ಮಾರಾಟದಲ್ಲಿ ಟೊಯೊಟಾ ಕೊರೊಲ್ಲಾ ಕಾರನ್ನು ಹಿಂದಿಕ್ಕಿದ ಹೋಂಡಾ ಸಿವಿಕ್
ಹೋಂಡಾ ಕಾರ್‍ಸ್ ಇಂಡಿಯಾ ತಮ್ಮ ಹತ್ತನೆಯ ತಲೆಮಾರಿನ ಹೋಂಡಾ ಸಿವಿಕ್ ಕಾರಿನ ಖರೀದಿಗಾಗಿ ಇದೇ ವರ್ಷದ ಫೆಬ್ರುವರಿ ತಿಂಗಳಿನಿಂದ ಬುಕ್ಕಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದ್ದು, ಮಾರ್ಚ್ ತಿಂಗಳಿನಲ್ಲಿ ಬಿಡುಗಡೆ ಮಾಡಿತ್ತು. ಬಿಡುಗಡೆಗೂ ಮುನ್ನವೇ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಎಲ್ಲರ ಗಮನಸೆಳೆದಿದ್ದ ಈ ಕಾರು ಬಿಡುಗಡೆಯ ನಂತರವೂ ಅಷ್ಟೆ ಜನಪ್ರೀಯತೆಯನ್ನು ಪಡೆಯುತ್ತಿದೆ.

ಹತ್ತನೆಯ ತಲೆಮಾರಿನ ಹೋಂಡಾ ಸಿವಿಕ್ ಕಾರು ಬಿಡುಗಡೆಗೊಂಡ ಮೊದಲ ತಿಂಗಳಿನಲ್ಲಿಯೆ 2291 ಯೂನಿಟ್ ಮಾರಾಟಗೊಂಡು, ಅದೇ ತಿಂಗಳ ಆ ಪ್ರೀಮಿಯಂ ಸೆಡಾನ್ ಕಾರುಗಳ ಸೆಗ್ಮೆಂಟ್‍ನಲ್ಲಿ ಶೇಕಡ 80ರಷ್ಟು ಅಧಿಕವಾಗಿ ಮಾರಾಟಗೊಂಡು ದಾಖಲೆಯನ್ನು ಸೃಷ್ಠಿಸಿತ್ತು. ಹಾಗೆಯೆ ಕಳೆದ ನಾಲ್ಕು ತಿಂಗಳಿನಿಂದಲೂ ಸಹ ಮಾರಾಟದಲ್ಲಿ ತನ್ನ ಎದುರಾಳಿಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಹೋಂಡಾ ಸಿವಿಕ್ ಕಾರುಗಳು ಮಾರಾಟವಾಗುತ್ತಿದೆ.

ಜೂನ್ ತಿಂಗಳ ಪ್ರೀಮಿಯಂ ಸೆಡಾನ್ ಕಾರುಗಳ ಮಾರಾಟದಲ್ಲಿ 250 ಯೂನಿಟ್ ಮಾರಾಟವಾಗಿ ಹೋಂಡಾ ಸಿವಿಕ್ ಕಾರು ಮೊದಲನೆಯ ಸ್ಥಾನವನ್ನು ಪಡೆದಿದ್ದು, ಎರಡನೆಯ ಸ್ಥಾನದಲ್ಲಿ ಸ್ಕೊಡಾ ಆಕ್ಟೇವಿಯಾ 176 ಯೂನಿಟ್ ಮಾರಾಟಗೊಂಡಿದೆ. ಹಾಗೆಯೆ 90 ಯೂನಿಟ್ ಟೊಯೊಟಾ ಕೊರೊಲ್ಲಾ ಮತ್ತು 60 ಯೂನಿಟ್ ಹ್ಯುಂಡೈ ಎಲಾಂಟ್ರಾ ಕಾರುಗಳು ಮಾರಾಟವಾಗಿದೆ.

ಹೊಸ ಕಾರಿನ ಬೆಲೆ
ಹೋಂಡಾ ಸಿವಿಕ್ ಕಾರುಗಳು 3 ಪೆಟ್ರೋಲ್ ವೆರಿಯಂಟ್ ಹಾಗು ಎರಡು ಡೀಸೆಲ್ ವೇರಿಯಂಟ್‍ಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ.17.69 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ. ಆಸಕ್ತ ಗ್ರಾಹಕರು ಹತ್ತಿರದಲ್ಲಿರುವ ಹೋಂಡಾ ಡೀಲರ್‍ನ ಬಳಿ 31,000 ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಎಂಜಿನ್ ಸಾಮರ್ಥ್ಯ
2019ರ ಹೊಸ ಹೋಂಡಾ ಸಿವಿಕ್ ಕಾರು ಈ ಬಾರಿ ಎರಡು ಎಂಜಿನ್ ಮಾದರಿಗಳಲ್ಲಿ ಬಿಡುಗಡೆಗೊಂಡಿದೆ. ಪೆಟ್ರೋಲ್ ಮಾದರಿಯ ಹೋಂಡಾ ಸಿವಿಕ್ ಕಾರು 1.8 ಲೀಟರ್ 4 ಸಿಲೆಂಡರ್ ಎಂಜಿನ್ ಸಹಾಯದಿಂದ 139ಬಿಹೆಚ್‍ಪಿ ಮತ್ತು 174ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಪಡೆದುಕೊಂಡಿದೆ. ಪೆಟ್ರೋಲ್ ಎಂಜಿನ್ ಅನ್ನು ಸಿವಿಟಿ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಇನ್ನು ಡೀಸೆಲ್ ಮಾದರಿಯ ಹೋಂಡಾ ಸಿವಿಕ್ ಕಾರುಗಳು 1.6 ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಸಹಾಯದಿಂದ 118ಬಿಹೆಚ್‍ಪಿ ಮತ್ತು 300ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಮೈಲೇಜ್
ಹೀಗಾಗಿ ಸುಧಾರಿತ ತಂತ್ರಜ್ಞಾನಗಳ ಅಳವಡಿಕೆಯಲ್ಲಿ ಒಂದು ಹೆಜ್ಜೆ ಮುನ್ನಡೆ ಸಾಧಿಸಿರುವ ಹೋಂಡಾ ಸಂಸ್ಥೆಯು ಹೊಸ ಸಿವಿಕ್ ಕಾರುಗಳ ಇಂಧನ ಕಾರ್ಯಕ್ಷಮತೆಯನ್ನು ಹೆಚ್ಚಿಸಿದ್ದು, 47 ಲೀಟರ್ ಇಂಧನ ಟ್ಯಾಂಕ್ ಸೌಲಭ್ಯದೊಂದಿಗೆ ಪ್ರತಿ ಲೀಟರ್ ಪೆಟ್ರೋಲ್‌ಗೆ 16.5 ಕಿ.ಮಿ ಮತ್ತು ಪ್ರತಿ ಲೀಟರ್ ಡೀಸೆಲ್‌ಗೆ 26.8 ಕಿಮಿ ಮೈಲೇಜ್ ನೀಡುವುದಾಗಿ ಹೇಳಿಕೊಂಡಿದೆ.

ಇನ್ನು ಹೊಸ ಕಾರುಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಎಬಿಎಸ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಇಬಿಡಿ, ಲಾರ್ಜ್ ಕ್ರೋಮ್ ಗ್ರಿಲ್, 17-ಇಂಚಿನ ಅಲಾಯ್ ಚಕ್ರಗಳು ಮತ್ತು 8 ಏರ್ ಬ್ಯಾಗ್ ವ್ಯವಸ್ಥೆ ಇರುವುದು ಸೆಡಾನ್ ಪ್ರಿಯರ ಆಯ್ಕೆಗೆ ಮತ್ತೊಂದು ಪ್ಲಸ್ ಪಾಯಿಂಟ್ ಆಗಲಿದೆ.

ಹಾಗೆಯೇ ಹೊಸ ಕಾರು 4,656-ಎಂಎಂ ಉದ್ದ, 1,799-ಎಂಎಂ ಅಗಲ, 1,433-ಎಂಎಂ ಎತ್ತರ, 2,700-ಎಂಎಂ ವೀಲ್ಹ್ ಬೆಸ್ ಮತ್ತು 170-ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ಲ್ಯಾಟಿನಂ ವೈಟ್ ಪರ್ಲ್, ರೆಡಿಯೆಂಟ್ ರೆಡ್, ಮಾರ್ಡನ್ ಸ್ಟೀಲ್, ಲೌನರ್ ಸಿಲ್ವರ್ ಮತ್ತು ಗೋಲ್ಡನ್ ಬ್ರೌನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.


Click it and Unblock the Notifications








