ತಂದೆ-ತಾಯಿಗೆ ಮರೆಯಾಲಾಗದ ಉಡುಗೊರೆ ನೀಡಿದ ಬೆಂಗಳೂರು ಯುವಕ

ತಾಯಿ ಮತ್ತು ಮಕ್ಕಳ ನಡುವಿನ ನಂಟನ್ನು ಯಾರಿಂದಲೂ ವಿವರಿಸಲು ಸಾಧ್ಯವಿಲ್ಲ. ಅದರಲ್ಲೂ ಕೆಲ ಗಂಡು ಮಕ್ಕಳಿಗೆ ತಮ್ಮ ತಾಯ ಮುಖದಲ್ಲಿ ನಗುವನ್ನು ಕಾಣಲು ಏನನ್ನಾದರೂ ಮಾಡಬಲ್ಲರೆಂದು ಈಗಾಗಲೇ ಅದೆಷ್ಟೊ ಉದಾಹರಣೆಗಳನ್ನು ನಾವು ಕಂಡಿದ್ದೇವೆ. ಇಲ್ಲೂ ಕೂಡಾ ಅಂತದ್ದೊಂದು ಇಂಟ್ರಸ್ಟಿಂಗ್ ಸ್ಟೋರಿ ಇದೆ ನೋಡಿ.

ತಂದೆ-ತಾಯಿಗೆ ಮರೆಯಾಲಾಗದ ಉಡುಗೊರೆ ನೀಡಿದ ಬೆಂಗಳೂರು ಯುವಕ

ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಬದುಕಿನ ನಗುವನ್ನು ಮತ್ತು ಇನ್ನಿತರೆ ಸಂತೋಷದ ಕ್ಷಣಗಳನ್ನು ತ್ಯಾಗ ಮಾಡಿತ್ತಾರೆ. ಯಾಕೆಂದ್ರೆ ಅವರಿಗೆ ತಮ್ಮ ಮಕ್ಕಳೇ ಭವಿಷ್ಯವಾಗಿತ್ತೆ. ಹಾಗೆಯೇ ಮಕ್ಕಳಿಗೂ ಸಹ ತಾವು ಜೀವನದಲ್ಲಿ ನೊಂದಿದ್ದರೆ ತಾಯಿಯ ಮಡಿಲಲ್ಲಿ ತಲೆಯಿಟ್ಟು ಸ್ವಲ್ಪ ಹೊತ್ತು ಕಣ್ಣು ಮುಚ್ಚಿಕೊಂಡರೆ ತಮಗಿರುವ ನೋವು ಮಾಯವಾಗುತ್ತದೆ ಎಂಬ ಭಾವನೆಯು ಹಲವರಿಗಿದೆ.

ತಂದೆ-ತಾಯಿಗೆ ಮರೆಯಾಲಾಗದ ಉಡುಗೊರೆ ನೀಡಿದ ಬೆಂಗಳೂರು ಯುವಕ

ಇಂತಹ ಅದೆಷ್ಟೊ ನಮ್ಮ ನೋವುಗಳನ್ನು ತನ್ನದೆಂದು ಭಾವಿಸಿ ಕಷ್ಟ ಪಡುವ ತಂದೆ-ತಾಯಿಗೆ ನಾವು ಏನು ನೀಡಿದರು ಎಷ್ಟು ನೀಡಿದರೂ ಕಡಿಮೆ ಅಂತಾನೆ ಹೇಳಬಹುದು. ಬೆಂಗಳೂರು ಮೂಲದ ಯುವಕನೊರ್ವ ಸ್ವತಃ ತಾನು ದುಡಿದ ಹಣದಿಂದ ತನ್ನ ತಾಯಿಗೆ ಹೊಸ ಕಾರನ್ನು ಸರ್ಫೈಸ್‌ ಆಗಿ ನೀಡಿ ಕೊಂಡಾಡಿದ್ದಾನೆ.

ತಂದೆ-ತಾಯಿಗೆ ಮರೆಯಾಲಾಗದ ಉಡುಗೊರೆ ನೀಡಿದ ಬೆಂಗಳೂರು ಯುವಕ

ಹೌದು, ಬೆಂಗಳೂರಿನ ನಿವಾಸಿಯಾದ ಆರ್‍ಯನ್ ಗೌಡ ಎಂಬ ಯುವಕ ತಾನು ದುಡಿದ ಹಣದಲ್ಲಿ ತನ್ನ ತಂದೆಯ ಹುಟ್ಟುಹಬ್ಬದ ಪ್ರಯುಕ್ತ ಪೋಷಕರಿಗೆ ಮೊದಲ ಬಾರಿಗೆ ಐಷಾರಾಮಿ ಆಡಿ ಆರ್8 ಐಷಾರಾಮಿ ಕೌಪ್ ಕಾರನ್ನು ಉಡುಗೊರೆಯಾಗಿ ನೀಡಿರುವ ವಿಡೀಯೋ ನೋಡುಗರನ್ನು ಭಾವುಕರನ್ನಾಗಿ ಮಾಡಿದೆ.

ತಂದೆ-ತಾಯಿಗೆ ಮರೆಯಾಲಾಗದ ಉಡುಗೊರೆ ನೀಡಿದ ಬೆಂಗಳೂರು ಯುವಕ

ಆರ್‍ಯನ್ ಗೌಡ ಉಡುಗೊರೆಯಾಗಿ ನೀಡಿದ ಆಡೀ ಆರ್8 ಕ್ಯೂಪೆ ಕಾರು ಆಗ ತಾನೆ ಶೋರಂನಿಂದ ಮನೆಗೆ ಡೆಲಿವರಿಯಾಗಿರುವ ದೃಶ್ಯವನ್ನು ನೀವು ವಿಡಿಯೋನಲ್ಲಿ ಕಾಣಬಹುದು. ಮನಯ ಗೇಟ್ ಮುಂದೆ ಬಂದು ನಿಂತ ಕಾರನ್ನು ಆರ್‍ಯನ್ ತನ್ನ ತಂದೆ ತಾಯಿಗೆ ಯಾವ ರೀತಿ ಸರ್ಪ್ರೈಸ್ ಆಗಿ ತೋರಿಸಿದ್ದಾನೆ ನೀವಿ ನೋಡಿ.

ತಂದೆ-ತಾಯಿಗೆ ಮರೆಯಾಲಾಗದ ಉಡುಗೊರೆ ನೀಡಿದ ಬೆಂಗಳೂರು ಯುವಕ

ಮಗನು ನೀಡಿದ ಆ ಸರ್ಫೈಸ್‌ ಅನ್ನು ಕಂಡ ತಕ್ಷಣ ಆ ತಂದೆ-ತಾಯಿಯ ಮುಖದಲ್ಲಿ ಬಂದ ನಗೆಯು ವರ್ಣಾತೀತವಾದದ್ದು. ಕಾರನ್ನು ಕಂಡ ತಕ್ಷಣವೇ ಮಗನನ್ನು ತಬ್ಬಿಕೊಂಡು ತನ್ನ ಖುಷಿಯನ್ನು ವ್ಯಕ್ತಪಡಿಸಿದ ನಂತರ ತಾಯಿಯ ಬಾಯಲ್ಲಿ ಮಾತುಗಳೇ ಇಲ್ಲವಾಗಿತ್ತು.

ತಂದೆ-ತಾಯಿಗೆ ಮರೆಯಾಲಾಗದ ಉಡುಗೊರೆ ನೀಡಿದ ಬೆಂಗಳೂರು ಯುವಕ

ಇನ್ನು ಆರ್‍ಯನ್ ಗೌಡ ನೀಡಿದ ಆಡಿ ಆರ್8 ಕಾರಿನ ಬಗ್ಗೆ ಹೇಳುವುದಾದರೆ ಈ ಕಾರು ಪ್ರಪಂಚದಲ್ಲಿರುವ ಸ್ಪೋರ್ಟ್ಸ್ ಕಾರುಗಳಲ್ಲಿ ಒಂದಾಗಿದ್ದು, ಈ ಕಾರು ತಮ್ಮ ಸರಣಿಯಲ್ಲಿರುವ ವಿ10 ಪ್ಲಸ್ ಮಾದರಿಯಾಗಿದೆ ಮತ್ತು ಇದು ಬರೊಬ್ಬರಿ ರೂ. 2.72 ಕೋಟಿಯ ಬೆಲೆಯನ್ನು ಹೊಂದಿದೆ. ಈ ಕಾರು 2014ರಲ್ಲಿ ಬಿಡುಗಡೆಗೊಂಡರೂ 2016ರ ವರ್ಷನ್ ಕಾರನ್ನು ಇದು ಸ್ಥಾಳಾಂತರಿಸುತ್ತದೆ.

MOST READ: ಹೆಲ್ಮೆಟ್ ಇಲ್ಲ ಅಂತ ಸೈಕಲ್ ಸವಾರನನ್ನು ಹಿಡಿದ ಪೊಲೀಸರು. ಮುಂದೇನಾಯ್ತು.?

ತಂದೆ-ತಾಯಿಗೆ ಮರೆಯಾಲಾಗದ ಉಡುಗೊರೆ ನೀಡಿದ ಬೆಂಗಳೂರು ಯುವಕ

ಹೊಸ ಆಡಿ ಆರ್8 ಕಾರು ಮುಂಭಾಗದಲ್ಲಿ ಸಿಂಗಲ್ ಫ್ರೇಮ್-ಫ್ರಂಟ್ ಗ್ರಿಲ್‍ನ ಜೊತೆಗೆ ಹನಿ ಕಾಂಬ್ ಪ್ಯಾಟರ್ನ್ ಅನ್ನು ಪಡೆದುಕೊಂಡಿದೆ. ಕಾರಿನಲ್ಲಿ ಪೂರ್ಣ ಎಲ್ಇಡಿ ಹೆಡ್‍ಲ್ಯಾಂಪ್ಸ್ ಅನ್ನು ಪಡೆಯಲಾಗಿದ್ದು, ಗ್ರಾಹಕರು ಪೂರ್ಣ ಲೇಸರ್ ಬೆಳಕಿನ ಕ್ಲಸ್ಟರ್ಗಾಗಿ ಹೋಗಬಹುದು ಮತ್ತು ಅದು ಬೆಳಕನ್ನು ಸುಮಾರು 600 ಮೀಟರ್‍‍ವರೆಗು ಹೆಚ್ಚಿಸುತ್ತದೆ.

ತಂದೆ-ತಾಯಿಗೆ ಮರೆಯಾಲಾಗದ ಉಡುಗೊರೆ ನೀಡಿದ ಬೆಂಗಳೂರು ಯುವಕ

ವೈಶಿಷ್ಟ್ಯತೆಗಳು

ಆಡಿ ಆರ್8 ಕಾರು ಚಾಲಕ-ಆಧಾರಿತ ಕಾಕ್‍ಪಿಟ್ ಅನ್ನು ಕೂಡಾ ಪಡೆಯುತ್ತದೆ. ಇದು ಸಂಪೂರ್ಣವಾಗಿ ಡಿಜಿಟಲ್ ಮತ್ತು 12.3 ಇಂಚಿನ ಅಳತೆಯನ್ನು ಹೊಂದಿರುತ್ತದೆ. ವಾಹನದ ಒಳಾಂಗಣವನ್ನು ಕಸ್ಟಮೈಸ್ ಮಾಡಲು ಗ್ರಾಹಕರಿಗೆ ವಿವಿಧ ಆಯ್ಕೆಗಳನ್ನು ಆಯ್ಕೆ ಮಾಡಬಹುದು ಮತ್ತು ಇದು ಬ್ಯಾಂಗ್ & ಒಲುಫ್ಸೆನ್ನ 500-ವ್ಯಾಟ್ ಸುತ್ತಮುತ್ತಲಿನ ಸೌಂಡ್ ಸಿಸ್ಟಮ್ ಅನ್ನು ಸಹ ಪಡೆಯುತ್ತದೆ.

ತಂದೆ-ತಾಯಿಗೆ ಮರೆಯಾಲಾಗದ ಉಡುಗೊರೆ ನೀಡಿದ ಬೆಂಗಳೂರು ಯುವಕ

ಎಂಜಿನ್ ಸಾಮರ್ಥ್ಯ

ಆಡಿ ಆರ್8 ಕಾರು ಭಾರತದಲ್ಲಿ ಕೇವಲ ಸಿಂಗಲ್ ವೇರಿಯಂಟ್‍ನಲ್ಲಿ ಮಾರಾಟವಾಗುತ್ತಿದೆ. ಆಡಿ ಆರ್8 ಕಾರು 5,204ಸಿಸಿ ವಿ10 ಪೆಟ್ರೋಲ್ ಎಂಜಿನ್ ಸಹಾಯದಿಂದ 602ಬಿಹೆಚ್‍ಪಿ ಮತು 560ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು ಎಂಜಿನ್ ಅನ್ನು 7 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

MOST READ: ಭಾರತೀಯ ಸೇನೆಗಾಗಿ ವಿಶೇಷವಾಗಿ ಸಿದ್ದಗೊಂಡಿರುವ ಈ ಬೈಕ್ ವಿಶೇಷ ಏನು ಗೊತ್ತಾ?

ತಂದೆ-ತಾಯಿಗೆ ಮರೆಯಾಲಾಗದ ಉಡುಗೊರೆ ನೀಡಿದ ಬೆಂಗಳೂರು ಯುವಕ

ಆಡಿ ಆರ್8 ಕೌಪ್ ಸ್ಪೋರ್ಟ್ಸ್ ಕಾರು 3.2 ಸೆಕೆಂಡುಗಳಲ್ಲಿ ಗಂಟೆಗೆ 100 ಕಿಲೋಮೀಟರ್ ಚಲಿಸಬಲ್ಲ ಆಕ್ಸಿಲರೇಷನ್ ಪವರ್ ಮತ್ತು, ಗಂಟೆಗೆ 330 ಕಿಲೋಮೀಟರ್ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಪಡೆದುಕೊಂಡಿದೆ. ಅಷ್ಟೆ ಅಲ್ಲದೇ ಈ ಕಾರು ಆಲ್-ವ್ಹೀಲ್-ಡ್ರೈವ್ ಅನ್ನು ಕೂಡ ಪಡೆದುಕೊಂಡಿದೆ.

Source: THE HASSAN ROADSTERS

Most Read Articles

Kannada
English summary
Bangalore Origin Boy Gifted His Parents Audi R8 Car. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more