2020ಕ್ಕೆ ಮಾರುತಿ ಸುಜುಕಿಯಿಂದ ಹೊಸ 7 ಸೀಟರ್ ಎಸ್‌ಯುವಿ ಬಿಡುಗಡೆ ಪಕ್ಕಾ..!

ಜನಪ್ರಿಯ ಕಾರು ಉತ್ಪಾದನಾ ಮತ್ತು ಮಾರಾಟ ಸಂಸ್ಥೆಯಾದ ಮಾರುತಿ ಸುಜುಕಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರು ಉತ್ಪನ್ನಗಳನ್ನು ಪರಿಚಯಿಸುವ ಇರಾದೆಯಲ್ಲಿದ್ದು, ಸದ್ಯ ಮಾರುಕಟ್ಟೆಲ್ಲಿರುವ ಮಧ್ಯಮ ಗಾತ್ರದ ಪ್ರಮುಖ ಎಸ್‌ಯುವಿಗಳಿಗೆ ಪೈಪೋಟಿ ನೀಡಬಲ್ಲ ವಿಟಾರಾ ಎಸ್‌ಯುವಿ ಕಾರನ್ನು ಬಿಡುಗಡೆಗಾಗಿ ಸಿದ್ದಗೊಳಿಸಲಾಗಿದೆ.

2020ಕ್ಕೆ ಮಾರುತಿ ಸುಜುಕಿಯಿಂದ ಹೊಸ 7 ಸೀಟರ್ ಎಸ್‌ಯುವಿ ಬಿಡುಗಡೆ ಪಕ್ಕಾ..!

ವಿಟಾರಾ ಬ್ರೆಝಾ ಕಾರುಗಳಿಂತಲೂ ವಿಭಿನ್ನವಾಗಿರುವ ವಿಟಾರಾ ಹೊಸ ಕಾರು ಎಸ್ ಕ್ರಾಸ್‌ ಕಾರುಗಳಿಂತಲೂ ಹೆಚ್ಚಿನ ಮಟ್ಟದ ಐಷಾರಾಮಿ ಸೌಲಭ್ಯಗಳನ್ನು ಹೊಂದಿರಲಿದ್ದು, 2020ರ ಆರಂಭದಲ್ಲಿ ಹೊಸ ಕಾರುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಕಾರಿನ ಉತ್ಪಾದನಾ ಕಾರ್ಯ ಯೋಜನೆಯು ಭರದಿಂದ ಸಾಗಿದ್ದು, ಹಂಗೇರಿಯಲ್ಲಿರುವ ಸುಜುಕಿ ಸಂಸ್ಥೆಯ ಮುಖ್ಯ ಕಾರು ಉತ್ಪಾದನಾ ಘಟಕದಲ್ಲಿ ಹೊಸ ವಿಟಾರಾ ಕಾರುಗಳಿಗೆ ಫೈನಲ್ ಟಚ್ ನೀಡಲಾಗುತ್ತಿದೆ.

2020ಕ್ಕೆ ಮಾರುತಿ ಸುಜುಕಿಯಿಂದ ಹೊಸ 7 ಸೀಟರ್ ಎಸ್‌ಯುವಿ ಬಿಡುಗಡೆ ಪಕ್ಕಾ..!

ಮಾರುತಿ ಸುಜುಕಿ ಸಂಸ್ಥೆಯು ಈ ಹಿಂದಿನ ವಿಟಾರಾ ಗ್ರ್ಯಾಂಡ್ ಮಾರಾಟದಲ್ಲಿ ಆದ ಹಿನ್ನಡೆಯನ್ನು ಹೊಸ ಕಾರಿನ ಮೂಲಕ ಸುಧಾರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದು, ಬರಲಿರುವ ಹ್ಯುಂಡೈ ಕ್ರೆಟಾ 7 ಸೀಟರ್ ಮತ್ತು ಮಾರಾಟಕ್ಕೆ ಲಭ್ಯವಿರುವ ಮಹೀಂದ್ರಾ ಎಕ್ಸ್‌ಯುವಿ500 ಕಾರುಗಳಿಗೆ ಈ ಕಾರು ತೀವ್ರ ಪೈಪೋಟಿ ನೀಡಲಿದೆ.

2020ಕ್ಕೆ ಮಾರುತಿ ಸುಜುಕಿಯಿಂದ ಹೊಸ 7 ಸೀಟರ್ ಎಸ್‌ಯುವಿ ಬಿಡುಗಡೆ ಪಕ್ಕಾ..!

ಮಿಡ್ ರೇಂಜ್ ಎಸ್‍ಯುವಿ ಕಾರು ಮಾದರಿ ಇದಾಗಿದ್ದು, 2020ರ ಆರಂಭದಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸುವ ಮಾರುತಿ ಸುಜುಕಿಯ ಹೊಸ ಎಸ್‍ಯುವಿ ಕಾರು ಅನ್ನು ಈಗಾಗಲೇ ದೇಶದ ವಿವಿಧ ಕಡೆಗಳಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕೂಡಾ ನಡೆಸಲಾಗಿದೆ.

2020ಕ್ಕೆ ಮಾರುತಿ ಸುಜುಕಿಯಿಂದ ಹೊಸ 7 ಸೀಟರ್ ಎಸ್‌ಯುವಿ ಬಿಡುಗಡೆ ಪಕ್ಕಾ..!

ಸುಜುಕಿ ವಿಟಾರಾ ಈಗಾಗಲೇ ಯೂರೋಪ್‍ನ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ ಮಾರಾಟಗೊಳ್ಳುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಲ್ಲಿ ದೊರೆಯುತ್ತಿದೆ. ಹೀಗಾಗಿ ಭಾರತದಲ್ಲಿ ಬಿಡುಗಡೆಯಾಗಲಿರುವ ಈ ಕಾರಿನ ಬೆಲೆಯನ್ನು ರೂ. 12 ಲಕ್ಷ ದಿಂದ ರೂ. 16 ಲಕ್ಷದೊಳಗೆ ನಿರ್ಧರಿಸಲಿದ್ದಾರೆ.

2020ಕ್ಕೆ ಮಾರುತಿ ಸುಜುಕಿಯಿಂದ ಹೊಸ 7 ಸೀಟರ್ ಎಸ್‌ಯುವಿ ಬಿಡುಗಡೆ ಪಕ್ಕಾ..!

ಸದ್ಯ ವಿದೇಶಿ ಮಾರುಕಟ್ಟೆಗಳಲ್ಲಿ ವಿಟಾರಾ ಕಾರಿನ ಪೆಟ್ರೋಲ್ ಆವೃತ್ತಿಯು 1.0-ಲೀಟರ್ ಮತ್ತು 1.4 ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಹೊಂದಿದ್ದು, 140-ಬಿಹೆಚ್‍ಪಿ ಮತ್ತು 230-ಎನ್ಎಂ ಟಾರ್ಕ್ಅನ್ನು ಉತ್ಪಾದಿಸುತ್ತೆ.

2020ಕ್ಕೆ ಮಾರುತಿ ಸುಜುಕಿಯಿಂದ ಹೊಸ 7 ಸೀಟರ್ ಎಸ್‌ಯುವಿ ಬಿಡುಗಡೆ ಪಕ್ಕಾ..!

ಆದ್ರೆ ಭಾರತದಲ್ಲಿ ಬಿಡುಗಡೆಯಾಗಲಿರುವ ಕಾರುಗಳು 1.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದುವ ಸಾಧ್ಯತೆಗಳಿದ್ದು, ಹೊಸ ಎಂಜಿನ್ 5 ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್‍‍‍ಬಾಕ್ಸ್ ಆಯ್ಕೆಯಲ್ಲಿ ಬರಲಿದೆ ಎನ್ನಲಾಗಿದೆ.

2020ಕ್ಕೆ ಮಾರುತಿ ಸುಜುಕಿಯಿಂದ ಹೊಸ 7 ಸೀಟರ್ ಎಸ್‌ಯುವಿ ಬಿಡುಗಡೆ ಪಕ್ಕಾ..!

ಹಾಗೆಯೇ ವಿಟಾರಾ ಕಾರಿನ ಡೀಸೆಲ್ ಆವೃತ್ತಿಯು ಎಸ್ ಕ್ರಾಸ್ ಕಾರಿನ ಮಾದರಿಯಲ್ಲಿ 1.6-ಲೀಟರ್ ಡೀಸೆಲ್ ಎಂಜಿನ್ ಹೊಂದಿರಲಿದ್ದು, 118-ಬಿಹೆಚ್‍ಪಿ ಮತ್ತು 320-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಗೆ ಜೋಡಣೆ ಇರಲಿದೆ.

2020ಕ್ಕೆ ಮಾರುತಿ ಸುಜುಕಿಯಿಂದ ಹೊಸ 7 ಸೀಟರ್ ಎಸ್‌ಯುವಿ ಬಿಡುಗಡೆ ಪಕ್ಕಾ..!

ಜೊತೆಗೆ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮಾರುತಿ ವಿಟಾರಾ ಕಾರುಗಳು ಫ್ರಂಟ್ ವೀಲ್ ಡ್ರೈವ್ ಎಸ್‍ಯುವಿ ರೂಪದಲ್ಲಿ ಬರಬಹುದು ಎಂದು ಅಂದಾಜಿಸಲಾಗಿದ್ದು, ಜಾಗತಿಕ ಮಾರುಕಟ್ಟೆಯಲ್ಲಿನ ವಿಟಾರಾ ಕಾರು ಆಲ್ ವೀಲ್ ಡ್ರೈವ್ ರೂಪದಲ್ಲಿ ದೊರೆಯುತ್ತಿದೆ.

2020ಕ್ಕೆ ಮಾರುತಿ ಸುಜುಕಿಯಿಂದ ಹೊಸ 7 ಸೀಟರ್ ಎಸ್‌ಯುವಿ ಬಿಡುಗಡೆ ಪಕ್ಕಾ..!

ಇದಲ್ಲದೇ ಹೊಸ ರೂಪದ ವಿಟಾರಾ ಕಾರುಗಳು ಎಸ್‌ಯುವಿ ಕಾರುಗಳಲ್ಲೇ ವಿಶೇಷ ಗುಣಲಕ್ಷಣಗಳನ್ನು ಹೊಂದಿದ್ದು, 7ಸೀಟರ್ ವಿನ್ಯಾಸದೊಂದಿಗೆ ಪ್ರಯಾಣಿಕರ ಸುರಕ್ಷತೆಗಾಗಿ ಎಬಿಎಸ್ ಮತ್ತು 6 ಏರ್‍‍ಬ್ಯಾಗ್ ಗಳನ್ನು ಬಳಸಲಾಗಿದೆ.

2020ಕ್ಕೆ ಮಾರುತಿ ಸುಜುಕಿಯಿಂದ ಹೊಸ 7 ಸೀಟರ್ ಎಸ್‌ಯುವಿ ಬಿಡುಗಡೆ ಪಕ್ಕಾ..!

ಈ ಬಗ್ಗೆ ಆಟೋಕಾರ್ ಇಂಡಿಯಾ ಸುದ್ದಿಸಂಸ್ಥೆಯ ಸಂದರ್ಶನದಲ್ಲಿ ಮಾತನಾಡಿರುವ ಮಾರುತಿ ಸುಜುಕಿ ಎಂಡಿ ಮತ್ತು ಸಿಇಒ ಕೆನಿಚಿ ಆಯುಕವಾ ಅವರು, ಬ್ರೆಯಾ ಮಾದರಿಯಲ್ಲೇ 4.3-ಮೀಟರ್‌ಗಿಂತಲೂ ಹೆಚ್ಚಿನ ಗಾತ್ರದ ಹೊಸ ಕಾರು ಪರಿಚಯಿಸುವುದು ನಮ್ಮ ಮುಂದಿನ ಗುರಿ ಎಂದಿದ್ದಾರೆ.

2020ಕ್ಕೆ ಮಾರುತಿ ಸುಜುಕಿಯಿಂದ ಹೊಸ 7 ಸೀಟರ್ ಎಸ್‌ಯುವಿ ಬಿಡುಗಡೆ ಪಕ್ಕಾ..!

ಇದರಿಂದಾಗಿ ಎಸ್‌ಯುವಿ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಬಹುದೆಂದು ನೀರಿಕ್ಷೆ ಮಾಡಿರುವ ಮಾರುತಿ ಸುಜುಕಿ ಸಂಸ್ಥೆಯು ಪ್ರಿಮಿಯಂ ಕಾರು ಮಾರಾಟ ವಿಭಾಗದಲ್ಲಿನ ಕೊರತೆಯನ್ನು ನಿಗಿಸಲು ಈ ಕಾರನ್ನು ನಿರ್ಮಾಣಗೊಳಿಸುತ್ತಿದ್ದು, ಕ್ರೇಟಾ ಫೇಸ್‌ಲಿಫ್ಟ್, ಎಕ್ಸ್‌ಯುವಿ 500 ಮತ್ತು ಮುಂಬರುವ ಟಾಟಾ ಹ್ಯಾರಿಯರ್, ನಿಸ್ಸಾನ್ ಕಿಕ್ಸ್ ಕಾರುಗಳಿಗೂ ಇದು ಪೈಪೋಟಿ ನೀಡಲಿದೆ.

Article Published On: Tuesday, January 8, 2019, 11:17 [IST]
English summary
All-New Maruti SUV Set To Launch In 2020 — To Rival The Hyundai Creta. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+