ಬಿಡುಗಡೆಗೆ ಸಿದ್ಧವಾದ ಸ್ಕೋಡಾ ಆಫ್ ರೋಡ್ ಕೋಡಿಯಾಕ್ ಸ್ಕೌಟ್
ಸ್ಕೋಡಾ ತನ್ನ ಆಫ್ ರೋಡ್ ಮಾದರಿಯ ಕೋಡಿಯಾಕ್ ಎಸ್‍ಯುವಿ ಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಸ್ಕೋಡಾ ಕೋಡಿಯಾಕ್ ಸ್ಕೌಟ್ ಈಗಾಗಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, ಭಾರತದಲ್ಲೂ ಬಿಡುಗಡೆಯಾಗುವ ಉತ್ಸಾಹದಲ್ಲಿದೆ.

ಸ್ಟೈಲ್ ಮತ್ತು ಎಲ್ & ಕೆ ವೆರಿಯಂಟ್‍ಗಳ ನಂತರ ಸ್ಕೋಡಾ ಕೋಡಿಯಾಕ್ ಸ್ಕೌಟ್ ಮೂರನೇ ಮಾದರಿಯದಾಗಿರುತ್ತದೆ. ಉಳಿದ ಮಾದರಿಗಳಿಗೆ ಹೋಲಿಸಿದರೆ ಹೊಸ ಕೋಡಿಯಾಕ್ ಸ್ಕೌಟ್ ಹೆಚ್ಚಾಗಿ ಆಫ್ ರೋಡ್ ನಲ್ಲಿ ಹೆಚ್ಚು ಬಲಶಾಲಿಯಾಗಿರುತ್ತದೆ. ಉಳಿದ ಸ್ಕೋಡಾ ಮಾದರಿಯ ಕಾರುಗಳಿಗೆ ಹೋಲಿಸಿದರೆ ಕೊಡಿಯಾಕ್ ಮಾದರಿಯು ಅಧಿಕ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುತ್ತದೆ. ಬೇರೆ ಕಾರುಗಳು 188 ಎಂಎಂ ಹೊಂದಿದ್ದರೆ ಸ್ಕೋಡಾ ಕೊಡಿಯಾಕ್ 194 ಎಂಎಂ ಹೊಂದಿದೆ. ಇದು ಕೊಡಿಯಾಕ್ ಕಾರಿಗೆ ಉತ್ತಮವಾಗಿ ಆಫ್ ರೋಡ್ ಗಳಲ್ಲಿ ಓಡಾಡಲು ಅನುಕೂಲವಾಗಿದೆ.

ಬೇರೆ ಮಾದರಿಗಳಲ್ಲಿರುವಂತೆ ಸ್ಕೋಡಾ ಕೋಡಿಯಾಕ್ ಸ್ಕೌಟ್ ಸಹ ಎಡಬ್ಲ್ಯುಡಿ ರಚನೆಯನ್ನು ಹೊಂದಿದೆ. ಇದು ಇಕೋ, ಕಂಫರ್ಟ್, ನಾರ್ಮಲ್, ಸ್ಪೊರ್ಟ್, ಇಂಡಿವಿಷುವಲ್ ಮತ್ತು ಸ್ನೊ ಮೋಡ್ ಗಳಲ್ಲಿ ಡ್ರೈವ್ ಮಾಡಲು ಸಹಾಯಕವಾಗಿದೆ.

ಈ ಕಾರಿನಲ್ಲಿ ಹೆಚ್ಚುವರಿಯಾಗಿ ಆಫ್ ರೋಡ್ ಬಟನ್ ನೀಡಲಾಗಿದ್ದು, ಅದು ಥ್ರಾಟಲ್ ರೆಸ್ಪಾನ್ಸ್ ಕಡಿಮೆ ಮಾಡಲು ಮತ್ತು ಸಸ್ಪೆಷನ್ ರಚನೆಯನ್ನು ಬದಲಾಯಿಸಲು ಅನುಕೂಲವಾಗಿದೆ. ಈ ಬಟನ್ ಆಫ್ ರೋಡ್ ಸ್ವಿಚ್ ಹಿಲ್ ಹೊಲ್ಡ್ ಅಸಿಸ್ಟ್ ಮಾಡಲು ಮತ್ತು ಹಿಲ್ ಡಿಸೆಂಟ್ ಫಂಕ್ಷನ್ ಗಳನ್ನು ಕಂಟ್ರೋಲ್ ಮಾಡಲು ಸಹಾಯಕವಾಗಿದೆ.

ಈ ಮೇಲ್ಕಂಡ ಮೆಕಾನಿಕಲ್ ಮತ್ತು ಟೆಕ್ನಿಕಲ್ ವ್ಯತ್ಯಾಸಗಳಲ್ಲದೇ ಸ್ಕೋಡಾ ಕೋಡಿಯಾಕ್ ಸ್ಕೌಟ್ ಹಲವಾರು ಕಾಸ್ಮೆಟಿಕ್ ಬದಲಾವಣೆಗಳನ್ನು ಒಳಗೊಂಡಿದೆ. 19 ಇಂಚಿನ ವಿಭಿನ್ನ ವಾಗಿ ಡಿಸೈನ್ ಮಾಡಿರುವ ಅಲಾಯ್ ವ್ಹೀಲ್ಸ್ , ಸಿಲ್ವರ್ ಡಿಟೈಲ್ಸ್ ಆನ್ ಗ್ರಿಲ್, ರೂಫ್ ರೇಲ್ಸ್, ಒಆರ್‍ವಿಎಂ ಹೌಸಿಂಗ್, ಸೈಡ್ ವಿಂಡೋ ಮತ್ತು ಫ್ರಂಟ್ , ರೇರ್ ಅಂಡರ್ ಬಾಡಿಗಳನ್ನು ಇದು ಒಳಗೊಂಡಿದೆ.

ಸ್ಕೋಡಾ ಕೋಡಿಯಾಕ್ ಸ್ಕೌಟ್ ನ ಒಳ ವಿನ್ಯಾಸವು ಪೂರ್ಣವಾಗಿ ಬ್ಲಾಕ್ ಕ್ಯಾಬಿನ್ ಹೊಂದಿದ್ದು, ಸೀಟ್‍ಗಳ ಮೇಲೆ ಮತ್ತು ಗ್ಲೌವ್ ಬಾಕ್ಸ್ ಮೇಲೆ ಸ್ಕೌಟ್ ಬ್ಯಾಡ್ಜ್ ಹಾಕಲಾಗಿದೆ. ಇನ್ನು ಫಿಚರ್‍ಗಳ ಬಗ್ಗೆ ಹೇಳುವುದಾದರೆ ಸ್ಕೋಡಾ ಸ್ಟೈಲ್ ಮಾದರಿ ಹೊಂದಿದ್ದ ಎಲ್ಲಾ ಸೌಲಭ್ಯಗಳನ್ನು ಸ್ಕೋಡಾ ಕೋಡಿಯಾಕ್ ಸ್ಕೌಟ್ ಹೊಂದಿದೆ. ಎಲ್ಇಡಿ ಹೆಡ್ ಲ್ಯಾಂಪ್ಸ್, ಮಲ್ಟಿಪಲ್ ಏರ್ ಬ್ಯಾಗ್ ( ಫ್ರಂಟ್ ನಲ್ಲಿ, ಸೈಡ್ ನಲ್ಲಿ ಮತ್ತು ಕರ್ಟನ್ ನಲ್ಲಿ) ಕೀ ಲೆಸ್ ಎಂಟ್ರಿ, ಸ್ಟಾರ್ಟ್/ಸ್ಟಾಪ್ ಬಟನ್, ಪವರ್ ಅಡ್ಜಸ್ಟಬಲ್ ಡ್ರೈವರ್ ಮತ್ತು ಪ್ಯಾಸೆಂಜರ್ ಸೀಟುಗಳು ಅವುಗಳಲ್ಲಿ ಸೇರಿವೆ.
MOST READ: ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಹೊಸ ಮಹೀಂದ್ರಾ ಟಿಯುವಿ 300 ಫೇಸ್‍ಲಿಫ್ಟ್ ಕಾರು..

ಸ್ಕೋಡಾ ಕೋಡಿಯಾಕ್ ಸ್ಕೌಟ್ ಸಹ ಬೇರೆ ಮಾದರಿಗಳಲ್ಲಿರುವಂತೆ 150 ಬಿಹೆಚ್‍ಪಿ ಉತ್ಪಾದನಾ ಸಾಮರ್ಥ್ಯವಿರುವ 2.0 ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 7 ಸ್ಪೀಡ್ ಡಿಎಸ್‍ಜಿ ಟ್ರಾನ್ಸ್ ಮಿಷನ್ ಹೊಂದಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಆಫ್‍ರೋಡ್ ಗೆ ಹೆಚ್ಚು ಆದ್ಯತೆ ನೀಡುವ ಸ್ಕೋಡಾ ಕೋಡಿಯಾಕ್ ಸ್ಕೌಟ್ ಈ ಮಾದರಿಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಲಿದೆ. ಸ್ಕೋಡಾ ಕೋಡಿಯಾಕ್ ಸ್ಟೈಲ್ ಮತ್ತುಎಲ್ & ಕೆ ವೆರಿಯಂಟ್‍ಗಳು ದೇಶೀಯ ಮಾರುಕಟ್ಟೆಯಲ್ಲಿ ಭಾರತದ ಎಕ್ಸ್ ಶೋ ರೂಂ ದರಗಳಲ್ಲಿ ಕ್ರಮವಾಗಿ ರೂ. 35.57 ಲಕ್ಷ ಮತ್ತು ರೂ. 36.79 ಲಕ್ಷಗಳಿಗೆ ಮಾರಾಟವಾಗಿವೆ. ಸ್ಕೋಡಾ ಕೋಡಿಯಾಕ್ ಸ್ಕೌಟ್ ಬಿಡುಗಡೆಯಾದ ನಂತರ ಇದೇ ಬೆಲೆಯಲ್ಲಿ ಮಾರಾಟವಾಗುವ ಸಾಧ್ಯತೆಯಿದೆ.


Click it and Unblock the Notifications