ಹೊಸ ಫೀಚರ್‍‍ಗಳೊಂದಿಗೆ ಬರಲಿದೆ 2020 ಟೊಯೊಟಾ ಇನೊವಾ ಕ್ರಿಸ್ಟಾ

ಜಪಾನ್ ಮೂಲದ ವಾಹನ ತಯಾರಕ ಟೊಯೊಟಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿರುವ ತನ್ನ ಪ್ರಮುಖ ಕಾರ್ ಆದ ಇನೊವಾ ಕ್ರಿಸ್ಟಾವನ್ನು ಕೆಲವು ಬದಲಾವಣೆಗಳೊಂದಿಗೆ ಮುಂದಿನ ವರ್ಷ ಬಿಡುಗಡೆಗೊಳಿಸಲು ಯೋಜಿಸಿದೆ.

ಹೊಸ ಫೀಚರ್‍‍ಗಳೊಂದಿಗೆ ಬರಲಿದೆ 2020 ಟೊಯೊಟಾ ಇನೊವಾ ಕ್ರಿಸ್ಟಾ

ನವೀಕರಣಗೊಂಡಿರುವ 2020ರ ಇನೊವಾ ಕ್ರಿಸ್ಟಾ ಕಾರಿನ ಅನಾವರಣವು ಇನ್ನೂ ಬಹು ದೂರವಿದ್ದರೂ, ಇಂಡಿಯನ್ ಆಟೋ ಬ್ಲಾಗ್ ಈ ಕಾರು ಹೇಗಿರಲಿದೆ ಎಂಬುದನ್ನು ತೋರಿಸಲು ಗ್ರಾಫಿಕ್ಸ್ ನಲ್ಲಿ ಚಿತ್ರವೊಂದನ್ನು ಬಿಡುಗಡೆಗೊಳಿಸಿದೆ.

ಹೊಸ ಫೀಚರ್‍‍ಗಳೊಂದಿಗೆ ಬರಲಿದೆ 2020 ಟೊಯೊಟಾ ಇನೊವಾ ಕ್ರಿಸ್ಟಾ

ಇನೊವಾ ಕ್ರಿಸ್ಟಾ, ಭಾರತದಲ್ಲಿ ಹೆಚ್ಚು ಮಾರಾಟವಾಗುವ ಟೊಯೊಟಾ ಕಂಪನಿಯ ಜನಪ್ರಿಯ ವಾಹನವಾಗಿದೆ. ಪ್ರತಿ ತಿಂಗಳು ಈ ಕಾರಿನ ಸರಾಸರಿ 6,000 ಯುನಿಟ್‍‍ಗಳು ಮಾರಾಟವಾಗುತ್ತವೆ. ಆಟೋಮೊಬೈಲ್ ಉದ್ಯಮದಲ್ಲಿನ ಹಿಂಜರಿತದ ಕಾರಣಕ್ಕೆ ಈ ವಾಹನದ ಮಾರಾಟವು 6%ನಷ್ಟು ಕುಸಿತಗೊಂಡು, 2019ರ ಹಣಕಾಸು ವರ್ಷದಲ್ಲಿ 74,137 ಯುನಿಟ್‍‍ಗಳು ಮಾರಾಟವಾಗಿವೆ.

ಹೊಸ ಫೀಚರ್‍‍ಗಳೊಂದಿಗೆ ಬರಲಿದೆ 2020 ಟೊಯೊಟಾ ಇನೊವಾ ಕ್ರಿಸ್ಟಾ

ಟೊಯೊಟಾ ಕಂಪನಿಯು ಮಾರುಕಟ್ಟೆಯಲ್ಲಿರುವ ಇನೊವಾ ಕ್ರಿಸ್ಟಾ ಕಾರ್ ಅನ್ನು ನವೀಕರಣಗೊಳಿಸಿ, ಎಂ‍‍ಪಿ‍‍ವಿ ಸೆಗ್‍‍ಮೆಂಟಿನಲ್ಲಿರುವ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಲು ಬಯಸಿದೆ. ಹೊಸ ತಲೆಮಾರಿನ ಇನೊವಾ ಕಾರ್ ಅನ್ನು ಹಲವು ವರ್ಷಗಳ ನಂತರ ಬಿಡುಗಡೆಗೊಳಿಸಲಿದೆ.

ಹೊಸ ಫೀಚರ್‍‍ಗಳೊಂದಿಗೆ ಬರಲಿದೆ 2020 ಟೊಯೊಟಾ ಇನೊವಾ ಕ್ರಿಸ್ಟಾ

ನವೀಕೃತ ಟೊಯೊಟಾ ಇನೊವಾ ಕ್ರಿಸ್ಟಾ ಕಾರು ಗ್ರಾಫಿಕ್ಸ್ ನಲ್ಲಿ ತೋರಿಸಲಾದಂತೆ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಹೊಂದಿರುವ ಸಾಧ್ಯತೆಗಳಿವೆ. ಇದು ನವೀಕರಿಸಿದ, ಪೂರ್ಣ ಪ್ರಮಾಣದ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಸ ವಿನ್ಯಾಸದಲ್ಲಿ ಹೊಂದಿರಲಿದೆ.

ಹೊಸ ಫೀಚರ್‍‍ಗಳೊಂದಿಗೆ ಬರಲಿದೆ 2020 ಟೊಯೊಟಾ ಇನೊವಾ ಕ್ರಿಸ್ಟಾ

ರೇಡಿಯೇಟರ್ ಗ್ರಿಲ್ ಸಹ ಸ್ವಲ್ಪ ಬದಲಾವಣೆಯನ್ನು ಹೊಂದಿರಲಿದೆ. ಮುಂಭಾಗದ ಬಂಪರ್ ಹೊಸ ಲುಕ್ ಹೊಂದಿರಲಿದೆ. ಗ್ರಾಫಿಕ್ಸ್ ಚಿತ್ರದಲ್ಲಿ ತೋರಿಸಿದಂತೆ ಟ್ರಾಂಗ್ಯುಲರ್ ಶೇಪಿನ ಹೊಸ ವಿನ್ಯಾಸದ ಫಾಗ್ ಲ್ಯಾಂಪ್‍‍ಗಳಿರಲಿವೆ. ಸೈಡ್‍‍ಗಳಲ್ಲಿ ಅಲಾಯ್ ವ್ಹೀಲ್‍‍ಗಳ ಹೊಸ ಸೆಟ್ ಇರಲಿದೆ.

ಹೊಸ ಫೀಚರ್‍‍ಗಳೊಂದಿಗೆ ಬರಲಿದೆ 2020 ಟೊಯೊಟಾ ಇನೊವಾ ಕ್ರಿಸ್ಟಾ

ಹಿಂಭಾಗದಲ್ಲಿರುವ ಬಂಪರ್ ಟೇಲ್ ಲ್ಯಾಂಪ್‌ಗಳನ್ನು ಸ್ವಲ್ಪ ಪ್ರಮಾಣದಲ್ಲಿ ತಿರುಚಲಾಗುವುದು. ಹೊಸ ಲುಕ್‍‍ಗಳ ಜೊತೆಗೆ, ಹೊಸ ಟೊಯೊಟಾ ಇನೊವಾ ಕ್ರಿಸ್ಟಾ ಹಲವು ಆರಾಮದಾಯಕ ಹಾಗೂ ಹೊಸ ಫೀಚರ್‍‍ಗಳನ್ನು ಹೊಂದಿರುತ್ತದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಹೊಸ ಫೀಚರ್‍‍ಗಳೊಂದಿಗೆ ಬರಲಿದೆ 2020 ಟೊಯೊಟಾ ಇನೊವಾ ಕ್ರಿಸ್ಟಾ

ನವೀಕೃತ ಇನೊವಾ ಕ್ರಿಸ್ಟಾ ಮಾರುಕಟ್ಟೆಯಲ್ಲಿರುವ ಮಾದರಿಯಲ್ಲಿರುವುದಕ್ಕಿಂತ ಭಿನ್ನವಾದ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಹೊಂದಿರಲಿದೆ. ಈ ಇನ್ಫೋಟೇನ್‍‍ಮೆಂಟ್ ಸಿಸ್ಟಂನಲ್ಲಿ ಆಪಲ್ ಕಾರ್‍‍ಪ್ಲೇ ಹಾಗೂ ಆಂಡ್ರಾಯ್ಡ್ ಆಟೋಗಳಿರಲಿವೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಹೊಸ ಫೀಚರ್‍‍ಗಳೊಂದಿಗೆ ಬರಲಿದೆ 2020 ಟೊಯೊಟಾ ಇನೊವಾ ಕ್ರಿಸ್ಟಾ

ಬೇರೆ ದೇಶಗಳಲ್ಲಿ ಮಾರಾಟವಾಗುತ್ತಿರುವ ಇನೊವಾ ಕ್ರಿಸ್ಟಾ ಎಂಪಿವಿಯ ಇನ್ಫೋಟೇನ್‍‍ಮೆಂಟ್ ಸಿಸ್ಟಂನಲ್ಲಿ ಆಪಲ್ ಕಾರ್‍‍ಪ್ಲೇ ಹಾಗೂ ಆಂಡ್ರಾಯಿಡ್ ಆಟೋಗಳನ್ನು ಹೆಚ್ಚುವರಿಯಾಗಿ ಅಳವಡಿಸಲಾಗಿದೆ.

MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಹೊಸ ಫೀಚರ್‍‍ಗಳೊಂದಿಗೆ ಬರಲಿದೆ 2020 ಟೊಯೊಟಾ ಇನೊವಾ ಕ್ರಿಸ್ಟಾ

ಹೊಸ ತಲೆಮಾರಿನ ಟೊಯೊಟಾ ಇನೊವಾ ಕ್ರಿಸ್ಟಾ ಎಂಪಿವಿಯಲ್ಲಿ ಸಾಂಪ್ರದಾಯಿಕ ಡೀಸೆಲ್ ಎಂಜಿನ್ ಬದಲಿಗೆ ಹೈಬ್ರಿಡ್ ಎಂಜಿನ್ ಅಳವಡಿಸುವ ಬಗ್ಗೆ ವರದಿಯಾಗಿದೆ. ಕಂಪನಿಯು ಪರಿಸರ ಸ್ನೇಹಿ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಡೀಸೆಲ್ ಎಂಜಿನ್‌ಗಳ ಬದಲಿಗೆ ಹೈಬ್ರಿಡ್ ಎಂಜಿನ್‍ ವಾಹನಗಳನ್ನು ಬಿಡುಗಡೆಗೊಳಿಸುವತ್ತ ಹೆಜ್ಜೆ ಹಾಕುತ್ತಿದೆ.

ಹೊಸ ಫೀಚರ್‍‍ಗಳೊಂದಿಗೆ ಬರಲಿದೆ 2020 ಟೊಯೊಟಾ ಇನೊವಾ ಕ್ರಿಸ್ಟಾ

ಆದರೆ ಟೊಯೊಟಾ ಕಂಪನಿಯ ಹೆಚ್ಚಿನ ಎಂಪಿವಿ, ಎಸ್‌ಯುವಿ ಹಾಗೂ ಪಿಕಪ್ ಟ್ರಕ್‌ಗಳು ಇನ್ನೂ ಡೀಸೆಲ್ ಎಂಜಿನ್‌ಗಳಾಗಿವೆ. ಟೊಯೊಟಾ ಕಂಪನಿಯು ಕಳೆದ ವರ್ಷದಿಂದ ಯುರೋಪ್‍‍ನಲ್ಲಿ ಡೀಸೆಲ್ ಎಂಜಿನ್ ಪ್ರಯಾಣಿಕ ವಾಹನಗಳನ್ನು ಹಂತಹಂತವಾಗಿ ಸ್ಥಗಿತಗೊಳಿಸುತ್ತಿದೆ.

Source: IAB

Most Read Articles

Kannada
Read more on ಟೊಯೊಟಾ toyota
English summary
New innova crysta 2020 facelift expected to launch next year - Read in Kannada
Story first published: Monday, October 28, 2019, 11:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X