Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೈಬ್ರಿಡ್ ಎಂಜಿನ್ ಆಯ್ಕೆಯೊಂದಿಗೆ ರಸ್ತೆಗಿಳಿಯಲಿದೆ ಹೋಂಡಾ ಜಾಝ್
ಆಟೋ ಉದ್ಯಮದಲ್ಲಿ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಆವೃತ್ತಿಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಮಾರುಕಟ್ಟೆಯಲ್ಲಿನ ಬೇಡಿಕೆಯಂತೆ ಹೋಂಡಾ ಇಂಡಿಯಾ ಸಂಸ್ಥೆಯು ಕೂಡಾ ಇದೇ ನಿಟ್ಟಿನಲ್ಲಿ ಬೃಹತ್ ಯೋಜನೆ ರೂಪಿಸಿರುವುದು ಭಾರೀ ಸಂಚಲನಕ್ಕೆ ಕಾರಣವಾಗಿದೆ.

ಹೋಂಡಾ ಸಂಸ್ಥೆಯು ತನ್ನ ಜನಪ್ರಿಯ ಹ್ಯಾಚ್‌ಬ್ಯಾಕ್ ಆವೃತ್ತಿಯನ್ನು ಈಗಾಗಲೇ ಎಲೆಕ್ಟ್ರಿಕ್ ಆವೃತ್ತಿಯೊಂದಿಗೆ ಬಿಡುಗಡೆಗೊಳಿಸುವ ಉದ್ದೇಶದಿಂದ ಸ್ಪಾಟ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಆರಂಭಿಸಿದ್ದು, ಇದರ ಜೊತೆಯಲ್ಲೇ ಹೈಬ್ರಿಡ್ ಆವೃತ್ತಿಯನ್ನು ಸಹ ಬಿಡುಗಡೆ ಮಾಡುವ ಸುಳಿವು ನೀಡಿದೆ. ಕೇಂದ್ರ ಸರ್ಕಾರವು ಘೋಷಣೆ ಮಾಡಿರುವ ಫೇಮ್ 2 ಯೋಜನೆಯನ್ನು ಸಮರ್ಥವಾಗಿ ಬಳಸಿಕೊಳ್ಳಲು ಮುಂದಾಗಿರುವ ಹೋಂಡಾ ಸಂಸ್ಥೆಯು ಜಾಝ್ ಜೊತೆ ಇನ್ನು ಕೆಲವು ಕಾರು ಮಾದರಿಗಳನ್ನು ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಆವೃತ್ತಿಯಲ್ಲಿ ಪರಿಚಯಿಸುವ ಇರಾದೆಯಲ್ಲಿದೆ.

ಸದ್ಯ ಮಾರುಕಟ್ಟೆಯಲ್ಲಿರುವ ಜಾಝ್ ಕಾರು ಆವೃತ್ತಿಯು ಹ್ಯಾಚ್‌ಬ್ಯಾಕ್ ಮಾದರಿಗಳಲ್ಲಿ ಉತ್ತಮ ಬೇಡಿಕೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಆವೃತ್ತಿಗಳಲ್ಲಿ ಬಿಡುಗಡೆ ಮಾಡುವುದರಿಂದ ಮತ್ತಷ್ಟು ಬೇಡಿಕೆ ಪಡೆದುಕೊಳ್ಳಲಿದೆ ಎಂಬುವುದು ಹೋಂಡಾ ಲೆಕ್ಕಾಚಾರ.

ಯಾಕೆಂದ್ರೆ ಸದ್ಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಂತ ಹೈಬ್ರಿಡ್ ಆವೃತ್ತಿಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಹೈ ಎಂಡ್ ಕಾರು ಮಾದರಿಗಳಲ್ಲಿ ಮಾತ್ರಲೇ ಇಂತಹ ಆಯ್ಕೆಯನ್ನು ನೀಡಲಾಗುತ್ತಿದೆ. ಹೀಗಾಗಿ ಹೋಂಡಾ ಜಾಝ್ ಹೈಬ್ರಿಡ್ ಯೋಜನೆಯು ಯಶಸ್ವಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮಾಹಿತಿಗಳ ಪ್ರಕಾರ, 2020ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಮೇಳದಲ್ಲಿ ಜಾಝ್ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಮಾದರಿಗಳು ಅನಾವರಣಗೊಳ್ಳಲಿದ್ದು, ತದನಂತರವಷ್ಟೇ ಖರೀದಿಗೆ ಲಭ್ಯವಾಗಲಿರುವ ಹೊಸ ಕಾರನ್ನು ವಿವಿಧ ಹಂತದಲ್ಲಿ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೈಗೊಳ್ಳುತ್ತಿರುವ ಬಗ್ಗೆ ಸ್ವತಃ ಹೋಂಡಾ ಸಂಸ್ಥೆಯ ಹಿರಿಯ ಅಧಿಕಾರಿಗಳೇ ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನು ಪ್ರಸ್ತುತ ಮಾರುಕಟ್ಟೆಯಲ್ಲಿ ಹೋಂಡಾ ಜಾಝ್ ಕಾರು ಪೆಟ್ರೋಲ್ ಹಾಗು ಡೀಸೆಲ್ ಮಾದರಿಯಲ್ಲಿ ಮಾರಾಟವಾಗುತ್ತಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು 5 ಸ್ಪೀಡ್ ಸಿವಿಟಿ ಗೇರ್‍ಬಾಕ್ಸ್ ಆಯ್ಕೆ ಹೊಂದಿರುವ ಪೆಟ್ರೋಲ್ ಆವೃತ್ತಿಯು 1.2-ಲೀಟರ್ ಎಂಜಿನ್ ಸಹಾಯದಿಂದ 88-ಬಿಹೆಚ್‍ಪಿ, 110-ಎಂಎಮ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹಾಗೆಯೇ ಜಾಝ್ ಡೀಸೆಲ್ ಮಾದರಿಯು 1.5-ಲೀಟರ್ ಎಂಜಿನ್ ಸಹಾಯದೊಂದಿಗೆ 38-ಬಿಹೆಚ್‍ಪಿ ಮತ್ತು 200-ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.
MOST READ: ನಕಲಿ ಕಾರು ಮಾರಿ ಟೋಪಿ ಹಾಕಿದ ಡೀಲರ್..!!

ಗ್ರಾಹಕರ ಬೇಡಿಕೆಯೆಂತೆ ಒಟ್ಟು ನಾಲ್ಕು ವೆರಿಯೆಂಟ್‌ಗಳಲ್ಲಿ ಲಭ್ಯವಿರುವ ಜಾಝ್ ಕಾರುಗಳು ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳೊಂದಿಗೆ ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ. 7.35 ಲಕ್ಷದಿಂದ ಹೈ ಎಂಡ್ ಮಾದರಿಗೆ ರೂ.8.99 ಲಕ್ಷ ಬೆಲೆ ಪಡೆದುಕೊಂಡಿವೆ.
MOST READ: ಎರಡು ವರ್ಷದಲ್ಲಿ 300ಕ್ಕು ಹೆಚ್ಚು ಡೀಲರ್‍ಶಿಪ್‍ಗಳು ಬಂದ್..! ಇದಕ್ಕೆ ಕಾರಣ.?

ಇದರಿಂದ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಮಾದರಿಗಳು ಸಾಮಾನ್ಯ ಕಾರುಗಳಿಂತ ತುಸು ದುಬಾರಿ ಎನ್ನಿಸಲಿದ್ದು, ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗುತ್ತಿರುವ ಹ್ಯುಂಡೈ ಕೊನಾ ಮತ್ತು ಎಕ್ಸ್‌ಯುವಿ 300 ಎಲೆಕ್ಟ್ರಿಕ್ ಮಾದರಿಯಲ್ಲಿ ಪ್ರತಿ ಚಾರ್ಜ್‌ಗೆ 300ರಿಂದ 350 ಕಿ.ಮಿ ಮೈಲೇಜ್ ನೀಡುವ ನೀರಿಕ್ಷೆಯಿದೆ.