ಭಾರತದಲ್ಲಿ ನಿಸ್ಸಾನ್ ಸಂಸ್ಥೆಗೆ ಮರುಜೀವ ಕೊಟ್ಟ ಹೊಸ ಕಿಕ್ಸ್

ನಿಸ್ಸಾನ್ ಸಂಸ್ಥೆಯು ಉತ್ತಮವಾದ ಕಾರು ಉತ್ಪನ್ನಗಳನ್ನು ಹೊಂದಿದ್ದರೂ ಸಹ ಭಾರತೀಯ ಮಾರುಕಟ್ಟೆಯಲ್ಲಿ ನಿರ್ದಿಷ್ಟ ಮಟ್ಟದ ಬೇಡಿಕೆಯನ್ನು ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿತ್ತು. ಅಂಗಸಂಸ್ಥೆಯಾದ ದಟ್ಸನ್ ಸಂಸ್ಥೆಗಿಂತಲೂ ಕಡಿಮೆ ಕಾರು ಮಾರಾಟ ಹೊಂದಿದ್ದ ನಿಸ್ಸಾನ್ ಸಂಸ್ಥೆಗೆ ಇದೀಗ ಕಿಕ್ಸ್ ಕಾರು ಮರುಜೀವ ಕೊಟ್ಟಿದೆ.

ಭಾರತದಲ್ಲಿ ನಿಸ್ಸಾನ್ ಸಂಸ್ಥೆಗೆ ಮರುಜೀವ ಕೊಟ್ಟ ಹೊಸ ಕಿಕ್ಸ್

ಹೌದು, ಕಳೆದ ತಿಂಗಳು 22ರಂದು ಭಾರತದಲ್ಲಿ ಬಿಡುಗಡೆಯಾಗಿರುವ ಕಿಕ್ಸ್ ಸಬ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯು ನೀರಿಕ್ಷೆಗೂ ಮೀರಿ ಬೇಡಿಕೆ ಗಿಟ್ಟಿಸಿಕೊಂಡಿದ್ದು, ಭಾರತದಲ್ಲಿ ಕಾರು ಮಾರಾಟ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವ ಸ್ಥಿತಿಯಲ್ಲಿದ್ದ ನಿಸ್ಸಾನ್ ಸಂಸ್ಥೆಗೆ ಹೊಸ ಕಿಕ್ಸ್ ಮರುಜೀವ ಕೊಟ್ಟಿದೆ ಎಂದ್ರೆ ತಪ್ಪಾಗುವುದಿಲ್ಲ.

ನಿಸ್ಸಾನ್ ಸಂಸ್ಥೆಗೆ ಒಂದು ಹಂತದಲ್ಲಿ ತಿಂಗಳಿಗೆ ಕೇವಲ 250 ರಿಂದ 300 ಕಾರು ಮಾರಾಟ ಮಾಡುವಂತಹ ಪರಿಸ್ಥಿತಿ ಬಂದಿದ್ದಲ್ಲದೇ ಅಂಗಸಂಸ್ಥೆಯಾದ ದಟ್ಸನ್ ಸಂಸ್ಥೆಯು ಮಾರಾಟ ಮಾಡುವಷ್ಟು ಕಾರುಗಳನ್ನು ಸಹ ಮಾರಾಟ ಮಾಡಲು ಹೆಣಗಾಡುವಂತಹ ಪರಿಸ್ಥಿತಿ ಬಂದಿತ್ತು.

ಆದ್ರೆ ಕಳೆದ ಜನವರಿ ತಿಂಗಳಿನಲ್ಲಿ ಕಾರು ಮಾರಾಟ ಪ್ರಮಾಣದಲ್ಲಿ ಶೇ.55ರಷ್ಟು ಪ್ರಗತಿ ದಾಖಲಿಸಿದ್ದು, ಜನವರಿ 22ರಂದು ಬಿಡುಗಡೆಯಾದ ನಂತರ ಕೇವಲ 10 ದಿನಗಳಲ್ಲಿ ಬರೋಬ್ಬರಿ 1500 ಕಾರುಗಳು ಮಾರಾಟವಾಗಿರುವುದಲ್ಲದೇ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ 5ನೇ ಸ್ಥಾನಕ್ಕೆ ಏರಿಕೆ ಕಂಡಿದೆ.

ಭಾರತದಲ್ಲಿ ನಿಸ್ಸಾನ್ ಸಂಸ್ಥೆಗೆ ಮರುಜೀವ ಕೊಟ್ಟ ಹೊಸ ಕಿಕ್ಸ್

ಫೆಬ್ರುವರಿ ಅಂತ್ಯಕ್ಕೆ ಕಾರು ಮಾರಾಟದಲ್ಲಿ ಮತ್ತಷ್ಟು ಜನಪ್ರಿಯತೆ ಸಾಧಿಸಲಿರುವ ನಿಸ್ಸಾನ್ ಸಂಸ್ಥೆಯು ಫೆಬ್ರುವರಿ ತಿಂಗಳ ಮಾರಾಟದಲ್ಲಿ ಕನಿಷ್ಠ 6 ಸಾವಿರ ಕಾರು ಮಾರಾಟ ಗುರಿಹೊಂದಿದ್ದು, ಬ್ರೆಝಾ, ಕ್ರೆಟಾ ಮತ್ತು ಎಕ್ಸ್‌ಯುವಿ500 ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ.

ಇನ್ನು ಜಾಗತಿಕ ಮಾರುಕಟ್ಟೆಗಳಲ್ಲಿ 2017ರ ಅವಧಿಯ ಬೆಸ್ಟ್ ಎಸ್‌ಯುವಿ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಕಿಕ್ಸ್ ಕಾರು ಇದೀಗ ಭಾರತದಲ್ಲೂ ಕಮಾಲ್ ಮಾಡುತ್ತಿದ್ದು, ಆಕರ್ಷಕ ನೋಟ, ಗಮನಸೆಳೆಯುವ ಎಂಜಿನ್ ಪರ್ಫಾಮೆನ್ಸ್ ಮತ್ತು ಕೈಗೆಟುಕುವ ಬೆಲೆಗಳೇ ಕಿಕ್ಸ್ ಹೊಸ ಕಾರಿನ ಪ್ರಮುಖ ಹೈಲೆಟ್ಸ್ ಎಂದ್ರೆ ತಪ್ಪಾಗುವುದಿಲ್ಲ.

ಭಾರತದಲ್ಲಿ ನಿಸ್ಸಾನ್ ಸಂಸ್ಥೆಗೆ ಮರುಜೀವ ಕೊಟ್ಟ ಹೊಸ ಕಿಕ್ಸ್

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕಿಕ್ಸ್ ಕಾರುಗಳನ್ನು ಪೆಟ್ರೋಲ್ ವರ್ಷನ್‌ನಲ್ಲಿ ಎರಡು ಮತ್ತು ಡಿಸೇಲ್ ಆವೃತ್ತಿಯಲ್ಲಿ ನಾಲ್ಕು ಆವೃತ್ತಿಗಳನ್ನು ಬಿಡುಗಡೆ ಮಾಡಲಾಗಿದ್ದು, ಆರಂಭಿಕ ಕಿಕ್ಸ್ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.9.55 ಲಕ್ಷ ಮತ್ತು ಟಾಪ್ ಎಂಡ್ ಮಾದರಿಗೆ ರೂ.14.65 ಲಕ್ಷ ಬೆಲೆ ಹೊಂದಿದೆ.

ಎಂಜಿನ್ ಸಾಮರ್ಥ್ಯ
ಹೊಸ ಕಿಕ್ಸ್ ಮಾದರಿಯು 1.5-ಲೀಟರ್ ಹೆಚ್4ಕೆ ಪೆಟ್ರೋಲ್ ಎಂಜಿನ್ ಹಾಗೂ 1.5-ಲೀಟರ್ ಕೆ9ಕೆ ಡಿಸೇಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, ಪೆಟ್ರೋಲ್ ಮಾದರಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಮತ್ತು ಡಿಸೇಲ್ ಮಾದರಿಯಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೋಡಿಸಲಾಗಿದೆ.

ಹಾಗೆಯೇ ಹೊಸ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ವೆಹಿಕಲ್ ಡೈನಾಮಿಕ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ಮೂರು ಏರ್‌ಬ್ಯಾಗ್, ಎಬಿಎಸ್, ಇಕೋ ಮೂಡ್ ಮತ್ತು ಕ್ರೂಸ್ ಕಂಟ್ರೋಲ್ ಸೌಲಭ್ಯವಿದೆ.

Most Read Articles

Kannada
English summary
Nissan Kicks Saves Its Company In India — Sales Increase By 55 Per Cent. Read in Kannda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X