ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಹೊಸ ಮಹೀಂದ್ರಾ ಟಿಯುವಿ 300 ಫೇಸ್‍ಲಿಫ್ಟ್ ಕಾರು..

ಮಹೀಂದ್ರಾ ಸಂಸ್ಥೆಯು ತನ್ನ ಹೊಸ ಕಾರುಗಳ ಸರಣಿಯಲ್ಲಿ ಮಹತ್ವದ ಬದಲಾವಣೆ ತರುತ್ತಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಟಿಯುವಿ 300 ಫೇಸ್‌ಲಿಫ್ಟ್ ಕಾರುಗಳನ್ನು ಬಿಎಸ್-6 ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ. ಇದೇ ಮೊದಲ ಬಾರಿಗೆ ಯಾವುದೇ ಮುಸುಕಿಲ್ಲದೇ ಬಿಡುಗಡೆಗೆ ಸಿದ್ದಗೊಂಡಿರುವ ಹಾಗೆ ಮಹೀಂದ್ರಾ ಟಿಯುವಿ 300 ಫೇಸ್‍ಲಿಫ್ಟ್ ಕಾರು ಕಾಣಿಸಿಕೊಂಡಿದೆ.

ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಹೊಸ ಮಹೀಂದ್ರಾ ಟಿಯುವಿ 300 ಫೇಸ್‍ಲಿಫ್ಟ್ ಕಾರು..

ಮಹೀಂದ್ರಾ ಸಂಸ್ಥೆಯು ಬಿಡುಗಡೆಗೊಳಿಸಲಿರುವ ಹೊಸ ಟಿಯುವಿ 300 ಫೇಸ್‌ಲಿಫ್ಟ್ ಕಾರಿನ ಎಂಜಿನ್ ಕಾರ್ಯಕ್ಷಮತೆಯನ್ನು ಪರೀಕ್ಷಿಸುವಾದ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದ್ದು, ಎಸ್‍ಯುವಿ ಪ್ರಿಯರಲ್ಲಿ ಕುತೂಹಲವನ್ನುಂಟು ಮಾದಿದೆ. ಸಾಧಾರಣ ಟಿಯುವಿ 300 ಫೇಸ್‌ಲಿಫ್ಟ್ ಕಾರಿಗಿಂತಲೂ ಈ ಬಾರಿ ಹೆಚ್ಚು ಗುರುತರ ಬದಲಾವಣೆಗಳನ್ನು ಸ್ಪಾಟ್ ಟೆಸ್ಟಿಂಗ್‍ನಲ್ಲಿ ಸಿಕ್ಕ ಈ ಚಿತ್ರದಲ್ಲಿ ನೀವು ಕಾಣಬಹುದಾಗಿದೆ.

ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಹೊಸ ಮಹೀಂದ್ರಾ ಟಿಯುವಿ 300 ಫೇಸ್‍ಲಿಫ್ಟ್ ಕಾರು..

ಡೀಲರ್ ಯಾರ್ಡ್‍ನಲ್ಲಿ ಕಾಣಿಸಿಕೊಂಡ ಹೊಸ ಮಹೀಂದ್ರಾ ಟಿಯುವಿ 300 ಫೇಸ್‌ಲಿಫ್ಟ್ ಕಾರಿನಲ್ಲಿ ಕ್ಲಿಯರ್ ಲೆನ್ಸ್ ಸ್ಮೋಕ್ಡ್ ಹೆಡ್‍ಲೈಟ್ಸ್ ಹಾಗು ಟೈಲ್‍ಲೈಟ್ಸ್, ಗನ್ ಮೆಟಲ್ ಫಿನಿಷ್ಡ್ ಅಲಾಯ್ ವ್ಹೀಲ್ಸ್, ಸ್ಲೀಕ್ ರೂಫ್ ರೈಲ್ಸ್, ನವೀಕರಿಸಲಾದ ಇಂಟೀರಿಯರ್ ಹಾಗು ಹೊಸ ಸ್ಟೈಲಿಷ್ ರಿಯರ್ ವ್ಹೀಲ್ ಕವರ್ ಅನ್ನು ಗಮನಿಸಬಹುದಾಗಿದೆ.

ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಹೊಸ ಮಹೀಂದ್ರಾ ಟಿಯುವಿ 300 ಫೇಸ್‍ಲಿಫ್ಟ್ ಕಾರು..

ಈ ಹಿಂದೆಯೆ ಮಹೀಂದ್ರಾ ಸಂಸ್ಥೆಯು ಸಾಮಾನ್ಯ ಮಾದರಿಯ ಟಿಯುವಿ300 ಕಾರುಗಳಲ್ಲಿ ಲಗ್ಷುರಿ ಎಡಿಷನ್ ಕಿಟ್ ಒದಗಿಸುವ ಬಗ್ಗೆ ಅಧಿಕೃತ ವೆಬ್‌ಸೈಟ್‌ನಲ್ಲೇ ಮಾಹಿತಿ ನೀಡಿದ್ದು, ಟಿ8 ವೆರಿಯೆಂಟ್‌ಗಳಲ್ಲಿ ಮಾತ್ರ ಈ ವಿಶೇಷ ಸೌಲಭ್ಯಗಳು ದೊರೆಯಲಿವೆ. ಇದರಿಂದಾಗಿ ಎಸ್‌ಯುವಿ ಮಾದರಿಗಳಲ್ಲೇ ಅತ್ಯುತ್ತಮ ಆವೃತ್ತಿಯಾಗಲಿರುವ ಟಿಯುವಿ300 ಕಾರುಗಳು, ಮತ್ತಷ್ಟು ಗ್ರಾಹಕರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಹೊಸ ಮಹೀಂದ್ರಾ ಟಿಯುವಿ 300 ಫೇಸ್‍ಲಿಫ್ಟ್ ಕಾರು..

ಮಹೀಂದ್ರಾ ನೀಡಿರುವ ಮಾಹಿತಿ ಪ್ರಕಾರ ಟಿಯುವಿ300 ಮಾದರಿಯಲ್ಲೇ ಟಿ8 ಸರಣಿ ಕಾರುಗಳಲ್ಲಿ ಮಾತ್ರ ಲಗ್ಷುರಿ ಕಿಟ್ ಬಳಕೆ ಮಾಡಲಾಗಿದ್ದು, ಹೊಸ ಕಾರುಗಳಲ್ಲಿ ಫ್ಲಕ್ಸ್ ಲೆದರ್ ಸೀಟುಗಳು, ಲೆದರ್‌ನಿಂದ ಕವರ್ ಮಾಡಲಾದ ಸ್ಟ್ರೀರಿಂಗ್ ವೀಲ್ಹ್, 6.2-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ನೆವಿಗೆಷನ್ ಮತ್ತು ರಿವರ್ಸ್ ಕ್ಯಾಮೆರಾ ಸೌಲಭ್ಯವಿರಲಿದೆ.

ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಹೊಸ ಮಹೀಂದ್ರಾ ಟಿಯುವಿ 300 ಫೇಸ್‍ಲಿಫ್ಟ್ ಕಾರು..

ಟಿಯುವಿ300 ಟಿ8 ಕಾರುಗಳ ಓಆರ್‌ವಿಎಂ, ಲೋವರ್ ಫ್ರಂಟ್ ಗ್ರಿಲ್, ಡೋರ್ ಹ್ಯಾಂಡಲ್ ಮೇಲೆ ಕೋರ್ಮ್ ಗಾರ್ನಿಶ್ ಬಳಕೆ ಮಾಡಲಾಗಿದ್ದು, ಇದು ಕಾರಿನ ಖದರ್ ಒದಲಿಸಲಿದೆ. ಜೊತೆಗೆ ಕಡಿಮೆ ಬೆಲೆಗಳಲ್ಲಿ ಲಗ್ಷುರಿ ಫಿಚರ್ಸ್ ಕಾರುಗಳನ್ನು ಆಯ್ಕೆ ಮಾಡುವ ಗ್ರಾಹಕರಿಗೆ ಇದೊಂದು ಉತ್ತಮ ಆಯ್ಕೆ ಎನ್ನಬಹುದು.

ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಹೊಸ ಮಹೀಂದ್ರಾ ಟಿಯುವಿ 300 ಫೇಸ್‍ಲಿಫ್ಟ್ ಕಾರು..

ಇನ್ನು ಕಾರಿನಲ್ಲಿರುವ ಮಾಹಿತಿ ಅಂಶಗಳನ್ನು ಹೆಚ್ಚಿಸಲು ಜಿಪಿಎಸ್ ಬಳಕೆ ಮಾಡಿರುವ ಮಹೀಂದ್ರಾ ಸಂಸ್ಥೆಯು ಬ್ಯಾನೆಟ್ ಸ್ಟ್ರೀಪ್, ಟೈಲ್ ಲೈಟ್ ಕ್ಲಸ್ಟರ್, ಉತ್ಕೃಷ್ಟ ಗುಣಮಟ್ಟದ ಫ್ಲೋರ್ ಮ್ಯಾಟ್ ಒದಗಿಸಿರುವುದು ಕಾರಿನ ವೈಶಿಷ್ಟ್ಯತೆಯನ್ನೇ ಬದಲಿಸಿದೆ.

ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಹೊಸ ಮಹೀಂದ್ರಾ ಟಿಯುವಿ 300 ಫೇಸ್‍ಲಿಫ್ಟ್ ಕಾರು..

ಎಂಜಿನ್ ವೈಶಿಷ್ಟ್ಯತೆ

ಸದ್ಯ ಟಿಯುವಿ 300 ಕಾರುಗಳು 1.5-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಮಾಡಬಹುದಾಗಿದ್ದು, 100-ಬಿಎಚ್‌ಪಿ, 240-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು. ಇದೇ ಎಂಜಿನ್ ಫೇಸ್‌ಲಿಫ್ಟ್ ವರ್ಷನ್ ಇರಬಹುದು ಎನ್ನಲಾಗಿದೆ.

ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಹೊಸ ಮಹೀಂದ್ರಾ ಟಿಯುವಿ 300 ಫೇಸ್‍ಲಿಫ್ಟ್ ಕಾರು..

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಮೊಟ್ಟಮೊದಲ ಬಾರಿಗೆ ಡೀಸೆಲ್ ಕಾರು ಆವೃತ್ತಿಗಳಲ್ಲಿ ಎಎಂಟಿ ಸೌಲಭ್ಯ ಒದಗಿಸುವ ಆಟೋ ಉದ್ಯಮದಲ್ಲಿ ಹೊಸ ಸಂಚಲಕ್ಕೆ ಕಾರಣವಾಗಿದ್ದೆ ಮಹೀಂದ್ರಾ ಸಂಸ್ಥೆ. ಇದೀಗ ಟಾಟಾ ಮೋಟಾರ್ಸ್ ಕೂಡಾ ತನ್ನ ನೆಕ್ಸಾನ್ ಎಸ್‌ಯುವಿಗಳಲ್ಲೂ ಡೀಸೆಲ್ ಎಎಂಟಿಯನ್ನು ಪರಿಚಯಿಸಿರುವುದನ್ನು ನಾವು ಗಮನಿಸಬಹುದು.

Source: Cartoq

Most Read Articles

Kannada
English summary
Mahindra TUV300 Compact SUV Facelift: This is IT! Read In Kannada
Story first published: Wednesday, April 17, 2019, 12:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X