ಹೊಸ ತಲೆಮಾರಿನ ಹೋಂಡಾ ಸಿಟಿಯಲ್ಲಿ ಮೊದಲ ಬಾರಿಗೆ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ..!

ನ್ಯೂ ಜನರೇಷನ್ ಹೋಂಡಾ ಸಿಟಿ ಆವೃತ್ತಿಯು ಮುಂಬರುವ ದಿನಗಳಲ್ಲಿ ಭಾರೀ ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಲು ಸಜ್ಜಾಗುತ್ತಿದ್ದು, 2020ರ ದೆಹಲಿ ಆಟೋಎಕ್ಸೋ ನಂತರ ಬಿಡುಗಡೆಯಾಗಲಿರುವ ಹೊಸ ಕಾರಿನಲ್ಲಿ ಈ ಬಾರಿ ಮೂರು ವಿವಿಧ ಎಂಜಿನ್ ಆಯ್ಕೆಗಳನ್ನು ನೀಡಲಾಗುತ್ತಿದೆ.

ಹೊಸ ತಲೆಮಾರಿನ ಹೋಂಡಾ ಸಿಟಿಯಲ್ಲಿ ಮೊದಲ ಬಾರಿಗೆ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ..!

ಹೋಂಡಾ ಸಂಸ್ಥೆಯು ಭಾರತ ಸೇರಿದಂತೆ ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ತನ್ನ ಜನಪ್ರಿಯ ಸಿಟಿ ಸೆಡಾನ್ ಕಾರಿನ 5ನೇ ತಲೆಮಾರಿನ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆಯನ್ನು ಅರಿಯಲು ಈಗಾಗಲೇ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದೆ. ಇದರಿಂದ ಬಿಡುಗಡೆಯ ಸನಿಹದಲ್ಲಿರುವ ಹೊಸ ಸಿಟಿ ಕಾರು 2020ರ ಫೆಬ್ರುವರಿಯಲ್ಲಿ ನಡೆಯಲಿರುವ ಆಟೋ ಎಕ್ಸ್‌ಪೋ ನಂತರ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.

ಹೊಸ ತಲೆಮಾರಿನ ಹೋಂಡಾ ಸಿಟಿಯಲ್ಲಿ ಮೊದಲ ಬಾರಿಗೆ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ..!

ಇದೇ ಮೊದಲ ಬಾರಿಗೆ ಹೋಂಡಾ ಸಂಸ್ಥೆಯು ಸಿಟಿ ಸೆಡಾನ್‌ನಲ್ಲಿ ಹೈಬ್ರಿಡ್ ಮಾದರಿಯನ್ನು ಕೂಡಾ ಬಿಡುಗಡೆಗೊಳಿಸುವ ಸಾಧ್ಯತೆಗಳಿದ್ದು, ಹೋಂಡಾ ನಿರ್ಮಾಣದ ಕಾರುಗಳಲ್ಲಿ ಅಕಾರ್ಡ್ ಸೆಡಾನ್ ನಂತರ ಹೈಬ್ರಿಡ್ ತಂತ್ರಜ್ಞಾನ ಹೊಂದಿದ 2ನೇ ಕಾರು ಮಾದರಿ ಇದಾಗಿರಲಿದೆ.

ಹೊಸ ತಲೆಮಾರಿನ ಹೋಂಡಾ ಸಿಟಿಯಲ್ಲಿ ಮೊದಲ ಬಾರಿಗೆ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ..!

ಕಳೆದ ಮಾರ್ಚ್‌ನಲ್ಲಿ ಸಿವಿಕ್ ಬಿಡುಗಡೆಯ ನಂತರ ಸಿಟಿ ಸೆಡಾನ್ ಕಾರಿನ ಮೇಲೆ ಹೆಚ್ಚಿನ ಗಮನಹರಿಸಿರುವ ಹೋಂಡಾ ಸಂಸ್ಥೆಯು 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಹೊಸ ತಲೆಮಾರಿನ ಸಿಟಿ ಕಾರನ್ನು ಪ್ರದರ್ಶನ ಮಾಡಿದ ನಂತರವಷ್ಟೇ ಬಿಡುಗಡೆ ಮಾಡಲಿದೆ.

ಹೊಸ ತಲೆಮಾರಿನ ಹೋಂಡಾ ಸಿಟಿಯಲ್ಲಿ ಮೊದಲ ಬಾರಿಗೆ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ..!

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸಿಟಿ ಕಾರಿಗಿಂತ ಹೊಸ ಆವೃತ್ತಿಯು ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಳ್ಳಲಿದ್ದು, 2014ರಲ್ಲಿ 4ನೇ ತಲೆಮಾರಿನ ಸಿಟಿ ಸೆಡಾನ್ ಕಾರು ಬಿಡುಗಡೆ ಮಾಡಿದ ಬಳಿಕ ಯಾವುದೇ ಬದಲಾವಣೆ ತರದ ಹೋಂಡಾ ಸಂಸ್ಥೆಯು ಇದೇ ಮೊದಲ ಬಾರಿಗೆ ಹೈಬ್ರಿಡ್ ತಂತ್ರಜ್ಞಾನ ಪರಿಚಯಿಸುತ್ತಿದೆ. 5ನೇ ತಲೆಮಾರಿನ ಸಿಟಿ ಸೆಡಾನ್ ಕಾರು ಪ್ರಸ್ತುತ ಮಾದರಿಗಿಂತಲೂ ತುಸು ದೊಡ್ಡ ಗಾತ್ರವನ್ನು ಹೊಂದಿದ್ದು, ಬೂಟ್ ಸ್ಪೆಸ್ ಜೊತೆಗೆ ಹಿಂಬದಿಯ ಸವಾರರಿಗೆ ವಿಸ್ತರಿತ ಲೆಗ್ ರೂಂ ಮತ್ತು ಹೆಡ್ ರೂಂ ನೀಡಿರುವುದು ಆರಾಮದಾಯಕ ಪ್ರಯಾಣಕ್ಕೆ ಅನುಕೂಲಕರವಾಗಲಿದೆ.

ಹೊಸ ತಲೆಮಾರಿನ ಹೋಂಡಾ ಸಿಟಿಯಲ್ಲಿ ಮೊದಲ ಬಾರಿಗೆ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ..!

ಸದ್ಯ ಥೈಲ್ಯಾಂಡ್‌ನಲ್ಲಿ ಹೊಸ ತಲೆಮಾರಿನ ಕಾರಿನ ಟೆಸ್ಟಿಂಗ್ ಪ್ರಕ್ರಿಯೆ ಚಾಲನೆ ನೀಡಿರುವ ಹೋಂಡಾ ಸಂಸ್ಥೆಯು ಬಿಎಸ್-6 ನಿಯಮಗಳಿಗೆ ಅನುಗುಣವಾಗಿ ಹೊಸ ಕಾರಿನ ಎಂಜಿನ್ ಅನ್ನು ಅಲ್ಲಿಯೇ ಅಭಿವೃದ್ಧಿಪಡಿಸಿದೆ.

ಹೊಸ ತಲೆಮಾರಿನ ಹೋಂಡಾ ಸಿಟಿಯಲ್ಲಿ ಮೊದಲ ಬಾರಿಗೆ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ..!

ಥೈಲ್ಯಾಂಡ್‌ನಲ್ಲಿರುವ ಹೋಂಡಾ ಕಾರು ಉತ್ಪಾದನಾ ಘಟಕವು ಏಷ್ಯಾದ ಅತಿದೊಡ್ಡ ಕಾರು ಉತ್ಪಾದನಾ ಘಟಕ ಎಂಬ ಹೆಗ್ಗಳಿಕೆ ಹೊಂದಿದ್ದು, ಇಲ್ಲಿಂದಲೇ ಹೊಸ ಸಿಟಿ ಸೆಡಾನ್ ಕಾರು ಅಂತಿಮ ರೂಪ ಪಡೆದುಕೊಂಡು ಭಾರತಕ್ಕೆ ಪ್ರವೇಶಿಸಲಿದೆ.

MOST READ: ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಬೆಲೆ ಮಾಹಿತಿ ಬಹಿರಂಗ

ಹೊಸ ತಲೆಮಾರಿನ ಹೋಂಡಾ ಸಿಟಿಯಲ್ಲಿ ಮೊದಲ ಬಾರಿಗೆ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ..!

ಹೊಸ ಸಿಟಿ ಸೆಡಾನ್ ಕಾರಿನಲ್ಲಿ ಈ ಬಾರಿ ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಮಾರುತಿ ಸುಜುಕಿ ಸಿಯಾಜ್ ಮತ್ತು ಹ್ಯುಂಡೈ ವೆರ್ನಾ ಕಾರಿಗೆ ಮಾತ್ರವಲ್ಲದೇ ಟೊಯೊಟಾ ಕರೊಲ್ಲಾ ಆಟ್ಲಿಸ್ ಕಾರಿಗೂ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

MOST READ: ಶೀಘ್ರದಲ್ಲೇ ಹೊಸ ಕಾರುಗಳಲ್ಲಿ ಕಡ್ಡಾಯವಾಗಲಿದೆ ಈ ಫೀಚರ್..!

ಹೊಸ ತಲೆಮಾರಿನ ಹೋಂಡಾ ಸಿಟಿಯಲ್ಲಿ ಮೊದಲ ಬಾರಿಗೆ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ..!

ಎಂಜಿನ್ ಸಾಮರ್ಥ್ಯ

ಹೊಸ ತಲೆಮಾರಿನ ಹೋಂಡಾ ಕಾರು ಈ ಬಾರಿ ಸಾಮಾನ್ಯ ಮಾದರಿಯ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನಲ್ಲಿ ಮಾತ್ರವಲ್ಲದೇ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆಯು ಪರ್ಫಾಮೆನ್ಸ್ ಪ್ರಿಯರನ್ನು ಮತ್ತಷ್ಟು ಸೆಳೆಯಲಿದೆ.

MOST READ: ಹೊಸ ವಾಹನಗಳ ಖರೀದಿ ಹೆಚ್ಚಿಸಲು ರೋಡ್ ಟ್ಯಾಕ್ಸ್‌ನಲ್ಲಿ ಭರ್ಜರಿ ಕಡಿತ

ಹೊಸ ತಲೆಮಾರಿನ ಹೋಂಡಾ ಸಿಟಿಯಲ್ಲಿ ಮೊದಲ ಬಾರಿಗೆ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ..!

ಜೊತೆಗೆ 2020ರ ಏಪ್ರಿಲ್ 1ರಿಂದ ಬಿಎಸ್-6 ನಿಯಮ ಜಾರಿಗೆ ಹಿನ್ನೆಲೆಯಲ್ಲಿ ಹೊಸ ವಾಹನ ಎಂಜಿನ್‌ನಲ್ಲಿ ಸಾಕಷ್ಟು ಬದಲಾವಣೆ ಕಂಡುಬರುತ್ತಿದ್ದು, ಶೇ.25 ರಷ್ಟು ಹೊಗೆ ಉಗುಳುವ ಪ್ರಮಾಣ ಕಡಿಮೆಯಾದಲ್ಲಿ, ಶೇ.10ರಿಂದ 15ರಷ್ಟು ಮೈಲೇಜ್ ಪ್ರಮಾಣ ಹೆಚ್ಚಳವಾಗಲಿದೆ.

ಹೊಸ ತಲೆಮಾರಿನ ಹೋಂಡಾ ಸಿಟಿಯಲ್ಲಿ ಮೊದಲ ಬಾರಿಗೆ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ..!

ಹಾಗೆಯೇ ಹೊಸ ಎಂಜಿನ್ ಹೊತ್ತುಬರುತ್ತಿರುವ ಬಿಎಸ್-6 ವಾಹನ ಬೆಲೆಯಲ್ಲೂ ತುಸು ದುಬಾರಿಯಾಗಲಿದ್ದು, ಬೆಲೆಗಳಿಗೆ ಅನುಗುಣವಾಗಿ ರೂ.80 ಸಾವಿರದಿಂದ ರೂ.2 ಲಕ್ಷದ ತನಕ ಈಗಿರುವ ಬೆಲೆಗಳಿಂತಲೂ ಹೆಚ್ಚು ಬೆಲೆ ಪಡೆದುಕೊಳ್ಳಲಿವೆ. ಇವುಗಳಲ್ಲಿ ಭಾರೀ ಬದಲಾವಣೆ ಪಡೆದುಕೊಳ್ಳುತ್ತಿರುವ ಹೋಂಡಾ ಸಿಟಿ ಸಹ ಈಗಿರುವ ವಿನ್ಯಾಸಕ್ಕಿಂತಲೂ ಹೆಚ್ಚಿನ ವೈಶಿಷ್ಟ್ಯತೆ ಹೊಂದಲಿದ್ದು, ಬೆಲೆಯೂ ಕೂಡಾ ತುಸು ದುಬಾರಿ ಎನ್ನಿಸಲಿದೆ.

Article Published On: Friday, October 11, 2019, 10:46 [IST]
English summary
Next-gen Honda City to get new 1.0-litre turbo petrol engine. Read in Kannada.
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+