ಹೀಗಿರಲಿದೆ ನೋಡಿ ಹ್ಯುಂಡೈನ ಹೊಸ ಕಾಂಪ್ಯಾಕ್ಟ್ ಸೆಡಾನ್ ಕಾರು

ಇತ್ತೀಚಿಗಷ್ಟೇ ಹ್ಯುಂಡೈ ಕಂಪನಿಯು ಗ್ರಾಂಡ್ ಐ10 ನಿಯೋಸ್ ಕಾರ್ ಅನ್ನು ಅನಾವರಣಗೊಳಿಸಿತ್ತು. ಈಗ ಕಂಪನಿಯು ತನ್ನ ಹ್ಯಾಚ್‍‍ಬ್ಯಾಕ್ ಸೆಡಾನ್ ಅನ್ನು ಭಾರತದ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟ್ ಮಾಡುತ್ತಿದೆ. ಹಲವು ದಿನಗಳ ಹಿಂದೆ ಸ್ಪಾಟ್ ಟೆಸ್ಟ್ ನಡೆಸುತ್ತಿದ್ದ ಕಾಂಪ್ಯಾಕ್ಟ್ ಸೆಡಾನ್ ಚಿತ್ರವನ್ನು ಸೆರೆಹಿಡಿಯಲಾಗಿತ್ತು.

ಹೀಗಿರಲಿದೆ ನೋಡಿ ಹ್ಯುಂಡೈನ ಹೊಸ ಕಾಂಪ್ಯಾಕ್ಟ್ ಸೆಡಾನ್ ಕಾರು

ಈಗ ಸೆರೆಯಾಗಿರುವ ಚಿತ್ರಗಳು ಲಭ್ಯವಾಗಿವೆ. ಈ ಮೊದಲು ವರದಿಯಾದಂತೆ ಹ್ಯುಂಡೈ ಕಾಂಪ್ಯಾಕ್ಟ್ ಸೆಡಾನ್‍‍ನಲ್ಲಿರುವ ಬಹುತೇಕ ಬಿಡಿಭಾಗಗಳು, ಹೊಸ ಗ್ರಾಂಡ್ ಐ10 ನಿಯೋಸ್ ಕಾರಿನಲ್ಲಿರುವ ಬಿಡಿಭಾಗಗಳಾಗಿರಲಿವೆ. ಈ ಕಾರು, ಕಾಂಪ್ಯಾಕ್ಟ್ ಡೈಮೆಂಷನ್ ಬದಲಿಗೆ 3 ಬಾಕ್ಸ್ ಸಿಲ್‍‍ಹೋಟ್ ಹೊಂದಿದೆ. ಸೆರೆಹಿಡಿಯಲಾಗಿರುವ ಕಾರಿನ ಮೊದಲ ಚಿತ್ರಗಳು ಸೆಡಾನ್‌ನ ಡಿಸೈನ್ ಬಗ್ಗೆ ಹೇಳುತ್ತವೆ. ಈ ಕಾರಿನಲ್ಲಿ ಎಲ್‍ಇ‍‍ಡಿಯನ್ನು ಹೊಂದಿರುವ ದೊಡ್ಡ ಗಾತ್ರದ ವ್ರಾಪ್ ಲೈಟ್‍‍ಗಳಿದ್ದು, ಅವುಗಳನ್ನು ಬೂಟ್ ಲಿಡ್‍‍ವರೆಗೆ ವಿಸ್ತರಿಸಲಾಗಿದೆ.

ಹೀಗಿರಲಿದೆ ನೋಡಿ ಹ್ಯುಂಡೈನ ಹೊಸ ಕಾಂಪ್ಯಾಕ್ಟ್ ಸೆಡಾನ್ ಕಾರು

ಈ ಕಾರು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ಸಿದ್ಧವಾಗಿರುವ ಎಲಾಂಟ್ರಾ ಕಾರಿನ ಫೇಸ್‌ಲಿಫ್ಟ್‌ ಆವೃತ್ತಿ ಹೊಂದಿರುವ, ಹ್ಯುಂಡೈ ಸೆಡಾನ್‌ಗಳ ಸ್ಟೈಲಿಂಗ್ ಅನ್ನು ಹೊಂದಿದೆ. ಈಗ ಬೂಟ್ ಲಿಡ್ ಬದಲಿಗೆ ಹಿಂಭಾಗದ ಬಂಪರ್ ಮೇಲೆ ನಂಬರ್ ಪ್ಲೇಟ್ ಇರಿಸಲಾಗಿದೆ.

ಹೀಗಿರಲಿದೆ ನೋಡಿ ಹ್ಯುಂಡೈನ ಹೊಸ ಕಾಂಪ್ಯಾಕ್ಟ್ ಸೆಡಾನ್ ಕಾರು

ಹತ್ತಿರದಿಂದ ನೋಡಿದರೆ ಟೇಲ್ ಲ್ಯಾಂಪ್‍‍ಗಳ ಕೆಳಗೆ ಡೆಕೊರೇಟಿವ ಎಲ್ಇಡಿ ಸ್ಟ್ರಿಪ್‍‍ಗಳನ್ನು ಕಾಣಬಹುದು. ಇವುಗಳು ಕಾರಿನ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಈ ಸೆಡಾನ್ ಕಾರಿನ ಮುಂಭಾಗದಲ್ಲಿ ಹ್ಯುಂಡೈನ ಹೊಸ ಕ್ಯಾಸ್ಕೇಡಿಂಗ್ ಗ್ರಿಲ್‍ ಅಳವಡಿಸಲಾಗಿದೆ. ಈ ಗ್ರಿಲ್ ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಕಾರಿನಲ್ಲಿರುವ ಗ್ರಿಲ್‍‍ಗಿಂತ ಹೆಚ್ಚು ಎತ್ತರವಾಗಿ ಹಾಗೂ ಉದ್ದವಾಗಿದೆ.

ಹೀಗಿರಲಿದೆ ನೋಡಿ ಹ್ಯುಂಡೈನ ಹೊಸ ಕಾಂಪ್ಯಾಕ್ಟ್ ಸೆಡಾನ್ ಕಾರು

ಈಗ ಈ ಗ್ರಿಲ್ ಅನ್ನು ಹ್ಯಾಚ್‌ಬ್ಯಾಕ್‌ನಲ್ಲಿ ಕಂಡುಬರುವ ಸರಳ ಸ್ಲ್ಯಾಟ್‌ಗಳ ಬದಲು ಹನಿಕೂಂಬ್ ಇನ್ಸರ್ಟ್‍‍ಗಳೊಂದಿಗೆ ನೀಡಲಾಗಿದೆ. ಹೊಸ ಕಾರು ವಿಶಿಷ್ಟವಾದ ಫ್ರಂಟ್ ಬಂಪರ್ ವಿನ್ಯಾಸವನ್ನು ಹೊಂದಿದ್ದು, ಇದು ಗ್ರಿಲ್‍‍ನೊಂದಿಗೆ ವಿಲೀನವಾಗಿದೆ. ಅಗಲವಾದ ಹಾಗೂ ಪ್ರತ್ಯೇಕವಾದ ಇನ್‍‍‍ಟೇಕ್ ಹೊಂದಿದೆ. ಇವುಗಳನ್ನು ಈ ಮೊದಲು ಹ್ಯಾಚ್‌ಬ್ಯಾಕ್‌‍‍ನಲ್ಲಿ ನೀಡುತ್ತಿರಲಿಲ್ಲ.

ಹೀಗಿರಲಿದೆ ನೋಡಿ ಹ್ಯುಂಡೈನ ಹೊಸ ಕಾಂಪ್ಯಾಕ್ಟ್ ಸೆಡಾನ್ ಕಾರು

ಫಾಗ್ ಲ್ಯಾಂಪ್‍‍ಗಳನ್ನು ಎಲಾಂಟ್ರಾದ ನವೀಕೃತ ಆವೃತ್ತಿಯಲ್ಲಿರುವಂತೆ ಎರಡು ಪ್ಲಾಸ್ಟಿಕ್ ಹಾಗೂ ರೌಂಡ್ ಲ್ಯಾಂಪ್ ಯೂನಿಟ್‍‍ಗಳ ಜೊತೆಗೆ ಉದ್ದವಾಗಿ ಜೋಡಿಸಲಾಗಿದೆ. ಈ ಕಾರಿನಲ್ಲಿಯೂ ಸಹ ನಿಯೋಸ್ ಕಾರಿನಲ್ಲಿರುವಂತೆ ಎರಡೂ ಬದಿಯಲ್ಲಿ ಬೂಮ್‍‍ರಂಗ್ ಶೇಪಿನಲ್ಲಿರುವ ಎಲ್‍‍ಇ‍‍ಡಿ ಡೇ ಟೈಮ್ ರನ್ನಿಂಗ್ ಲ್ಯಾಂಪ್‍‍ಗಳನ್ನು ಅಳವಡಿಸಲಾಗಿದೆ.

ಹೀಗಿರಲಿದೆ ನೋಡಿ ಹ್ಯುಂಡೈನ ಹೊಸ ಕಾಂಪ್ಯಾಕ್ಟ್ ಸೆಡಾನ್ ಕಾರು

ಇಂಟಿರಿಯರ್ ಬಗ್ಗೆ ಹೇಳುವುದಾದರೆ, ಹೊಸ ಹ್ಯುಂಡೈ ಸೆಡಾನ್‍‍ನಲ್ಲಿ ಗ್ರಾಂಡ್ ಐ10 ನಿಯೋಸ್‍‍ನಲ್ಲಿದ್ದಂತಹ ಬಹುತೇಕ ಇಂಟರಿಯರ್ ಬಿಟ್‌ಗಳನ್ನು ಅಳವಡಿಸಲಾಗಿದೆ. ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋಗಳನ್ನು ಹೊಂದಿರುವ 8.0-ಇಂಚಿನ ದೊಡ್ಡ ಗಾತ್ರದ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂಗಳನ್ನು ಹೊಂದಿದೆ.

MOST READ: ಹತ್ತು ಸಾವಿರಕ್ಕೆ ಎಲೆಕ್ಟ್ರಿಕ್ ಬೈಕ್ ತಯಾರಿಸಿದ ಮೆಕಾನಿಕ್

ಹೀಗಿರಲಿದೆ ನೋಡಿ ಹ್ಯುಂಡೈನ ಹೊಸ ಕಾಂಪ್ಯಾಕ್ಟ್ ಸೆಡಾನ್ ಕಾರು

ಟಾಪ್ ಮಾದರಿಯ ಕಾರುಗಳು ವೈರ್‌ಲೆಸ್ ಚಾರ್ಜಿಂಗ್‍‍ಗಳನ್ನು ಹೊಂದಿರಲಿವೆ. ಗ್ರಾಂಡ್ ಐ10 ನಿಯೋಸ್ ಕಾರಿನಲ್ಲಿ ಹ್ಯುಂಡೈ ಕಂಪನಿಯ ಬ್ಲೂ ಲಿಂಕ್ ಕನೆಕ್ಟಿವಿಟಿ ಸಿಸ್ಟಂ ಅನ್ನು ಅಳವಡಿಸಲಾಗಿಲ್ಲ. ಈ ಫೀಚರ್ ಅನ್ನು ಹ್ಯುಂಡೈ ಕಂಪನಿಯು, ಹೊಸ ಕಾಂಪ್ಯಾಕ್ಟ್ ಸೆಡಾನ್ ಕಾರಿನಲ್ಲಿ ನೀಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

MOST READ: ಜಾಗ್ವಾರ್ ಬದಲು ಬಿ‍ಎಂ‍‍ಡಬ್ಲ್ಯು ಗಿಫ್ಟ್ ಪಡೆದ ಯುವಕ ಮಾಡಿದ್ದೇನು ಗೊತ್ತಾ?

ಹೀಗಿರಲಿದೆ ನೋಡಿ ಹ್ಯುಂಡೈನ ಹೊಸ ಕಾಂಪ್ಯಾಕ್ಟ್ ಸೆಡಾನ್ ಕಾರು

ಹೆಚ್ಚುವರಿಯಾಗಿ, ಹೊಸ ಹ್ಯುಂಡೈ ಸೆಡಾನ್ ಕಾರು ವಿಭಿನ್ನವಾದ ಸೀಟ್ ಕಲರ್ ಆಯ್ಕೆಗಳನ್ನು ಹೊಂದಿರಲಿದೆ. ಹಿಂಭಾಗದ ಆರ್ಮ್‌‍‍ರೆಸ್ಟ್ ಹಾಗೂ ಎರಡನೇ ಸಾಲಿನ ಪ್ರಯಾಣಿಕರಿಗಾಗಿ ಪ್ರತ್ಯೇಕವಾದ ಹೆಡ್‌ರೆಸ್ಟ್‌ಗಳನ್ನು ನೀಡಲಾಗುವುದು.

MOST READ: ಆರ್ಟಿಕಲ್ 370 ರದ್ದಾದ ಬೆನ್ನಲ್ಲೆ ಜಮ್ಮು ಕಾಶ್ಮೀರದಲ್ಲಿ ಶುರುವಾಗಿದೆ ಹೊಸ ಕೈಗಾರಿಕಾ ಕ್ರಾಂತಿ

ಹೀಗಿರಲಿದೆ ನೋಡಿ ಹ್ಯುಂಡೈನ ಹೊಸ ಕಾಂಪ್ಯಾಕ್ಟ್ ಸೆಡಾನ್ ಕಾರು

ಹೊಸ ಕಾರಿನಲ್ಲಿ ಬಿ‍ಎಸ್6 ಮಾಲಿನ್ಯ ನಿಯಮಗಳಿಗೆ ಹೊಂದಿಕೊಳ್ಳುವ 1.2 ಲೀಟರಿನ ಕಪ್ಪಾ ಪೆಟ್ರೋಲ್ ಎಂಜಿನ್‌ ಹಾಗೂ ಯು2 1.2 ಲೀಟರಿನ ಡೀಸೆಲ್ ಮೋಟರ್ ಎಂಜಿನ್‍‍ಗಳನ್ನು ಅಳವಡಿಸಲಾಗುವುದು. ಈ ಎಂಜಿನ್‍‍ಗಳು ಎಎಂಟಿ ಗೇರ್ ಬಾಕ್ಸ್ ಆಯ್ಕೆಗಳನ್ನು ಹೊಂದುವ ಸಾಧ್ಯತೆಗಳಿವೆ.

ಹೀಗಿರಲಿದೆ ನೋಡಿ ಹ್ಯುಂಡೈನ ಹೊಸ ಕಾಂಪ್ಯಾಕ್ಟ್ ಸೆಡಾನ್ ಕಾರು

ವರದಿಗಳ ಪ್ರಕಾರ, ಹೊಸ ಹ್ಯುಂಡೈ ಕಾಂಪ್ಯಾಕ್ಟ್ ಸೆಡಾನ್ ಕಾರು ಎಕ್ಸ್ ಸೆಂಟ್ ಹೆಸರನ್ನು ಕೈಬಿಟ್ಟು ಬೇರೆ ಹೆಸರನ್ನು ಹೊಂದುವ ಸಾಧ್ಯತೆಗಳಿವೆ. ಈ ಹೆಸರು ಕ್ಯಾಬ್ ಸೇವೆಗಳಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಎಕ್ಸ್ ಸೆಂಟ್ ಅನ್ನು, ಹೊಸ ಕಾಂಪ್ಯಾಕ್ಟ್ ಸೆಡಾನ್ ಜೊತೆಗೆ ಮಾರಾಟ ಮಾಡಲಾಗುವುದು. ಹೊಸ ಹ್ಯುಂಡೈ ಕಾಂಪ್ಯಾಕ್ಟ್ ಸೆಡಾನ್‌ ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಡಿಜೈರ್, ಫೋರ್ಡ್ ಆಸ್ಪೈರ್, ಟಾಟಾ ಟಿಗೋರ್ ಹಾಗೂ ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ರೆನಾಲ್ಟ್ ಎಲ್‍ಬಿ‍ಎ ಕಾಂಪ್ಯಾಕ್ಟ್ ಸೆಡಾನ್ ಕಾರುಗಳಿಗೆ ಪೈಪೋಟಿ ನೀಡಲಿದೆ.

Source: autocarindia

Most Read Articles

Kannada
English summary
New Hyundai compact sedan spied in India - Read in kannada
Story first published: Monday, August 12, 2019, 12:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X