ಸ್ಪಾಟ್ ಟೆಸ್ಟ್‌ನಲ್ಲಿ ಕಂಡು ಬಂದ ಹೊಸ ಮಾರುತಿ ಸಿಯಾಜ್

ದೇಶದ ಅತಿ ದೊಡ್ದ ಕಾರು ಉತ್ಪಾದನಾ ಸಂಸ್ಥೆಯಾದ ಮಾರುತಿ ಸುಜುಕಿಯ ಹೊಸ ಸಿಯಾಜ್ ಕಾರ್ ಅನ್ನು ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಸಿಯಾಜ್ ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಸ್ಪೈ ಚಿತ್ರವನ್ನು ಗಾಡಿವಾಡಿ ಬಿಡುಗಡೆಗೊಳಿಸಿದ್ದು, ಹಲವು ವಿಷಯಗಳು ಬಹಿರಂಗವಾಗಿವೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಂಡು ಬಂದ ಮಾರುತಿ ಸಿಯಾಜ್

ಏಷ್ಯಾನ್, ಆಫ್ರಿಕನ್ ಮತ್ತು ಲ್ಯಾಟಿನ್ ಅಮೇರಿಕಾದ ಮಾರುಕಟ್ಟೆಗಳಲ್ಲಿ ಎಸ್‍ಎಕ್ಸ್ 4 ಕಾರ್ ಅನ್ನು ಬದಲಿಸಿ ಆ ಸ್ಥಾನಕ್ಕೆ ಸಿಯಾಜ್ ಕಾರ್ ಅನ್ನು ಬಿಡುಗಡೆಗೊಳಿಸಲಾಗಿದೆ. ಭಾರತದಲ್ಲಿ ಸಿ ಸೆಗ್‍‍ಮೆಂಟ್‍‍ನಲ್ಲಿ ಹೋಂಡಾ ಸಿಟಿಯು ಪಾರುಪತ್ಯ ಮೆರೆಯುತ್ತಿತ್ತು.

ಸ್ಪಾಟ್ ಟೆಸ್ಟ್‌ನಲ್ಲಿ ಕಂಡು ಬಂದ ಮಾರುತಿ ಸಿಯಾಜ್

ಹೋಂಡಾ ಸಿಟಿಗೆ ಪೈಪೋಟಿ ನೀಡಲು ಸಿಯಾಜ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಮಾರುತಿ ಸುಜಕಿ ಸಿಯಾಜ್ ಕಾರು ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ 2.7 ಲಕ್ಷ ಯುನಿ‍‍‍ಟ್‍ಗಳು ಮಾರಾಟವಾಗುವ ಮೂಲಕ ಹೊಸ ಮೈಲುಗಲ್ಲನ್ನು ಸಾಧಿಸಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಂಡು ಬಂದ ಮಾರುತಿ ಸಿಯಾಜ್

ಮಾರುತಿ ಸುಜುಕಿ ಸಿಯಾಜ್ ಬಿಡುಗಡೆಯಾಗಿ ಮೂರು ವರ್ಷಗಳ ನಂತರ ಅರೆನಾ ಡೀಲರ್‍‍ಗಳಿಂದ ನೆಕ್ಸಾ ಅಪ್‍‍ಮಾರ್ಕೆಟ್‍‍ಗಳಿಗೆ ಸ್ಥಳಾಂತರಿಸಲಾಗಿದೆ. ಮಾರುತಿ ಸುಜುಕಿ ಕಂಪನಿಯು 2018ರಲ್ಲಿ ಸಿಯಾಜ್ ಕಾರ್ ಅನ್ನು ಮಿಡ್-ಸೈಕಲ್ ನವೀಕರಣವನ್ನು ನಡೆಸಿತ್ತು.

ಸ್ಪಾಟ್ ಟೆಸ್ಟ್‌ನಲ್ಲಿ ಕಂಡು ಬಂದ ಮಾರುತಿ ಸಿಯಾಜ್

ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಸೆಡಾನ್ 1.5 ಲೀಟರ್ ಕೆ‍‍ಬಿ15ಬಿ ನಾಲ್ಕು ಸಿಲಿಂಡರ್ ಎಸ್‍ಎಚ್‍‍ವಿಎಸ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 104.7 ಬಿ‍‍ಹೆಚ್‍ಪಿ ಪವರ್ ಮತ್ತು 138 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಂಡು ಬಂದ ಮಾರುತಿ ಸಿಯಾಜ್

ಈ ಎಂಜಿನ್‍‍ಗಳೊಂದಿಗೆ 5 ಸ್ಪೀಡ್ ಮ್ಯಾನುವಲ್ ಗೇರ್‍‍‍ಬಾಕ್ಸ್ ಅಥವಾ ನಾಲ್ಕು ಸ್ಪೀಡ್ ಟಾರ್ಕ್ ಕನ್ವರ್ಟರ್ ಅನ್ನು ಅಳವಡಿಸಲಾಗಿದೆ. ಈ ವರ್ಷದ ಆರಂಭದಲ್ಲಿ ಸಿಯಾಜ್ ಕಾರಿನಲ್ಲಿ ಮತ್ತೊಂದು ಎಂಜಿನ್ ಅನ್ನು ಅಳವಡಿಸಿದ್ದರು.

ಸ್ಪಾಟ್ ಟೆಸ್ಟ್‌ನಲ್ಲಿ ಕಂಡು ಬಂದ ಮಾರುತಿ ಸಿಯಾಜ್

ಈ ಎಂಜಿನ್ 1.5 ಲೀಟರ್ ಡಿ‍ಡಿಎಸ್ 225 ಎಸ್‍ಎಚ್‍‍ವಿಎಸ್ ಡಿಸೆಲ್ ಎಂಜಿನ್ 95 ಬಿ‍‍ಹೆಚ್‍‍ಪಿ ಪವರ್ ಮತ್ತು 225 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ 1.3 ಲೀಟರ್ ಡಿಡಿಎಸ್ 200 ಎಸ್‍‍ಹೆಚ್‍‍ವಿಎಸ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಿದ್ದರು.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಸ್ಪಾಟ್ ಟೆಸ್ಟ್‌ನಲ್ಲಿ ಕಂಡು ಬಂದ ಮಾರುತಿ ಸಿಯಾಜ್

1.5 ಲೀಟರ್ ಮೈಲ್ಡ್ ಹೈಬ್ರಿಡ್ ಎಂಜಿನ್ ಎರ್ಟಿಗಾ ಮತ್ತು ಎಕ್ಸ್ ಎಲ್ 6 ನಂತೆ ಈ ಕಾರಿನ ಎಂಜಿನ್ ಅನ್ನು ಬಿಎಸ್-6 ಆಗಿ ನವೀಕರಿಸಲಾಗುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಾರುತಿ ಸುಜುಕಿ ಸಿಯಾಜ್ ಕಾರಿನಲ್ಲಿ ಸ್ಟೀಯರಿಂಗ್ ವ್ಹೀಲ್, ಲೆದರ್ ಸೀಟುಗಳು, ಟಚ್ ಸ್ಕ್ರೀನ್ ಇನ್ಫೋಟೇನ್‍‍ಮೆಂಟ್, ಆಂಡ್ರಾಯ್ಡ್ ಆಟೋ, ಆ್ಯಪಲ್ ಕಾರ್ ಪ್ಲೇ, ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಜೊತೆ ಟಿಟಿಪಿ ಕಲರ್ ಎಂಐಡಿ ಮತ್ತು ಕ್ರೂಸ್ ಕಂಟ್ರೊಲರ್ ಅನ್ನು ಹೊಂದಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಸ್ಪಾಟ್ ಟೆಸ್ಟ್‌ನಲ್ಲಿ ಕಂಡು ಬಂದ ಮಾರುತಿ ಸಿಯಾಜ್

ಮಾರುತಿ ಸುಜುಕಿ ಸಿಯಾಜ್ ಕಾರಿನ ಡೀಸೆಲ್ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುವುದಿಲ್ಲ. ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಸಿಯಾಜ್ ಕಾರಿನಲ್ಲಿ 1.5 ಲೀಟರ್ ಡಿಡಿಎಸ್ ಡೀಸೆಲ್ ಎಂಜಿನ್, 1.3 ಲೀಟರ್ ಡಿ‍ಡಿಎಸ್ ಡೀಸೆಲ್ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುವುದಿಲ್ಲ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಸ್ಪಾಟ್ ಟೆಸ್ಟ್‌ನಲ್ಲಿ ಕಂಡು ಬಂದ ಮಾರುತಿ ಸಿಯಾಜ್

ಡೀಸೆಲ್ ಎಂಜಿನ್ ವಾಹನಗಳ ಬೇಡಿಕೆ ಹೆಚ್ಚಾದರೆ ನಂತರದ ಹಂತದಲ್ಲಿ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತದೆ. ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಸ್ಪೈ ಚಿತ್ರದಲ್ಲಿ ಸಿಯಾಜ್ ಕಾರು ಬಲೆನೊ ಕಾರಿನಲ್ಲಿರುವಂತಹ ಅಲಾಯ್ ವ್ಹೀಲ್‍‍ಗಳನ್ನು ಹೊಂದಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಂಡು ಬಂದ ಮಾರುತಿ ಸಿಯಾಜ್

ಹೊಸ ಹ್ಯಾಚ್‍‍ಬ್ಯಾಕ್‍‍ನಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಈ ಎಂಜಿನ್ 89 ಬಿ‍‍ಹೆಚ್‍ಪಿ ಪವರ್ ಮತ್ತು 115 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೊಸ ಸಿಯಾಜ್ ಕಾರಿನಲ್ಲಿ ಟರ್ಬೋಚಾರ್ಜರ್ ಅನ್ನು ಹೊಂದಿರಲಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಂಡು ಬಂದ ಮಾರುತಿ ಸಿಯಾಜ್

ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಾರುತಿ ಸುಜುಕಿ ಸಿಯಾಜ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.8.19 ಲಕ್ಷದಿಂದ ರೂ.11.38 ಲಕ್ಷಗಳಾಗಿದೆ. ಸಿಯಾಜ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಹ್ಯುಂಡೈ ವೆರ್ನಾ, ಹೋಂಡಾ ಸಿಟಿ, ಸ್ಕೋಡಾ ರಾಪಿಡ್, ಟೊಯೊಟಾ ಯಾರಿಸ್‍ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Maruti Ciaz Spotted On Test With Baleno’s Alloy Wheels – Details - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X