ಇಸುಝು ವಿ-ಕ್ರಾಸ್ 1.9-ಡೀಸೆಲ್ ಆಟೋಮ್ಯಾಟಿಕ್ ವರ್ಷನ್ ಭಾರತದಲ್ಲೂ ಬಿಡುಗಡೆ

ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಈಗಾಗಲೇ ಬಿಡುಗಡೆಯಾಗಿ ಮಾರಾಟಗೊಳ್ಳುತ್ತಿರುವ ಇಸುಝು ವಿ-ಕ್ರಾಸ್ ಪಿಕ್ ಅಪ್ ಟ್ರಕ್ ಆಟೋಮ್ಯಾಟಿಕ್ ಮಾದರಿಯನ್ನು ಇದೇ ಮೊದಲ ಬಾರಿಗೆ ಭಾರತದಲ್ಲೂ ಬಿಡುಗಡೆಗೊಳಿಸಲಾಗಿದ್ದು, ಹೊಸ ಪಿಕ್ ಅಪ್ ಟ್ರಕ್ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.19.99 ಲಕ್ಷಕ್ಕೆ ಬೆಲೆ ನಿಗದಿಪಡಿಸಲಾಗಿದೆ.

ಇಸುಝು ವಿ-ಕ್ರಾಸ್ 1.9-ಡೀಸೆಲ್ ಆಟೋಮ್ಯಾಟಿಕ್ ವರ್ಷನ್ ಭಾರತದಲ್ಲೂ ಬಿಡುಗಡೆ

ವಿ-ಕ್ರಾಸ್ ಜೆಡ್-ಪ್ರೆಸ್ಟಿಜ್ ಆವೃತ್ತಿಯು 1.9-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯವನ್ನು ಹೊಂದಿದ್ದು, ಲಿಮಿಟೆಡ್ ಆವೃತ್ತಿಯಾಗಿರುವ ವಿ-ಕ್ರಾಸ್ ಜೆಡ್-ಪ್ರೆಸ್ಟಿಜ್ ಮಾದರಿಯು ಸಾಮಾನ್ಯ ಮಾದರಿಯ ಡಿ-ಮ್ಯಾಕ್ಸ್ ವಿ-ಕ್ರಾಸ್ ಆವೃತ್ತಿಗಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯಗಳೊಂದಿಗೆ ಕ್ಲಾಸ್ ಲಿಡಿಂಗ್ ಪ್ರೀಮಿಯಂ ಸೌಲಭ್ಯಗಳ ಜೋಡಣೆಯನ್ನು ಹೊಂದಿದೆ.

ಇಸುಝು ವಿ-ಕ್ರಾಸ್ 1.9-ಡೀಸೆಲ್ ಆಟೋಮ್ಯಾಟಿಕ್ ವರ್ಷನ್ ಭಾರತದಲ್ಲೂ ಬಿಡುಗಡೆ

ಹೊಸ ಎಂಜಿನ್ ಮಾದರಿಯು 150-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಐಷಾರಾಮಿ ಪಿಕ್ ಅಪ್ ಟ್ರಕ್ ಬಳಕೆ ಮಾಡುವ ಗ್ರಾಹಕರನ್ನು ಸೆಳೆಯಲಿದ್ದು, ಆಫ್ ರೋಡ್ ಪ್ರಿಯರ ಆಯ್ಕೆಯನ್ನು ಹೆಚ್ಚಿಸಲಿದೆ.ಈ ಮೂಲಕ ಡಿ-ಮ್ಯಾಕ್ಸ್ ವಿ-ಕ್ರಾಸ್ ಮಾದರಿಯಲ್ಲಿ ಒಟ್ಟು ಮೂರು ವೆರಿಯೆಂಟ್ ಖರೀದಿಗೆ ಲಭ್ಯವಿರಲಿದ್ದು, ಈ ಹಿಂದಿನ ಸ್ಟಾಂಡರ್ಡ್, ಜೆಡ್ ಮಾದಿಯೊಂದಿಗೆ ಇದೀಗ ಜೆಡ್-ಪ್ರೆಸ್ಟಿಜ್ ಮಾದರಿಯು ಸೀಮಿತ ಅವಧಿಗಾಗಿ ಬಿಡುಗಡೆಯಾಗಿದೆ.

ಇಸುಝು ವಿ-ಕ್ರಾಸ್ 1.9-ಡೀಸೆಲ್ ಆಟೋಮ್ಯಾಟಿಕ್ ವರ್ಷನ್ ಭಾರತದಲ್ಲೂ ಬಿಡುಗಡೆ

ಇನ್ನು ಜಪಾನ್ ಆಟೋ ಉತ್ಪಾದನಾ ಸಂಸ್ಥೆಯಾದ ಇಸುಝು ಇಂಡಿಯಾ ತನ್ನ ಜನಪ್ರಿಯ ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ ಅಪ್ ಟ್ರಕ್ ಹೊಸ ಆವೃತ್ತಿಯನ್ನು ಕಳೆದ ಕೆಲತಿಂಗಳ ಹಿಂದಷ್ಟೇ ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಯು ಮಹತ್ವದ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಇಸುಝು ವಿ-ಕ್ರಾಸ್ 1.9-ಡೀಸೆಲ್ ಆಟೋಮ್ಯಾಟಿಕ್ ವರ್ಷನ್ ಭಾರತದಲ್ಲೂ ಬಿಡುಗಡೆ

ಡಿ-ಮ್ಯಾಕ್ ವಿ-ಕ್ರಾಸ್ ಮಾದರಿಯು ಈ ಬಾರಿ ಸ್ಟ್ಯಾಂಡರ್ಡ್ ಮತ್ತು ಹೈ ಗ್ರೇಡ್(ಜೆಡ್) ಎನ್ನುವ ಎರಡು ವೆರಿಯೆಂಟ್‌ಗಳನ್ನು ಪರಿಚಯಿಸಿದ್ದು, ಹೊಸ ವಿನ್ಯಾಸದ ಮುಂಭಾಗದ ಗ್ರಿಲ್ ಸೇರಿದಂತೆ ಒಟ್ಟು 20ಕ್ಕೂ ಹೆಚ್ಚು ಹೊಸ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.ಹೈ ಎಂಡ್ ವೆರಿಯೆಂಟ್‌ನಲ್ಲಿ ಸುಧಾರಿತ ಮಾದರಿಯ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 3ಡಿ ಡಿಸೈನ್ ಪ್ರೇರಿತ ಗೇರ್ ಶಿಫ್ಟ್ ಇಂಡಿಕೇಟರ್, ಪಿಯಾನೋ ಬ್ಲ್ಯಾಕ್ ಗಾರ್ನಿಷ್ ಡ್ಯಾಶ್‌ಬೋರ್ಡ್, ಪ್ಯಾಸಿವ್ ಎಂಟ್ರಿ ಮತ್ತು ಸ್ಟಾರ್ಟ್/ಸ್ಟಾಪ್ ಸಿಸ್ಟಂ ಜೋಡಿಸಲಾಗಿದ್ದು, ಗುಣಮಟ್ಟದ ಲೆದರ್ ಸೀಟುಗಳು, ಏಳು ಇಂಚಿನ ಟಚ್ ಸ್ಕ್ರೀನ್ ಆಡಿಯೋ ಸಿಸ್ಟಂ, ಯುಎಸ್‌ಬಿ ಇನ್‌ಪುಟ್, ಡಿವಿಡಿ, ಆಕ್ಸ್, ಐಪಾಡ್, ಬ್ಲ್ಯೂ‌ಟೂಥ್ ಕನೆಕ್ಟಿವಿಟಿ ಸೌಲಭ್ಯ ಹೊಂದಿದೆ.

ಇಸುಝು ವಿ-ಕ್ರಾಸ್ 1.9-ಡೀಸೆಲ್ ಆಟೋಮ್ಯಾಟಿಕ್ ವರ್ಷನ್ ಭಾರತದಲ್ಲೂ ಬಿಡುಗಡೆ

ಇದಲ್ಲದೇ ಹೊಸ ಸುರಕ್ಷಾ ನಿಯಮಾವಳಿಗೆ ಅನುಗುಣವಾಗಿ ಹೊಸ ಡಿ-ಮ್ಯಾಕ್ಸ್ ವಿ-ಕ್ರಾಸ್‌ನಲ್ಲಿ ಡ್ರೈವರ್ ಸೀಟ್ ಬೆಲ್ಟ್ ರಿಮೆಂಡರ್, ಸ್ಪೀಡ್ ಅಲರ್ಟ್, ಲೋಡ್ ಲಿಮಿಟ್ ಅಲರ್ಟ್, ಆಟೋ ಡೋರ್ ಲಾಕ್, ಹಿಲ್ ಸ್ಟಾರ್ಟ್ ಅಸಿಸ್ಟ್ ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ ಸೌಲಭ್ಯವು ಇದರಲ್ಲಿದೆ.

ಇಸುಝು ವಿ-ಕ್ರಾಸ್ 1.9-ಡೀಸೆಲ್ ಆಟೋಮ್ಯಾಟಿಕ್ ವರ್ಷನ್ ಭಾರತದಲ್ಲೂ ಬಿಡುಗಡೆ

ಈ ಮೊದಲ ಫೇಸ್‌ಲಿಫ್ಟ್ ಆವೃತ್ತಿಯು ಬಿಎಸ್-6 ಎಂಜಿನ್ ಹೊಂದಿರುತ್ತೆ ಎಂದು ಹೇಳಲಾಗಿತ್ತಾದರೂ ಇಸುಝು ಮಾತ್ರ ಈ ಹಿಂದೆನಂತೆಯೇ ಬಿಎಸ್-4 ಎಂಜಿನ್ ಮಾದರಿಯನ್ನೇ ಮುಂದುವರಿಸಿದ್ದು, 2020ರ ಆರಂಭದಲ್ಲಿ ಬಿಎಸ್-6 ಎಂಜಿನ್ ಅನ್ನು ಉನ್ನತಿಕರಿಸಲಿದೆಯೆಂತೆ.

ಇಸುಝು ವಿ-ಕ್ರಾಸ್ 1.9-ಡೀಸೆಲ್ ಆಟೋಮ್ಯಾಟಿಕ್ ವರ್ಷನ್ ಭಾರತದಲ್ಲೂ ಬಿಡುಗಡೆ

ಹೊಸದಾಗಿ ಬಿಡುಗಡೆಯಾಗಿರುವ 1.9-ಲೀಟರ್ ಡೀಸೆಲ್ ಎಂಜಿನ್ ಜೊತೆಗೆ 2.5-ಲೀಟರ್ ಸಾಮರ್ಥ್ಯದ ಹೈ ಪ್ರೆಷರ್ ಕಾಮನ್ ರೈಲ್ ಫ್ಯೂಲ್ ಇಂಜೆಕ್ಷನ್ ಡೀಸೆಲ್ ಎಂಜಿನ್ ಅನ್ನು ಕೂಡಾ ಆಯ್ಕೆ ಮಾಡಬಹುದಾಗಿದ್ದು, 134-ಬಿಎಚ್‌ಪಿ ಮತ್ತು 320-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಇಸುಝು ವಿ-ಕ್ರಾಸ್ 1.9-ಡೀಸೆಲ್ ಆಟೋಮ್ಯಾಟಿಕ್ ವರ್ಷನ್ ಭಾರತದಲ್ಲೂ ಬಿಡುಗಡೆ

ಹೊಸ ಆವೃತ್ತಿ ಗಮನಸೆಳೆಯುವ ವಿಚಾರ ಅಂದ್ರೆ, ಫೇಸ್‌ಲಿಸ್ಟ್ ಡಿ-ಮ್ಯಾಕ್ಸ್ ವಿ-ಕ್ರಾಸ್ ಮಾದರಿಯು ಈ ಬಾರಿ ಆಫ್ ರೋಡ್ ಚಾಲನಾ ಕೌಶಲ್ಯಕ್ಕೆ ಮತ್ತಷ್ಟು ಸಹಕಾರಿಯಾಗುವಂತೆ ಆಲ್ ವೀಲ್ಹ್ ಡ್ರೈವ್(4DW) ಟೆಕ್ನಾಲಜಿಯೊಂದಿಗೆ ಉದ್ದಳತೆ ಮತ್ತು ಗ್ರೌಂಡ್ ಕ್ಲಿಯೆರೆನ್ಸ್ ಹೆಚ್ಚಿಸಲಾಗಿದೆ.

ಇಸುಝು ವಿ-ಕ್ರಾಸ್ 1.9-ಡೀಸೆಲ್ ಆಟೋಮ್ಯಾಟಿಕ್ ವರ್ಷನ್ ಭಾರತದಲ್ಲೂ ಬಿಡುಗಡೆ

ಇಸುಝು ಸಂಸ್ಥೆಯು ಇದೇ ಮೊದಲ ಬಾರಿಗೆ ಫೇಸ್‌ಲಿಸ್ಟ್ ಡಿ-ಮ್ಯಾಕ್ಸ್ ವಿ-ಕ್ರಾಸ್ ಮಾದರಿಯಲ್ಲಿ ಐಜಿಆರ್‌ಐಪಿ(ಇಸುಝು ಗ್ರ್ಯಾವಿಟಿ ರೆಸ್ಪಾನ್ಸ್ ಇಂಟಲಿಜೆಂಟ್ ಪ್ಲ್ಯಾಟ್‌ಫಾರ್ಮ್) ಚಾರ್ಸಿಸ್ ಮೇಲೆ ನಿರ್ಮಾಣ ಮಾಡಲಾಗಿದ್ದು, ಇದು ಹೈ ಸ್ಪೀಡ್ ಜೊತೆ ಕಡಿದಾದ ತಿರುವುಗಳಲ್ಲೂ ಸಹ ಒಂದೇ ಸಮನಾದ ಸಮತೋಲನ ಕಾಯ್ದುಕೊಳ್ಳಬಹುದು.

More from DriveSpark

Article Published On: Tuesday, August 20, 2019, 17:20 [IST]
English summary
New Isuzu V-Cross Diesel Automatic Launched In India At Rs 19.99 Lakh.
Read more on ಇಸುಝು isuzu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+