ಬಿಡುಗಡೆಯಾಗಲಿದೆ ರೆನಾಲ್ಟ್ ಕ್ವಿಡ್ ಫೇಸ್‍ಲಿಫ್ಟ್
ಫ್ರೆಂಚ್ ಮೂಲದ ವಾಹನ ಉತ್ಪಾದನಾ ಸಂಸ್ಥೆಯಾದ ರೆನಾಲ್ಟ್ ಹೊಸ ಕ್ವಿಡ್ ಫೇಸ್‍ಲಿಫ್ಟ್ ಕಾರನ್ನು ಬಿಡುಗಡೆಗೊಳಿಸಲಿದೆ. ಕ್ವಿಡ್ ಕಾರು 2015ರಲ್ಲಿ ಬಿಡುಗಡೆಗೊಂಡರು ಹಲವು ವರ್ಷಗಳ ನಂತರ ಮಿಡ್-ಸೈಕಲ್ ಅಪ್‍ಡೇಟ್ ಮಾಡಿ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಹೊಸ ರೆನಾಲ್ಟ್ ಕ್ವಿಡ್ ಫೇಸ್‍ಲಿಫ್ಟ್ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿರಲಿದೆ. ರೆನಾಲ್ಟ್ ಫೇಸ್‍ಲಿಫ್ಟ್ ನಲ್ಲಿ ಕೆಲವು ಫೀಚರ್ಸ್‍ಗಳನ್ನು ಅಪ್‍ಡೇಟ್ ಮಾಡಲಾಗಿದೆ. ಅವುಗಳಲ್ಲಿ ಪ್ರಮುಖವಾಗಿ ಸ್ಪ್ಲಿಟ್ ಹೆಡ್‍ಲ್ಯಾಂಪ್, ಎಲ್‍ಇಡಿ ಡಿಆರ್‍ಎಲ್‍ಎಸ್ , ಫ್ರಂಟ್ ಗ್ರೀಲ್, ನವೀಕರಿಸಲಾದ ಬಂಪರ್ ಮತ್ತು ಎಲ್‍ಇಡಿ ಟೈಲ್ ಲ್ಯಾಂಪ್‍ಗಳನ್ನು ಅಪ್‍ಡೇಟ್ ಮಾಡಲಾಗಿದೆ.

ಆಟೋಕಾರ್ ಸುದ್ದಿ ಮೂಲದ ಪ್ರಕಾರ ಇತ್ತೀಚೆಗೆ ಬಿಡುಗಡೆಯಾದ ರೆನಾಲ್ಟ್ ಟ್ರೈಬರ್ ನಲ್ಲಿರುವ ಕೆಲವೊಂದು ಫೀಚರ್ಸ್ ಗಳನ್ನು ರೆನಾಲ್ಟ್ ಫೇಸ್‍ಲಿಫ್ಟ್ ನಲ್ಲಿಯೂ ಅಳವಡಿಸಲಾಗಿದೆ. ಇದರಲ್ಲಿ ಸ್ಟಿರೀಂಗ್ ವ್ಹೀಲ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು 8.0 ಇಂಚಿನ ಟಚ್ ಸ್ಕ್ರೀನ್ ಅ್ಯಪಲ್ ಕಾರ್‍ಪ್ಲೇ ಹೊಂದಿದೆ. ಹೊಸ ಕ್ವಿಡ್‍ನಲ್ಲಿ ಸುರಕ್ಷತೆಗಾಗಿ ಕೆಲವು ಫೀಚರ್ಸ್ ಗಳನ್ನು ಅಪ್‍ಡೇಟ್ ಮಾಡಲಾಗಿದೆ.

ಹೊಸ ಕ್ವಿಡ್ ಕಾರಿನಲ್ಲಿ ಯಾವುದೇ ಮ್ಯಾಕಾನಿಕಲ್ ಬದಲಾವಣೆ ಮಾಡಲಾಗಿಲ್ಲ. ರೆನಾಲ್ಟ್ ಕ್ವಿಡ್ ಫೇಸ್‍ಲಿಫ್ಟ್ ನಲ್ಲಿ ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. 0.8 ಲೀಟರ್ ಎಂಜಿನ್ 54 ಬಿಎಚ್‍ಪಿ ಪವರ್ ಉತ್ಪಾದಿಸುತ್ತದೆ. 1.0 ಲೀಟರ್ ಪೆಟ್ರೋಲ್ ಎಂಜಿನ್ 68 ಬಿಎಚ್‍ಪಿ ಪವರ್ ಉತ್ಪಾದಿಸುತ್ತದೆ.

ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ಬರಲಿರುವ ಬಿಎಸ್-6 ಮಾಲಿನ್ಯ ನಿಯಮಕ್ಕೆ ತಕ್ಕಂತೆ ಕ್ವಿಡ್ ಫೇಸ್‍ಲಿಫ್ಟ್ ಅನ್ನು ಅಪ್‍ಡೇಟ್ ಮಾಡಲಿದೆ. ಈ ಮೂಲಕ ಹೊಸ ಕ್ವಿಡ್ ಫೇಸ್‍ಲಿಫ್ಟ್ ಬಿಎಸ್-6 ಪ್ರೇರಿತ ಎಂಜಿನ್ ಅನ್ನು ಹೊಂದಿರಲಿರುವ ಸಾಧ್ಯತೆಗಳಿವೆ.

ಭಾರತದ ಎಕ್ಸ್ ಶೋರೂಂ ಪ್ರಕಾರ ಪ್ರಸ್ತುತ ತಲೆಮಾರಿನ ರೆನಾಲ್ಟ್ ಕ್ವಿಡ್ ಬೆಲೆ 2.76 ಲಕ್ಷದಿಂದ 4.75 ಲಕ್ಷದವರೆಗೆ ಇದೆ. ಹೊಸ ಫೇಸ್‍ಲಿಫ್ಟ್ ಆವೃತ್ತಿಗೆ ರೂ.3 ಲಕ್ಷದಿಂದ 5 ಲಕ್ಷ ದರ ಹೊಂದಿರಲಿದೆ.

ಕ್ವಿಡ್ ಫೇಸ್‌ಲಿಫ್ಟ್ ಬಿಡುಗಡೆಯಾದ ನಂತರ ದಟ್ಸನ್ ರೆಡಿಗೊ, ಮಾರುತಿ ಸುಜುಕಿ ಆಲ್ಟೊ ಮತ್ತು ಆಲ್ಟೊ ಕೆ 10 ಮತ್ತು ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರುಗಳಿಗೆ ಪೈಪೋಟಿ ನೀಡಲಿದೆ.
MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ರೆನಾಲ್ಟ್ ಕಂಪನಿಯು ಡಸ್ಟರ್ ಕಾರನ್ನು ಅಪ್‍ಡೇಟ್ ಮಾಡಿ ಜುಲೈ ತಿಂಗಳಲ್ಲಿ ಬಿಡುಗಡೆಗೊಳಿಸಿದರೆ ಹೊಸ ಟ್ರೈಬರ್ ಕಾರನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದರು. ರೆನಾಲ್ಟ್ ಕ್ವಿಡ್ 2015 ರಲ್ಲಿ ಬಿಡುಗಡೆಯಾಗಿ ದೇಶಿಯ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದರು ಇಲ್ಲಿಯ ತನಕ ಕ್ವಿಡ್ ಕಾರನ್ನು ಅಪ್‍ಡೇಟ್ ಮಾಡಲಾಗಿಲ್ಲ. ಆದರೆ ಹಲವು ವರ್ಷದ ಬಳಿಕ ರೆನಾಲ್ಟ್ ಕ್ವಿಟ್ ಮಿಡ್-ಸೈಕಲ್ ಅಪಡೇಟ್ ಮಾಡಿ ಬಿಡುಗಡೆಯಾಗಲಿದೆ.
MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ರೆನಾಲ್ಟ್ ಕಂಪನಿಯ ಅತೀ ಹೆಚ್ಚು ಮಾರಾಟವಾದ ಕಾರುಗಳ ಸಾಲಿನಲ್ಲಿ ಕ್ವಿಡ್ ಕಾರು ಕೂಡ ಒಂದಾಗಿದೆ. ಇದೀಗ ಇದೇ ಕಾರು ಹೊಸ ವೈಶಿಷ್ಟ್ಯಗಳು ಮತ್ತು ಹೊಸ ಸುರಕ್ಷತಾ ಉಪಕರಣಗಳನ್ನು ದೇಶಿಯ ಮಾರುಕಟ್ಟೆ ಪ್ರವೇಶಿಸಲಿದೆ. ರೆನಾಲ್ಟ್ ಕ್ವಿಡ್ ಫೇಸ್‍ಲಿಫ್ಟ್ ಬಿಎಸ್-6 ಪ್ರೇರಿತ ಎಂಜಿನ್ ಹೊಂದುವ ಸಾಧ್ಯತೆಗಳಿವೆ.


Click it and Unblock the Notifications