ರ್‍ಯಾಲಿಯಲ್ಲಿ ಮುರಿದು ಬಿತ್ತು ಜೀಪ್‍‍‍ನ ರೋಲ್‍‍ಬಾರ್

ಅನೇಕ ರಾಜಕಾರಣಿಗಳು ರ್‍ಯಾಲಿಗಳಲ್ಲಿ ಭಾಗವಹಿಸುವಾಗ ಜನರಿಗೆ ಕಾಣಿಸಿಕೊಳ್ಳಲಿ ಎಂಬ ಉದ್ದೇಶದಿಂದ ತೆರೆದ ಛಾವಣಿಯನ್ನು ಹೊಂದಿರುವ ವಾಹನಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕೆಲ ನಾಯಕರು ಕಾರುಗಳ ಸನ್‌ರೂಫ್‌ನಿಂದ ಹೊರಬರಲು ಬಯಸಿದರೆ, ಇತರರು ಓಪನ್-ಟಾಪ್ ಕಾರುಗಳಿಗೆ ಆದ್ಯತೆ ನೀಡುತ್ತಾರೆ.

ರ್‍ಯಾಲಿಯಲ್ಲಿ ಮುರಿದು ಬಿತ್ತು ಜೀಪ್‍‍‍ನ ರೋಲ್‍‍ಬಾರ್

ಈ ರೀತಿಯ ವಾಹನಗಳ ಸುತ್ತಲೂ ಅವರ ಬೆಂಬಲಿಗರನ್ನು ಕಾಣಬಹುದು. ಮಹಾರಾಷ್ಟ್ರದಲ್ಲಿ, ರಾಜಕಾರಣಿಯೊಬ್ಬರು ಮಾರ್ಪಡು ಮಾಡಿದ ವಾಹನವನ್ನು ಬಳಸಿ ಹೆಚ್ಚಿನ ಜನರು ನೋಡಲಿ ಎಂದು ಬಯಸಿದ್ದರು. ಅವರು ಆ ವಾಹನದಲ್ಲಿ ಸಾಗುತ್ತಿದ್ದ ಸಮಯದಲ್ಲಿ ವಾಹನದ ರೋಲ್‍‍ಬಾರ್ ಮುರಿದುಹೋಯಿತು.

ರ್‍ಯಾಲಿಯಲ್ಲಿ ಮುರಿದು ಬಿತ್ತು ಜೀಪ್‍‍‍ನ ರೋಲ್‍‍ಬಾರ್

ಇದರ ವೀಡಿಯೊ ಈಗ ವೈರಲ್ ಆಗಿದೆ. ಈ ವೀಡಿಯೊದಲ್ಲಿ ಕಾಣುವ ಮಹಿಳಾ ರಾಜಕಾರಣಿ ಮಂದಾ ಮಾತ್ರೆ ಅವರು ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದರು. ಅವರು ಕುಳಿತಿರುವ ವಾಹನವು ಮಾಡಿಫೈಗೊಳಿಸಲಾದ ಮಹೀಂದ್ರಾ ಜೀಪ್ ಆಗಿದೆ.

ರ್‍ಯಾಲಿಯಲ್ಲಿ ಮುರಿದು ಬಿತ್ತು ಜೀಪ್‍‍‍ನ ರೋಲ್‍‍ಬಾರ್

ಮಹಿಳಾ ರಾಜಕಾರಣಿ ಕುಳಿತಿರುವ ವಾಹನವನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಿಫೈಗೊಳಿಸಲಾಗಿದೆ. ಈ ವೀಡಿಯೊದಲ್ಲಿ ಕಾಣುವಂತೆ ಈ ಜೀಪಿನಲ್ಲಿರುವ ಬಹುತೇಕ ಭಾಗಗಳನ್ನು ಮಾರಾಟವಾದ ನಂತರ ಅಳವಡಿಸಲಾಗಿದೆ.

ರ್‍ಯಾಲಿಯಲ್ಲಿ ಮುರಿದು ಬಿತ್ತು ಜೀಪ್‍‍‍ನ ರೋಲ್‍‍ಬಾರ್

ಮಾಡಿಫೈಗೊಳಿಸಲಾದ ವಾಹನವು ಪಂಜಾಬ್ ರಿಜಿಸ್ಟ್ರೇಷನ್ ಪ್ಲೇಟ್ ಹೊಂದಿದೆ. ಗಮನಿಸಬೇಕಾದ ಸಂಗತಿಯೆಂದರೆ ಪಂಜಾಬ್ ಭಾಗದಲ್ಲಿ ವಾಹನಗಳನ್ನು ಭಾರೀ ಪ್ರಮಾಣದಲ್ಲಿ ಮಾಡಿಫೈ ಮಾಡಲಾಗುತ್ತದೆ. ನಂತರ ಈ ವಾಹನಗಳನ್ನು ಭಾರತದ್ಯಂತ ಮಾರಾಟ ಮಾಡಲಾಗುತ್ತದೆ.

ರ್‍ಯಾಲಿಯಲ್ಲಿ ಮುರಿದು ಬಿತ್ತು ಜೀಪ್‍‍‍ನ ರೋಲ್‍‍ಬಾರ್

ವೀಡಿಯೊದ ಬಗ್ಗೆ ಹೇಳುವುದಾದರೆ, ಈ ಮಾರ್ಪಡಿಸಿದ ಜೀಪ್‍‍ನಲ್ಲಿ ಸುಮಾರು 8 ಜನರು ಪ್ರಯಾಣಿಸುತ್ತಿರುವುದನ್ನು ಕಾಣಬಹುದು. ಘಟನೆ ಸಂಭವಿಸಿದಾಗ ವಾಹನವು ಗಂಟೆಗೆ ಸುಮಾರು 40-50 ಕಿ.ಮೀ ವೇಗದಲ್ಲಿ ಪ್ರಯಾಣಿಸುತ್ತಿರುವುದನ್ನು ಕಾಣಬಹುದು.

ರ್‍ಯಾಲಿಯಲ್ಲಿ ಮುರಿದು ಬಿತ್ತು ಜೀಪ್‍‍‍ನ ರೋಲ್‍‍ಬಾರ್

ರಸ್ತೆಯಲ್ಲಿ ಆರಾಮವಾಗಿ ಸಾಗುತ್ತಿದ್ದ ವಾಹನವು ಇದ್ದಕ್ಕಿದ್ದಂತೆ ನಿಲ್ಲುತ್ತದೆ. ಇದರಿಂದಾಗಿ ವಾಹನದಲ್ಲಿರುವ ಪ್ರತಿಯೊಬ್ಬರು ಮುಂದೆ ಬೀಳುವುದನ್ನು ವೀಡಿಯೊದಲ್ಲಿ ಕಾಣಬಹುದು. ವಾಹನದಲ್ಲಿದ್ದ ಡ್ರೈವರ್ ಸೇರಿದಂತೆ ಯಾರೂ ಸೀಟ್‌ಬೆಲ್ಟ್ ಧರಿಸಿರಲಿಲ್ಲ.

MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ರ್‍ಯಾಲಿಯಲ್ಲಿ ಮುರಿದು ಬಿತ್ತು ಜೀಪ್‍‍‍ನ ರೋಲ್‍‍ಬಾರ್

ಮುಂಭಾಗದಲ್ಲಿ ಕುಳಿತಿದ್ದ ಇಬ್ಬರನ್ನು ಹೊರತುಪಡಿಸಿ, ವಾಹನದ ಹಿಂಭಾಗದಲ್ಲಿ ಕನಿಷ್ಠ ಆರು ಜನ ನಿಂತಿರುವುದನ್ನು ಕಾಣಬಹುದು. ದಿಢೀರನೆ ವಾಹನವು ನಿಂತ ಕಾರಣ ಎಲ್ಲರೂ ಮುಂದೆ ಸಾಗುತ್ತಾರೆ. ನಿಂತಿದ್ದ ಜನರು ಬ್ಯಾಲೆನ್ಸ್ ಕಳೆದುಕೊಂಡು ಮುಂಭಾಗದ ಆಸನಗಳಲ್ಲಿ ಕುಳಿತ ಪ್ರಯಾಣಿಕರ ಮೇಲೆ ಬೀಳುತ್ತಾರೆ.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ರ್‍ಯಾಲಿಯಲ್ಲಿ ಮುರಿದು ಬಿತ್ತು ಜೀಪ್‍‍‍ನ ರೋಲ್‍‍ಬಾರ್

ಈ ಘಟನೆಯಲ್ಲಿ ಯಾರಾದರೂ ಗಾಯಗೊಂಡಿದ್ದಾರೆಯೇ ಇಲ್ಲವೇ ಎಂಬುದು ತಿಳಿದು ಬಂದಿಲ್ಲ. ಈ ಕಾರಣಕ್ಕಾಗಿಯೇ ಭಾರತದಲ್ಲಿ ವಾಹನಗಳನ್ನು ಮಾಢಿಫೈ ಮಾಡುವುದನ್ನು ನಿಷೇಧಿಸಲಾಗಿದೆ. ವಾಹನಗಳನ್ನು ಸರಿಯಾಗಿ ಮಾರ್ಪಾಡು ಮಾಡದಿದ್ದರೆ ಅಥವಾ ಕಡಿಮೆ ಗುಣಮಟ್ಟದ ಭಾಗಗಳನ್ನು ವಾಹನದಲ್ಲಿ ಅಳವಡಿಸಿದ್ದರೆ, ಅವು ಸ್ವಲ್ಪ ಸಮಯದ ನಂತರ ಮುರಿದು ಬೀಳುತ್ತವೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ವೀಡಿಯೊದಲ್ಲಿರುವ ಈ ಘಟನೆಯು ಮುರಿದ ರೋಲ್‌ಬಾರ್‌ನಿಂದ ಉಂಟಾಗಿದೆ. ವೀಡಿಯೊದಲ್ಲಿ ಕಾಣುವಂತೆ ಈ ಎಸ್‌ಯುವಿಗೆ ದೊಡ್ಡದಾದ ಟಯರ್‌ಗಳನ್ನು ಅಳವಡಿಸಲಾಗಿದೆ. ದೊಡ್ಡ ಟಯರ್‌ಗಳಿಗೆ ಹೊಂದಿಕೊಳ್ಳುವಂತೆ, ಸಸ್ಪೆಂಷನ್ ಹಾಗೂ ವ್ಹೀಲ್ ಆರ್ಕ್‍‍ಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.

ರ್‍ಯಾಲಿಯಲ್ಲಿ ಮುರಿದು ಬಿತ್ತು ಜೀಪ್‍‍‍ನ ರೋಲ್‍‍ಬಾರ್

ಭಾರವಾದ ಹಾಗೂ ದೊಡ್ಡದಾದ ಟಯರ್‌ಗಳಿಂದಾಗಿ ಸಸ್ಪೆಂಷನ್ ಹಾಗೂ ರೋಲ್‍‍ಬಾರ್‍‍ಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗಿದೆ. ಇದರ ಜೊತೆಗೆ ಕಾರಿನಲ್ಲಿ 8 ಜನರಿರುವುದರಿಂದ ಓವರ್‌ಲೋಡ್ ಆಗಿದೆ. ಆ ಕಾರಣಕ್ಕಾಗಿ ರೋಲ್‌ಬಾರ್ ಮುರಿದಿದೆ.

ರ್‍ಯಾಲಿಯಲ್ಲಿ ಮುರಿದು ಬಿತ್ತು ಜೀಪ್‍‍‍ನ ರೋಲ್‍‍ಬಾರ್

ಆರ್‌ಟಿಒ ಅಧಿಕೃತವಾಗಿ ಪರೀಕ್ಷಿಸುವವರೆಗೆ ಭಾರತೀಯ ಮೋಟಾರು ವಾಹನ ಕಾಯ್ದೆಯ ಪ್ರಕಾರ ಯಾವುದೇ ವಾಹನಗಳನ್ನು ಮಾರ್ಪಾಡು ಮಾಡುವಂತಿಲ್ಲ. ಆದರೆ ಈ ರೀತಿಯ ಪರೀಕ್ಷೆಯು ದೀರ್ಘವಾದ ಪ್ರಕ್ರಿಯೆಯಾದ ಕಾರಣ, ಹೆಚ್ಚಿನ ಜನರು ಇದನ್ನು ಮಾಡುವುದಿಲ್ಲ.

ರ್‍ಯಾಲಿಯಲ್ಲಿ ಮುರಿದು ಬಿತ್ತು ಜೀಪ್‍‍‍ನ ರೋಲ್‍‍ಬಾರ್

ಆದರೆ, ಮಾಢಿಫೈ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ವ್ಯಕ್ತಿಯ ಬಳಿಯೇ ಈ ರೀತಿಯ ಮಾಢಿಫೈಗಳನ್ನು ಮಾಡಿಸಿಕೊಳ್ಳಬೇಕು. ವಾಹನ ಪ್ರಿಯರು ತಮ್ಮ ವಾಹನಗಳನ್ನು ಕಡಿಮೆ ಬೆಲೆಯಲ್ಲಿ ಮಾಢಿಫೈ ಮಾಡುವ ಅಂಗಡಿಗಳಿಗೆ ತೆಗೆದುಕೊಂಡು ಹೋಗಿ ತಮ್ಮ ವಾಹನವನ್ನು ಮಾಢಿಫೈಗೊಳಿಸಿ ಕೊಳ್ಳುತ್ತಾರೆ.

ರ್‍ಯಾಲಿಯಲ್ಲಿ ಮುರಿದು ಬಿತ್ತು ಜೀಪ್‍‍‍ನ ರೋಲ್‍‍ಬಾರ್

ಕಡಿಮೆ ಬೆಲೆಯಲ್ಲಿ ಮಾಢಿಫೈಗೊಳ್ಳುವ ವಾಹನಗಳು ಉತ್ತಮವಾಗಿರುವುದಿಲ್ಲ ಎಂಬುದನ್ನು ಗಮನಿಸಬೇಕು. ಕಾರುಗಳ ವಿಷಯಕ್ಕೆ ಬಂದಾಗ ಅದರಲ್ಲಿ ಸಂಚರಿಸುವ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು.

Most Read Articles

Kannada
English summary
Jeep’s rollbar breaks during election rally - Read in Kannada
Story first published: Monday, October 14, 2019, 18:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X