ಬಿಡುಗಡೆಯಾದ ಗ್ರಾಹಕರ ನೆಚ್ಚಿನ ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು...

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಹೊಸ ತಲೆಮಾರಿನ ವ್ಯಾಗನ್ ಆರ್ ಹ್ಯಾಚ್‍ಬ್ಯಾಕ್ ಕಾರನ್ನು ಇಂದು ಬಿಡುಗಡೆ ಮಾಡಲಾಗಿದ್ದು, ಈಗಾಗಲೆ ಮಾರುಕಟ್ಟೆಯಲ್ಲಿ ಜನಪ್ರೀಯತೆಯನ್ನು ಪಡೆದಿರುವ ಸ್ಯಾಂಟ್ರೋ ಕಾರುಗಳಿಗೆ ಪೈಪೋಟಿ ನೀಡಲಿದೆ.

ಬಿಡುಗಡೆಯಾದ ಗ್ರಾಹಕರ ನೆಚ್ಚಿನ ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು...

ಮೊದಲ ತಲೆಮಾರಿನ ವ್ಯಾಗನ್ ಆರ್ ಕಾರುಗಳು 1999ರಲ್ಲಿ ಬಿಡುಗಡೆಗೊಂಡಿದ್ದು, ಇದೀಗ ಸುಮಾರು 20 ವರ್ಷಗಳಲ್ಲಿ 22 ಲಕ್ಷಕ್ಕ್ಕು ಅಧಿಕವಾಗಿ ಮಾರಾಟಗೊಂಡಿದೆ. ಈ ನಿಟ್ಟಿನಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಬಿಡುಗಡೆಗೊಳಿಸಿರುವ ವ್ಯಾಗನ್ ಆರ್ ಕಾರಿನ ಬೆಲೆ, ಬುಕ್ಕಿಂಗ್, ಬಣ್ಣಗಳು ಮತ್ತು ಇನ್ನು ಹೆಚ್ಚಿನ ಮಾಹಿತಿಯನ್ನು ಇಂದಿನ ಈ ಲೇಖನದಲ್ಲಿ ಪಡೆಯಿರಿ.

ಬಿಡುಗಡೆಯಾದ ಗ್ರಾಹಕರ ನೆಚ್ಚಿನ ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು...

ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಸಂಸ್ಥೆಯ ಸ್ವಿಫ್ಟ್, ಎರ್ಟಿಗಾ ಮತ್ತು ಇಗ್ನಿಸ್ ಕಾರುಗಳಲ್ಲಿ ಬಳಸಲಾದ ಹಾರ್ಟ್‍ಟೆಕ್ಶ್ ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಿದ್ದು, ಹಳೆಯ ವ್ಯಾಗನ್ ಆರ್ ಕಾರಿಗಿಂತಲೂ ಹೆಚ್ಚಿನ ಬದಲಾವಣೆಗಳನ್ನು ಪಡೆದುಕೊಂಡಿದೆ. ಬಿಡುಗಡೆಗೂ ಮುನ್ನವೇ ಸ್ಪಾಟ್ ಟೆಸ್ಟಿಂಗ್ ವೇಳೆ ಮತ್ತು ಟೀಸರ್‍‍ಗಳ ಮೂಲಕ ಗ್ರಾಹಕರಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಬಿಡುಗಡೆಯಾದ ಗ್ರಾಹಕರ ನೆಚ್ಚಿನ ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು...

ಹೊಸ ವ್ಯಾಗನ್ ಆರ್ ವಿನ್ಯಾಸ

ಬಿಡುಗಡೆಯಾದ ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರಿನ ಮುಂಭಾಗದಲ್ಲಿ ಈ ಬಾರಿ ಹೊಸ ಗ್ರಿಲ್ ಡಿಸೈನ್, ನವೀಕರಿಸಲಾದ ಬಂಪರ್ ಮತ್ತು ಫಾಗ್ ಲ್ಯಾಂಪ್ ಅನ್ನು ಪಡೆದುಕೊಂಡಿದೆ. ಇದಲ್ಲದೇ ಅಪ್ಡೇಟೆಡ್ ವರ್ಟಿಕಲ್ ಟೈಲ್‍ಲೈಟ್ಸ್, ಕ್ರೋಮ್ ಸ್ಟ್ರಿಪ್ ಅನ್ನು ನೀಡಲಾಗಿದೆ.

ಬಿಡುಗಡೆಯಾದ ಗ್ರಾಹಕರ ನೆಚ್ಚಿನ ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು...

ಇನ್ನು ಕಾರಿನ ಸೈಡ್ ಪ್ರೊಫೈಲ್ ಬಗ್ಗೆ ಹೇಳುವುದಾದರೆ ಈ ಕಾರು 14 ಇಂಚಿನ ಅಲಾಯ್ ವ್ಹೀಲ್ಸ್, ಪ್ಲೋಟಿಂಗ್ ರೂಫ್ ಡಿಸೈನ್, ಮತ್ತು ಒಆರ್‍‍ವಿಎಂನ ಮೇಲೆ ಇಂಟಿಗ್ರೇಟೆಡ್ ಇಂಡಿಕೇಟರ್‍‍ಗಳನ್ನು ನೀಡಲಾಗಿದೆ. ಕಾರಿನ ಹಿಂಭಾಗದಲ್ಲಿರುವ ನಂಬರ್ ಪ್ಲೇಟ್‍ನ ಮೇಲೆ ಕ್ರೋಮ್ ಸ್ಟ್ರಿಪ್ ಹಾಗು 'Wagon R' ಬ್ಯಾಡ್ಜಿಂಗ್ ಅನ್ನು ನೀಡಲಾಗಿದೆ.

ಬಿಡುಗಡೆಯಾದ ಗ್ರಾಹಕರ ನೆಚ್ಚಿನ ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು...

ಹೊಸ ವ್ಯಾಗನ್ ಆರ್ ಕಾರಿನ ಸುತ್ತಳತೆ

ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಹಿಂದಿನ ಮಾದರಿಯ ಕಾರಿಗಿಂತಲೂ ಗಾತ್ರದಲ್ಲಿ ಹೆಚ್ಚಿನ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಹಿಂದಿನ ಮಾದರಿಗಿಂತಲೂ 60ಎಂಎಂ ಉದ್ದ, 145ಎಂಎಂ ಅಗಲ ಮತ್ತು 35ಎಂಎಂನ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಅಧಿಕವಾಗಿ ಪಡೆದುಕೊಂಡಿದೆ.

ಬಿಡುಗಡೆಯಾದ ಗ್ರಾಹಕರ ನೆಚ್ಚಿನ ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು...

ಬೆಲೆ ಮತ್ತು ಬುಕ್ಕಿಂಗ್

ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 4.19 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, ಖರೀದಿಸಲು ಬಯಸುವ ಗ್ರಾಹಕರು ನಿಮ್ಮ ಸಮೀಪದಲ್ಲಿರುವ ಮಾರುತಿ ಸುಜುಕಿ ಡೀಲರ್‍‍ಗಳ ಬಳಿ ರೂ. 11,000 ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಬಿಡುಗಡೆಯಾದ ಗ್ರಾಹಕರ ನೆಚ್ಚಿನ ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು...

ಮಾರುತಿ ಸುಜುಕಿ ವ್ಯಾಗನ್ ಆರ್ ಕಾರಿನ ಬೆಲೆಗಳು

Variants

Price

LXI 1.0 Litre

Rs 4,19,000

VXI 1.0 Litre

Rs 4,69,000

VXI 1.2 Litre

Rs 4,89,000

VXI AMT 1.0 Litre

Rs 5,16,000

ZXI 1.2 Litre

Rs 5,22,000

VXI AMT 1.2 Litre

Rs 5,36,000

ZXI AMT 1.2 Litre

Rs 5,69,000

ಬಿಡುಗಡೆಯಾದ ಗ್ರಾಹಕರ ನೆಚ್ಚಿನ ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು...

ವೇರಿಯಂಟ್‍ಗಳು

ಬಿಡುಗಡೆಯಾದ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಎಲ್ಎಕ್ಸ್ಐ, ವಿಎಕ್ಸ್ಐ ಮತ್ತು ಜೆಡ್ಎಕ್ಸ್ಐ ಎಂಬ ಮೂರು ವೇರಿಯಂಟ್‍‍ಗಳಲ್ಲಿ ಖರೀದಿಗೆ ಲಭ್ಯವಿದ್ದು, ಮಾರುಕಟ್ಟೆಯಲ್ಲಿರುವ ಹ್ಯುಂಡಾಯ್ ಸ್ಯಾಂಟ್ರೋ, ಟಾಟಾ ಟಿಯಾಗೊ, ರೆನಾಲ್ಟ್ ಕ್ವಿಡ್ ಮತ್ತು ದಟ್ಸನ್ ಗೋ ಕಾರುಗಳಿಗೆ ಪೈಪೋಟಿ ನೀಡಲಿದೆ.

MOST READ: ತಂದೆ-ತಾಯಿಗೆ ಮರೆಯಾಲಾಗದ ಉಡುಗೊರೆ ನೀಡಿದ ಬೆಂಗಳೂರು ಯುವಕ

ಬಿಡುಗಡೆಯಾದ ಗ್ರಾಹಕರ ನೆಚ್ಚಿನ ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು...

ವೈಶಿಷ್ಟ್ಯತೆಗಳು

ಹೊಸ ವ್ಯಾಗನ್ ಆರ್ ಕಾರಿನ ಒಳಭಾಗದಲ್ಲಿ ಡ್ಯುಯಲ್ ಟೋನ್ ಡ್ಯಾಶ್‍ಬೋರ್ಡ್, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಪೋರ್ಟ್ ಮಾಡುವ 7 ಇಂಚಿನ ಟಚ್‍ಸ್ಕ್ರೀನ್ ಒನ್ಫೋಟೈನ್ಮೆಂಟ್ ಸಿಸ್ಟಂ, ಮ್ಯಾನುವಲ್ ಎಸಿ ಕಂಟ್ರೋಲ್ಸ್, ವಿದ್ಯುತ್‍ನಿಂದ ಅಡ್ಜಸ್ಟ್ ಮಾಡಬಹುದಾದ ಒಆರ್‍‍ವಿಎಂ, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್ಸ್, ಪವರ್ ಮೀಟರ್ ಮತ್ತು ಅನಾಲಾಗ್ ಸ್ಪೀಡೊಮೀಟರ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಯಾದ ಗ್ರಾಹಕರ ನೆಚ್ಚಿನ ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು...

ಎಂಜಿನ್ ಸಾಮರ್ಥ್ಯ

2019ರ ಹೊಸ ವ್ಯಾಗನ್ ಆರ್ ಕಾರಿನ ಎಲ್ಲಾ ವೇರಿಯಂಟ್‍ಗಳು 1.0 ಲೀಟರ್ 3 ಸಿಲೆಂಡರ್ ಪೆಟ್ರೋಲ್ ಎಂಜಿನ್ ಸಹಾಯದಿಂಡ 67ಬಿಹೆಚ್‍ಪಿ ಮತ್ತು 90 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿರುತ್ತದೆ. ಮತ್ತು ಕಾರಿನ ವಿಎಕ್ಸ್ಐ ಹಾಗು ಜೆಡ್ಎಕ್ಸ್ಐ ವೇರಿಯಂಟ್ ಕಾರುಗಳು 1.2 ಲೀಟರ್ 4 ಸಿಲೆಂಡರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 90 ಬಿಹೆಚ್‍ಪಿ ಮತ್ತು 113ಎನ್ಎಮ್ ಟಾಕ್ರ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಬಿಡುಗಡೆಯಾದ ಗ್ರಾಹಕರ ನೆಚ್ಚಿನ ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು...

ಎರಡೂ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹಾಗು 1.2 ಲೀಟರ್ ಎಂಜಿನ್ ಅನ್ನು ಮಾರುತಿ ಸುಜುಕಿ ಸಂಸ್ಥೆಯ ಮಾರುತಿ ಎಜಿಎಸ್ (ಆಟೋ ಗೇರ್ ಶಿಫ್ಟ್) ಎಂಬ ಟ್ರಾನ್ಸ್ ಮಿಷನ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿರಲಿದೆ.

ಬಿಡುಗಡೆಯಾದ ಗ್ರಾಹಕರ ನೆಚ್ಚಿನ ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು...

ಸುರಕ್ಷಾ ಸಾಧನಗಳು

ಮಾರುತಿ ಸುಜುಕಿ ವ್ಯಾಗನ್ ಕಾರಿನಲ್ಲಿ ಈ ಬಾರಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚು ಒತ್ತನ್ನು ನೀಡಲಾಗಿದ್ದು, ಎಬಿಎಸ್‍ನೊಂದಿಗೆ ಇಬಿಡಿ, ಡ್ಯುಯಲ್ ಏರ್‍‍ಬ್ಯಾಗ್ಸ್, ಸೀಟ್ ಬೆಲ್ಟ್ ರಿಮೈಂಡರ್, ಹೈ ಸ್ಪೀಡ್ ಅಲರ್ಟ್ ಸಿಸ್ಟಂ ಮತ್ತು ರಿವರ್ಸ್ ಪಾರ್ಕಿಂಗ್ ಸೆನ್ಸಾರ್‍‍ಗಳನ್ನು ಅಳವಡಿಸಲಾಗಿದೆ.

MOST READ: ರಾಣಿಯಂತೆ ವಿಮಾನದಲ್ಲಿ ಒಬ್ಬಳೆ ಪ್ರಯಾಣಿಸಿದ ಮಹಿಳೆ..!

ಬಿಡುಗಡೆಯಾದ ಗ್ರಾಹಕರ ನೆಚ್ಚಿನ ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು...

ಲಭ್ಯವಿರುವ ಬಣ್ಣಗಳು

2019ರ ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಸುಪೀರಿಯರ್ ವೈಟ್, ಸಿಲ್ಕಿ ಸಿಲ್ವರ್, ಮ್ಯಾಗ್ಮಾ ಗ್ರೇ, ಆಟಮ್ನ್ ಆರೆಂಜ್, ನಟ್‍ಮೆಗ್ ಬ್ರೌನ್ ಮತ್ತು ಪೋಲ್‍ಸೈಡ್ ಬ್ಲೂ ಎಂಬ ಒಟ್ಟು 6 ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

More from DriveSpark

Article Published On: Wednesday, January 23, 2019, 13:19 [IST]
English summary
New Maruti Wagon R 2019 Launched In India. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+