ಬಿಡುಗಡೆಗೆ ಸಜ್ಜಾದ ಫೋರ್ಸ್ ಗೂರ್ಖಾ 5-ಡೋರ್ ಎಸ್‍ಯುವಿ: ಮಹೀಂದ್ರಾ ಥಾರ್‌ಗೆ ಎದೆಬಡಿತ ಶುರು

ಫೋರ್ಸ್ ಗೂರ್ಖಾ ಮಾದರಿಗೆ ಭಾರತದಲ್ಲಿ ಮಾತ್ರ ಆಫ್-ರೋಡರ್‌ಗಳಲ್ಲಿ ದೊಡ್ಡ ಅಭಿಮಾನಿಗಳನ್ನು ಹೊಂದಿದೆ. ಫೋರ್ಸ್ ಗೂರ್ಖಾ ಎದುರಾಳಿ ಬಹುಬೇಡಿಕೆಯ ಮಹೀಂದ್ರಾ ಥಾರ್ ಎಸ್‍ಯುವಿಗೆ ಸೆಡ್ಡು ಹೊಡೆಯಲು ಹೊಸ ರೂಪದಲ್ಲಿ ಬರಲು ಸಜ್ಜಾಗಿದೆ. ಇದೀಗ ಫೋರ್ಸ್ ಮೋಟಾರ್ಸ್ ಅವರು ಗೂರ್ಖಾದ 5-ಡೋರಿನ ಆವೃತ್ತಿಯ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಫೋರ್ಸ್ ಗೂರ್ಖಾ 5-ಡೋರ್ (Force Gurkha 5-door) ಆವೃತ್ತಿಯು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. BS 6 ಹಂತ 2 ಎಮಿಷನ್ ಮಾನದಂಡಗಳು ಪ್ರಾರಂಭವಾದಾಗ ಸ್ಥಗಿತಗೊಂಡ 3-ಡೋರಿನ ಗೂರ್ಖಾವನ್ನು ಸಹ ಫೋರ್ಸ್ ಮರಳಿ ತರುತ್ತದೆ. ಮುಂಬರುವ ಫೋರ್ಸ್ ಗೂರ್ಖಾ 5-ಡೋರ್ ಎಸ್‍ಯುವಿಯ ಟೀಸರ್ ಅದರ ಔಟ್‌ಲೈನ್ ಮತ್ತು ವಿನ್ಯಾಸದ ಅಂಶಗಳನ್ನು ಬಹಿರಂಗಪಡಿಸಿದೆ.

Force Gurkha 5-door

ಫೋರ್ಸ್ ಗೂರ್ಖಾ 5-ಡೋರ್ ಆವೃತ್ತಿಯು ಮೂರು-ಡೋರಿನ ಗೂರ್ಖಾವನ್ನು ಸಹ ಫೋರ್ಸ್ ಮರಳಿ ತರುತ್ತದೆ. ಮುಂಬರುವ ಫೋರ್ಸ್ ಗೂರ್ಖಾ 5-ಡೋರ್ ಎಸ್‍ಯುವಿಯ ಟೀಸರ್ ಅದರ ಔಟ್‌ಲೈನ್ ಮತ್ತು ವಿನ್ಯಾಸದ ಅಂಶಗಳನ್ನು ಬಹಿರಂಗಪಡಿಸಿದೆ. ಮೂರು-ಡೋರಿನ ಆವೃತ್ತಿಗೆ ಹೋಲಿಸಿದರೆ ಈ ಎಸ್‍ಯುವಿ ಉದ್ದವಾದ ವೀಲ್‌ಬೇಸ್, ಹೆಚ್ಚುವರಿ ವಿಂಡೋಗಳು ಮತ್ತು ಹೆಚ್ಚುವರಿ ಜೋಡಿ ಡೋರುಗಳನ್ನು ಹೊಂದಿರುತ್ತದೆ.

ಈ ಫೋರ್ಸ್ ಗೂರ್ಖಾ 5-ಡೋರ್ ಎಸ್‍ಯುವಿಯು ಲ್ಯಾಡರ್-ಫ್ರೇಮ್ ಚಾಸಿಸ್ನಲ್ಲಿ ನಿರ್ಮಿಸಲಾಗುವುದು. ಟೀಸರ್ ವೃತ್ತಾಕಾರದ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಸ್ನಾರ್ಕೆಲ್ ಜೊತೆಗೆ ಹೊಸ ಅಲಾಯ್ ವ್ಹೀಲ್ ಗಳನ್ನು ಬಹಿರಂಗಪಡಿಸುತ್ತದೆ. ಫೋರ್ಸ್ ಗೂರ್ಖಾ ಐದು-ಡೋರಿನ ಎಸ್‌ಯುವಿಯ ಉದ್ದವಾದ ವೀಲ್‌ಬೇಸ್ ಕ್ಯಾಬಿನ್‌ನೊಳಗೆ ಹೆಚ್ಚಿನ ಸ್ಥಳಾವಕಾಶವನ್ನು ಒದಗಿಸುತ್ತದೆ. ಇದರ ಅರ್ಥವೇನೆಂದರೆ, ಹಿಂಬದಿಯ ಪ್ರಯಾಣಿಕರಿಗೆ ಹೆಚ್ಚು ಸುಲಭವಾಗಿ ಒಳಗೆ ಮತ್ತು ಹೊರಬರಲು ಹೆಚ್ಚಿನ ಸ್ಥಳಾವಕಾಶ ಇರುತ್ತದೆ.

Force Gurkha 5-door

ಮೂರು-ಡೋರಿನ ಆವೃತ್ತಿಯಲ್ಲಿ, ಹಿಂಭಾಗದ ಪ್ರಯಾಣಿಕರು ಟೈಲ್‌ಗೇಟ್‌ನಿಂದ ಅಥವಾ ಮುಂಭಾಗದ ಸೀಟುಗಳನ್ನು ಮುಂದೆ ಸ್ಲೈಡ್ ಮಾಡುವ ಮೂಲಕ ಪ್ರವೇಶಿಸಬೇಕಾಗುತ್ತದೆ, ಅದು ಸ್ವಲ್ಪ ತೊಡಕಿನದ್ದಾಗಿರಬಹುದು. ಮುಂಬರುವ ಆವೃತ್ತಿಯನ್ನು ಐದು, ಆರು ಮತ್ತು ಏಳು ಸೀಟುಗಳ ಸಂರಚನೆಗಳಲ್ಲಿ ನೀಡಬಹುದು. ಆದರೆ, ಸದ್ಯಕ್ಕೆ ಯಾವುದೂ ದೃಢಪಟ್ಟಿಲ್ಲ. ಒಳಾಂಗಣ ವಿನ್ಯಾಸವು ಒಂದೇ ಆಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಫೋರ್ಸ್ ಗೂರ್ಖಾ 5-ಡೋರ್ ಎಸ್‍ಯುವಿಯಲ್ಲಿ 2.6-ಲೀಟರ್ ಡೀಸೆಲ್ ಎಂಜಿನ್‌ ಅನ್ನು ನೀಡಲಾಗಿದೆ. ಈ ಎಂಜಿನ್ 89 bhp ಮತ್ತು 250 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ಐದು-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಮುಂಭಾಗ ಮತ್ತು ಹಿಂಭಾಗದ ಲಾಕಿಂಗ್ ಡಿಫರೆನ್ಷಿಯಲ್‌ಗಳೊಂದಿಗೆ 4x4 ಸಿಸ್ಟಮ್‌ನೊಂದಿಗೆ ಬರುತ್ತದೆ.

Force Gurkha 5-door

ಇನ್ನು ಸದ್ಯಕ್ಕೆ ಭಾರತದಲ್ಲಿ ಮೂರು ಡೋರ್‌ಗಳುಳ್ಳ ಗೂರ್ಖಾ ಮಾರಾಟದಲ್ಲಿದ್ದು, ಇದರ ಕುರಿತಾಗಿ ನೋಡುವುದಾದರೆ, ಡ್ಯಾಶ್‌ಬೋರ್ಡ್‌ನಲ್ಲಿ ಈ ಬಾರಿ ಸೆಂಟ್ರಲ್ 7 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಹೊಸದಾದ ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ, ಪ್ರತ್ಯೇಕವಾದ ಆಸನ ಸೌಲಭ್ಯಗಳು, ಮ್ಯಾನುವಲ್ ಎಸಿ ವೆಂಟ್ಸ್ , 12V ಚಾರ್ಜಿಂಗ್ ಸಾಕೆಟ್ ಮತ್ತು ಡ್ಯುಯಲ್ ಯುಎಸ್‌ಬಿ ಸಾಕೆಟ್ ನೀಡಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, April 14, 2024, 14:00 [IST]
English summary
New force gurkha 5 door suv teased ahead of launch details
Read more on ಫೋರ್ಸ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+