ಕಳೆದ ಆರು ತಿಂಗಳಿನಿಂದ ಒಂದು ಟಾಟಾ ನ್ಯಾನೋ ಕೂಡಾ ಉತ್ಪಾದನೆಯಾಗಿಲ್ಲವಂತೆ..!

ಭಾರತೀಯ ಮಾರುಕಟ್ಟೆಯಲ್ಲಿ ತಮ್ಮದೇ ಆದ ಜನಪ್ರಿಯತೆಯೊಂದಿಗೆ ಮುನ್ನುಗ್ಗುತ್ತಿರುವ ಕೆಲವು ವಾಹನ ಉತ್ಪಾದನಾ ಸಂಸ್ಥೆಗಳಿಗೆ ಕೇಂದ್ರ ಸರ್ಕಾರವು ಜಾರಿಗೆ ತರುತ್ತಿರುವ ಹೊಸ ಕಾಯ್ದೆಗಳಿಂದಾಗಿ ಭಾರೀ ಹೊಡೆತ ನೀಡುತ್ತಿದ್ದು, ಇಷ್ಟುದಿನಗಳ ಕಾಲ ಮಾರುಕಟ್ಟೆಯಲ್ಲಿ ಹಾಟ್ ಚಿಪ್ಸ್‌ನಂತೆ ಮಾರಾಟವಾಗುತ್ತಿದ್ದ ಕೆಲವು ಕಾರುಗಳಿಗೆ ಸಂಕಷ್ಟ ಎದುರಾಗಿದೆ.

ಕಳೆದ ಆರು ತಿಂಗಳಿನಿಂದ ಒಂದು ಟಾಟಾ ನ್ಯಾನೋ ಉತ್ಪಾದನೆಯಾಗಿಲ್ಲವಂತೆ..!

ಅಂತಹ ಸಂಸ್ಥೆಗಳಲ್ಲಿ ಟಾಟಾ ಮೋಟಾರ್ಸ್ ಕೂಡಾ ಒಂದಾಗಿದ್ದು, ಇನ್ನು ಮುಂದಿನ ಕೆಲವೇ ವರ್ಷಗಳಲ್ಲಿ ತಮ್ಮ ಕೆಲವು ವಾಹನಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಲಿದೆ. ಟಾಟಾ ಮೋಟಾರ್ಸ್‍ನ ರತನ್ ಟಾಟಾರವರ ಕನಸಿನ ಕಾರು ನ್ಯಾನೋ 'ಜನರ ಕಾರು' ಎಂದೇ ಬಿಡುಗಡೆಯಾಗಿತ್ತು. ಇದೀಗ ಗ್ರಾಹಕರು ಈ ಕಾರಿನ ಕಡೆಗೆ ತಿರುಗಿ ಕೂಡಾ ನೋಡುತ್ತಿಲ್ಲವಂತೆ. ಇಟಿ ಆಟೋ ವರದಿಗಳ ಪ್ರಕಾರ ಟಾಟಾ ಮೋಟಾರ್ಸ್ ಸಂಸ್ಥೆಯು ಕಳೆದ ಆರು ತಿಂಗಳಿನಲ್ಲಿ ಒಂದು ನ್ಯಾನೊ ಕಾರಿನ ಉತ್ಪಾದನೆಯನ್ನು ಸಹ ಮಾಡಿಲ್ಲವಂತೆ.

ಕಳೆದ ಆರು ತಿಂಗಳಿನಿಂದ ಒಂದು ಟಾಟಾ ನ್ಯಾನೋ ಉತ್ಪಾದನೆಯಾಗಿಲ್ಲವಂತೆ..!

ಆದರೆ ಟಾಟಾ ನ್ಯಾನೋ ಕಾರಿನ ಉತ್ಪಾದನೆ ಸ್ಥಗಿತಗೊಳಿಸುವುದರ ಬಗ್ಗೆ ಟಾಟಾ ಮೋಟಾರ್ಸ್‍ನ ಅಧಿಕಾರಿಯೊಬ್ಬರು ನ್ಯಾನೊ ಕಾರಿನ ಉತ್ಪಾದನೆಯನ್ನು ಸಧ್ಯಕ್ಕೆ ಸ್ಥಗಿತಗೊಳಿಸುವ ಯಾವುದೇ ಯೋಜನೆ ಇಲ್ಲವೆಂದು ಮತ್ತು ಗ್ರಾಹಕರ ಬೇಡಿಕೆಯ ಮೇಲೆ ಈ ಕಾರಿನ ಉತ್ಪಾದನೆಯನ್ನು ಮಾದುವುದಾಗಿಯು ಮತ್ತು ಈ ವರ್ಷದ ಜನರಿ ಇಂದ ಜೂನ್ ಮಾಸದಲ್ಲಿ ಕೇವಲ ಒಂದೇ ಒಂದು ನ್ಯಾನೊ ಕಾರು ಮಾರಾಟವಾಗಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಕಳೆದ ಆರು ತಿಂಗಳಿನಿಂದ ಒಂದು ಟಾಟಾ ನ್ಯಾನೋ ಉತ್ಪಾದನೆಯಾಗಿಲ್ಲವಂತೆ..!

ಈ ಹಿಂದೆ, ಟಾಟಾ ಮೋಟಾರ್ಸ್ ಬಿಎಸ್-VI ಮತ್ತು ಮುಂಬರುವ ಹೊಸ ಸುರಕ್ಷತಾ ನಿಯಮಗಳ ಅಡಿಯಲ್ಲಿ ಕಟ್ಟುನಿಟ್ಟಾದ ಹೊರಸೂಸುವಿಕೆಯ ಮಾನದಂಡವನ್ನು ಪೂರೈಸಲು ರತನ್ ಟಾಟಾ ಅವರ ಕನಸಿನ ಕಾರಿನಲ್ಲಿ ಹೆಚ್ಚಿನ ಹೂಡಿಕೆ ಮಾಡುವ ಯಾವುದೇ ಯೋಜನೆಯನ್ನು ಹೊಂದಿರದ ಕಾರಣ 2020 ರ ಏಪ್ರಿಲ್ ನಿಂದ ನ್ಯಾನೊ ಉತ್ಪಾದನೆಯನ್ನು ನಿಲ್ಲಿಸಲಾಗುವುದು ಎಂದು ಸುಳಿವು ನೀಡಿತ್ತು.

ಕಳೆದ ಆರು ತಿಂಗಳಿನಿಂದ ಒಂದು ಟಾಟಾ ನ್ಯಾನೋ ಉತ್ಪಾದನೆಯಾಗಿಲ್ಲವಂತೆ..!

ಅಗ್ಗದ ಬೆಲೆಯೊಂದಿಗೆ ಲಕ್ಷಾಂತರ ಮಧ್ಯಮ ವರ್ಗದ ಗ್ರಾಹಕರ ಕಾರು ಖರೀದಿಯ ಕನಸನ್ನು ನನಸು ಮಾಡಿದ್ದ ನ್ಯಾನೋ ಅಷ್ಟೇ ಪ್ರಮಾಣದಲ್ಲಿ ಆತಂಕಕಾರಿಯಾಗಿ ಪರಿಣಮಿಸುತ್ತಿದೆ. ಹೀಗಾಗಿ ನ್ಯಾನೋ ಕಾರುನ್ನು ಸ್ಥಗಿತಗೊಳಿಸುವ ಯೋಚೆನೆಯನ್ನು ಬಿಟ್ಟು ಸಂಸ್ಥೆಯು ಉತ್ತಮ ಸುರಕ್ಷೆತೆವುಳ್ಳ ಹೊಸ ಕಾರುಗಳ ಉತ್ಪಾದನೆ ಮೇಲೆ ಹೆಚ್ಚಿನ ಗಮನಹರಿಸುತ್ತಿದೆ.

ಕಳೆದ ಆರು ತಿಂಗಳಿನಿಂದ ಒಂದು ಟಾಟಾ ನ್ಯಾನೋ ಉತ್ಪಾದನೆಯಾಗಿಲ್ಲವಂತೆ..!

2008ರ ಆಟೋ ಎಕ್ಸ್-ಪೋನಲ್ಲಿ ಮೊದಲ ಬಾರಿಗೆ ನ್ಯಾನೋ ಕಾರು ಕಾಣಿಸಿಕೊಂಡು 2009ರಲ್ಲಿ ವಿಶ್ವದ ಮಾರುಕಟ್ಟೆಗೆ ಲಗ್ಗೆ ಇಟ್ಟಿತ್ತು. ರತನ್ ಟಾಟಾರವರು ಭಾರತೀಯರಿಗೆ ಕೊಟ್ಟಿದ್ದ ಮಾತಿನಂತೆ 1 ಲಕ್ಷ ರೂಪಾಯಿಗೆ ನ್ಯಾನೋ ಕಾರನ್ನು ಗ್ರಾಹಕರಿಗೆ ನೀಡಿತ್ತು. ನ್ಯಾನೋ ಕಾರು ವಿಶ್ವದಲ್ಲಿಯೇ ಅಗ್ಗದ ಕಾರು ಎಂಬ ಹೆಸರು ಸಹ ಪಡೆದುಕೊಂಡಿತ್ತು.

ಕಳೆದ ಆರು ತಿಂಗಳಿನಿಂದ ಒಂದು ಟಾಟಾ ನ್ಯಾನೋ ಉತ್ಪಾದನೆಯಾಗಿಲ್ಲವಂತೆ..!

ಟಾಟಾ ಸನ್ಸ್ ಮಾಜಿ ಮುಖ್ಯಸ್ಥ ಸೈರಸ್ ಮಿಸ್ತ್ರಿ ಕೂಡಾ ಈ ಹಿಂದೆ ಟಾಟಾ ನ್ಯಾನೋ ಉತ್ಪಾದನೆಯಿಂದ ಸಂಸ್ಥೆಗೆ 1 ಸಾವಿರ ಕೋಟಿ ರೂಪಾಯಿ ನಷ್ಟವಾಗಿದ್ದು, ನ್ಯಾನೋ ಕಾರು ಉತ್ಪಾದನೆಯಿಂದ ಸಂಸ್ಥೆಗೆ ಯಾವುದೇ ರೀತಿಯ ಲಾಭ ಸಹ ಗಳಿಸಿಲ್ಲ ಎಂದು ಆರೋಪಿಸಿದ್ದರು.

ಕಳೆದ ಆರು ತಿಂಗಳಿನಿಂದ ಒಂದು ಟಾಟಾ ನ್ಯಾನೋ ಉತ್ಪಾದನೆಯಾಗಿಲ್ಲವಂತೆ..!

ಹೀಗಿದ್ದರೂ ರತನ್ ಟಾಟಾರವರ ಕನಸಿನ ಕೂಸಾಗಿದ್ದರಿಂದ ನ್ಯಾನೋ ಕಾರನ್ನು ಭಾವನಾತ್ಮಕ ಕಾರಣಗಳಿಂದಾಗಿ ಇನ್ನೂ ಉತ್ಪಾದನೆ ಮುಂದುವರಿಸಿದ್ದ ಟಾಟಾ ಸಂಸ್ಥೆಯು ಇದೀಗ ಮಹತ್ವದ ನಿರ್ಣಯಕ್ಕೆ ಬಂದಿದ್ದು, 2020ರ ಏಪ್ರಿಲ್ 1ರಿಂದ ಸಂಪೂರ್ಣ ಸ್ಥಗಿತಗೊಳಿಸುವುದಾಗಿ ಘೋಷಣೆ ಮಾಡಬಹುದೇ ಎಂದು ಕಾಯ್ದು ನೋಡಬೇಕಿದೆ.

ಕಳೆದ ಆರು ತಿಂಗಳಿನಿಂದ ಒಂದು ಟಾಟಾ ನ್ಯಾನೋ ಉತ್ಪಾದನೆಯಾಗಿಲ್ಲವಂತೆ..!

ಕಳೆದ ಕೆಲ ತಿಂಗಳಿನಿಂದ ಅತ್ಯಂತ ಕಡಿಮೆ ಉತ್ಪಾದನೆಯಾಗುವ ಕಾರುಗಳ ಪೈಕಿ ನ್ಯಾನೊ ಕೂಡಾ ಒಂದಾಗಿದ್ದು, ಗುಜರಾತ್ ನ ಸನದ್ ಘಟಕದಲ್ಲಿ ದಿನಕ್ಕೆ ಕೇವಲ ಒಂದೋ ಅಥವಾ ಎರಡು ನ್ಯಾನೊ ಕಾರುಗಳಷ್ಟೆ ನಿರ್ಮಾಣ ಮಾಡಲಾಗುತ್ತಿರುವುದು ಟಾಟಾ ಸಂಸ್ಥೆಗೆ ಹೊರೆಯಾಗಿ ಪರಿಣಮಿಸಿದೆ.

ಕಳೆದ ಆರು ತಿಂಗಳಿನಿಂದ ಒಂದು ಟಾಟಾ ನ್ಯಾನೋ ಉತ್ಪಾದನೆಯಾಗಿಲ್ಲವಂತೆ..!

ಇನ್ನು ಈ ಹಿಂದೆ ಕೇಂದ್ರ ಸರ್ಕಾರವು 2017ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ದೇಶಾದ್ಯಂತ ಬಿಎಸ್-3 (ಭಾರತ್ ಸ್ಟೇಜ್) ಸೌಲಭ್ಯಗಳನ್ನು ಒಳಗೊಂಡ ವಾಹನಗಳ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆ ಮೇಲೆ ನಿಷೇಧ ನಿಷೇಧ ಹೇರಿದ್ದಲ್ಲದೆ ಬಿಎಸ್-4 ಮತ್ತು ಅದಕ್ಕೂ ಮೇಲ್ಪಟ್ಟ ವಾಹನ ಮಾದರಿಗಳ ಮಾರಾಟಕ್ಕೆ ಮಾತ್ರವೇ ಅವಕಾಶ ನೀಡಿತ್ತು.

ಕಳೆದ ಆರು ತಿಂಗಳಿನಿಂದ ಒಂದು ಟಾಟಾ ನ್ಯಾನೋ ಉತ್ಪಾದನೆಯಾಗಿಲ್ಲವಂತೆ..!

ಇದೀಗ ಮತ್ತೊಂದು ಮಹತ್ವದ ಹೆಜ್ಜೆಯಿಡುತ್ತಿರುವ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್ ಸೂಚನೆಯೆಂತೆ 2020ರ ಏಪ್ರಿಲ್ 1ರಿಂದ ಬಿಎಸ್-4 ವಾಹನಗಳ ಉತ್ಪಾದನೆ ಮತ್ತು ಮಾರಾಟ ಮೇಲೆ ನಿಷೇಧ ಹೇರುವುದು ಖಚಿತವಾಗಿದ್ದು, ಬಿಎಸ್-6 ವಾಹನಗಳು ಮತ್ತು ಅದಕ್ಕೂ ಹೆಚ್ಚಿನ ಮಟ್ಟದ ವಾಹನ ಮಾದರಿಗಳಿಗೆ ಮಾತ್ರವೇ ಅವಕಾಶ ನೀಡಲಿದೆ.

Article Published On: Wednesday, July 3, 2019, 11:03 [IST]
English summary
Not Even Sigle Tata Nano Production Happened Since Jan 2019. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+