ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾದಲ್ಲಿ 1.6-ಲೀಟರ್ ಎಂಜಿನ್‌ಗೆ ಗುಡ್‌ಬೈ..!?

ಹ್ಯುಂಡೈ ಸಂಸ್ಥೆಯು ಮುಂಬರುವ 2020ರ ಆರಂಭದಲ್ಲಿ ತನ್ನ ಜನಪ್ರಿಯ ಕಾರು ಆವೃತ್ತಿಯಾದ ಕ್ರೆಟಾ ನ್ಯೂ ಜನರೇಷನ್ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಹೊಸ ಮಾದರಿಯಲ್ಲಿ ಬಿಎಸ್-6 ಪ್ರೇರಿತ ಮತ್ತೆರಡು ಆಧುನಿಕ ತಂತ್ರಜ್ಞಾನ ಪ್ರೇರಿತ ಎಂಜಿನ್‌ಗಳನ್ನು ಪರಿಚಯಿಸುವ ಬಗ್ಗೆ ಹ್ಯುಂಡೈ ಸಂಸ್ಥೆಯು ಸುಳಿವು ನೀಡಿದೆ. ಸದ್ಯಕ್ಕೆ ಕ್ರೆಟಾದಲ್ಲಿ ಮೂರು ಮಾದರಿಯ ಎಂಜಿನ್ ಆಯ್ಕೆಗಳಿದ್ದು, ನ್ಯೂ ಜನರೇಷನ್‌ನಲ್ಲಿ ಕೇವಲ ಎರಡು ಎಂಜಿನ್ ಆಯ್ಕೆಗಳನ್ನು ನೀಡಲಾಗುತ್ತಿದೆ.

ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾದಲ್ಲಿ 1.6-ಲೀಟರ್ ಎಂಜಿನ್‌ಗೆ ಗುಡ್‌ಬೈ..!?

ಸದ್ಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ ಮಾದರಿಯು 1.4-ಲೀಟರ್ ಮತ್ತು 1.6-ಲೀಟರ್ ಡೀಸೆಲ್ ಎಂಜಿನ್‌ ಜೊತೆಗೆ 1.6-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು, ಇವುಗಳ ಬದಲಾಗಿ ನ್ಯೂ ಜನರೇಷನ್ ಆವೃತ್ತಿಯಲ್ಲಿ ಬಿಎಸ್-6 ಪ್ರೇರಿತ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡುವ ಬಗ್ಗೆ ಸುಳಿವು ನೀಡಲಾಗಿದ್ದು, ಹೊಸ ಎಂಜಿನ್ ಮಾದರಿಯು 115-ಬಿಎಚ್‌ಪಿ ಉತ್ಪಾದನಾ ಗುಣಹೊಂದಿರಲಿವೆ.

ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾದಲ್ಲಿ 1.6-ಲೀಟರ್ ಎಂಜಿನ್‌ಗೆ ಗುಡ್‌ಬೈ..!?

ಹ್ಯುಂಡೈ ಸಂಸ್ಥೆಯು ಆಯ್ಕೆ ಮಾಡಿರುವ ಹೊಸ ಎಂಜಿನ್ ಕೇವಲ ನ್ಯೂ ಜನರೇಷನ್ ಕ್ರೆಟಾ ಮಾದರಿಯಲ್ಲಿ ಮಾತ್ರವಲ್ಲದೇ ಸಹೋದರ ಸಂಸ್ಥೆಯಾದ ಕಿಯಾ ಮೋಟಾರ್ಸ್ ನಿರ್ಮಾಣದ ಸೆಲ್ಟೊಸ್‌ನಲ್ಲೂ 1.5-ಲೀಟರ್ ಎಂಜಿನ್ ಮಾದರಿಯನ್ನೇ ಬಳಕೆ ಮಾಡಲು ನಿರ್ಧರಿಸಲಾಗಿದೆಯೆಂತೆ.

ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾದಲ್ಲಿ 1.6-ಲೀಟರ್ ಎಂಜಿನ್‌ಗೆ ಗುಡ್‌ಬೈ..!?

ಹೀಗಾಗಿ ಹ್ಯುಂಡೈ ನ್ಯೂ ಜನರೇಷನ್ ಕ್ರೆಟಾ ಮತ್ತು ಕಿಯಾ ಸೆಲ್ಟೊಸ್ ತಾಂತ್ರಿಕವಾಗಿ ಒಂದೇ ಆಗಿರಲಿದ್ದು, ಪರ್ಫಾಮೆನ್ಸ್‌ನಲ್ಲೂ ಹೊಸ ಎಂಜಿನ್ ಸಾಕಷ್ಟು ಸುಧಾರಣೆ ಕಂಡಿದೆ. ಅಲ್ಲದೇ 2020ರ ಏಪ್ರಿಲ್ 1ರಿಂದ ಬಿಎಸ್-4 ನಿಷೇಧಗೊಳ್ಳಲಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ ಬಿಎಸ್-6 ನಿಯಮವು ಜಾರಿಗೆ ಬರುತ್ತಿದೆ.

ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾದಲ್ಲಿ 1.6-ಲೀಟರ್ ಎಂಜಿನ್‌ಗೆ ಗುಡ್‌ಬೈ..!?

ಇದರಿಂದ ಹೊಸ ನಿಯಮಕ್ಕೆ ಅನುಗುಣವಾಗಿ ಬಹುತೇಕ ವಾಹನ ಸಂಸ್ಥೆಗಳು ಪ್ರಸ್ತುತ ಮಾರುಕಟ್ಟೆಯಲ್ಲಿನ ತಮ್ಮ ಹಳೆಯ ಎಂಜಿನ್ ಮಾದರಿಗಳನ್ನು ಹೊಸ ನಿಯಮಕ್ಕೆ ಅನುಗುಣವಾಗಿ ಉನ್ನತಿಕರಣ ಮಾಡುತ್ತಿದ್ದು, ಇದರಲ್ಲಿ ಹೊಸ ನಿಯಮಕ್ಕೆ ಅನುಗುಣವಾಗಿ ಉನ್ನತಿಕರಣ ಮಾಡಲು ಸಾಧ್ಯವಿರದ ವಾಹನಗಳನ್ನು ನಿಷೇಧ ಮಾಡಲಾಗುತ್ತಿದೆ.

ಹೀಗಾಗಿ ಮಾರುತಿ ಸುಜುಕಿ ಸೇರಿದಂತೆ ಹಲವು ಸಂಸ್ಥೆಗಳು ತಮ್ಮ ಅಗ್ಗದ ಬೆಲೆ ಡೀಸೆಲ್ ಎಂಜಿನ್ ಮಾರಾಟವನ್ನು ಕೈಬಿಡುವುದಾಗಿ ಹೇಳಿಕೊಂಡಿದ್ದು, ಹ್ಯುಂಡೈ ಮಾತ್ರ ಡೀಸೆಲ್ ಎಂಜಿನ್ ಆಯ್ಕೆ ಕೈಬಿಡದೇ ದುಬಾರಿ ವೆಚ್ಚದಲ್ಲೂ ಡೀಸೆಲ್ ಎಂಜಿನ್ ಉನ್ನತಿಕರಣಕ್ಕೆ ಮುಂದಾಗಿದೆ.

ಒಂದು ವೇಳೆ ಸದ್ಯ ಮಾರುಕಟ್ಟೆಯಲ್ಲಿರುವ ಬಿಎಸ್-4 ಡೀಸೆಲ್ ಎಂಜಿನ್‌ಗಳನ್ನು ಬಿಎಸ್-6 ನಿಯಮಕ್ಕೆ ಉನ್ನತಿಕರಿಸಿದರೂ ಸಹ ಕಾರಿನ ಬೆಲೆಗಳು ಕನಿಷ್ಠ ರೂ. 1.50 ರಿಂದ ರೂ.2 ಲಕ್ಷ ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿದ್ದು, ಇದು ಆಟೋ ಉತ್ಪಾದನಾ ಸಂಸ್ಥೆಗಳಿಗೆ ಹೊರೆಯಾಗಿ ಪರಿಣಮಿಸಲಿದೆ.

ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾದಲ್ಲಿ 1.6-ಲೀಟರ್ ಎಂಜಿನ್‌ಗೆ ಗುಡ್‌ಬೈ..!?

ಇದರಿಂದಾಗಿ ಮಾರುತಿ ಸುಜುಕಿ ಸೇರಿದಂತೆ ಹಲವು ಅಗ್ಗದ ಕಾರು ಉನ್ಪತ್ನಗಳನ್ನು ಮಾರಾಟ ಮಾಡುವ ಕಾರು ಸಂಸ್ಥೆಗಳಿಗೆ ಇದು ಬಿಸಿತುಪ್ಪವಾಗಿ ಪರಿಣಮಿಸಲಿದ್ದು, ಕಾರುಗಳ ಬೆಲೆಗಳನ್ನು ಒಂದೇ ಬಾರಿಗೆ ರೂ.1.50 ಲಕ್ಷ ರೂ. 2 ಲಕ್ಷ ಹೆಚ್ಚಳ ಮಾಡಿದ್ದಲ್ಲಿ ಗ್ರಾಹಕರನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಿಸಬೇಕಾಗಬಹುದು. ಹೀಗಾಗಿ ಬಿಎಸ್-4 ವೈಶಿಷ್ಟ್ಯತೆಯ ಸಣ್ಣ ಗಾತ್ರದ ಡೀಸೆಲ್ ಎಂಜಿನ್‌ಗಳನ್ನು ಬಿಎಸ್-6 ನಿಯಮಕ್ಕೆ ಉನ್ನತಿಕರಿಸಲು ಬಹುತೇಕ ಸಂಸ್ಥೆಗಳು ಮುಂದಾಗುತ್ತಿಲ್ಲ.

ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾದಲ್ಲಿ 1.6-ಲೀಟರ್ ಎಂಜಿನ್‌ಗೆ ಗುಡ್‌ಬೈ..!?

ಇದೇ ಕಾರಣಕ್ಕೆ ಜಾಣ್ಮೆಯ ಹೆಜ್ಜೆಯಿಡುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಪ್ರತಿ ಕಾರು ಮಾದರಿಯಲ್ಲೂ ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆಗಳನ್ನು ಹೆಚ್ಚಿಸುತ್ತಿದ್ದು, 2020ರ ಏಪ್ರಿಲ್ ವೇಳೆಗೆ ಸಂಪೂರ್ಣವಾಗಿ ಡೀಸೆಲ್ ಎಂಜಿನ್ ಕಾರುಗಳ ಆಯ್ಕೆಯನ್ನು ನಿಲ್ಲಿಸಲು ಪ್ಲ್ಯಾನ್ ಮಾಡಿಕೊಂಡಿದೆ.

ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾದಲ್ಲಿ 1.6-ಲೀಟರ್ ಎಂಜಿನ್‌ಗೆ ಗುಡ್‌ಬೈ..!?

ಇದೇ ಅವಕಾಶವನ್ನು ಬಳಕೆ ಮಾಡಿಕೊಳ್ಳಲು ಮುಂದಾಗುತ್ತಿರುವ ಹ್ಯುಂಡೈ ಸಂಸ್ಥೆಯು ಬೆಲೆ ಹೆಚ್ಚಳವಾದರೂ ಪರವಾಗಿಲ್ಲ ಡೀಸೆಲ್ ಎಂಜಿನ್ ಮೇಲೆ ಅವಲಂಬಿತವಾಗಿರುವ ಗ್ರಾಹಕರನ್ನು ತನ್ನತ್ತ ಸೆಳೆಯುವ ನೀರಿಕ್ಷೆಯಲ್ಲಿದ್ದು, ದುಬಾರಿ ವೆಚ್ಚದೊಂದಿಗೆ ಬಿಎಸ್-6 ನಿಯಮದ ಪ್ರಕಾರವೇ ಹೊಸ ಡೀಸೆಲ್ ಎಂಜಿನ್‌ಗಳನ್ನು ಸಿದ್ದಪಡಿಸುವುದಾಗಿ ಹೇಳಿಕೊಂಡಿದೆ.

ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾದಲ್ಲಿ 1.6-ಲೀಟರ್ ಎಂಜಿನ್‌ಗೆ ಗುಡ್‌ಬೈ..!?

ಹ್ಯುಂಡೈ ಸಂಸ್ಥೆಯು ಸದ್ಯ ಮಾರುಕಟ್ಟೆಯಲ್ಲಿ 1.2-ಲೀಟರ್, 1.4-ಲೀಟರ್ ಮತ್ತು 1.6-ಲೀಟರ್ ಡೀಸೆಲ್ ಎಂಜಿನ್‌ಗಳನ್ನು ಮಾರಾಟ ಮಾಡುತ್ತಿದ್ದು, ಇದರ ಬದಲಾಗಿ ಸುಧಾರಿತ ಮಾದರಿಯ 1.5-ಲೀಟರ್ ಡಿಸೇಲ್ ಮತ್ತು 1.5-ಲೀಟರ್ ಪೆಟ್ರೋಲ್ ಮಾದರಿಯನ್ನು ಪರಿಚಯಿಸಲು ಮುಂದಾಗಿದೆ.

ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾದಲ್ಲಿ 1.6-ಲೀಟರ್ ಎಂಜಿನ್‌ಗೆ ಗುಡ್‌ಬೈ..!?

ಇನ್ನು ಬಿಎಸ್-6 ವೈಶಿಷ್ಟ್ಯತೆಯನ್ನು ಹೊಂದಲಿರುವ ಹೊಸ ಡೀಸೆಲ್ ಎಂಜಿನ್‌ಗಳು ಸದ್ಯ ಮಾರುಕಟ್ಟೆಯಲ್ಲಿರುವ ಡೀಸೆಲ್ ಎಂಜಿನ್‌ಗಿಂತ ಹೆಚ್ಚು ಕಾರ್ಯಕ್ಷಮತೆ, ಉತ್ತಮ ಪರ್ಫಾಮೆನ್ಸ್ ಜೊತೆ ಮೈಲೇಜ್ ಪ್ರಮಾಣದಲ್ಲೂ ಅಧಿಕವಾಗಿರಲಿದ್ದು, ಹಾಗೆಯೇ ದುಬಾರಿ ಬೆಲೆಗಳಿಂದಾಗಿ ಕಾರು ಖರೀದಿ ಪ್ರಕ್ರಿಯೆಯೂ ಮತ್ತಷ್ಟು ಕಠಿಣವಾಗಲಿದೆ.

ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾದಲ್ಲಿ 1.6-ಲೀಟರ್ ಎಂಜಿನ್‌ಗೆ ಗುಡ್‌ಬೈ..!?

ಮತ್ತೊಂದು ಪ್ರಮುಖ ವಿಚಾರ ಅಂದ್ರೆ, ಹೊಗೆ ಉಗುಳುವ ಪ್ರಮಾಣದಲ್ಲೂ ಈಗಿರುವ ಡೀಸೆಲ್ ಎಂಜಿನ್‌ಗಳಿಂತಲೂ ಶೇ.25 ರಷ್ಟು ಕಡಿತಗೊಳ್ಳಲಿದ್ದು, ಬೆಲೆ ದುಬಾರಿಯಾಗಿ ಗ್ರಾಹಕರನ್ನು ಕಳೆದುಕೊಳ್ಳಬೇಕಾಗುತ್ತೆ ಎನ್ನುವ ಒಂದೇ ಕಾರಣಕ್ಕೆ ಬಹುತೇಕ ಸಂಸ್ಥೆಗಳು ಡೀಸೆಲ್ ಎಂಜಿನ್‌ಗೆ ಗುಡ್ ಬೈ ಹೇಳುತ್ತಿವೆ. ಆದ್ರೆ ಹ್ಯುಂಡೈ ಮಾತ್ರ ಡೀಸೆಲ್ ಎಂಜಿನ್ ಮುಂದುವರಿಸುವ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಎನ್ನಬಹುದು.

Most Read Articles

Kannada
English summary
Next-gen Hyundai Creta to come with new 1.5-litre engines. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X