ಸ್ಪಾಟ್ ಟೆಸ್ಟ್ ನಲ್ಲಿ ಕಂಡುಬಂದ ಫೋರ್ಸ್ ಗುರ್ಖಾ

3 ಡೋರುಗಳ ಹೊಸ ಆವೃತ್ತಿಯ ಫೋರ್ಸ್ ಗುರ್ಖಾ ಕಾರನ್ನು ಭಾರತದಲ್ಲಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷ ಬಿಡುಗಡೆಯಾಗಲಿರುವ ಈ ಕಾರನ್ನು ಸ್ಪಾಟ್ ಟೆಸ್ಟ್ ಮಾಡಿರುವುದನ್ನು ರಶ್‍‍ಲೇನ್ ಬಹಿರಂಗಪಡಿಸಿದೆ. ಈ ಕಾರನ್ನು 2020ರ ಆಟೊ ಎಕ್ಸ್ ಫೋದಲ್ಲಿ ಪ್ರದರ್ಶಿಸುವ ಸಾಧ್ಯತೆಗಳಿವೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡುಬಂದ ಫೋರ್ಸ್ ಗುರ್ಖಾ

ಹೊಸ ಫೋರ್ಸ್ ಗುರ್ಖಾ ಎಸ್‍‍ಯು‍ವಿಯ ಮುಂಭಾಗವನ್ನು ನವೀಕರಿಸಿರುವುದು ಮರೆಮಾಡಿ ನಡೆಸಲಾಗಿರುವ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದಿದೆ. ಫ್ರಂಟ್ ಗ್ರೀಲ್ ಮತ್ತು ಹುಡ್‍‍ಗಳನ್ನು ಹೊಸ ವಿನ್ಯಾಸದೊಂದಿಗೆ ನವೀಕರಿಸಲಾಗಿದೆ. ಹೊಸ 3 ಡೋರಿನ ಗುರ್ಖಾ, ಸ್ನಾರ್ಕೆಲ್ ಶೈಲಿಯ ಏರ್ ಇನ್‍ಟೆಕ್ ವಾಟರ್ ವೆಡಿಗ್ ಸಾಮರ್ಥ್ಯವನ್ನು ಹೊಂದಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡುಬಂದ ಫೋರ್ಸ್ ಗುರ್ಖಾ

ಹೊಸ ಗುರ್ಖಾದ ಹಿಂಭಾಗದಲ್ಲಿ ಮೂರು ಭಾಗದ ವಿಂಡ್‍ಶೀಲ್ಡ್, ಟೈಲ್‍ಗೇಟ್-ಮೌಂಟೆಡ್ ಸ್ಪೇರ್ ವೀಲ್, ಲೋ-ಸೆಟ್ ಟೈಲ್ ಲ್ಯಾಂಪ್ ಮತ್ತು ಸರಳವಾದ ಬಂಪರ್‍‍ಗಳಿವೆ. ಮಾರುಕಟ್ಟೆಯಲ್ಲಿರುವ ಹಳೆಯ ತಲೆಮಾರಿನ ಗೂರ್ಖಾದಲ್ಲಿರುವುದನ್ನು ಮುಂದುವರೆಸಲಾಗಿದೆ. ಪ್ರಸ್ತುತ ತಲೆಮಾರಿನ ಕಾರಿನಲ್ಲಿರುವುದಕ್ಕಿಂತ ಅಗಲವಾದ ಸ್ಲೈಡಿಂಗ್ ವಿಂಡೋಗಳನ್ನು ಅಳವಡಿಸಲಾಗಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡುಬಂದ ಫೋರ್ಸ್ ಗುರ್ಖಾ

ಪ್ರಸ್ತುತ ತಲೆಮಾರಿನ ಗುರ್ಖಾದಲ್ಲಿರುವ ಕ್ಯಾಬಿನ್, ಇಂಟಿರಿಯರ್‍‍ಗಳಿಗೆ ಪ್ರೀಮಿಯಂ ಲುಕ್ ನೀಡಲು ಇನ್ನಷ್ಟು ನವೀಕರಣದ ಅಗತ್ಯವಿದೆ. ಇದರಿಂದ ಕಂಪನಿಯು 2020ರ ಗುರ್ಖಾದ ಇಂಟಿರಿಯರ್‍‍‍ನಲ್ಲಿ ಡ್ಯಾಶ್‍‍ಬೋರ್ಡ್‍ಗೆ ಹೊಸ ವಿನ್ಯಾಸ, ಟಚ್ ಸ್ಕ್ರೀನ್ ಇನ್ಪೋಟೈನ್‍‍ಮೆಂಟ್ ಸಿಸ್ಟಂಗೆ ಹೊಸ ಆಧುನಿಕ ವಿನ್ಯಾಸ ನೀಡಲಿದೆ. ಎಸ್‍‍ಯು‍ವಿ ಟ್ರಿಮ್‍‍ಗಳು ಕೂಡ ಸಣ್ಣ ಮಟ್ಟದ ಬದಲಾವಣೆ ಹೊಂದುವ ನಿರೀಕ್ಷೆ ಇದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡುಬಂದ ಫೋರ್ಸ್ ಗುರ್ಖಾ

ಮೆಕಾನಿಕಲ್ ಅಂಶಗಳ ಬಗ್ಗೆ ಹೇಳುವುದಾದರೆ, ಹೊಸ ತಲೆಮಾರಿನ ಗುರ್ಖಾದಲ್ಲಿರುವ 2.2 ಲೀಟರ್ ಇನ್-ಲೈನ್ 4 ಬಿ‍ಎಸ್-6 ಡೀಸೆಲ್ ಇಂಜಿನ್ 140 ಬಿಎ‍ಚ್‍ಪಿ ಪವರ್ ಮತ್ತು 321 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪ್ರಸ್ತುತ ಗುರ್ಖಾ ಎಕ್ಸ್ ಟ್ರೀಮ್ ಮಾದರಿಯಲ್ಲಿಇದೇ ಎಂಜಿನ್ ಅನ್ನು ಅಳವಡಿಸಲಾಗಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡುಬಂದ ಫೋರ್ಸ್ ಗುರ್ಖಾ

ಲೋವರ್-ಸ್ಪೆಕ್ ಮಾದರಿಯಲ್ಲಿ ಅಳವಡಿಸಲಾಗಿರುವ 2.6 ಎಂಜಿನ್ ಅನ್ನು ಸ್ಥಗಿತಗೊಳಿಸುವ ಸಾಧ್ಯತೆಗಳಿವೆ. ಫೋರ್ಸ್ ಮೋಟಾರ್ಸ್ 2.6 ಲೀಟರ್ ಡೀಸೆಲ್ ಎಂಜಿನ್ ಅನ್ನು ಬಿಎಸ್-6 ನಿಯಮಗಳಿಗೆ ತಕ್ಕಂತೆ ಅಪ್‍‍ಡೇಟ್ ಮಾಡಬಹುದು. ಏಕೆಂದರೆ ಈ ಎಂಜಿನ್ ಅನ್ನು ಕಂಪನಿಯ ಟ್ರ್ಯಾಕ್ಸ್ ನ ವಾಹನಗಳಲ್ಲಿಯೂ ಅಳವಡಿಸಲಾಗಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡುಬಂದ ಫೋರ್ಸ್ ಗುರ್ಖಾ

ಕಾರಿನ ಎರಡು ತುದಿಗಳಲ್ಲಿರುವ ಡಿಫರೆನ್ಷಿಯಲ್-ಆಕ್ಸಲ್ ಲಾಕ್ ಮತ್ತು ಲೋ ರೇಷಿಯೊ ಟ್ರಾನ್ಸ್ ಮಿಷನ್ ಗಳನ್ನು ಹೊಸ ಗುರ್ಖಾದಲ್ಲಿ ಮುಂದುವರೆಸಲಾಗಿದೆ. ಇದರಿಂದಾಗಿ ಆಫ್ ರೋಡ್ ರಸ್ತೆಗಳಲ್ಲಿ ಸುಲಭವಾಗಿ ಸಾಗಬಹುದಾಗಿದೆ. ಹೊಸ ಗುರ್ಖಾ ಕಾರಿನಲ್ಲಿ 2019ರ ಆಕ್ಟೋಬರ್ ವೇಳೆಗೆ ಜಾರಿಗೆ ಬರಲಿರುವ ಹೊಸ ಕ್ರ್ಯಾಶ್ ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಕೆಲವು ಬದಲಾವಣೆಗಳನ್ನು ಮಾಡುವ ಸಾಧ್ಯತೆಗಳಿವೆ. ಇದರಿಂದಾಗಿ ಈ ಹೊಸ ಆಫ್-ರೋಡ್ ಎಸ್‍‍ಯು‍ವಿ ಹೆಚ್ಚು ಸುರಕ್ಷಿತವಾಗಿರಲಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡುಬಂದ ಫೋರ್ಸ್ ಗುರ್ಖಾ

ಹೊಸ ಫೋರ್ಸ್ ಗುರ್ಖಾ ವಿನ್ಯಾಸವನ್ನು ಮರ್ಸಿಡಿಸ್ ಜಿ-ವ್ಯಾಗನ್ ಕಾರಿನಿಂದ ಪಡೆಯಲಾಗಿದೆ. ಬಾಕ್ಸೀ ವಿನ್ಯಾಸ ಮತ್ತು ಸಣ್ಣ ವ್ಹೀಲ್‍ಬೇಸ್‍‍ನೊಂದಿಗೆ ಗುರ್ಖಾ ಕಠಿಣವಾದ ದಾರಿಗಳಲ್ಲಿ ಚಲಿಸಲು ಈ ವಾಹನವು ಹೆಸರುವಾಸಿಯಾಗಿದೆ. ಈ ಕಾರಿನಲ್ಲಿ ವಾಟರ್ ವೆಡಿಗ್ ಸಾಮರ್ಥ್ಯವನ್ನು ಹೊಂದಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡುಬಂದ ಫೋರ್ಸ್ ಗುರ್ಖಾ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹೊಸ ತಲೆಮಾರಿನ ಗುರ್ಖಾ ಕಠಿಣವಾದ ದಾರಿಗಳಲ್ಲಿಯೂ ಸಲೀಸಾಗಿ ಸಾಗುತ್ತದೆ. ಆಫ್ ರೋಡ್ ಎಸ್‍‍ಯು‍ವಿ ವಿಭಾಗದಲ್ಲಿ ಹೊಸ ಗುರ್ಖಾ ಉತ್ತಮವಾದ ಆಯ್ಕೆಯಾಗಿದೆ. ಈ ಎಸ್‍‍ಯು‍ವಿ ಆಕರ್ಷಕವಾದ ಇಂಟಿರಿಯರ್ ಅನ್ನು ಹೊಂದಿರಲಿದೆ. ಇದು ಬಿಡುಗಡೆಯಾದ ಬಳಿಕ ಮಹೀಂದ್ರಾ ಥಾರ್‍‍‍ಗೆ ಪೈಪೋಟಿಯನ್ನು ನೀಡಲಿದೆ.

source:rushlane

More from DriveSpark

Article Published On: Monday, September 23, 2019, 18:47 [IST]
English summary
New (2020) Force Gurkha 3-Door Seen Testing In India Ahead Of Launch: Spy Pics & Details- Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+