Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಡುಗಡೆಯಾದ ಮೇಡ್ ಇನ್ ಇಂಡಿಯಾ ಖ್ಯಾತಿಯ ರೇಂಜ್ ರೋವರ್ ವೆಲಾರ್
ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ಕಂಪನಿಯು ಭಾರತದಲ್ಲಿಯೇ ಉತ್ಪಾದಿಸಲಾಗಿರುವ ರೇಂಜ್ ರೋವರ್ ವೆಲಾರ್ ವಾಹನವನ್ನು ಬಿಡುಗಡೆಗೊಳಿಸಿದೆ. ಈ ವಾಹನವನ್ನು 2.0 ಲೀಟರ್ ಪೆಟ್ರೋಲ್ ಮತ್ತು 2.0 ಲೀಟರ್ ಡೀಸೆಲ್ ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ವೆಲಾರ್ ವಾಹನವನ್ನು ಸ್ಥಳೀಯವಾಗಿ ಉತ್ಪಾದಿಸಿರುವ ಕಾರಣದಿಂದ ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ಕಂಪನಿಗೆ ಭಾರತೀಯ ಲಗ್ಷುರಿ ಎಸ್‍ಯುವಿ ಸೆಗ್‍ಮೆಂಟಿನಲ್ಲಿ ಉಳಿದ ಕಂಪನಿಗಳಿಗೆ ಸ್ಪರ್ಧೆಯೊಡ್ಡಲು ಸಾಧ್ಯವಾಗುತ್ತದೆ.

ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ಲಿಮಿಟೆಡ್‍ನ ಅಧ್ಯಕ್ಷ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್‍ರವರಾದ ರೋಹಿತ್ ಸೂರಿ ರವರು ಮಾತನಾಡಿ, 2018ರಲ್ಲಿ ಬಿಡುಗಡೆಯಾದ ನಂತರ ರೇಂಜ್ ರೋವರ್ ವೆಲಾರ್ ಬಿಡುಗಡೆಯಾದಾಗಿನಿಂದ ದೇಶಾದ್ಯಂತವಿರುವ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಈಗ ಸ್ಥಳಿಯವಾಗಿಯೇ ಉತ್ಪಾದಿಸಿರುವ ಕಾರಣ ರೇಂಜ್ ರೋವರ್ ವೆಲಾರ್ ಕಾರನ್ನು ಆಕರ್ಷಕ ಹಾಗೂ ಸ್ಪರ್ಧಾತ್ಮಕ ಬೆಲೆಯಲ್ಲಿ ನೀಡಲಾಗುವುದು. ಇದರಿಂದ ನಾವು ಭಾರತದಲ್ಲಿ ಹೆಚ್ಚು ಗ್ರಾಹಕರನ್ನು ಪಡೆಯಲು ಸಾಧ್ಯವಾಗುವುದು ಎಂದು ತಿಳಿಸಿದರು.

ರೇಂಜ್ ರೋವರ್ ವೆಲಾರ್ ಪವರ್ ಉತ್ಪಾದಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಈ ವಾಹನವು ಆಲ್ ಎಲ್‍ಇಡಿ ಲೈಟ್, ಫ್ಲಶ್ ಡೋರ್ ಹ್ಯಾಂಡಲ್ ಮತ್ತು ಹಿಂಬದಿಯಲ್ಲಿ ಸ್ಪಾಯ್‍ಲರ್ ಹೊಂದಿದೆ.
ಇಂಟಿರಿಯರ್ ಟಚ್ ಪ್ರೊ ಡ್ಯುವೊ ಟೆಕ್ನಾಲಜಿಯನ್ನು ಹೊಂದಿದ್ದು, ಇದು ವೆಲಾರ್‍ನ ಲಗ್ಷುರಿ ಮತ್ತು ಇನೊವೇಶನ್ ಬಗ್ಗೆ ತಿಳಿಸುತ್ತದೆ.

ಈ ವಾಹನದಲ್ಲಿ ಎರಡು 10 ಇಂಚಿನ ಟಚ್‍ಸ್ಕ್ರೀನ್ ಇಂಟಿಗ್ರೇಷನ್‍ಗಳು ಹಾಗೂ ಸ್ಟಾಂಡರ್ಡ್ ಆಗಿ ಮಿನಿಮಲ್ ಕಂಟ್ರೋಲ್‍ಗಳಿವೆ. ವೆಲಾರ್ ವಾಹನದಲ್ಲಿ ಇಂಟರ್ ಆಕ್ಟಿವ್ ಡ್ರೈವರ್ ಡಿಸ್‍ಪ್ಲೇ ಇದ್ದು, ಚಾಲಕನಿಗೆ ಡ್ರೈವಿಂಗ್ ಬಗ್ಗೆ ಮತ್ತು ಆಕ್ಟಿವ್ ಸೇಫ್ ಡೇಟಾ ಬಗ್ಗೆಅನೇಕ ಮಾಹಿತಿಗಳನ್ನು ನೀಡುತ್ತದೆ.

ನ್ಯಾವಿಗೇಶನ್ ಮ್ಯಾಪ್, ಫೋನ್ ಕಂಟ್ರೋಲ್ ಮತ್ತು ಮೀಡಿಯಾ ಕಂಟ್ರೊಲ್‍ಗಳನ್ನು ಫುಲ್ ಸ್ಕ್ರೀನ್‍ನಲ್ಲಿ ನೋಡಬಹುದಾಗಿದೆ. ಈ ರೇಂಜ್ ರೋವರ್ ವೆಲಾರ್‍ನಲ್ಲಿ ಆಲ್ ಟೆರೇನ್ ಪ್ರೊಗ್ರೆಸ್ ಕಂಟ್ರೊಲ್ ಸಿಸ್ಟಂ ಅಳವಡಿಸಲಾಗಿದ್ದು, ಇದರಿಂದ ಚಾಲಕರಿಗೆ ಸ್ಲಿಪರಿ ಜಾಗಗಳಲ್ಲಿ, ಕೆಸರು ರಸ್ತೆಗಳಲ್ಲಿ, ಹುಲ್ಲು ರಸ್ತೆಗಳಲ್ಲಿ ಮತ್ತು ಕಡಿದಾದ ರಸ್ತೆಗಳಲ್ಲಿ ವಾಹನದ ವೇಗವನ್ನು ಹೆಚ್ಚಿಸಲು, ನಿಯಂತ್ರಿಸಲು ಅನುಕೂಲವಾಗುತ್ತದೆ. ರೇಂಜ್ ರೋವರ್ ವೆಲಾರ್‍ನ ಇಂಟಿರಿಯರ್‍ನಲ್ಲಿ ಕಸ್ಟಮೇಬಲ್ ಇಂಟಿರಿಯರ್ ಲೈಟಿಂಗ್, ಸ್ಲೈಡ್ ಆಗುವ ಪನೋರಮಿಕ್ ರೂಫ್, ಫೋರ್ ಝೋನ್ ಕ್ಲೈಮೆಟ್ ಕಂಟ್ರೊಲ್ ಮತ್ತು ಡ್ರೈವಿಂಗ್ ಅನುಭವವನ್ನು ಹೆಚ್ಚಿಸಲು ಸ್ಪೋರ್ಟ್ಸ್ ಕಮಾಂಡ್ ಪೊಸಿಷನ್‍ಗಳನ್ನು ಅಳವಡಿಸಲಾಗಿದೆ.

ಈ ವಾಹನವು ಆಕ್ಟಿವಿಟಿ ಕೀ ವ್ರಿಸ್ಟ್ ಬ್ಯಾಂಡ್ ಹೊಂದಿದ್ದು, ಅದು ಆಕ್ಸೆಸಾಬಿಲಿಟಿಯನ್ನು ಸುಲಭವಾಗಿಸಿ, ಕೀ ಲೆಸ್ ಎಂಟ್ರಿಗೆ ಅವಕಾಶ ನೀಡಿ ಸಾಂಪ್ರಾದಾಯಿಕ ಕೀ ಮಾದರಿಯನ್ನು ಇಲ್ಲವಾಗಿಸುತ್ತದೆ.

ಭಾರತದ ಎಕ್ಸ್ ಶೋರೂಂ ದರದಲ್ಲಿರುವಂತೆ ರೇಂಜ್ ರೋವರ್ ವೆಲಾರ್‍ನ ಬೆಲೆಯು ರೂ.72.47 ಲಕ್ಷಗಳಾಗಿದೆ.

ಜಾಗ್ವಾರ್ ಲ್ಯಾಂಡ್ ರೋವರ್ ವಾಹನವನ್ನು ದೇಶಾದ್ಯಂತವಿರುವ 26 ಅಧಿಕೃತ ಡೀಲರ್‍ಗಳು ಮಾರಾಟ ಮಾಡಲಿದ್ದಾರೆ. ಭಾರತದಲ್ಲಿರುವ ರೇಂಜ್ ರೋವರ್ ಸರಣಿಯಲ್ಲಿ ಡಿಸ್ಕವರಿ ಸ್ಪೋರ್ಟ್, ರೇಂಜ್ ರೋವರ್ ಇವೋಕ್, ರೇಂಜ್ ರೋವರ್ ಡಿಸ್ಕವರಿ, ರೇಂಜ್ ರೋವರ್ ಸ್ಪೋರ್ಟ್, ರೇಂಜ್ ರೋವರ್ ಮತ್ತು ಈಗ ಲಭ್ಯವಿರುವ ರೇಂಜ್ ರೋವರ್ ವೆಲಾರ್ ವಾಹನಗಳಿವೆ.