ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಮಾರುತಿ ಸುಜುಕಿಯ ಹೊಸ ವಿಟಾರಾ ಬ್ರಿಝಾ
ಮಾರುತಿ ಸುಜುಕಿ ಕಂಪನಿಯು ತನ್ನ ಕಂಪನಿಯ ಜನಪ್ರಿಯ ಕಾಂಪ್ಯಾಕ್ಟ್ ಎಸ್‍ಯುವಿಯಾದ ವಿಟಾರಾ ಬ್ರಿಝಾವನ್ನು ಸ್ಪಾಟ್ ಟೆಸ್ಟ್ ಮಾಡುತ್ತಿದೆ. ಈ ವರ್ಷದ ಡಿಸೆಂಬರ್‍ನಲ್ಲಿ ಬಿಡುಗಡೆಯಾಗಲಿರುವ ಹೊಸ ವಿಟಾರಾ ಬ್ರಿಝಾವನ್ನು ಭಾರತದ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟ್ ಮಾಡಲಾಗುತ್ತಿದೆ.

ಗಾಡಿವಾಡಿ ಬಿಡುಗಡೆಗೊಳಿಸಿರುವ ಸ್ಪೈ ಚಿತ್ರಗಳಲ್ಲಿ ಹೊಸ ಎಸ್‍ಯುವಿಯಲ್ಲಿ ಹಲವು ಬದಲಾವಣೆಗಳಾಗಿರುವುದನ್ನು ಕಾಣಬಹುದು. ಮುಂಭಾಗದಲ್ಲಿ ಹೊಸ ವಿನ್ಯಾಸದ ಬಂಪರ್‍ಗಳ ಜೊತೆಗೆ ಹೊಸ ಫಾಗ್ ಲ್ಯಾಂಪ್‍ಗಳಿವೆ. ಇಂಟಿಗ್ರೇಟೆಡ್ ಎಲ್‍ಇಡಿ ಡಿಆರ್‍ಎಲ್‍ಗಳ ಜೊತೆಗೆ ಹೊಸ ಪ್ರಾಜೆಕ್ಟರ್ ಹೆಡ್‍ಲ್ಯಾಂಪ್ ಯುನಿಟ್‍ಗಳಿವೆ.

ಇವುಗಳನ್ನು ಬಿಟ್ಟು ಬೇರೆ ಮಾಹಿತಿಗಳು ದೊರಕದಿದ್ದರೂ ಹೊಸ ಎಸ್‍ಯುವಿಯ ಮುಂಭಾಗದಲ್ಲಿರುವ ಗ್ರಿಲ್ ಹೊಸ ವಿನ್ಯಾಸವನ್ನು ಹೊಂದಿರಲಿದೆ. ಎಸ್‍ಯುವಿಯ ಹಿಂಭಾಗದಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನು ಹೊರತು ಪಡಿಸಿದರೆ ಹೆಚ್ಚಿನ ಬದಲಾವಣೆಗಳನ್ನು ಮಾಡಲಾಗಿಲ್ಲ.

ಮಾರುಕಟ್ಟೆಯಲ್ಲಿರುವ ಎಸ್‍ಯುವಿಯಲ್ಲಿನ ಟೇಲ್ ಲೈಟ್ ಹಾಗೂ ರೇರ್ ಸ್ಪಾಯಿಲರ್‍ಗಳನ್ನು ಹೊಸ ಎಸ್‍ಯುವಿಯು ಸಹ ಹೊಂದಿರಲಿದೆ. ಆದರೆ ಇವುಗಳಲ್ಲಿಯೂ ಕೆಲವು ಬದಲಾವಣೆಗಳಾಗುವ ಸಾಧ್ಯತೆಗಳಿವೆ.

ಇದರ ಜೊತೆಗೆ ಹೊಸ ಎಸ್‍ಯುವಿಯ ಇಂಟಿರಿಯರ್‍ನಲ್ಲಿ ಕೆಲ ಬದಲಾವಣೆಗಳಾಗುವ ಸಾಧ್ಯತೆಗಳಿವೆ. ಆಪಲ್ ಕಾರ್‍ಪ್ಲೇ ಹಾಗೂ ಆಂಡ್ರಾಯಿಡ್ ಆಟೋ ಹೊಂದಿರುವ ಹೊಸ ಟಚ್‍ಸ್ಕ್ರೀನ್ ಇನ್ಫೋಟೇನ್‍ಮೆಂಟ್ ಸಿಸ್ಟಂ ಅಳವಡಿಸಲಾಗುವುದು.

ಮಾರುಕಟ್ಟೆಯಲ್ಲಿರುವ ಎಸ್‍ಯುವಿಯ ಇಂಟಿರಿಯರ್‍ನಲ್ಲಿರುವುದಕ್ಕಿಂತ ಹೆಚ್ಚಿನ ಪ್ರೀಮಿಯಂ ಅಂಶಗಳನ್ನು ಹೊಸ ಎಸ್‍ಯುವಿಯಲ್ಲಿ ನೀಡಲಾಗುವುದು. ಹೊಸ ಎಸ್‍ಯುವಿಯಲ್ಲಿ ಮಾಡಲಾಗುವ ಪ್ರಮುಖ ಬದಲಾವಣೆಯೆಂದರೆ ಹೊಸ ಪೆಟ್ರೋಲ್ ಎಂಜಿನ್.

2020ರ ವಿಟಾರಾ ಬ್ರಿಝಾ, ಮಾರುತಿ ಸುಜುಕಿ ಕಂಪನಿಯ 1.5 ಲೀಟರಿನ ಸ್ಮಾರ್ಟ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಈ ಎಂಜಿನ್ ಅನ್ನು ಕಂಪನಿಯ ಇತರ ಮಾದರಿಗಳಲ್ಲಿ ಅಳವಡಿಸಲಾಗಿದೆ. ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ ಫ್ರಂ ಸುಜುಕಿ (ಎಸ್‍ಹೆಚ್‍ವಿಎಸ್) ಎಂದು ಕರೆಯಲಾಗುವ 1,462 ಸಿಸಿ ಎಂಜಿನ್ ಹೊಂದಿರುವ ಈ ಎಂಜಿನ್ 103.5 ಬಿಹೆಚ್‍ಪಿ ಪವರ್ ಹಾಗೂ 138 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಈ ಎಂಜಿನ್ ಅನ್ನು ಮೊದಲ ಬಾರಿಗೆ ಸಿಯಾಜ್ ಕಾರಿನಲ್ಲಿ ಅಳವಡಿಸಲಾಗಿತ್ತು. ಈ ಎಂಜಿನ್ ಐಡಲ್ ಸ್ಟಾರ್ಟ್ - ಸ್ಟಾಪ್ ಸಿಸ್ಟಂ, ಬ್ರೇಕ್ ಎನರ್ಜಿ ರಿಜನರೇಷನ್ ಸಿಸ್ಟಂ ಹಾಗೂ ಟಾರ್ಕ್ ಅಸಿಸ್ಟ್ ಫಂಕ್ಷನ್ ಎಂಬ ಮೂರು ಬಗೆಯ ಟೆಕ್ನಾಲಜಿಗಳನ್ನು ಹೊಂದಿದೆ.
MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಹೊಸ ಎಸ್‍ಯುವಿಯನ್ನು 5 ಸ್ಪೀಡಿನ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಥವಾ 4 ಸ್ಪೀಡಿನ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಯುನಿಟ್‍ನೊಂದಿಗೆ ಮಾರಾಟ ಮಾಡಲಾಗುವುದು. ಮಾರುತಿ ಸುಜುಕಿ ಕಂಪನಿಯು ತನ್ನ ವಾಹನಗಳಲ್ಲಿರುವ ಡೀಸೆಲ್ ಎಂಜಿನ್ ಅನ್ನು ಬಿಎಸ್ 6 ನಿಯಮಗಳಿಗೆ ತಕ್ಕಂತೆ ಅಭಿವೃದ್ಧಿಪಡಿಸುವುದಿಲ್ಲವೆಂದು ಈ ಮೊದಲೇ ತಿಳಿಸಿತ್ತು.
MOST READ: ಜೆಸಿಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಪೆಟ್ರೋಲ್ ಎಂಜಿನ್‍ಗಳನ್ನು ಬಿಎಸ್ 6 ನಿಯಮಗಳಿಗೆ ತಕ್ಕಂತೆ ಅಪ್‍ಡೇಟ್‍ಗೊಳಿಸಲಾಗುವುದೆಂದು ಸಹ ತಿಳಿಸಿತ್ತು. ಇದರ ಜೊತೆಗೆ ಕಂಪನಿಯು ಬಿಎಸ್6 ನಿಯಮಗಳು ಜಾರಿಗೆ ಬಂದ ನಂತರ ಡೀಸೆಲ್ ಎಂಜಿನ್ ವಾಹನಗಳಿಗೆ ಬೇಡಿಕೆ ಬಂದರೆ, ಬಿಎಸ್6 ಡೀಸೆಲ್ ಎಂಜಿನ್‍ಗಳನ್ನು ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದೆ.

ಸುಜುಕಿ ವಿಟಾರಾ ಬ್ರಿಝಾ ಎಸ್‍ಯುವಿಯನ್ನು ಮೊದಲ ಬಾರಿಗೆ 2016ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾಗಿತ್ತು. ಬಿಡುಗಡೆಯಾದ ಕೆಲವು ತಿಂಗಳುಗಳಲ್ಲಿಯೇ ಈ ಎಸ್‍ಯುವಿ ಜನಪ್ರಿಯವಾಗಿತ್ತು. ಎಸ್‍ಯುವಿ ಸೆಗ್‍ಮೆಂಟಿನಲ್ಲಿ ಹೆಚ್ಚು ಮಾರಾಟವಾಗುತ್ತಿದ್ದ ಫೋರ್ಡ್ ಇಕೋಸ್ಪೋರ್ಟ್ ಅನ್ನು ಹಿಂದಿಕ್ಕಿದ ಬ್ರಿಝಾ ನಂ 1 ಸ್ಥಾನಕ್ಕೇರಿತ್ತು.

ಹೆಚ್ಚು ಫೀಚರ್‍ಗಳನ್ನು ಹೊಂದಿರುವ ಹ್ಯುಂಡೈ ಕಂಪನಿಯ ವೆನ್ಯೂ ಹಾಗೂ ಮಹೀಂದ್ರಾ ಎಕ್ಸ್ ಯುವಿ 300 ವಾಹನಗಳನ್ನು ಕಾಂಪ್ಯಾಕ್ಟ್ ಎಸ್‍ಯುವಿ ಸೆಗ್‍ಮೆಂಟಿನಲ್ಲಿ ಬಿಡುಗಡೆಗೊಳಿಸಿದ ನಂತರ ಬ್ರಿಝಾ ಎಸ್‍ಯುವಿಯ ಮಾರಾಟವು ಕುಸಿದಿದೆ.

ಮಾರುತಿ ಸುಜುಕಿ ಕಂಪನಿಯು, ನವೀಕೃತ ಹೊಸ ಎಸ್‍ಯುವಿಯನ್ನು ಬಿಡುಗಡೆಗೊಳಿಸಿದ ನಂತರ ಬ್ರಿಝಾದ ಮಾರಾಟವು ಮತ್ತೆ ಹೆಚ್ಚಾಗಲಿದೆ ಎಂಬ ನಂಬಿಕೆಯಲ್ಲಿದೆ. ಮಾರುತಿ ಕಂಪನಿಯು ಇದೇ ತಿಂಗಳ 30ರಂದು ಎಸ್ ಪ್ರೆಸ್ಸೊ ಹ್ಯಾಚ್ ಬ್ಯಾಕ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ವಿಟಾರಾ ಬ್ರಿಝಾದ ಹೊಸ ನವೀಕೃತ ಎಸ್‍ಯುವಿಯು 1,200 ಸಿಸಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಾಮರ್ಥ್ಯದ ಎಂಜಿನ್ ಹೊಂದಿರುವುದರಿಂದ ಕೇಂದ್ರ ಸರ್ಕಾರದ ನಿಯಮಗಳಂತೆ ಈ ಎಸ್‍ಯುವಿಯ ಮೇಲೆ ಎಕ್ಸೈಸ್ ತೆರಿಗೆಯನ್ನು ವಿಧಿಸುವುದಿಲ್ಲ. ವಿಟಾರಾ ಬ್ರಿಝಾ ಎಸ್‍ಯುವಿಗೆ ಪೈಪೋಟಿ ನೀಡುತ್ತಿರುವ ಎಸ್‍ಯುವಿಗಳನ್ನು ಹಲವು ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಹೊಸ ಬ್ರಿಝಾ ಬಿಡುಗಡೆಯಾದ ನಂತರ ಬ್ರಿಝಾ ಮತ್ತೆ ಜನಪ್ರಿಯವಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.
Image Souce: GaadiWaadi


Click it and Unblock the Notifications