ ಹಮ್ಮರ್ ಕಾರಿನ ಮಾಡಿಫೈ ಮಾಡಿದ್ದು, ಆಪ್ ರೋಡ್ ಪ್ರಿಯರ ಮೆಚ್ಚುಗೆಗೆ ಕಾರಣವಾಗಿದೆ.

ಬರೋಬ್ಬರಿ 1 ಲಕ್ಷ ರೂಪಾಯಿ ಕೊಟ್ಟು ರೈಲ್ವೆ ಹಾರ್ನ್ ಹಾಕಿಸಿದ್ದ ಮಾಡಿಫೈ ಕಾರು ಮಾಲೀಕನಿಗೆ ಸಂಕಷ್ಟ

ಮುಂಬೈ ಮೂಲದ ಮಾಡಿಫೈ ಕಾರು ನಿರ್ಮಾಣ ಸಂಸ್ಥೆಯಾದ ಎಸ್‌ಪಿ ಕಸ್ಟಮ್ ಎನ್ನುವ ಸಂಸ್ಥೆ ಅಭಿವೃದ್ಧಿ ಮಾಡಿರುವ ಈ ಮಾಡಿಫೈ ವರ್ಷನ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನಸೆಳೆಯುತ್ತಿದೆ.

ಬರೋಬ್ಬರಿ 1 ಲಕ್ಷ ರೂಪಾಯಿ ಕೊಟ್ಟು ರೈಲ್ವೆ ಹಾರ್ನ್ ಹಾಕಿಸಿದ್ದ ಮಾಡಿಫೈ ಕಾರು ಮಾಲೀಕನಿಗೆ ಸಂಕಷ್ಟ

ಮಾಡಿಫೈ ಕಾರುಗಳನ್ನು ಅಭಿವೃದ್ಧಿ ಮಾಡುವಲ್ಲಿ ಜನಪ್ರಿಯತೆ ಸಾಧಿಸಿರುವ ಎಸ್‌ಪಿ ಕಸ್ಟಮ್ ಸಂಸ್ಥೆಯು ಮಹೀಂದ್ರಾ ಥಾರ್ 4x4 ಎಂಜಿನ್ ಬಳಕೆ ಮಾಡಿಕೊಂಡು ಹಮ್ಮರ್ ವಿನ್ಯಾಸಗಳನ್ನು ನೀಡಲಾಗಿದ್ದು, ವಿಭಿನ್ನ ಮಾಡಿಫೈನೊಂದಿಗೆ ಆಕರ್ಷಕ ಲುಕ್ ಪಡೆದುಕೊಂಡಿದೆ.

MOST READ: ವಾಹನ ಚಾಲನೆ ವೇಳೆ ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದಾಗುತ್ತೆ..!

ಬರೋಬ್ಬರಿ 1 ಲಕ್ಷ ರೂಪಾಯಿ ಕೊಟ್ಟು ರೈಲ್ವೆ ಹಾರ್ನ್ ಹಾಕಿಸಿದ್ದ ಮಾಡಿಫೈ ಕಾರು ಮಾಲೀಕನಿಗೆ ಸಂಕಷ್ಟ

ಸುಮಾರು 2 ತಿಂಗಳು ಕಾಲ ಮಾಡಿಫೈ ವಿನ್ಯಾಸ ಮಾಡಲು ಕಾಲಾವಕಾಶ ತೆಗೆದುಕೊಂಡಿರುವ ಎಸ್‌ಪಿ ಕಸ್ಟಮ್ ಸಂಸ್ಥೆಯು ಕಾರಿನ ಬಾಡಿ ಮತ್ತು ಕಾರಿನ ಚಕ್ರಗಳನ್ನು ಸಂಪೂರ್ಣ ಬದಲಾವಣೆ ಮಾಡಿದೆ. ಮಾಡಿಫೈ ಕಾರಿನ ಒದಗಿಸಲಾಗಿರುವ ಫ್ರಂಟ್ ಗ್ರೀಲ್, ಫ್ರಂಟ್ ಬಂಪರ್ ಮತ್ತು ಅಂಡರ್ ಬಾಡಿ ಕ್ಲಿಡ್ ಪ್ಲೇಟ್ ಗಮನಸೆಳೆಯುತ್ತದೆ.

ಬರೋಬ್ಬರಿ 1 ಲಕ್ಷ ರೂಪಾಯಿ ಕೊಟ್ಟು ರೈಲ್ವೆ ಹಾರ್ನ್ ಹಾಕಿಸಿದ್ದ ಮಾಡಿಫೈ ಕಾರು ಮಾಲೀಕನಿಗೆ ಸಂಕಷ್ಟ

ಜೊತೆಗೆ ಬಾಗಿಲ ರೀತಿಯಲ್ಲಿರುವ ರೂಫ್ ಲೈನ್ ಮತ್ತು ಎಲ್ಇಡಿ ಟೈಲ್ ಲ್ಯಾಂಪ್ ಮೂಲ ಕಾರಿನ ಹೋಲಿಕೆಯನ್ನೇ ಪಡೆದುಕೊಂಡಿದ್ದು, ಒಳಭಾಗದ ವಿನ್ಯಾಸದಲ್ಲೂ ಗುರುತರ ಬದಲಾವಣೆ ತರಲಾಗಿದೆ. ನಾಲ್ಕು ಜನ ಆರಾಮವಾಗಿ ಕುಳಿತಬಹುದಾಗಿದ್ದು, ಲೆದರ್ ಸೀಟುಗಳು ಕಾರಿನ ಖದರ್ ಹೆಚ್ಚಿಸಿದೆ.

ಬರೋಬ್ಬರಿ 1 ಲಕ್ಷ ರೂಪಾಯಿ ಕೊಟ್ಟು ರೈಲ್ವೆ ಹಾರ್ನ್ ಹಾಕಿಸಿದ್ದ ಮಾಡಿಫೈ ಕಾರು ಮಾಲೀಕನಿಗೆ ಸಂಕಷ್ಟ

ಎಂಜಿನ್ ಸಾಮರ್ಥ್ಯ

ಕಾರಿನ ಹೊರಭಾಗದ ವಿನ್ಯಾಸಗಳನ್ನು ಹೊರತು ಪಡಿಸಿ ಎಂಜಿನ್ ವಿಭಾಗದಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ಹೀಗಾಗಿ ಮೂಲ ಕಾರಿನಲ್ಲಿರುವಂತೆಯೇ 2.5-ಲೀಟರ್ ಸಿಆರ್‌ಡಿ ಡಿಸೇಲ್ ಎಂಜಿನ್‌ನೊಂದಿಗೆ 105-ಬಿಎಚ್‌ಪಿ ಮತ್ತು 247-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿವೆ.

ಬರೋಬ್ಬರಿ 1 ಲಕ್ಷ ರೂಪಾಯಿ ಕೊಟ್ಟು ರೈಲ್ವೆ ಹಾರ್ನ್ ಹಾಕಿಸಿದ್ದ ಮಾಡಿಫೈ ಕಾರು ಮಾಲೀಕನಿಗೆ ಸಂಕಷ್ಟ

ಮಾಡಿಫೈ ವೆಚ್ಚ

ದುಬಾರಿ ಬೆಲೆಯ ಹಮ್ಮರ್ ಕಾರಿನ ಮಾಡಿಫೈ ಹೊಂದಿರುವ ಥಾರ್ ಕಾರುಗಳನ್ನು ಮಾಡಿಫೈ ಮಾಡಲು ಬರೋಬ್ಬರಿ ರೂ. 5.50 ಲಕ್ಷ ಖರ್ಚು ಮಾಡಲಾಗಿದ್ದು, ಮೂಲ ಕಾರಿನ ವಿನ್ಯಾಸಗಳನ್ನು ನೀಡುವಲ್ಲಿ ಸಾಕಷ್ಟು ಶ್ರಮವಹಿಸಲಾಗಿದೆ.

ಬರೋಬ್ಬರಿ 1 ಲಕ್ಷ ರೂಪಾಯಿ ಕೊಟ್ಟು ರೈಲ್ವೆ ಹಾರ್ನ್ ಹಾಕಿಸಿದ್ದ ಮಾಡಿಫೈ ಕಾರು ಮಾಲೀಕನಿಗೆ ಸಂಕಷ್ಟ

ಇನ್ನು ಕಾರಿನಲ್ಲಿ ಇನ್ಪೋಟೈನ್‌ಮೆಂಟ್ ಮತ್ತು ಕ್ಲಸ್ಟರ್‍‌ ವಿನ್ಯಾಸದಲ್ಲೂ ಬದಲಾವಣೆ ಮಾಡಲಾಗಿದ್ದು, ಸುರಕ್ಷಾ ವಿಚಾರದ ಸೌಲಭ್ಯಗಳ ಬಗ್ಗೆ ಯಾವುದೇ ಚಿಂತೆ ಮಾಡಬೇಕಿಲ್ಲ. ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಮತ್ತು ನಾಲ್ಕು ಚಕ್ರಗಳಿಗೂ ಡಿಸ್ಕ್ ಬ್ರೇಕ್ ಅಳವಡಿಸಲಾಗಿದೆ.

Source: Lokesh Swami

Kannada
Read more on car modification
English summary
India’s first & only Mahindra Thar with a Train Horn costing Rs. 1 lakh.

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more