ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಚಾಲನೆ ಮಾಡಿದ ಸಚಿವ ನಿತಿನ್ ಗಡ್ಕರಿ

ದೇಶಾದ್ಯಂತ ಮಾಲಿನ್ಯ ತಗ್ಗಿಸುವ ಉದ್ದೇಶದಿಂದ ಇಂಧನ ಆಧರಿತ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ತಗ್ಗಿಸಲಾಗುತ್ತಿದ್ದು, ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನ ಮೇಲೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಮಹತ್ವದ ಬದಲಾವಣೆಗಳಾಗುತ್ತಿವೆ.

ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಚಾಲನೆ ಮಾಡಿದ ಸಚಿವ ನಿತಿನ್ ಗಡ್ಕರಿ

ಎಂಜಿ ಮೋಟಾರ್ಸ್ ಸಹ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಜೆಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಮಾದರಿಯೊಂದನ್ನು ಪರಿಚಯಿಸುತ್ತಿದ್ದು, ಸದ್ಯ ಅನಾವರಣಗೊಂಡಿರುವ ಹೊಸ ಕಾರು ಭಾರೀ ಸಂಚಲನ ಮೂಡಿಸಿದೆ. ಮುಂದಿನ ತಿಂಗಳು ಅಧಿಕೃತವಾಗಿ ಲಭ್ಯವಾಗಲಿರುವ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಬಿಡುಗಡೆಗಾಗಿ ಭರ್ಜರಿ ಸಿದ್ದತೆ ನಡೆದಿದ್ದು, ಬಿಡುಗಡೆಗೂ ಮುನ್ನ ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ಸ್ಪೆಷಲ್ ಡ್ರೈವ್ ಆಯೋಜಿಸಿರುವ ಎಂಜಿ ಸಂಸ್ಥೆಯು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯರಿಗೆ ಆಹ್ವಾನ ನೀಡಿತ್ತು.

ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಚಾಲನೆ ಮಾಡಿದ ಸಚಿವ ನಿತಿನ್ ಗಡ್ಕರಿ

ಎಂಜಿ ಮೋಟಾರ್ ವಿಶೇಷ ಆಹ್ವಾನ ಮೇರೆಗೆ ಜೆಡ್ಎಸ್ ಎಲೆಕ್ಟ್ರಿಕ್ ಕಾರನ್ನು ಸ್ವತಃ ನಿತಿನ್ ಗಡ್ಕರಿಯವರೇ ಚಾಲನೆ ಮಾಡುವ ಮೂಲಕ ಹೊಸ ಕಾರಿನ ಕಾರ್ಯಕ್ಷಮತೆ ಕುರಿತಂತೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಲ್ಲದೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುವ ಎಲ್ಲಾ ಗುಣಲಕ್ಷಣಗಳು ಇಲ್ಲಿ ಕಾರಿನಲ್ಲಿವೆ ಎಂದಿದ್ದಾರೆ.

ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಚಾಲನೆ ಮಾಡಿದ ಸಚಿವ ನಿತಿನ್ ಗಡ್ಕರಿ

ಇನ್ನು ಆಕರ್ಷಕ ಬೆಲೆಯಲ್ಲಿ ಉತ್ತಮ ಮೈಲೇಜ್, ವಿಶ್ವದರ್ಜೆಯ ಫೀಚರ್ಸ್‌ಗಳು, ಬ್ಯಾಟರಿ ಮೇಲೆ ಗರಿಷ್ಠ ಮಟ್ಟದ ವಾರಂಟಿ, ಸುಲಭವಾಗಿ ಲಭ್ಯವಾಗುವ ಗ್ರಾಹಕರ ಸೇವೆಗಳು ಹೊಸ ಕಾರು ಖರೀದಿಯ ಮೌಲ್ಯವನ್ನು ಹೆಚ್ಚಿಸಲಿದ್ದು, ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಕಾರಿಗೆ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಭರ್ಜರಿ ಪೈಪೋಟಿ ನೀಡಲಿದೆ.

ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಚಾಲನೆ ಮಾಡಿದ ಸಚಿವ ನಿತಿನ್ ಗಡ್ಕರಿ

ಬ್ಯಾಟರಿ ಸಾಮರ್ಥ್ಯ

ಎಂಜಿ ಮೋಟಾರ್ ಸಂಸ್ಥೆಯು ಹೊಸ ಜೆಡ್ಎಸ್ ಎಲೆಕ್ಟ್ರಿಕ್ ಕಾರಿನಲ್ಲಿ 44.5kWh ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲಾಗಿದ್ದು, ಒಂದು ಬಾರಿ ಪೂರ್ಣಪ್ರಮಾಣದಲ್ಲಿ ಚಾರ್ಜ್ ಮಾಡಿದ್ದಲ್ಲಿ ಗರಿಷ್ಠ 340 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ. ಫಾಸ್ಟ್ ಚಾರ್ಜಿಂಗ್ ಮೂಲಕ ಕೇವಲ 1 ಗಂಟೆಯಲ್ಲಿ ಶೇ.80ರಷ್ಟು ಬ್ಯಾಟರಿ ಚಾರ್ಜ್ ಮಾಡಬಹುದಾಗಿದ್ದು, ಫಾಸ್ಟ್ ಚಾರ್ಜಿಂಗ್ ಮಾತ್ರವಲ್ಲದೇ ಸಾಮಾನ್ಯ ಚಾರ್ಜಿಂಗ್ ಸಾಕೆಟ್ ಜೊತೆ ಐದು ವಿವಿಧ ಮಾರ್ಗಗಳಲ್ಲಿ ಚಾರ್ಜ್ ಮಾಡಿಕೊಳ್ಳಬಹುದಾದ ಅವಕಾಶ ಈ ಕಾರಿನಲ್ಲಿದೆ.

ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಚಾಲನೆ ಮಾಡಿದ ಸಚಿವ ನಿತಿನ್ ಗಡ್ಕರಿ

ಜೊತೆಗೆ ಹೊಸ ಕಾರು ಮೈಲೇಜ್‌ನಲ್ಲಿ ಮಾತ್ರವಲ್ಲದೇ ಪರ್ಫಾಮೆನ್ಸ್‌ನಲ್ಲೂ ಕೂಡಾ ಗಮನಸೆಳೆಯಲಿದ್ದು, ಮುಂಭಾಗದ ಚಕ್ರಗಳಿಗೆ ಶಕ್ತಿ ಒದಗಿಸುವ ಮೂಲಕ 141-ಬಿಎಚ್‌ಪಿ ಉತ್ಪಾದನೆ ಮಾಡಬಲ್ಲದು.

ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಚಾಲನೆ ಮಾಡಿದ ಸಚಿವ ನಿತಿನ್ ಗಡ್ಕರಿ

ಜೆಡ್ಎಸ್ ಎಲೆಕ್ಟ್ರಿಕ್ ಕಾರಿನಲ್ಲಿ ಐಷಾರಾಮಿ ಕಾರು ಮಾದರಿಯಲ್ಲಿ ಹಲವಾರು ಗುಣಮಟ್ಟದ ಫೀಚರ್ಸ್‌ಗಳಲ್ಲಿದ್ದು, ಮುಂಭಾಗದಲ್ಲಿ ಎಂಜಿ ಸಿಗ್ನಿಚೆರ್ ಗ್ರಿಲ್, ಗ್ರಿಲ್ ಒಳಭಾಗದಲ್ಲೇ ಚಾರ್ಜಿಂಗ್ ಪೋರ್ಟ್, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್ ಗಳು ಮತ್ತು 17-ಇಂಚಿನ ಅಲಾಯ್ ವೀಲ್ಹ್ ಸೌಲಭ್ಯವನ್ನು ಪಡೆದಿದೆ.

ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಚಾಲನೆ ಮಾಡಿದ ಸಚಿವ ನಿತಿನ್ ಗಡ್ಕರಿ

ಹೊಸ ಕಾರಿನಲ್ಲಿ ಹೊರಭಾಗದ ಫೀಚರ್ಸ್‌ಗಳು ಮಾತ್ರವಲ್ಲದೇ ಒಳಭಾಗದ ಫೀಚರ್ಸ್‌ಗಳು ಕೂಡಾ ಗಮನಸೆಳೆಯಲಿದ್ದು, ಪ್ರೀಮಿಯಂ ಕ್ಯಾಬಿನ್ ವೈಶಿಷ್ಟ್ಯತೆಯು ಎಸ್‌ಯುವಿ ಪ್ರಿಯರ ಗಮನಸೆಳೆಯಲಿದೆ. ಸಿಲ್ವರ್ ಆಕ್ಸೆಂಟ್ ಹೊಂದಿರುವ ಡ್ಯಾಶ್‌ಬೋರ್ಡ್, ಐ-ಸ್ಮಾರ್ಟ್ ಕನೆಕ್ಟಿವಿಟಿ ಹೊಂದಿರುವ 8-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಯುನಿಟ್, ಆಂಡ್ರಾಯಿಡ್ ಆಟೋ, ಆಟೋ ಕಾರ್ ಪ್ಲೇ ಮತ್ತು ನ್ಯಾವಿಗೇಷನ್ ಸೌಲಭ್ಯವಿದೆ.

ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಚಾಲನೆ ಮಾಡಿದ ಸಚಿವ ನಿತಿನ್ ಗಡ್ಕರಿ

ಹಾಗೆಯೇ ಹೊಸ ಕಾರಿನಲ್ಲಿ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೊಲ್, ತಾಪಮಾನವನ್ನು ಸರಿದೂಗಿಸಿಕೊಳ್ಳಬಹುದಾದ ಮುಂಭಾಗ ಸೀಟುಗಳು, ಎಲೆಕ್ಟ್ರಿಕಲ್ ಅಡ್ಜೆಸ್ಟ್ ಮಾಡಬಹುದು ಚಾಲನಕ ಸೀಟು ಮತ್ತು ಹಿಂಬದಿ ಪ್ರಯಾಣಿಕರಿಗೂ ಎಸಿ ವೆಂಟ್ಸ್ ಜೊತೆಗೆ ಗುಣಮಟ್ಟದ ಲೆದರ್ ಸೀಟುಗಳನ್ನು ನೀಡಲಾಗಿದೆ.

ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಚಾಲನೆ ಮಾಡಿದ ಸಚಿವ ನಿತಿನ್ ಗಡ್ಕರಿ

ಪ್ರಯಾಣಿಕರ ಸುರಕ್ಷತೆಗೂ ಹೆಚ್ಚಿನ ಫೀಚರ್ಸ್‌ಗಳನ್ನು ನೀಡಿರುವ ಎಂಜಿ ಮೋಟಾರ್ ಸಂಸ್ತೆಯು ಜೆಡ್ಎಸ್ ಎಲೆಕ್ಟ್ರಿಕ್ ಕಾರಿನಲ್ಲಿ ಎಬಿಎಸ್ ಜೊತೆ ಇಬಿಡಿ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, 4 ಏರ್‌ಬ್ಯಾಗ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಟಾಪ್ ಎಂಡ್ ಮಾದರಿಗಳಲ್ಲಿ 360 ಡಿಗ್ರಿ ವ್ಯೂವ್ ಕ್ಯಾಮೆರಾ, ಏರ್ ಫಿಲ್ಟರ್, ಎಲೆಕ್ಟ್ರಿಕ್ ಸನ್‌ರೂಫ್ ಸೌಲಭ್ಯವನ್ನು ಹೊಂದಿರಲಿವೆ.

ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಚಾಲನೆ ಮಾಡಿದ ಸಚಿವ ನಿತಿನ್ ಗಡ್ಕರಿ

ಜೆಡ್ಎಸ್ ಎಲೆಕ್ಟ್ರಿಕ್ ಬೆಲೆ(ಅಂದಾಜು) ಸದ್ಯ ಅನಾವರಣಗೊಳಿಸಲಾಗಿರುವ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಮುಂದಿನ ವರ್ಷ ಜನವರಿ ಕೊನೆಯಲ್ಲಿ ಬಿಡುಗಡೆಯಾಗಲಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿರುವ ರೂ.19 ಲಕ್ಷದಿಂದ ರೂ.22 ಲಕ್ಷ ಬೆಲೆ ಹೊಂದಲಿದೆ.

ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಚಾಲನೆ ಮಾಡಿದ ಸಚಿವ ನಿತಿನ್ ಗಡ್ಕರಿ

ಈ ಮೂಲಕ ಎಲೆಕ್ಟ್ರಿಕ್ ಕಾರುಗಳಲ್ಲೇ ಆಕರ್ಷಕ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿರುವ ಇಜೆಡ್ಎಸ್ ಕಾರು ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಮೊದಲ ಹಂತವಾಗಿ ದೆಹಲಿ, ಬೆಂಗಳೂರು, ಮುಂಬೈ, ಹೈದ್ರಾಬಾದ್ ಮತ್ತು ಪುಣೆಯಲ್ಲಿ ಮಾತ್ರವೇ ಹೊಸ ಕಾರುಗಳನ್ನು ಮಾರಾಟ ಮಾಡಲಿದೆ.

Most Read Articles

Kannada
English summary
Nitin Gadkari Drives The MG ZS Electric SUV. Read in Kannada.
Story first published: Friday, December 20, 2019, 10:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more