ಶೀಘ್ರದಲ್ಲೇ ಹೊಸ ಕಾರುಗಳಲ್ಲಿ ಕಡ್ಡಾಯವಾಗಲಿದೆ ಈ ಫೀಚರ್..!
ಭಾರತದಲ್ಲಿ ಕೋಟ್ಯಂತರ ವಾಹನಗಳಿದ್ದು, ಪ್ರತಿ ನಿತ್ಯ ಲಕ್ಷಾಂತರ ಹೊಸ ವಾಹನಗಳು ರಸ್ತೆಗಿಳಿಯುತ್ತವೆ. ವಾಹನಗಳು ಜಾಸ್ತಿಯಾದಷ್ಟು ವಾಹನಗಳ ಕಳ್ಳತನದ ಸಂಖ್ಯೆಗಳೂ ಸಹ ಜಾಸ್ತಿಯಾಗುತ್ತಿವೆ. ವಾಹನ ಕಳ್ಳತನವನ್ನು ತಡೆಗಟ್ಟಲು ಪೊಲೀಸರು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

ವಾಹನಗಳ ಮಾಲೀಕರ ಅಜಾಗರೂಕತೆಯಿಂದಾಗಿ ವಾಹನಗಳ್ಳರು ಕಳ್ಳತನವನ್ನು ಮುಂದುವರೆಸುತ್ತಲೇ ಇದ್ದಾರೆ. ವಾಹನಗಳ ಕಳ್ಳತನವಾದಾಗ ಅವುಗಳನ್ನು ಪತ್ತೆ ಹಚ್ಚಲು ಜಿಪಿಎಸ್ ಟ್ರಾಕರ್‍ಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ.

ಜಿಪಿಎಸ್‍ಗಳನ್ನು ವಾಹನಗಳಲ್ಲಿ ಅಳವಡಿಸಿಕೊಳ್ಳವುದು ದುಬಾರಿಯೇನಲ್ಲ. ಆದರೆ ವಾಹನಗಳ ಮಾಲೀಕರು ಅವುಗಳನ್ನು ಅಳವಡಿಸಿಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲವೆಂದು ತಿಳಿದಿದ್ದಾರೆ.

ಜಿಪಿಎಸ್ ಇಲ್ಲದ ವಾಹನಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಕಳುವಾದ ವಾಹನಗಳನ್ನು ಪತ್ತೆ ಹಚ್ಚುವುದು ಪೊಲೀಸರಿಗೂ ಸವಾಲಿನ ಕೆಲಸ. ಈ ಕಾರಣಕ್ಕೆ ಪೊಲೀಸ್ ಇಲಾಖೆಯು ಹೊಸದಾಗಿ ತಯಾರಾಗಲಿರುವ ಕಾರುಗಳಲ್ಲಿ ಜಿಪಿಎಸ್‍ಗಳನ್ನು ಕಡ್ಡಾಯವಾಗಿ ಅಳವಡಿಸುವಂತಹ ಕಾನೂನನ್ನು ಜಾರಿಗೆ ತರುವ ಆಲೋಚನೆಯಲ್ಲಿದೆ.

ಉತ್ತರ ಪ್ರದೇಶದ ಗಾಜಿಯಾಬಾದ್ ಪೊಲೀಸರು ಈ ಫೀಚರ್ ಅನ್ನು ಹೊಸ ಕಾರುಗಳಲ್ಲಿ ಕಡ್ಡಾಯ ಮಾಡಬೇಕೆಂಬ ಆಲೋಚನೆಯಲ್ಲಿದ್ದಾರೆ. ಗಾಜಿಯಾಬಾದ್ ನಗರವು ವಾಹನಗಳ ಕಳ್ಳತನಕ್ಕೆ ಕುಖ್ಯಾತಿಯನ್ನು ಪಡೆದಿದೆ.

ಈ ಬಗ್ಗೆ ಪೊಲೀಸರು ಅಂಬಾವಾಟ್‍ನಲ್ಲಿರುವ ಕಾರು ಮಾರಾಟಗಾರರ ಬಳಿ ಹೊಸ ಕಾರುಗಳಲ್ಲಿ ಜಿಪಿಎಸ್ ಅಳವಡಿಸುವ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ. ಕಾರುಗಳಲ್ಲಿ ಜಿಪಿಎಸ್‍ಗಳಿದ್ದರೆ ಕಳುವಾದ ವಾಹನಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು ಎಂಬುದು ಇದರ ಹಿಂದಿರುವ ಕಾರಣವಾಗಿದೆ.

ಈ ಬಗ್ಗೆ ಮಾತನಾಡಿರುವ ಎಸ್‍ಎಸ್‍ಪಿ ಸುಧೀರ್ ಕುಮಾರ್ ಸಿಂಗ್‍ರವರು, ಈ ಜಿಪಿಎಸ್ ಉಪಕರಣಗಳಿಗೆ ಹೆಚ್ಚು ಖರ್ಚಾಗುವುದಿಲ್ಲ. ಇವುಗಳನ್ನು ಅಳವಡಿಸಿಕೊಳ್ಳುವುದರಿಂದ ಕಳುವಾದ ವಾಹನಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಬಗ್ಗೆ ಕಾರು ಮಾರಾಟಗಾರರೊಂದಿಗೆ ಸಭೆ ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ಗಾಜಿಯಾಬಾದ್ ವಾಹನಗಳ ಕಳ್ಳತನಕ್ಕೆ ಕುಖ್ಯಾತಿಯನ್ನು ಪಡೆದಿದ್ದರೂ ಇತ್ತೀಚಿಗೆ ವಾಹನ ಕಳ್ಳತನದ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ.
MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

2018ರ ಜನವರಿಯಿಂದ ಅಕ್ಟೋಬರ್‍ವರೆಗೆ 4,341 ವಾಹನ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಆದರೆ ಈ ವರ್ಷದ ಜನವರಿಯಿಂದ ಅಕ್ಟೋಬರ್‍ವರೆಗಿನ ಅವಧಿಯಲ್ಲಿ 3,334 ಪ್ರಕರಣಗಳು ದಾಖಲಾಗಿವೆ. ಪೊಲೀಸರು ಈ ಸಂಖ್ಯೆಯನ್ನು ಇನ್ನೂ ಕಡಿಮೆ ಮಾಡಲು ಬಯಸಿದ್ದಾರೆ.
MOST READ: 35 ಸಾವಿರಕ್ಕೆ ಸಿಗಲಿದೆ ಮ್ಯಾಂಟಿಸ್ ಎಲೆಕ್ಟ್ರಿಕ್ ಬೈಕ್

ಗಮನಿಸಬೇಕಾದ ಸಂಗತಿಯೆಂದರೆ ಕಾರು ಮಾರಾಟಗಾರರೂ ಸಹ ಪೊಲೀಸರ ಈ ಕ್ರಮವನ್ನು ಸ್ವಾಗತಿಸಿದ್ದಾರೆ. ಕಾರು ಮಾರಾಟಗಾರರ ಪ್ರಕಾರ ಕೆಲವೇ ಕೆಲವು ಮಂದಿ ಮಾತ್ರ ಜಿಪಿಎಸ್ ಅಳವಡಿಸಿಕೊಳ್ಳುತ್ತಾರೆ. ಇನ್ನು ಕೆಲವರು ಜಾಗರೂಕತೆಯ ಕೊರತೆಯಿಂದಾಗಿ ಅಳವಡಿಸಿಕೊಳ್ಳುವುದಿಲ್ಲ.

ಕಾರು ಡೀಲರ್ ಸಿಬ್ಬಂದಿಯೊಬ್ಬರು ಹೇಳುವಂತೆ ಜಿಪಿಎಸ್ ಅಳವಡಿಸಲು ಸುಮಾರು ರೂ.10,000 ಖರ್ಚಾಗುತ್ತದೆ. ಕಾರು ಖರೀದಿಸುವ 10 ಜನರಲ್ಲಿ ಕೇವಲ 4 ಜನರು ಮಾತ್ರ ಜಿಪಿಎಸ್ ಅಳವಡಿಸಿಕೊಳ್ಳುತ್ತಾರೆ.

ಈ ಉಪಕರಣವು ಕಾರು ಕಳುವಾದಾಗ ಕಾರು ಇರುವ ಸ್ಥಳವನ್ನು ತೋರಿಸುವುದರ ಜೊತೆಗೆ ಅಪಘಾತವಾದಾಗ ಕುಟುಂಬ ಸದಸ್ಯರಿಗೆ ಹಾಗೂ ಕಾರು ಗ್ರಾಹಕ ಸೇವಾ ಕೇಂದ್ರಕ್ಕೆ ಅಲರ್ಟ್ ನೀಡುತ್ತದೆ. ಜಿಪಿಎಸ್‍ನಲ್ಲಿರುವ ಮತ್ತೊಂದು ಉಪಯೋಗವೆಂದರೆ ನೀವು ನಿಮ್ಮ ಕಾರಿನ ದೂರವನ್ನು ನಿಗದಿಪಡಿಸಬಹುದು.

ನಿಗದಿಪಡಿಸಿರುವುದಕ್ಕಿಂತ ಹೆಚ್ಚು ದೂರ ಹೋದರೆ ನಿಮ್ಮನ್ನು ಎಚ್ಚರಿಸುತ್ತದೆ. ಗ್ರಾಹಕರಿಗೆ ಈ ಉಪಕರಣವನ್ನು ಅಳವಡಿಸಿಕೊಳ್ಳುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಹೇಳಲಿದ್ದೇವೆ ಎಂದು ಮತ್ತೊಬ್ಬ ಸಿಬ್ಬಂದಿ ಹೇಳಿದರು. ಆದರೆ ಗ್ರಾಹಕರು ಈ ಪ್ರಯೋಜನಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇದಕ್ಕೆ ಪ್ರತ್ಯೇಕ ವೆಚ್ಚವಾಗುವುದರಿಂದ ಇದರ ಅವಶ್ಯಕತೆವಿಲ್ಲವೆಂದು ಹೇಳುತ್ತಾರೆ.


Click it and Unblock the Notifications