ರಸ್ತೆಗುಂಡಿಯಿಂದ ಹಾಳಾಯ್ತು ಪೊಲೊ ಏರ್‍ಬ್ಯಾಗ್
ಭಾರತೀಯ ರಸ್ತೆಗಳಲ್ಲಿ ವಾಹನ ಚಲಾಯಿಸುವುದು ನಿಜಕ್ಕೂ ಸವಾಲಿನ ಕೆಲಸವೇ ಸರಿ. ಪ್ರತಿದಿನವೂ ವಾಹನ ಚಾಲಕರು ಈ ಸವಾಲುಗಳನ್ನು ಎದುರಿಸುತ್ತಾರೆ. ಬಹುಪಾಲು ವಾಹನ ಚಾಲಕರಲ್ಲಿ ಶಿಸ್ತಿನ ಕೊರತೆಯಿದ್ದರೂ, ದಾರಿತಪ್ಪಿ ಬರುವ ದನಗಳು, ಹದಗೆಟ್ಟ ರಸ್ತೆಗಳು, ಅಕ್ರಮವಾಗಿ ಹಾಕಲಾಗಿರುವ ಸ್ಪೀಡ್ ಬ್ರೇಕರ್‍ನಂತವುಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತವೆ.

ಭಾರತೀಯ ರಸ್ತೆಗಳ ದೊಡ್ಡ ಸಮಸ್ಯೆಯೆಂದರೆ ರಸ್ತೆ ಗುಂಡಿಗಳು. ಗುಂಡಿಗಳು ವಾಹನಗಳ ಸಂಚಾರವನ್ನು ನಿಧಾನಗೊಳಿಸುವುದರ ಜೊತೆಗೆ ಭಾರಿ ಟ್ರಾಫಿಕ್ ಜಾಮ್ ಉಂಟುಮಾಡುತ್ತವೆ. ಕೆಲ ತಿಂಗಳ ಹಿಂದೆ, ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಂದಾಗಿ ಹಲವಾರು ಸ್ಕೂಟರ್ ಸವಾರರು ಬಿದ್ದು ಗಾಯಗೊಂಡಿದ್ದರು. ಕೆಲವು ಗುಂಡಿಗಳಂತೂ ಜಲಪಾತಗಳ ರೀತಿಯಲ್ಲಿರುತ್ತವೆ.

ಈಗ ಮುಂಬಯಿಯಲ್ಲಿ ನಡೆದಿರುವ ಘಟನೆಯೊಂದು ರಸ್ತೆ ಗುಂಡಿಗಳಿರುವ ರಸ್ತೆಯಲ್ಲಿ ವಾಹನಗಳು ಹೆಚ್ಚಿನ ವೇಗದಲ್ಲಿದ್ದರೆ ವಾಹನಕ್ಕೆ ಎಷ್ಟು ಹಾನಿಯಾಗುತ್ತದೆ ಎಂಬುದನ್ನು ತೋರಿಸುತ್ತದೆ. ಮುಂಬೈ ನಿವಾಸಿ ಡೆಜ್ಲಾನ್ ಚೋಯ್, ವಡಾಲಾ ಬಳಿಯ ಫ್ರೀವೇಯಲ್ಲಿ ಅತಿ ವೇಗದಲ್ಲಿ ಚಲಾಯಿಸಿಕೊಂಡು ಬಂದು ರಸ್ತೆಗುಂಡಿಗೆ ಬಿದ್ದಿದ್ದಾರೆ.

ಇದರ ಪರಿಣಾಮವಾಗಿ ಕಾರಿನ ಏರ್‌ಬ್ಯಾಗ್‌ಗಳು ತೆರೆದುಕೊಂಡಿವೆ. ತಾನು ಗಂಟೆಗೆ 20-30 ಕಿ.ಮೀ ವೇಗದಲ್ಲಿ ಕಾರನ್ನು ಚಲಾಯಿಸುತ್ತಿದ್ದು, ಗುಂಡಿಯನ್ನು ಗಮನಿಸಲಿಲ್ಲ ಎಂದು ಡೆಜ್ಲಾನ್ ಹೇಳಿದ್ದಾರೆ. ಅವರು ಷೇರ್ ಮಾಡಿರುವ ವೀಡಿಯೊ ನೀರಿನ ಕೆಳಗಿರುವ ಗುಂಡಿಯನ್ನು ತೋರಿಸುತ್ತದೆ, ಅದರಿಂದಾಗಿ ಗುಂಡಿಯನ್ನು ಗುರುತಿಸಲು ಸಾಧ್ಯವಾಗಿಲ್ಲ.

ಗುಂಡಿಗಳು ಸಾಕಷ್ಟು ಅಪಾಯಕಾರಿಯಾಗಿರುತ್ತವೆ. ಮಳೆ ಬಂದಾಗ ಮಳೆ ನೀರು ನಿಂತು ಗುಂಡಿಗಳು ಕಾಣಿಸುವುದೇ ಇಲ್ಲ. ಆದ ಕಾರಣ ರಸ್ತೆಗಳಲ್ಲಿ ನಿಂತ ನೀರಿನ ಮೇಲೆ ವಾಹನ ಚಲಾಯಿಸಿಕೊಂಡು ಹೋಗುವಾಗ ಹುಷಾರಾಗಿರಬೇಕು. ಕಾರುಗಳಿಗೆ ಹಾನಿಯಾದರೆ ಸುಮಾರು ರೂ.2 ಲಕ್ಷಗಳವರೆಗೆ ಖರ್ಚಾಗುತ್ತದೆ.

ಡೆಜ್ಲಾನ್‍ರವರು ಫೋಕ್ಸ್‌ವ್ಯಾಗನ್ ಪೊಲೊ ಹ್ಯಾಚ್‌ಬ್ಯಾಕ್ ಚಾಲನೆ ಮಾಡುತ್ತಿದ್ದರು. ಪೊಲೊ ಭಾರತದಲ್ಲಿರುವ ಜನಪ್ರಿಯ ಹ್ಯಾಚ್‌ಬ್ಯಾಕ್‌ಗಳಲ್ಲಿ ಒಂದಾಗಿದ್ದು, ಗಟ್ಟಿಮುಟ್ಟಾದ ನಿರ್ಮಾಣ ಹಾಗೂ ರಾಕ್ ಸಾಲಿಡ್ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ. ಗುಂಡಿಯಲ್ಲಿ ಇಳಿದ ನಂತರ ಕಾರಿಗೆ ಹಾನಿಯಾಗಿದೆ ಎಂಬುದನ್ನು ಡೆಜ್ಲಾನ್ ಚೋಯ್‍ರವರು ಹಾಕಿರುವ ಚಿತ್ರಗಳಿಂದ ಕಾಣಬಹುದು.

ಡೆಜ್ಲಾನ್‍ರವರು ತಮ್ಮ ಕಥೆಯನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದು, ವಾಹನದ ಹಿಂದಿನ ಟಯರ್ ಗುಂಡಿಯೊಳಗೆ ಹೋಗಿರುವುದರ ಬಗ್ಗೆ ಹೇಳಿದ್ದಾರೆ. ಈ ಚಿತ್ರಗಳಲ್ಲಿ ಒಂದು ಅಡಿಗಿಂತಲೂ ಆಳವಾದ ಗುಂಡಿಗಳಿರುವುದನ್ನು ಕಾಣಬಹುದು. ಗುಂಡಿಗಳ ಆಳವು ಸುಮಾರು 12 ರಿಂದ15 ಇಂಚುಗಳಷ್ಟು ಇರಬೇಕೆಂದು ಡೆಜ್ಲಾನ್ ಹೇಳಿಕೊಂಡಿದ್ದಾರೆ.

ಹಲವು ವಾಹನಗಳು ಗುಂಡಿಯ ಮೂಲಕ ಹೋಗುವುದನ್ನು ವೀಡಿಯೊದಲ್ಲಿ ನೋಡಬಹುದು. ಗುಂಡಿಯ ಮುಂದೆ ಒಂದು ಕಲ್ಲೊಂದನ್ನು ಇರಿಸಲಾಗಿದ್ದು, ವಾಹನಗಳು ಪರದಾಡುವಂತಾಗಿದೆ. ಟ್ರಕ್‍ವೊಂದು ಕಲ್ಲಿನ ಮೇಲೆಯೇ ಹೋಗುತ್ತಿರುವುದನ್ನು ಕಾಣಬಹುದು.

ಫೋಕ್ಸ್‌ವ್ಯಾಗನ್ ಪೊಲೊದ ಹಿಂದಿನ ವ್ಹೀಲ್, ಗುಂಡಿಯೊಳಗೆ ಇಳಿದಿದ್ದು, ಹಿಂಭಾಗದ ಬಂಪರ್ ಹಾನಿಗೊಳಗಾಗಿದೆ. ಫೋಕ್ಸ್‌ವ್ಯಾಗನ್ ಪೊಲೊ ಕಾರಿನ ಮುಂಭಾಗದಲ್ಲಿ ಟ್ವಿನ್ ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ. ವೀಡಿಯೊದಲ್ಲಿ ಈ ಎರಡೂ ಏರ್‍ಬ್ಯಾಗ್‍ಗಳು ತೆರೆದುಕೊಂಡಿವೆ. ಕಾರು ಗುಂಡಿಯಲ್ಲಿ ಇಳಿದಾಗ ಏರ್‌ಬ್ಯಾಗ್ ಸೆನ್ಸಾರ್‌ಗಳು ಹೊಡೆಯದೇ ಇರಬಹುದು.

ವಾಹನದಲ್ಲಿನ ಹೆಚ್ಚಿನ ತೀವ್ರತೆಯ ಜರ್ಕ್‍ನಿಂದಾಗಿ ಏರ್‌ಬ್ಯಾಗ್‌ಗಳು ತೆರೆದುಕೊಂಡಿರಬೇಕು. ಡೆಹ್ಲಾನ್ ಚೋಯ್‍ರವರು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಅನ್ನು(ಬಿಎಂಸಿ) ಟ್ಯಾಗ್ ಮಾಡಿ ಈ ವೀಡಿಯೊ ಹಾಗೂ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಎಂಸಿ, ಇದು ಬಿಎಂಸಿ ರೋಡ್ ಹಾಗೂ ಬಿಎಂಸಿ ವಾರ್ಡ್ ಇಲಾಖೆಗೆ ಬರುವುದರಿಂದ ಇದರ ಬಗ್ಗೆ ಪರಿಶೀಲಿಸುವಂತೆ ಸೂಚಿಸಿದ್ದಾರೆ.
Image Courtesy: Delzan Chhoi/Twitter


Click it and Unblock the Notifications