ಸೆಪ್ಟೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್..!

ರೆನಾಲ್ಟ್ ಇಂಡಿಯಾ ಸಂಸ್ಥೆಯು ಸದ್ಯ ತನ್ನ ಬಹುನೀರಿಕ್ಷಿತ ಟ್ರೈಬರ್ ಎಂಪಿವಿ ಕಾರನ್ನು ಇದೇ ತಿಂಗಳು 28ಕ್ಕೆ ಬಿಡುಗಡೆಗಾಗಿ ಸಿದ್ದಗೊಳ್ಳುತ್ತಿದ್ದು, ತದನಂತರವಷ್ಟೇ ತನ್ನ ಮತ್ತೊಂದು ಜನಪ್ರಿಯ ಹ್ಯಾಚ್‌ಬ್ಯಾಕ್ ಆವೃತ್ತಿಯಾದ ಕ್ವಿಡ್ ಫೇಸ್‌ಲಿಫ್ಟ್ ಮಾದರಿಯನ್ನು ಬಿಡುಗಡೆ ಮಾಡಲಿದೆ.

ಸೆಪ್ಟೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್..!

ಫ್ರೆಂಚ್ ಆಟೋ ಉತ್ಪಾದನಾ ಸಂಸ್ಥೆಯಾದ ರೆನಾಲ್ಟ್ ಭಾರತದಲ್ಲಿ ಭಾರೀ ಜನಪ್ರಿಯತೆ ಅಲ್ಲದ್ದಿದ್ದರೂ ಕಾರು ಮಾರಾಟದಲ್ಲಿ ಒಂದು ಹಂತದ ಯಶಸ್ವಿ ಸಾಧಿಸಿದೆ. ಎಂಟ್ರಿ ಲೆವೆಲ್ ಕಾರು ಮಾದರಿಯಾದ ಕ್ವಿಡ್ ಕಾರು ರೆನಾಲ್ಟ್ ಸಂಸ್ಥೆಗೆ ಅತಿಹೆಚ್ಚು ಜನಪ್ರಿಯತೆಯನ್ನು ತಂದುಕೊಟ್ಟಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಮತ್ತಷ್ಟು ಹೊಸತನದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುವುದು ಬಹುತೇಕ ಖಚಿತವಾಗಿದೆ.

ಸೆಪ್ಟೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್..!

ಕಾರು ಮಾರಾಟದಲ್ಲಿ ಕೆಲವು ಬದಲಾವಣೆಗಳನ್ನು ತರುತ್ತಿರುವ ರೆನಾಲ್ಟ್, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಹೊಸ ಕಾರುಗಳ ಜೊತೆಗೆ ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯ ಆವೃತ್ತಿಗಳ ಫೇಸ್‌ಲಿಫ್ಟ್ ಮಾದರಿಗಳನ್ನು ಬಿಡುಗಡೆ ಮಾಡುತ್ತಿದೆ.

ಸೆಪ್ಟೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್..!

ಪ್ರಸ್ತುತ ಮಾರುಕಟ್ಟೆಯಲ್ಲಿ ರೆನಾಲ್ಟ್ ಇಂಡಿಯಾ ಸಂಸ್ಥೆಯು ಕ್ವಿಡ್, ಡಸ್ಟರ್, ಕ್ಯಾಪ್ಚರ್ ಮತ್ತು ಲೊಡ್ಜಿ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಇದರಲ್ಲಿ ಕ್ವಿಡ್ ಮತ್ತು ಡಸ್ಟರ್ ಆವೃತ್ತಿಗಳನ್ನು ಹೊರತುಪಡಿಸಿ ಕ್ಯಾಪ್ಚರ್ ಮತ್ತು ಲೊಡ್ಜಿ ಕಾರುಗಳಿಗೆ ಅಷ್ಟಾಗಿ ಬೇಡಿಕೆಯಿಲ್ಲ.

ಸೆಪ್ಟೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್..!

ಹೀಗಾಗಿ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗುತ್ತಿರುವ ಹ್ಯಾಚ್‌ಬ್ಯಾಕ್ ಮತ್ತು ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದ ಮೇಲೆ ಹೆಚ್ಚಿನ ಗಮನ ಹರಿಸಿರುವ ರೆನಾಲ್ಟ್ ಸಂಸ್ಥೆಯು, ಕಳೆದ ತಿಂಗಳು ಡಸ್ಟರ್ ಫೇಸ್‌ಲಿಫ್ಟ್ ಬಿಡುಗಡೆಯ ನಂತರ ಇದೀಗ ಟ್ರೈಬರ್ ಎಂಪಿವಿ ಮತ್ತು ಕ್ವಿಡ್ ಫೇಸ್‌ಲಿಫ್ಟ್ ಮಾದರಿಯನ್ನು ಬಿಡುಗಡೆ ಮಾಡುತ್ತಿದೆ. ಫೇಸ್‌ಲಿಫ್ಟ್ ಆವೃತ್ತಿಗಳ ಮೂಲಕ ಗ್ರಾಹಕರ ಬೇಡಿಕೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ರೆನಾಲ್ಟ್, ಎಂಟ್ರಿ ಲೆವೆಲ್ ಕಾರುಗಳಲ್ಲಿ ಹೊಸ ಬದಲಾವಣೆಗೆ ಕಾರಣವಾಗುತ್ತಿದೆ.

ಸೆಪ್ಟೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್..!

ಹೀಗಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆ ಅನುಗುಣವಾಗಿ ಫೇಸ್‌ಲಿಫ್ಟ್ ಆವೃತ್ತಿಯಲ್ಲಿ ಮಹತ್ವದ ಬದಲಾವಣೆ ತಂದಿರುವ ರೆನಾಲ್ಟ್ ಸಂಸ್ಥೆಯು, 2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಬಿಎಸ್-6 ನಿಯಮದನ್ವಯ 0.8-ಲೀಟರ್ ಮತ್ತು 1.0-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯನ್ನು ಉನ್ನತಿಕರಿಸಿದೆ.

ಸೆಪ್ಟೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್..!

ಜೊತೆಗೆ ಫೇಸ್‌ಲಿಫ್ಟ್ ಕ್ವಿಡ್ ಮಾದರಿಯು ಹೊಸ ನಿಯಮಗಳಿಗೆ ಅನುಸಾರವಾಗಿ ಮತ್ತಷ್ಟು ಹೊಸ ಸುರಕ್ಷಾ ಕ್ರಮಗಳನ್ನು ಹೊತ್ತುಬರಲಿದ್ದು, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್, ಇಬಿಡಿ, ಹೊಸ ಮಾದರಿಯ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿರಲಿದೆ.

ಸೆಪ್ಟೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್..!

ಇದರಿಂದಾಗಿ ಹೊಸ ಕಾರು ಮಾಲಿನ್ಯ ಉತ್ಪಾದನೆಯಲ್ಲಿ ಗಣನೀಯ ಇಳಿಕೆ ಕಂಡಿದ್ದು, ಮೈಲೇಜ್ ಪ್ರಮಾಣದಲ್ಲೂ ತುಸು ಏರಿಕೆ ಕಂಡುಬರಲಿದೆ ಎನ್ನಲಾಗಿದೆ. ಇದರಿಂದ ಕಾರಿನ ಬೆಲೆಗಳು ತುಸು ದುಬಾರಿಯಾಗಲಿದ್ದು, ಪ್ರಸ್ತುತ ಮಾದರಿಗಿಂತ ರೂ. 20 ಸಾವಿರದಿಂದ ರೂ. 60 ಸಾವಿರ ತನಕ ಹೆಚ್ಚಳವಾಗಬಹುದು ಎನ್ನಲಾಗಿದೆ.

ಸೆಪ್ಟೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್..!

ಬಿಡುಗಡೆಯ ಅವಧಿ

ಮಾಹಿತಿಗಳ ಪ್ರಕಾರ, ಹೊಸ ಫೇಸ್‌ಲಿಫ್ಟ್ ಕ್ವಿಡ್ ಮಾದರಿಯು ಇದೇ ವರ್ಷ ಸೆಪ್ಟೆಂಬರ್ ಕೊನೆಯಲ್ಲಿ ಇಲ್ಲವೇ ಅಕ್ಟೋಬರ್ ಆರಂಭದಲ್ಲಿ ಬಿಡುಗಡೆಯಾಗಲಿದ್ದು, ಇದಕ್ಕೂ ಮುನ್ನ ರೆನಾಲ್ಟ್ ಸಂಸ್ಥೆಯ ಹೊಸ ಬ್ರಾಂಡ್ ಟ್ರೈಬರ್ ಎಂಪಿವಿ ಕಾರು ರಸ್ತೆಗಿಳಿಯಲಿದೆ.

ಸೆಪ್ಟೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್..!

ಈ ಮೂಲಕ ಹ್ಯಾಚ್‌ಬ್ಯಾಕ್ ಮಾದರಿಗಳಾದ ಮಾರುತಿ ಸುಜುಕಿ ಆಲ್ಟೋ 800, ನಿಸ್ಸಾನ್ ಮೈಕ್ರಾ, ಹ್ಯುಂಡೈ ಸ್ಯಾಂಟ್ರೋ ಮತ್ತು ಡಸ್ಟನ್ ಕಾರುಗಳಿಗೆ ಇದು ತೀವ್ರ ಪೈಟೋಟಿ ನೀಡಲಿದ್ದು, ತಾಂತ್ರಿಕವಾಗಿ ಮತ್ತಷ್ಟು ಬಲಿಷ್ಠ ಹೊಂದಿರುವುದು ಗ್ರಾಹಕರನ್ನು ಆಕರ್ಷಿಸಲಿದೆ.

Source: Cartoq

Article Published On: Saturday, August 17, 2019, 13:37 [IST]
English summary
According to media reports, Renault is planning to launch KWID facelift model in India by next month.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+