ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮುಂದಿನ ತಲೆಮಾರಿನ ಮಹೀಂದ್ರಾ ಸ್ಕಾರ್ಪಿಯೊ

ಮಹೀಂದ್ರಾ & ಮಹೀಂದ್ರಾ ಸಂಸ್ಥೆಯು ತಮ್ಮ ಮುಂದಿನ ತಲೆಮಾರಿನ ಸ್ಕಾರ್ಪಿಯೊ ಎಸ್‍ಯುವಿ ಕಾರನ್ನು ಬಿಡುಗಡೆಗೊಳಿಸುವ ಸಲುವಾಗಿ ಸಧ್ಯ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದ್ದು, 2020ರ ಫೆಬ್ರುವರಿಯಲ್ಲಿ ನಡೆಯಲಿರುವ ಆಟೋ ಎಕ್ಸ್ ಪೋ ಮೇಳದಲ್ಲಿ ಮಹೀಂದ್ರಾ ಥಾರ್ ಜೊತೆಗೆ ಸ್ಕಾರ್ಪಿಯೊ ಕಾರನ್ನು ಪರಿಚಯಿಸಲು ಸಿದ್ದತೆಗಳನ್ನು ನಡೆಸುತ್ತಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮುಂದಿನ ತಲೆಮಾರಿನ ಮಹೀಂದ್ರಾ ಸ್ಕಾರ್ಪಿಯೊ

ಇತ್ತೀಚೆಗೆ ತಮಿಳುನಾಡಿನ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಹೀಂದ್ರಾ ಸ್ಕಾರ್ಪಿಯೋ ಜೆಡ್101 ಎಂಬ ಕೋಡ್ ನೇಮ್ ಅನ್ನು ಪಡೆದಿದ್ದು, ಕಾರಿನ ವಿನ್ಯಾಸದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯಲಾಗದ ಹಾಗೆ ಮುಸುಗನ್ನು ಹಾಕಲಾಗಿದೆ. ಇದು ಇನ್ನು ಪರಿಕ್ಷಾ ಅನುಸಾರ ಹೊರತರಲಾದ ಕಾರಾಗಿದ್ದು, ಮುಂದಿನ ದಿನಗಳಲ್ಲಿ ನೆಕ್ಸ್ಟ್ ಜನರೇಶನ್ ಮಹೀಂದ್ರಾ ಸ್ಕಾರ್ಪಿಯೊ ಕಾರಿನ ಬಗ್ಗೆ ಹೆಚ್ಚು ಮಾಹಿತಿಯು ದೊರೆಯಲಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮುಂದಿನ ತಲೆಮಾರಿನ ಮಹೀಂದ್ರಾ ಸ್ಕಾರ್ಪಿಯೊ

ಮಹೀಂದ್ರಾ ಸಂಸ್ಥೆಯು ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಕಾರುಗಳ ಉತ್ಪನ್ನಗಳಲ್ಲಿ ಮಹತ್ವದ ಬದಲಾವಣೆ ತರುತ್ತಿದ್ದು, 2020ರ ಏಪ್ರಿಲ್ 1 ರಿಂದ ಜಾರಿಗೆ ಬರಲಿರುವ ಬಿಎಸ್-6 ನಿಯಮಕ್ಕೆ ಅನುಗುಣವಾಗಿ ಜನಪ್ರಿಯ ಕಾರುಗಳನ್ನು ಉನ್ನತಿಕರಿಸುತ್ತಿದೆ. ಇದರಲ್ಲಿ ನೆಕ್ಸ್ಟ್ ಜನರೇಷನ್ ಸ್ಕಾರ್ಪಿಯೋ ಹೊಸ ನೀರಿಕ್ಷೆ ಹುಟ್ಟುಹಾಕಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಸ್ಕಾರ್ಪಿಯೋ ಕಾರು ಸಾಕಷ್ಟು ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಗೊಳ್ಳುವುದು ಬಹುತೇಕ ಖಚಿತವಾಗಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮುಂದಿನ ತಲೆಮಾರಿನ ಮಹೀಂದ್ರಾ ಸ್ಕಾರ್ಪಿಯೊ

ಲ್ಯಾಡರ್ ಫ್ರೇಮ್ ಚಾರ್ಸಿಸ್ ತಂತ್ರಜ್ಞಾನದಡಿ ನಿರ್ಮಾಣವಾಗಿರುವ ಹೊಸ ಸ್ಕಾರ್ಪಿಯೋ ಆವೃತ್ತಿಯು ಈ ಹಿಂದಿನ ಆವೃತ್ತಿಗಿಂತಲೂ ತುಸು ಹೆಚ್ಚಿನ ವೀಲ್ಹ್ ಬೇಸ್ ಪಡೆದುಕೊಂಡಿದ್ದು, ಮೂರನೇ ಸಾಲಿನಲ್ಲಿ ಕೂರುವ ಪ್ರಯಾಣಿಕರಿಗೆ ಮತ್ತಷ್ಟು ಸ್ಥಳಾವಕಾಶ ದೊರೆಯಲಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮುಂದಿನ ತಲೆಮಾರಿನ ಮಹೀಂದ್ರಾ ಸ್ಕಾರ್ಪಿಯೊ

ಜೊತೆಗೆ ಮುಂಭಾಗದ ಡಿಸೈನ್‌ನಲ್ಲೂ ಈ ಹಿಂದಿನ ಆವೃತ್ತಿಗಿಂತ ಅತಿ ಹೆಚ್ಚು ಬದಲಾವಣೆ ಪಡೆದುಕೊಂಡಿರುವ ಹೊಸ ಸ್ಕಾರ್ಪಿಯೋದಲ್ಲಿ ವಿಶೇಷ ವಿನ್ಯಾಸದ ಗ್ರೀಲ್, ಸ್ಪೋಟಿ ಬಂಪರ್ ಮತ್ತು ಕ್ರ್ಯಾಶ್ ಟೆಸ್ಟಿಂಗ್ ನಿಯಮಾವಳಿ ಪ್ರಕಾರ ಮುಂಭಾಗದ ಬ್ಯಾನೆಟ್ ವಿನ್ಯಾಸವು ಹೊಸ ಕಾರಿಗೆ ಮತ್ತಷ್ಟು ಮೆರಗು ನೀಡಿವೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮುಂದಿನ ತಲೆಮಾರಿನ ಮಹೀಂದ್ರಾ ಸ್ಕಾರ್ಪಿಯೊ

ಹಾಗೆಯೇ ಹೊಸ ಸ್ಕಾರ್ಪಿಯೋದಲ್ಲಿ ಒಳಭಾಗದ ವಿನ್ಯಾಸದಲ್ಲೂ ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಂಡಿದ್ದು, ಮಲ್ಟಿ ಫಂಕ್ಷನ್ ಕಂಟ್ರೊಲರ್ ಸ್ಟೀರಿಂಗ್ ವೀಲ್ಹ್, ಸುಧಾರಿತ ಮಾದರಿಯ ಇನ್ಪೋಟೈನ್‌ಮೆಂಟ್ ಸಿಸ್ಟಂ, ಡ್ಯುಯರ್ ಕಲರ್ ಡ್ಯಾಶ್‌ಬೋರ್ಡ್ ಮತ್ತು ಅತಿ ಕಡಿಮೆ ಅವಧಿಯಲ್ಲಿ ಉಷ್ಣಾಂಶವನ್ನು ಹಿರಿಕೊಂಡು ತಂಪಾಗಿಸಬಲ್ಲ ಲೇದರ್ ಸೀಟುಗಳು ಪ್ರಯಾಣವನ್ನು ಮತ್ತಷ್ಟು ಸುಖಕರವಾಗಿಸಲಿವೆ. ಇದಲ್ಲದೇ ಬಿಎಸ್-6 ನಿಯಮಗಳಿಗೆ ಅನುಗುಣವಾಗಿ ಕಾರಿನಲ್ಲಿರುವ ಸುರಕ್ಷಾ ಸೌಲಭ್ಯಗಳನ್ನು ಉನ್ನತಿಕರಿಸುವುದರ ಜೊತೆಗೆ ಮತ್ತಷ್ಟು ಹೊಸ ಫೀಚರ್ಸ್‌ಗಳನ್ನು ನೀಡಲಾಗಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮುಂದಿನ ತಲೆಮಾರಿನ ಮಹೀಂದ್ರಾ ಸ್ಕಾರ್ಪಿಯೊ

ಚಾಲಕ ಮತ್ತು ಪ್ರಯಾಣಿಕರ ವಿಭಾಗದಲ್ಲಿ ಒಟ್ಟು 6 ಏರ್‌ಬ್ಯಾಗ್‌ಗಳು, ಸ್ಟಾಂಡಂರ್ಡ್ ಆಗಿ ಎಬಿಎಸ್ ಜೊತೆ ಇಬಿಡಿ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್‌ಗಳು, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೊಲರ್ ಸೇರಿದಂತೆ ಹಲವು ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮುಂದಿನ ತಲೆಮಾರಿನ ಮಹೀಂದ್ರಾ ಸ್ಕಾರ್ಪಿಯೊ

ಎಂಜಿನ್ ಸಾಮರ್ಥ್ಯ

ಹೊಸ ಸ್ಕಾರ್ಪಿಯೋ ಮಾದರಿಯು ಮೇಲೆ ಹೇಳಿದಂತೆ ಬಿಎಸ್-6 ನಿಯಮಗಳಿಗೆ ಅನುಗುಣವಾಗಿ ಅಭಿವೃದ್ಧಿ ಹೊಂದಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಿತ 2.0-ಲೀಟರ್ ಹೊಸ ಡೀಸೆಲ್ ಎಂಜಿನ್‌ ಮಾದರಿಯು 170-ಬಿಎಚ್‌ಪಿ ಮತ್ತು 400-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಮಧ್ಯಮ ಕ್ರಮಾಂಕದ ಎಸ್‌ಯುವಿಗಳಲ್ಲಿ ಬಲಿಷ್ಠ ಎಂಜಿನ್ ಮಾದರಿ ಎನ್ನಿಸಲಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮುಂದಿನ ತಲೆಮಾರಿನ ಮಹೀಂದ್ರಾ ಸ್ಕಾರ್ಪಿಯೊ

ಇನ್ನು ಕೆಲವು ಮಾಹಿತಿಗಳ ಪ್ರಕಾರ, ಸ್ಕಾರ್ಪಿಯೋ ಮಾದರಿಯಲ್ಲಿ ಬಳಕೆ ಮಾಡಲಾಗುತ್ತಿರುವ 2.0-ಲೀಟರ್ ಡೀಸೆಲ್ ಎಂಜಿನ್ ಅನ್ನು ನೆಕ್ಸ್ಟ್ ಜನರೇಷನ್ ಥಾರ್ ಹಾಗೂ ಎಕ್ಸ್‌ಯುವಿ 500 ಮಾದರಿಯಲ್ಲೂ ಬಳಕೆ ಮಾಡಲಾಗುತ್ತಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೊತೆಗೆ ಆಟೋಮ್ಯಾಟಿಕ್ ಆವೃತ್ತಿಗಳು ಸಹ ಹೊಸ ಸ್ಕಾರ್ಪಿಯೋದಲ್ಲಿ ಲಭ್ಯವಾಗಲಿವೆಯೆಂತೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮುಂದಿನ ತಲೆಮಾರಿನ ಮಹೀಂದ್ರಾ ಸ್ಕಾರ್ಪಿಯೊ

ಬಿಡುಗಡೆಯ ಅವಧಿ ಮತ್ತು ಬೆಲೆಗಳು(ಅಂದಾಜು)

ಹೊಸ ಸ್ಕಾರ್ಪಿಯೋ ಸದ್ಯ ಸ್ಪಾಟ್ ಟೆಸ್ಟಿಂಗ್ ಪ್ರಕ್ರಿಯೆಯಲ್ಲಿ ಕಾಣಿಸಿಕೊಂಡಿದ್ದು, 2020ರ ಫೆಬ್ರುವರಿಯಲ್ಲಿ ನಡೆಯಲಿರುವ ಆಟೋ ಎಕ್ಸ್‌ಪೋದಲ್ಲಿ ನೆಕ್ಸ್ಟ್ ಜನರೇಷನ್ ಥಾರ್ ಮತ್ತು ಎಕ್ಸ್‌ಯುವಿ 500 ಜೊತೆ ಸ್ಕಾರ್ಪಿಯೋ ಸಹ ಪ್ರದರ್ಶನಗೊಳ್ಳಲಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮುಂದಿನ ತಲೆಮಾರಿನ ಮಹೀಂದ್ರಾ ಸ್ಕಾರ್ಪಿಯೊ

ಸದ್ಯ ಎಕ್ಸ್‌ಶೋರೂಂ ಪ್ರಕಾರ ಸ್ಕಾರ್ಪಿಯೋ ಕಾರುಗಳು ಆರಂಭಿಕವಾಗಿ ರೂ. 10 ಲಕ್ಷದಿಂದ ಹೈ ಎಂಡ್ ಮಾದರಿಗೆ ರೂ. 16.45 ಲಕ್ಷ ಬೆಲೆ ಹೊಂದಿದ್ದು, ಹಳೆಯ ಮಾದರಿಗಿಂತ ವಿನೂತನ ಸೌಲಭ್ಯಗಳನ್ನು ಹೊಂದಿರುವ ಹೊಸ ಕಾರು ಆರಂಭಿಕವಾಗಿ ರೂ.11.50 ಲಕ್ಷದಿಂದ ಹೈ ಎಂಡ್ ಮಾದರಿಗೆ ರೂ.18 ಲಕ್ಷ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿವೆ.

Image Courtesy: Facebook/4x4

More from DriveSpark

Article Published On: Monday, June 17, 2019, 9:54 [IST]
English summary
Next Generation Mahindra Scorpio Spotted Again In Tamilnadu. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+