ಹೊಸ ಬೈಕ್‌ಗಳಿಗೆ ಇಂದಿನಿಂದ ಹೊಸ ರೂಲ್ಸ್- ಸಿಬಿಎಸ್ ಮತ್ತು ಎಬಿಎಸ್ ಇಲ್ಲದ ಬೈಕ್ ಖರೀದಿ ಬೇಡವೇ ಬೇಡ..!

ಹೆಚ್ಚುತ್ತಿರುವ ಅಪಘಾತ ಪ್ರಕರಣಗಳಿಗೆ ಪ್ರಮುಖ ಕಾರಣ ಅಂದ್ರೆ ವಾಹನಗಳಲ್ಲಿ ಜೋಡಿಸಲಾಗುವ ತಾಂತ್ರಿಕ ಸೌಲಭ್ಯಗಳ ಕೊರತೆ ಅಂದ್ರೆ ತಪ್ಪಾಗುವುದಿಲ್ಲ. ಯಾಕೆಂದ್ರೆ ಅಗ್ಗದ ಬೆಲೆಯ ವಾಹನಗಳಿಂದಾಗಿ ಅಮಾಯಕರ ಜೀವಗಳು ಬಲಿಯಾಗುತ್ತಿದ್ದು, ಕೇಂದ್ರ ಸರ್ಕಾರವು ಇಂದಿನಿಂದ ಜಾರಿಗೆ ತಂದಿರುವ ಹೊಸ ಸುರಕ್ಷಾ ಮಾರ್ಗಸೂಚಿಯು ಬೈಕ್ ಸವಾರರಿಗೆ ಮತ್ತಷ್ಟು ಸುರಕ್ಷತೆಯನ್ನು ಒದಗಿಸಲಿದೆ.

ಹೊಸ ಬೈಕ್‌ಗಳಿಗೆ ಇಂದಿನಿಂದ ಹೊಸ ರೂಲ್ಸ್- ಸಿಬಿಎಸ್ ಮತ್ತು ಎಬಿಎಸ್ ಇಲ್ಲದ ಬೈಕ್ ಖರೀದಿ ಬೇಡವೇ ಬೇಡ..!

ಹೌದು. ಹೊಸ ವಾಹನಗಳ ಸಂಖ್ಯೆ ಹೆಚ್ಚಾದಂತೆ ರಸ್ತೆ ಅಪಘಾತಗಳ ಸಂಖ್ಯೆ ಕೂಡಾ ಹೆಚ್ಚುತ್ತಿದ್ದು, ಈ ಹಿನ್ನೆಲೆ ವಾಹನಗಳಲ್ಲಿನ ಕೆಲವು ಸುರಕ್ಷಾ ಕ್ರಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸುತ್ತಿರುವ ಕೇಂದ್ರ ಸರ್ಕಾರವು ಇದೀಗ ದ್ವಿಚಕ್ರ ವಾಹನಗಳಲ್ಲಿ ಸಿಬಿಎಸ್(ಕಾಂಬಿ ಬ್ರೇಕಿಂಗ್ ಸಿಸ್ಟಂ) ಮತ್ತು ಎಬಿಎಸ್(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ) ತಂತ್ರಜ್ಞಾನವನ್ನು ಕಡ್ಡಾಯವಾಗಿ ಹೊಂದಿರಬೇಕೆಂಬ ನಿಯಮವನ್ನು ಜಾರಿಗೆ ತಂದಿದೆ.

ಹೊಸ ಬೈಕ್‌ಗಳಿಗೆ ಇಂದಿನಿಂದ ಹೊಸ ರೂಲ್ಸ್- ಸಿಬಿಎಸ್ ಮತ್ತು ಎಬಿಎಸ್ ಇಲ್ಲದ ಬೈಕ್ ಖರೀದಿ ಬೇಡವೇ ಬೇಡ..!

ಈ ಹಿಂದೆ 2017ರ ಏಪ್ರಿಲ್ 1 ರಿಂದ ಭಾರತದಲ್ಲಿ ಸಂಪೂರ್ಣವಾಗಿ ಬಿಎಸ್ 3 ಎಂಜಿನ್ ವಾಹನಗಳನ್ನು ನಿಷೇಧ ಮಾಡಿ ಬಿಎಸ್ 4 ನಿಯಮವನ್ನು ಜಾರಿಗೆ ತಂದಿರುವ ಕೇಂದ್ರ ಸರ್ಕಾರವು, ಇಂದಿನಿಂದ ಹೊಸ ಬೈಕ್‌ಗಳಲ್ಲಿ ಸಿಬಿಎಸ್ ಮತ್ತು ಎಬಿಎಸ್ ತಂತ್ರಜ್ಞಾನವನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

ಹೊಸ ಬೈಕ್‌ಗಳಿಗೆ ಇಂದಿನಿಂದ ಹೊಸ ರೂಲ್ಸ್- ಸಿಬಿಎಸ್ ಮತ್ತು ಎಬಿಎಸ್ ಇಲ್ಲದ ಬೈಕ್ ಖರೀದಿ ಬೇಡವೇ ಬೇಡ..!

ಹೊಸ ನಿಯಮದ ಪ್ರಕಾರ, 125ಸಿಸಿ ಮೇಲ್ಪಟ್ಟ ಬೈಕ್ ಮತ್ತು ಸ್ಕೂಟರ್‌ಗಳಲ್ಲಿ ಸಿಬಿಎಸ್ ತಂತ್ರಜ್ಞಾನ ಮತ್ತು 150ಸಿಸಿ ಮೇಲ್ಪಟ್ಟ ಬೈಕ್‌ಗಳಲ್ಲಿ ಸಿಂಗಲ್ ಚಾನೆಲ್ ಎಬಿಎಸ್ ತಂತ್ರಜ್ಞಾನವು ಕಡ್ಡಾಯವಾಗಿದ್ದು, ಹೊಸ ನಿಯಮವನ್ನು ಹೊಂದಿರದ ಬೈಕ್ ಮಾದರಿಗಳ ಮಾರಾಟಕ್ಕೆ ಇಂದಿನಿಂದಲೇ ಬ್ರೇಕ್ ಬೀಳಲಿದೆ.

ಹೊಸ ಬೈಕ್‌ಗಳಿಗೆ ಇಂದಿನಿಂದ ಹೊಸ ರೂಲ್ಸ್- ಸಿಬಿಎಸ್ ಮತ್ತು ಎಬಿಎಸ್ ಇಲ್ಲದ ಬೈಕ್ ಖರೀದಿ ಬೇಡವೇ ಬೇಡ..!

ಹೀಗಾಗಿಯೇ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಹೊಸ ನಿಯಮ ಅನುಸಾರವಾಗಿ 125ಸಿಸಿ ಬೈಕ್ ಮಾದರಿಗಳಲ್ಲಿ ಸಿಬಿಎಸ್ ಮತ್ತು 150ಸಿಸಿ ಬೈಕ್‌ಗಳಲ್ಲಿ ಎಬಿಎಸ್ ಅಳವಡಿಕೆ ಮಾಡಿ ಮಾರಾಟಕ್ಕೆ ಚಾಲನೆ ನೀಡಿದ್ದು, ನೀವು ಕೂಡಾ ಹೊಸ ಬೈಕ್ ಖರೀದಿಸುವ ಯೋಜನೆಯಿದ್ದಲ್ಲಿ ಈ ಬಗ್ಗೆ ವಿಚಾರಿಸಿ ಮುಂದಿನ ವ್ಯವಹಾರ ಕೈಗೊಳ್ಳಿ.

ಹೊಸ ಬೈಕ್‌ಗಳಿಗೆ ಇಂದಿನಿಂದ ಹೊಸ ರೂಲ್ಸ್- ಸಿಬಿಎಸ್ ಮತ್ತು ಎಬಿಎಸ್ ಇಲ್ಲದ ಬೈಕ್ ಖರೀದಿ ಬೇಡವೇ ಬೇಡ..!

ಇಲ್ಲವಾದ್ರೆ ಹೊಸ ನಿಯಮ ಹೊಂದಿರದ ಬೈಕ್‌ಗಳ ನೋಂದಣಿ ಪ್ರಕ್ರಿಯೆಗೆ ತೊಂದರೆಯಾಗುವ ಸಾಧ್ಯತೆಗಳಿದ್ದು, ಖರೀದಿ ಮಾಡಬೇಕಿರುವ ಬೈಕ್ ಅಥವಾ ಸ್ಕೂಟರ್‌ನಲ್ಲಿ ಸಿಬಿಎಸ್ ಮತ್ತು ಎಬಿಎಸ್ ಇದೆಯೋ, ಇಲ್ಲವೋ ಎನ್ನುವುದನ್ನು ಕೂಲಂಕುಶವಾಗಿ ಪರಿಶೀಲನೆ ಮಾಡಿರಿ.

ಹೊಸ ಬೈಕ್‌ಗಳಿಗೆ ಇಂದಿನಿಂದ ಹೊಸ ರೂಲ್ಸ್- ಸಿಬಿಎಸ್ ಮತ್ತು ಎಬಿಎಸ್ ಇಲ್ಲದ ಬೈಕ್ ಖರೀದಿ ಬೇಡವೇ ಬೇಡ..!

ಹಾಗಾದ್ರೆ ಎಬಿಎಸ್‌ನಿಂದ ಏನು ಲಾಭ?

ಹೌದು. ಇದು ಪ್ರತಿಯೊಬ್ಬರ ಮನಸ್ಸಿನಲ್ಲೂ ಮೂಡಬಹುದಾದ ಸಹಜ ಪ್ರಶ್ನೆ. ಒಂದು ವೇಳೆ ನಿಮ್ಮ ಬೈಕ್‌ ಮತ್ತು ಕಾರುಗಳಲ್ಲಿ ಎಬಿಎಸ್ ತಂತ್ರಜ್ಞಾನ ಅಳವಡಿಕೆ ಇದ್ದಲ್ಲಿ ಅಪಘಾತಗಳ ತೀವ್ರತೆಯನ್ನು ತಡೆಯಬಹುದಾಗಿದ್ದು, ಜೊತೆಗೆ ಕೆಲವೇ ಸೇಕೆಂಡುಗಳಲ್ಲಿ ಬ್ರೇಕಿಂಗ್ ವ್ಯವಸ್ಥೆ ಮೇಲೆ ಸಂಪೂರ್ಣ ಹಿಡಿತ ಸಾಧಿಸಬಹುದಾಗಿದೆ.

ಹೊಸ ಬೈಕ್‌ಗಳಿಗೆ ಇಂದಿನಿಂದ ಹೊಸ ರೂಲ್ಸ್- ಸಿಬಿಎಸ್ ಮತ್ತು ಎಬಿಎಸ್ ಇಲ್ಲದ ಬೈಕ್ ಖರೀದಿ ಬೇಡವೇ ಬೇಡ..!

ಉದಾಹರಣೆ, ನೀವು ಎಬಿಎಸ್ ಇಲ್ಲದ ಒಂದು ಬೈಕ್ ಅಥವಾ ಕಾರಿನ ಚಾಲನೆ ಮಾಡುತ್ತಿದ್ದೀರಿ ಎಂದುಕೊಳ್ಳಿ. ಆಗ ಹಠಾತ್ ಆಗಿ ನಿಮ್ಮ ವಾಹನಕ್ಕೆ ಬೇರೆ ಯಾವುದೋ ವಾಹನವೋ ಇಲ್ಲವೇ ಯಾರಾದ್ರು ರಸ್ತೆ ದಾಟುವವರು ಸಡನ್ ಆಗಿ ಅಡ್ಡಬಂದಲ್ಲಿ ಬಹುತೇಕ ವಾಹನ ಸವಾರರು ಪೂರ್ಣ ಪ್ರಮಾಣದಲ್ಲಿ ಬ್ರೇಕ್ ಒತ್ತಲು ಪ್ರಯತ್ನ ಪಡುವುದು ಕಾಮನ್.

MOST READ: ರಾಂಗ್ ಸೈಡ್‌ನಲ್ಲಿ ಬಂದ ಕಾರು ಚಾಲಕನಿಗೆ ಬೆವರಿಳಿಸಿದ ಬೈಕ್ ರೈಡರ್..!

ಹೊಸ ಬೈಕ್‌ಗಳಿಗೆ ಇಂದಿನಿಂದ ಹೊಸ ರೂಲ್ಸ್- ಸಿಬಿಎಸ್ ಮತ್ತು ಎಬಿಎಸ್ ಇಲ್ಲದ ಬೈಕ್ ಖರೀದಿ ಬೇಡವೇ ಬೇಡ..!

ಈ ವೇಳೆ ಬ್ರೇಕ್ ಅನ್ನು ಪೂರ್ಣ ಪ್ರಮಾಣದಲ್ಲಿ ಅದುಮಿದಾಗ ಕಾರಿನ ಸ್ಟೀರಿಂಗ್ ಅಥವಾ ಬೈಕಿನ ಹ್ಯಾಂಡಲ್ ಲಾಕ್ ಆಗಿ ಗಾಡಿ ಸ್ಕಿಡ್ ಆಗುವ ಸಾಧ್ಯತೆ ಇದ್ದು, ಇದು ಚಾಲಕರಿಗೆ ಅಪಘಾತವನ್ನು ತಪ್ಪಿಸುವ ಯಾವುದೇ ಅವಕಾಶವಿರುವುದಿಲ್ಲ. ಆದ್ರೆ ಇಂತಹ ಅವಘಡ ಸಾಧ್ಯತೆಗಳನ್ನು ತಪ್ಪಿಸುವ ಹಾಗೂ ಬ್ರೇಕಿಂಗ್ ಅಂತರವನ್ನು ಸಾಕಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಎಬಿಎಸ್ ಸಾಕಷ್ಟು ಸಹಕಾರಿಯಾಗುತ್ತೆ.

ಹೊಸ ಬೈಕ್‌ಗಳಿಗೆ ಇಂದಿನಿಂದ ಹೊಸ ರೂಲ್ಸ್- ಸಿಬಿಎಸ್ ಮತ್ತು ಎಬಿಎಸ್ ಇಲ್ಲದ ಬೈಕ್ ಖರೀದಿ ಬೇಡವೇ ಬೇಡ..!

ಹಾಗೆಯೇ ಸಿಬಿಎಸ್ ಕೂಡಾ ಎಬಿಎಸ್ ನಂತಯೇ ಕಾರ್ಯನಿರ್ವಹಿಸಲಿದ್ದು, ಡ್ರಮ್ ಬ್ರೇಕ್‌ಗಿಂತಲೂ ಉತ್ತಮ ಕಾರ್ಯಕ್ಷಮತೆ ಹೊಂದಿದೆ. ಬೈಕ್ ಮತ್ತು ಸ್ಕೂಟರ್‌ಗಳಲ್ಲಿ ಸಿಬಿಎಸ್ ಇದ್ದಲ್ಲಿ ಸ್ಕಿಡ್‌ನಿಂದ ಆಗಬಹುದಾದ ದುರಂತಗಳನ್ನು ತಗ್ಗಿಸಬಹುದಾಗಿದ್ದು, ಎಡಬದಿಯ ಬ್ರೇಕ್ ಅನ್ನು ಒತ್ತಿದಾಗ ಹಿಂಬದಿಯ ಚಕ್ರದ ಮೇಲೆ ಅಷ್ಟೇ ಅಲ್ಲದೇ ಮುಂಭಾಗದ ಚಕ್ರದ ಮೇಲೂ ಹಿಡಿತ ಸಾಧಿಸುತ್ತೆ. ಹಾಗೆಯೇ ಬಲಬದಿಯ ಬ್ರೇಕ್ ಅನ್ನು ಸಡನ್ ಒತ್ತಿದಾಗಲೂ ಅದು ಹಿಂಭಾಗದ ಚಕ್ರಕ್ಕೂ ಅನ್ವಯಿಸುತ್ತೆ.

MOST READ: ಅಪಘಾತದಲ್ಲಿ ಹ್ಯಾರಿಯರ್ ಕಾರು ಪುಡಿಪುಡಿಯಾದ್ರು ಪ್ರಯಾಣಿಕರಿಗೆ ಏನೂ ಆಗಲಿಲ್ಲ..!

ಹೊಸ ಬೈಕ್‌ಗಳಿಗೆ ಇಂದಿನಿಂದ ಹೊಸ ರೂಲ್ಸ್- ಸಿಬಿಎಸ್ ಮತ್ತು ಎಬಿಎಸ್ ಇಲ್ಲದ ಬೈಕ್ ಖರೀದಿ ಬೇಡವೇ ಬೇಡ..!

ಬೆಲೆ ಏರಿಕೆಯ ಬಿಸಿ

ಹೌದು, ಸಾಮಾನ್ಯ ಮಾದರಿಯ ಡ್ರಮ್ ಬ್ರೇಕ್ ಸಿಸ್ಟಂ ಹೊಂದಿರುವ ಬೈಕ್‌ ಬೆಲೆಗಳಿಂತ ಸಿಬಿಎಸ್ ಮತ್ತು ಎಬಿಎಸ್ ಹೊಂದಿರುವ ಬೈಕ್ ಬೆಲೆಯು ತುಸು ದುಬಾರಿ ಎನ್ನಿಸಲಿದ್ದು, ಎಬಿಎಸ್ ತಂತ್ರಜ್ಞಾನದ ಗುಣಮಟ್ಟದ ಆಧಾರದ ಮೇಲೆ ಕನಿಷ್ಠ ರೂ.5 ಸಾವಿರದಿಂದ ರೂ.12 ಸಾವಿರದಷ್ಟು ಬೆಲೆ ಏರಿಕೆಯಾಗಲಿವೆ.

Most Read Articles

Kannada
English summary
All you need to know about the CBS and ABS in two wheelers. Read in Kannada.
Story first published: Monday, April 1, 2019, 13:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X