ಹೀಗಿರಲಿದೆ ನೋಡಿ ಮಾಡಿಫೈಗೊಂಡ ಹೊಸ ಸ್ವಿಫ್ಟ್ ಕಾರು

ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಕಾರುಗಳು ಹಲವು ವಿಶೇಷತೆಗಳೊಂದಿಗೆ ಮಾರುಕಟ್ಟೆಯಲ್ಲಿ ಬೆಸ್ಟ್ ಸೆಲ್ಲಿಂಗ್ ಹ್ಯಾಚ್‌ಬ್ಯಾಕ್ ಕಾರುಗಳ ಸಾಲಿನಲ್ಲಿದ್ದು, ಅಲ್ಲದೇ ಹ್ಯಾಚ್‍‍ಪ್ಯಾಕ್ ಕಾರುಗಳಲ್ಲಿ ಅಧಿಕವಾಗಿ ಸ್ವಿಫ್ಟ್ ಕಾರನ್ನೇ ಮಾಡಿಫೈ ಮಾಡಲು ಆಯ್ಕೆ ಮಾಡುತ್ತಾರೆ.

ಹೀಗಿರಲಿದೆ ನೋಡಿ ಮಾಡಿಫೈಗೊಂಡ ಹೊಸ ಸ್ವಿಫ್ಟ್ ಕಾರು

ಸ್ವಿಫ್ಟ್ ಕಾರನ್ನು ಆಯ್ಕೆ ಮಾಡಿಕೊಳ್ಳುವುದರ ಹಿಂದೆ ಇರುವ ಕಾರಣ ಕಾರು ಕಡಿಮೆ ತೂಕ, ಕೈಗೆಟುಕುವ ಬೆಲೆ ಮತ್ತು ಆಕರ್ಷಕವಾದ ವಿನ್ಯಾಸ ಹೊಂದಿದೆ. ಇದರೊಂದಿಗೆ ಕಾರಿನ ಜನಪ್ರಿಯತೆ ಎಂದರೆ ಮಾರುಕಟ್ಟೆಯ ನಂತರದ ಕಾರ್ಯಕ್ಷಮತೆ ಮತ್ತು ಮಾಡಿಫೈ ಮಾಡಲು ಬಿಡಿ ಭಾಗಗಳು ಅಗ್ಗದ ಬೆಲೆಯಲ್ಲಿ ಸುಲುಭವಾಗಿ ಲಭ್ಯವಿರುತ್ತದೆ. ಸ್ವಿಫ್ಟ್ ಮಾಡಿಫೈ ಸಾಲಿನಲ್ಲಿ ರೆಡ್ ಡೆವಿಲ್ ಸೇರಿಕೊಂಡಿದ್ದು, ಸ್ಟೈಲಿಶ್ ಲುಕ್ ಹೊಂದಿದೆ.

ಹೀಗಿರಲಿದೆ ನೋಡಿ ಮಾಡಿಫೈಗೊಂಡ ಹೊಸ ಸ್ವಿಫ್ಟ್ ಕಾರು

ಮಾಡಿಫೈ ಮಾಡಲಾದ ಕಾರಿನ ಈ ಚಿತ್ರದಲ್ಲಿ ಆಕರ್ಷಕವಾಗಿ ಕಾಣುತ್ತಿದ್ದು, ಬ್ಲ್ಯಾಕ್ ರೂಫ್‍‍ನೊಂದಿಗೆ ರೆಡ್ ಕಲರ್ ನಿಂದ ಕಾರು ನೋಡುಗರ ಕಣ್ಣು ಸೆಳೆಯುವಂತೆ ಇದೆ. ಹಲವು ಮಾಡಿಫೈ ಕಾರುಗಳಂತೆ 3ನೇ ಜನೇಷನ್ ಸ್ವಿಫ್ಟ್ ಕಾರು ಕೂಡ ಸ್ಪೋರ್ಟ್ ಬಾಡಿ ಕಿಟ್ ಅನ್ನು ಹೊಂದಿದೆ. ಇದರಿಂದ ಕಾರಿನ ಲುಕ್ ಹೆಚ್ಚಿಸುತ್ತದೆ ಮತ್ತು ರೇಸ್ ಲುಕ್ ಅನ್ನು ಹೊಂದಿದೆ.

ಹೀಗಿರಲಿದೆ ನೋಡಿ ಮಾಡಿಫೈಗೊಂಡ ಹೊಸ ಸ್ವಿಫ್ಟ್ ಕಾರು

ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಸಾಮಾನ್ಯ ಸ್ವಿಫ್ಟ್ ನಂತೆ ಹೆಚ್ಚು ಹಾರ್ಡ್‍ಕೋ‍ರ್ ಆವೃತ್ತಿಯಾಗಿದ್ದು, ಈ ಕಾರನ್ನು ಹಲವು ವಿದೇಶಿ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಕಾರು ಸ್ಪೂರ್ಟಿ ಬಾಡಿ ಕಿಟ್ ಜೊತೆಗೆ ಪವರ್‍‍ಫುಲ್ ಎಂಜಿನ್ 140 ಪಿಎಸ್‍ ಔಟ್ ಪುಟ್ ಅನ್ನು ಹೊಂದಿದೆ.

ಹೀಗಿರಲಿದೆ ನೋಡಿ ಮಾಡಿಫೈಗೊಂಡ ಹೊಸ ಸ್ವಿಫ್ಟ್ ಕಾರು

ಕಾರಿನ ಮುಂಭಾಗದಲ್ಲಿ ಸ್ವಿಫ್ಟ್ ಸ್ಪೋಟ್ಸ್ ನಲ್ಲಿ ಕಂಡುಬರುವ ನೂತನ ಬಂಪರ್ ಮತ್ತು ಹನಿಕಾಂಬ್ ಗ್ರಿಲ್ ಅನ್ನು ಜೋಡಿಸಲಾಗಿದೆ. ಬಾಡಿಯ ಮುಂಭಾಗದಲ್ಲಿ ಸ್ಪ್ಲಿಟರ್ ಮತ್ತು ಸೈಡ್ ಸ್ಕರ್ಟ್‍‍ಗಳನ್ನು ಅಳವಡಿಸಿದ್ದು, ಇದು ಎಲ್ಲವೂ ಬ್ಲ್ಯಾಕ್ ಕಲರ್‍‍‍ನಲ್ಲಿದೆ. ಹೆಡ್‍‍ಲ್ಯಾಂಪ್‍‍ಗಳನ್ನು ಎಲ್‍ಇಡಿ ಡಿಆರ್‍ಎಲ್‍‍ಗಳ ಜೊತೆಗೆ ಹೊಸ ಆಫ್ಟರ್‍‍‍ಮಾರ್ಕೆಟ್ ಯುನಿಟ್ ಒಳಗೊಂಡಿದೆ.

ಹೀಗಿರಲಿದೆ ನೋಡಿ ಮಾಡಿಫೈಗೊಂಡ ಹೊಸ ಸ್ವಿಫ್ಟ್ ಕಾರು

ಹಿಂಭಾಗಕ್ಕೆ ರಿರ್ವಸ್ ಬರುವಾಗ, ಆಫ್ಟರ್‍‍ಮಾರ್ಕೆಟ್ ಎಲ್ಇಡಿ ಟೈಲ್-ಲೈಟ್‍‍ಗಳೊಂದಿಗೆ ಬ್ಲ್ಯಾಕ್ ರೂಫ್ ಸ್ಪಾಯ್ಲರ್ ಕಾಣ ಸಿಗುತ್ತದೆ. ಮುಂಭಾಗದ ಬಂಪರ್‍‍ನಂತೆ, ಹಿಂಭಾಗದ ಬಂಪರ್ ಅನ್ನು ಸ್ಪೋರ್ಟಿಯರ್ ಯುನಿಟ್‍ ಅನ್ನು ಒಳಗೊಂಡಿದೆ. ಈ ಬಂಪರ್ ಸ್ಪೋರ್ಟ್ಸ್ ಟ್ವಿನ್ ಎಕ್ಸಾಸ್ಟ್ ಟಿಪ್ಸ್ ಜೊತೆಗೆ ಅಥೆಟಿಕ್ ಡಿಪ್ಯೂಸರ್ ಅನ್ನು ಹೊಂದಿದ್ದು, ಇದರಿಂದ ಉತ್ತಮ ಪಲಿತಾಂಶ ಬರುತ್ತದೆ. ಕಾರಿನ ಮತ್ತೊಂದು ಪ್ರಮುಖ ಅಂಶವೆಂದರೆ ವಿಡ್ ವ್ಹೀಲ್, ಬ್ಲ್ಯಾಕ್ ಮಲ್ಟಿ-ಸ್ಪೋಕ್ ರಿಮ್‍ಗಳಿಂದ ವಿಭಿನ್ನವಾದ ಆಕರ್ಷಕ ಲುಕ್ ನೀಡುತ್ತದೆ.

ಹೀಗಿರಲಿದೆ ನೋಡಿ ಮಾಡಿಫೈಗೊಂಡ ಹೊಸ ಸ್ವಿಫ್ಟ್ ಕಾರು

3ನೇ ಜನರೇಷನ್ ಮಾರುತಿ ಸುಜುಕಿ ಸ್ವಿಫ್ಟ್ ಪೆಟ್ರೋಲ್ ಮತ್ತು ಡಿಸೇಲ್ ಟರ್ಬೋ‍ಚಾರ್ಜ್ಡ್ ಎಂಜಿನ್‍‍ಗಳೊಂದಿಗೆ ಲಭ್ಯವಿದೆ. ಸ್ವಿಫ್ಟ್ ನಲ್ಲಿರುವ ಪೆಟ್ರೋಲ್ ಎಂಜಿನ್ 1.2 ಲೀಟರ್ 4 ಸಿಲಿಂಡರ್ ಕೆ-ಸೀರೀಸ್ ಯುನಿಟ್‍ ಆಗಿದ್ದು, 32 ಬಿಎಚ್‍ಪಿ ಪವರ್ ಮತ್ತು 113 ಎನ್‍ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಹೀಗಿರಲಿದೆ ನೋಡಿ ಮಾಡಿಫೈಗೊಂಡ ಹೊಸ ಸ್ವಿಫ್ಟ್ ಕಾರು

ಸ್ವಿಫ್ಟ್ ಕಾರಿನ ಡೀಸೆಲ್ ಎಂಜಿನ್ 1.3 ಲೀಟರ್ ಫಿಯೆಟ್ ಮಲ್ಟಿ‍‍ಜೆಟ್ ಟರ್ಬೋಚಾಜ್ಡ್ ಯುನಿಟ್‍ ಹೊಂದಿದ್ದು, ಇದು 74 ಬಿಎಚ್‍ಪಿ ಪವರ್ ಮತ್ತು 190 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣ ಹೊಂದಿದೆ. ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಹೊಂದಿದ್ದು, 5ಸ್ಪೀಡ್ ಎಎಮ್‍ಟಿ ಯನ್ನು ಆಯ್ಕೆಯಾಗಿ ನೀಡಿದೆ. 2020 ಏಪ್ರಿಲ್ ತಿಂಗಳ ಮಾಲಿನ್ಯ ನಿಯಮವಳಿಗಾಗಿ ಸ್ವಿಫ್ಟ್ ಕಾರು ಡೀಸೆಲ್ ಎಂಜಿನ್ ಅನ್ನು ಡೀಸೆಲ್ ಎಂಜಿನ್ ಅನ್ನು ಬದಲಾಯಿಸುವ ಸಾಧ್ಯತೆಗಳಿವೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಹೀಗಿರಲಿದೆ ನೋಡಿ ಮಾಡಿಫೈಗೊಂಡ ಹೊಸ ಸ್ವಿಫ್ಟ್ ಕಾರು

ಮಾಡಿಫೈ ಕಾರುಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಕಾರು ಪ್ರಿಯರಿಗೆ ಆಯ್ಕೆಗಳು ಹೆಚ್ಚುತ್ತಿದ್ದು, ಮಾರುತಿ ಸುಜುಕಿ ಸ್ವಿಫ್ಟ್ ಕಾರುಗಳು ಅತ್ಯುತ್ತಮ ಎಂಜಿನ್ ಸೌಲಭ್ಯದೊಂದಿಗೆ ಬಹುಬಳಕೆ ಕಾರು ಮಾದರಿಯಾಗಿ ಜನಪ್ರಿಯತೆ ಸಾಧಿಸಿದೆ ಎನ್ನಬಹುದು.

Image Courtesy: modified_in

Article Published On: Monday, September 2, 2019, 12:47 [IST]
English summary
This modified 3rd-gen Maruti Suzuki Swift is Flaming HOT - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+