ಬಿಡುಗಡೆಯಾಗಲಿರುವ ಹೊಸ ಬಲೆನೊ ಫೇಸ್‍ಲಿಫ್ಟ್ ಕಾರಿನಲ್ಲಿ ಏನೆಲ್ಲಾ ಫೀಚರ್ಸ್ ಇದೆ ಗೊತ್ತಾ.?

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿಯು ನಿರಂತರವಾಗಿ ತಮ್ಮ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಲೇ ಇದೆ. ಸಂಸ್ಥೆಯು ಸಿಯಾಜ್ ಫೇಸ್‍ಲಿಫ್ಟ್ ಕಾರನ್ನು ಬಿಡುಗಡೆ ಮಾಡಿದ ನಂತರ ಹೊಸ ತಲೆಮಾರಿನ ಎರ್ಟಿಗಾ ಮತ್ತು ಶೀಘ್ರವೇ ಮುಂದಿನ ತಲೆಮಾರಿನ ವ್ಯಾಗನಾರ್ ಕಾರನ್ನು ಬಿಡುಗಡೆಗೊಳಿಸಲಿದೆ.

ಬಿಡುಗಡೆಯಾಗಲಿರುವ ಹೊಸ ಬಲೆನೊ ಫೇಸ್‍ಲಿಫ್ಟ್ ಕಾರಿನಲ್ಲಿ ಏನೆಲ್ಲಾ ಫೀಚರ್ಸ್ ಇದೆ ಗೊತ್ತಾ.?

ಈ ನಿಟ್ಟಿನಲ್ಲಿ ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಜನಪ್ರಿಯ ಬಲೆನೊ ಕಾರಿನ ಫೇಸ್‍ಲಿಫ್ಟ್ ಮಾದರಿಯನ್ನು ಸಹ ಬಿಡುಗಡೆಗೊಳಿಸುತ್ತಿದ್ದು, ಗ್ರಾಹಕರ ನಿರಿಕ್ಷೆಯ ಅನುಸಾರ ಸಂಸ್ಥೆಯು ಹೊಸ ಕಾರಿನ ಬುಕ್ಕಿಂಗ್ ಪ್ರಕ್ರಿಯೆಯನ್ನು ಕೂಡಾ ಪ್ರಾರಂಭಿಸಿದೆ. ಆಸಕ್ತ ಗ್ರಾಹಕರು ಹೊಸ ಮಾರುತಿ ಸುಜುಕಿ ಬಲೆನೊ ಫೇಸ್‍ಲಿಫ್ಟ್ ಕಾರಿನ ಖರೀದಿಗಾಗಿ ನಿಮ್ಮ ಸಮೀಪದಲ್ಲಿರುವ ಡೀಲರ್‍ ಬಳಿ ರೂ. 11,000 ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಬಿಡುಗಡೆಯಾಗಲಿರುವ ಹೊಸ ಬಲೆನೊ ಫೇಸ್‍ಲಿಫ್ಟ್ ಕಾರಿನಲ್ಲಿ ಏನೆಲ್ಲಾ ಫೀಚರ್ಸ್ ಇದೆ ಗೊತ್ತಾ.?

ಮಾರುತಿ ಸುಜುಕಿ ಸಂಸ್ಥೆಯು ಶೀಘ್ರವೇ ತಮ್ಮ ಬಲೆನೊ ಫೇಸ್‍ಲಿಫ್ಟ್ ಮದರಿಯನ್ನು ಬಿಡುಗಡೆಗೊಳಿಸಲಿದ್ದು, ಫೆಬ್ರವರಿ 1 ರಿಂದ ಬುಕ್ಕಿಂಗ್ ಮಾಡಿಕೊಂಡ ಗ್ರಾಹಾಕರಿಗೆ ಹೊಸ ಕಾರನ್ನು ಡೆಲಿವರಿ ಮಾಡಲಿದೆಯಂತೆ. ಅಷ್ಟೆ ಅಲ್ಲದೇ ಈ ಕಾರು ಟೊಯೊಟಾ ಸಂಸ್ಥೆಯ ಬ್ಯಾಡ್ಜಿಂಗ್‍ನೊಂದಿಗೆ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಕೂಡಾ ಮಾಹಿತಿ ಲಭ್ಯವಾಗಿದೆ.

ಬಿಡುಗಡೆಯಾಗಲಿರುವ ಹೊಸ ಬಲೆನೊ ಫೇಸ್‍ಲಿಫ್ಟ್ ಕಾರಿನಲ್ಲಿ ಏನೆಲ್ಲಾ ಫೀಚರ್ಸ್ ಇದೆ ಗೊತ್ತಾ.?

ಮಾರುತಿ ಸುಜುಕಿ ಸಂಸ್ಥೆಯು ಬಲೆನೊ ಮಾದರಿಗಳನ್ನು ಮತ್ತಷ್ಟು ಉನ್ನತ ದರ್ಜೆಯಲ್ಲಿ ಪರಿಚಯಿಸಲು ಯೋಜನೆ ರೂಪಿಸಲಾಗಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಫೇಸ್‌ಲಿಫ್ಟ್ ಬಲೆನೊ ಮಾದರಿಯನ್ನು ಸಂಸ್ಥೆಯ ಹಾರ್ಟ್‍‍‍ಟೆಕ್ಟ್ ಪ್ಲಾಟ್‍ಫಾರ್ಮ್‍ನ ಅಡಿಯಲ್ಲಿ ಸಿದ್ದಗೊಳಿಸಲಾಗುತ್ತಿದೆ.

ಬಿಡುಗಡೆಯಾಗಲಿರುವ ಹೊಸ ಬಲೆನೊ ಫೇಸ್‍ಲಿಫ್ಟ್ ಕಾರಿನಲ್ಲಿ ಏನೆಲ್ಲಾ ಫೀಚರ್ಸ್ ಇದೆ ಗೊತ್ತಾ.?

ಫೀಚರ್‍‍ಗಳು

ಟೀಂ ಬಿಹೆಚ್‍ಪಿ ವರದಿ ಪ್ರಕಾರ 2019ರ ಹೊಸ ಬಲೆನೊ ಫೇಸ್‍ಲಿಫ್ಟ್ ಕಾರು ಪ್ರಸ್ತುತ ಮಾದರಿಯ ಕಾರಿನಂತೆಯೆ ವಿನ್ಯಾಸವನ್ನು ಪಡೆದುಕೊಳ್ಳಲಿದ್ದು, ಹೊಸ ಬಂಪರ್‍‍ನಲ್ಲಿ ರೆಕ್ಟಾಂಗ್ಯುಲರ್ ಏರ್ ಡ್ಯಾಮ್, ಹೊಸ ಫಾಗ್ ಲ್ಯಾಂಪ್ ಅನ್ನು ವಿನೂತನವಾಗಿ ಪಡೆದುಕೊಳ್ಳಲಿದೆ. ಮತ್ತು ಕಾರಿನ ಒಳಭಾಗವನ್ನು ಸಹ ಪ್ರೀಮಿಯಂ ಸೌಲಭ್ಯವನ್ನು ಒದಗಿಸುವ ಹಾಗೆ ವಿನ್ಯಾಸ ಮಾಡಲಗಿರುತ್ತದೆ ಎನ್ನಲಾಗಿದೆ.

ಬಿಡುಗಡೆಯಾಗಲಿರುವ ಹೊಸ ಬಲೆನೊ ಫೇಸ್‍ಲಿಫ್ಟ್ ಕಾರಿನಲ್ಲಿ ಏನೆಲ್ಲಾ ಫೀಚರ್ಸ್ ಇದೆ ಗೊತ್ತಾ.?

ಇಷ್ಟೆ ಅಲ್ಲದೇ ಕಾರಿನ ಒಳಭಾಗದಲ್ಲಿ ಆಪಲ್ ಕಾರ್‍‍ಪ್ಲೇ ಮತ್ತು ಆಂಡ್ಯಾಯ್ಡ್ ಆಟೋ ಸಪೋರ್ಟ್ ಮಾಡುವ ಸ್ಮಾರ್ಟ್‍ಪ್ಲೇ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಪಡೆದುಕೊಳ್ಳಲಿದೆ ಎನ್ನಲಾಗಿದ್ದು, ಇವುಗಳನ್ನು ಹೊರತುಪಡಿಸಿ ರಿಫ್ರೆಶ್ಡ್ ಬ್ಲಾಕ್ ಮತ್ತು ಬ್ಲೂ ಎಂಬ ಬಣ್ಣಗಳಲ್ಲಿ ಲಭ್ಯವಿರಲಿದೆ.

ಬಿಡುಗಡೆಯಾಗಲಿರುವ ಹೊಸ ಬಲೆನೊ ಫೇಸ್‍ಲಿಫ್ಟ್ ಕಾರಿನಲ್ಲಿ ಏನೆಲ್ಲಾ ಫೀಚರ್ಸ್ ಇದೆ ಗೊತ್ತಾ.?

ವೇರಿಯಂಟ್‍ಗಳು

ಹೊಸ ಬಲೆನೊ ಫೇಸ್‍ಲಿಫ್ಟ್ ಕಾರುಗಳು ಸಿಗ್ಮಾ, ಡೆಲ್ಟಾ, ಜೆಟಾ ಮತ್ತು ಆಲ್ಫಾ ಎಂಬ ನಾಲ್ಕು ವೇರಿಯಂಟ್‍ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ದೇಶದಲ್ಲಿರುವ ಎಲ್ಲಾ ಪ್ರೀಮಿಯಂ ನೆಕ್ಸಾ ಬ್ರಾಂಡ್ ಶೋರಂ‍ಗಳಲ್ಲಿ ಗ್ರಾಹಕರು ಖರೀದಿ ಮಾಡಬಹುದಾಗಿದೆ.

ಬಿಡುಗಡೆಯಾಗಲಿರುವ ಹೊಸ ಬಲೆನೊ ಫೇಸ್‍ಲಿಫ್ಟ್ ಕಾರಿನಲ್ಲಿ ಏನೆಲ್ಲಾ ಫೀಚರ್ಸ್ ಇದೆ ಗೊತ್ತಾ.?

ಹೀಗಾಗಿ ಫೇಸ್‌ಲಿಫ್ಟ್ ಬಲೆನೊ ಕಾರುಗಳು ಸಾಮಾನ್ಯ ಬಲೆನೊ ಕಾರುಗಳಿಂತ ತಾಂತ್ರಿಕವಾಗಿ ಮತ್ತಷ್ಟು ಬಲಿಷ್ಠವಾಗಿರಲಿದ್ದು, ಹೊಸ ನಿಯಮಾವಳಿಗೆ ಅನುಸಾರವಾಗಿ ಬಿಎಸ್ 6 ವೈಶಿಷ್ಟ್ಯತೆಗಳೊಂದಿಗೆ ಹೊಸ ಕಾರಿನ ಎಂಜಿನ್ ಅಭಿವೃದ್ಧಿ ಮಾಡಲಾಗುತ್ತಿದೆ.

ಬಿಡುಗಡೆಯಾಗಲಿರುವ ಹೊಸ ಬಲೆನೊ ಫೇಸ್‍ಲಿಫ್ಟ್ ಕಾರಿನಲ್ಲಿ ಏನೆಲ್ಲಾ ಫೀಚರ್ಸ್ ಇದೆ ಗೊತ್ತಾ.?

ಎಂಜಿನ್ ಸಾಮರ್ಥ್ಯ

ಸದ್ಯ ಲಭ್ಯವಿರುವ 1.2-ಲೀಟರ್ ಕೆ-ಸೀರಿಸ್ ಪೆಟ್ರೋಲ್ ಎಂಜಿನ್ ಮಾದರಿಗಳಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೂ, ಹಳೆಯ 1.3-ಲೀಟರ್‌ ಡೀಸೆಲ್ ಎಂಜಿನ್‌ಗೆ ಬದಲಾಗಿ 1.5-ಲೀಟರ್ ಡೀಸೆಲ್ ಎಂಜಿನ್ ಅಳವಡಿಕೆಯನ್ನು ಹೊಂದಿರಲಿವೆ ಎನ್ನಲಾಗಿದೆ.

ಬಿಡುಗಡೆಯಾಗಲಿರುವ ಹೊಸ ಬಲೆನೊ ಫೇಸ್‍ಲಿಫ್ಟ್ ಕಾರಿನಲ್ಲಿ ಏನೆಲ್ಲಾ ಫೀಚರ್ಸ್ ಇದೆ ಗೊತ್ತಾ.?

ಹೀಗಾಗಿ 83ಬಿಎಚ್‌ಪಿ ಮತ್ತು 115ಎನ್ಎಂ ಟಾರ್ಕ್ ಉತ್ಪಾದಿಸುತ್ತಿದ್ದ 1.3-ಲೀಟರ್ ಡೀಸೆಲ್ ಎಂಜಿನ್‌ಗಳು ಮತ್ತಷ್ಟು ಪವರ್‌ಫುಲ್ ಕಾರು ಮಾದರಿಗಳಾಗಲಿದ್ದು, ಇದು ಹ್ಯಾಚ್‌ಬ್ಯಾಕ್ ಆವೃತ್ತಿಗಳಲ್ಲಿ ಅತಿಹೆಚ್ಚು ಬಿಎಚ್‌ಪಿ ಉತ್ಪಾದಿಸುವ ಮಾದರಿಯಾಗಲಿದೆ.

ಬಿಡುಗಡೆಯಾಗಲಿರುವ ಹೊಸ ಬಲೆನೊ ಫೇಸ್‍ಲಿಫ್ಟ್ ಕಾರಿನಲ್ಲಿ ಏನೆಲ್ಲಾ ಫೀಚರ್ಸ್ ಇದೆ ಗೊತ್ತಾ.?

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ತನ್ನ ವಿವಿಧ ಕಾರು ಮಾದರಿಗಳ ಮೂಲಕ ಶೇ.50ಕ್ಕಿಂತಲೂ ಹೆಚ್ಚು ಮಾರಾಟ ಪಾಲು ಹೊಂದಿರುವ ಮಾರುತಿ ಸುಜುಕಿ ಸಂಸ್ಥೆಯು ಕಾಲಕ್ಕೆ ಅನುಗುಣವಾಗಿ ಹೊಸ ಹೊಸ ಮಾದರಿಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಇದೀಗ ಬಲೆನೊ ಮಾದರಿಯನ್ನು ಹೊಸ ಎಂಜಿನ್‌ನೊಂದಿಗೆ ಬಿಡುಗಡೆ ಮಾಡುತ್ತಿದ್ದು, 1.5-ಲೀಟರ್ ಡೀಸೆಲ್ ಆವೃತ್ತಿಯು ಹ್ಯಾಚ್‌ಬ್ಯಾಕ್ ಆವೃತ್ತಿಗಳಲ್ಲೇ ಉತ್ತಮ ಮೈಲೇಜ್ ನೀಡುವ ಕಾರು ಮಾದರಿಯಾಗುವ ನೀರಿಕ್ಷೆಯಿದೆ.

Most Read Articles

Kannada
English summary
New Maruti Baleno 2019 Facelift Features Leaked Ahead Of Launch. Read In Kannada
Story first published: Monday, January 28, 2019, 9:32 [IST]

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more