ಟ್ರೈಬರ್ ಬಿಡುಗಡೆಯ ನಂತರ ಲೋಡ್ಜಿ ಸ್ಥಗಿತಕ್ಕೆ ಮುಂದಾದ ರೆನಾಲ್ಟ್

ರೆನಾಲ್ಟ್ ಸಂಸ್ಥೆಯು ಸದ್ಯ ಹೊಸ ಕಾರುಗಳ ಮಾರಾಟದಲ್ಲಿ ಮಹತ್ವದ ಬದಲಾವಣೆ ತರುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರು ಉತ್ಪನ್ನಗಳತ್ತ ಹೆಚ್ಚು ಗಮನಹರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮಾರಾಟದಲ್ಲಿ ತೀವ್ರ ಹಿನ್ನಡೆ ಅನುಭವಿಸುತ್ತಿರುವ ಲೋಡ್ಜಿ ಎಂಪಿವಿ ಮಾದರಿಯನ್ನು ಸ್ಥಗಿತಗೊಳಿಸುವ ಸುಳಿವು ನೀಡಿದೆ.

ಟ್ರೈಬರ್ ಬಿಡುಗಡೆಯ ನಂತರ ಲೋಡ್ಜಿ ಸ್ಥಗಿತಕ್ಕೆ ಮುಂದಾದ ರೆನಾಲ್ಟ್

ಹೌದು, ರೆನಾಲ್ಟ್ ಸಂಸ್ಥೆಯು ಕ್ವಿಡ್ ಮತ್ತು ಡಸ್ಟರ್ ಕಾರುಗಳನ್ನು ಹೊರತುಪಡಿಸಿ ಇನ್ನುಳಿದ ಕಾರು ಮಾದರಿಗಳ ಮಾರಾಟದಲ್ಲಿ ಭಾರೀ ಹಿನ್ನಡೆ ಅನುಭವಿಸುತ್ತಿದ್ದು, 8 ಸೀಟರ್ ಮಾದರಿಯಾದ ಲೋಡ್ಜಿ ಎಂಪಿವಿ ಕಾರನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿದೆ. ಕಾರು ಮಾರಾಟದಲ್ಲಿ ಸತತ ಹಿನ್ನಡೆ ಅನುಭವಿಸುತ್ತಿರುವ ಲೋಡ್ಜಿ ಕಾರು ಪ್ರಯಾಣಿಕರ ಸುರಕ್ಷತೆಯಲ್ಲೂ ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಬಿಎಸ್-6 ನಿಯಮಗಳಿಗೆ ಉನ್ನತೀಕರಣಗೊಳ್ಳುವ ಬದಲು ಮಾರುಕಟ್ಟೆಯಿಂದ ನಿರ್ಗಮಿಸುವ ಹಾದಿಯಲ್ಲಿದೆ.

ಟ್ರೈಬರ್ ಬಿಡುಗಡೆಯ ನಂತರ ಲೋಡ್ಜಿ ಸ್ಥಗಿತಕ್ಕೆ ಮುಂದಾದ ರೆನಾಲ್ಟ್

2020ರ ಏಪ್ರಿಲ್ 1ರಿಂದ ಬಿಎಸ್-6 ನಿಯಮವು ಜಾರಿಗೆ ಬರುತ್ತಿದ್ದು, ಹೊಸ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಿರುವ ಕಾರು ಉತ್ಪಾದನಾ ಸಂಸ್ಥೆಗಳು ಪ್ರಸ್ತುತ ಮಾರುಕಟ್ಟೆಯಲ್ಲಿರುವ ವಾಹನಗಳ ಎಂಜಿನ್ ಸುಧಾರಣೆ ಜೊತೆಗೆ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಗಮನಹರಿಸಬೇಕಿದೆ.

ಟ್ರೈಬರ್ ಬಿಡುಗಡೆಯ ನಂತರ ಲೋಡ್ಜಿ ಸ್ಥಗಿತಕ್ಕೆ ಮುಂದಾದ ರೆನಾಲ್ಟ್

ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ತಗ್ಗಿಸುವುದು ಮತ್ತು ಪ್ರಯಾಣಿಕರಿಗೆ ಗರಿಷ್ಠ ಸುರಕ್ಷಾ ಕ್ರಮಗಳನ್ನು ನೀಡುವುದೇ ಬಿಎಸ್-6 ನಿಯಮ ಜಾರಿಗೆ ಮುಖ್ಯ ಉದ್ದೇಶವಾಗಿದ್ದು, ಹೊಸ ನಿಯಮ ಪಾಲನೆ ಮಾಡಲು ಸಾಧ್ಯವಿಲ್ಲದ ಹಲವು ಕಾರು ಉತ್ಪನ್ನಗಳು ಮಾರಾಟದಿಂದ ಸ್ಥಗಿತಗೊಳ್ಳಲಿವೆ.

ಟ್ರೈಬರ್ ಬಿಡುಗಡೆಯ ನಂತರ ಲೋಡ್ಜಿ ಸ್ಥಗಿತಕ್ಕೆ ಮುಂದಾದ ರೆನಾಲ್ಟ್

ಬಿಎಸ್-6 ನಿಯಮದಿಂದಾಗಿ ರೆನಾಲ್ಟ್ ಸಂಸ್ಥೆಯ ಲೋಡ್ಜಿ ಕಾರು ಮಾರಾಟಕ್ಕೂ ಹಲವು ಸವಾಲುಗಳು ಎದುರಾಗಿದ್ದು, ಹೊಸ ನಿಯಮಕ್ಕೆ ಅನುಗುಣವಾಗಿ ಎಂಜಿನ್ ಉತ್ಪಾದನೆಯಲ್ಲಿ ಸುಧಾರಣೆ ತರುವುದಲ್ಲದೇ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಕನಿಷ್ಠ 3ರಿಂದ 4 ಸ್ಟಾರ್ ರೇಟಿಂಗ್ ಪಡೆದುಕೊಳ್ಳಬೇಕಿದೆ. ಆದರೆ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಕಳೆದ ಬಾರಿ ಕೇವಲ ಒಂದೇ ಒಂದು ಅಂಕ ಗಿಟ್ಟಿಸಿಕೊಳ್ಳಲು ವಿಫಲವಾಗಿರುವ ಲೋಡ್ಜಿ ಇದೀಗ 4 ಸ್ಟಾರ್ ಗಿಟ್ಟಿಸಿಕೊಳ್ಳುವುದು ಅನುಮಾನವಿದೆ.

ಟ್ರೈಬರ್ ಬಿಡುಗಡೆಯ ನಂತರ ಲೋಡ್ಜಿ ಸ್ಥಗಿತಕ್ಕೆ ಮುಂದಾದ ರೆನಾಲ್ಟ್

ಒಂದು ವೇಳೆ ಲೋಡ್ಜಿ ಕಾರನ್ನು ಬಿಎಸ್-6 ನಿಯಮದಂತೆ ಉನ್ನತೀಕರಿಸಿ ಬಿಡುಗಡೆ ಮಾಡಿದರೂ ಸಹ ಕಾರಿನ ಬೆಲೆಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬೆಲೆಗಿಂತಲೂ ಕನಿಷ್ಠ ರೂ. 1.50 ಲಕ್ಷ ರಿಂದ ರೂ.2.50 ಲಕ್ಷ ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿದೆ.

ಟ್ರೈಬರ್ ಬಿಡುಗಡೆಯ ನಂತರ ಲೋಡ್ಜಿ ಸ್ಥಗಿತಕ್ಕೆ ಮುಂದಾದ ರೆನಾಲ್ಟ್

ಈಗಾಗಲೇ ಮಾರಾಟವಿಲ್ಲದೆ ಗ್ರಾಹಕರ ಆಯ್ಕೆಯಿಂದ ಹಿಂದೆ ಸರಿದಿರುವ ಲೋಡ್ಜಿ ಕಾರಿನ ಬೆಲೆಯು ಬಿಎಸ್-6 ನಿಯಮಕ್ಕೆ ಉನ್ನತೀಕರಿಸಿದ ಮತ್ತಷ್ಟು ಬೆಲೆ ಏರಿಕೆಯಾದಲ್ಲಿ ಸಂಪೂರ್ಣ ನೆಲಕಚ್ಚುವ ಸಾಧ್ಯತೆಯಿದ್ದು, ಇದೇ ಕಾರಣಕ್ಕೆ ಲೋಡ್ಜಿ ಮಾರಾಟವನ್ನೇ ಸ್ಥಗಿತಗೊಳಿಸುವ ನಿರ್ಧರಿಸಲಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಟ್ರೈಬರ್ ಬಿಡುಗಡೆಯ ನಂತರ ಲೋಡ್ಜಿ ಸ್ಥಗಿತಕ್ಕೆ ಮುಂದಾದ ರೆನಾಲ್ಟ್

2015ರ ಏಪ್ರಿಲ್‌ನಲ್ಲಿ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದ ಲೋಡ್ಜಿ ಎಂಪಿವಿ ಕಾರು 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.8.63 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 12.11 ಲಕ್ಷ ಬೆಲೆ ಪಡೆದುಕೊಂಡಿದೆ.

MOST READ: ಮಕಾಡೆ ಮಲಗಿರುವ ಆಟೋ ಉದ್ಯಮಕ್ಕೆ ಮತ್ತೆ ಚುರುಕು ನೀಡಿದ ಕೇಂದ್ರ ಸರ್ಕಾರ..!

ಟ್ರೈಬರ್ ಬಿಡುಗಡೆಯ ನಂತರ ಲೋಡ್ಜಿ ಸ್ಥಗಿತಕ್ಕೆ ಮುಂದಾದ ರೆನಾಲ್ಟ್

ಲೋಡ್ಜಿ ಕಾರು ಮೊದಮೊದಲು ಬಿಡುಗಡೆಗೊಂಡಾಗ ಬೆಲೆ ವಿಚಾರವಾಗಿ ಗ್ರಾಹಕರನ್ನು ಸೆಳೆದರು ಕೂಡಾ ನಂತರದ ದಿನಗಳಲ್ಲಿ ಮಾರಾಟದಲ್ಲಿ ಸತತ ಹಿನ್ನಡೆ ಅನುಭವಿಸುತ್ತಲೇ ಇದೆ. ಇದರಿಂದ ಲೋಡ್ಜಿ ಉನ್ನತೀಕರಿಸುವ ಯೋಜನೆಗೆ ಮುಂದಾಗದ ರೆನಾಲ್ಟ್ ಸಂಸ್ಥೆಯು ಗ್ರಾಹಕರ ಬೇಡಿಕೆಯೆಂತೆ ಎಂಟ್ರಿ ಲೆವಲ್‌ನಲ್ಲಿ ಟ್ರೈಬರ್ ಎಂಪಿವಿ ಕಾರನ್ನು ಬಿಡುಗಡೆ ಮಾಡಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಟ್ರೈಬರ್ ಬಿಡುಗಡೆಯ ನಂತರ ಲೋಡ್ಜಿ ಸ್ಥಗಿತಕ್ಕೆ ಮುಂದಾದ ರೆನಾಲ್ಟ್

ಟ್ರೈಬರ್ ಎಂಪಿವಿ ಕಾರು ಸಣ್ಣ ಗಾತ್ರದ 7 ಸೀಟರ್ ಕಾರು ಮಾದರಿಯಾಗಿದ್ದು, 1.0-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರುವ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.95 ಲಕ್ಷಕ್ಕೆ ಮತ್ತು ಹೈ ಎಂಡ್ ಮಾದರಿಯು 6.49 ಲಕ್ಷ ಬೆಲೆ ಹೊಂದಿದೆ.

Source:cartoq

Most Read Articles

Kannada
English summary
French car maker, Renault is planning to discontinue their Lodgy MPV in India soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X