ದೀಪಾವಳಿ ಉತ್ಸವಕ್ಕೆ ದಿನಗಣನೆ- ರೆನಾಲ್ಟ್ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್

ರೆನಾಲ್ಟ್ ತನ್ನ ಜನಪ್ರಿಯ ಕಾರು ಆವೃತ್ತಿಗಳ ಮೇಲೆ ದೀಪಾವಳಿ ಉತ್ಸವಕ್ಕಾಗಿ ಭರ್ಜರಿ ಆಫರ್ ಘೋಷಣೆ ಮಾಡಿದ್ದು, ಡಸ್ಟರ್ ಎಸ್‌ಯುವಿ ಮೇಲೆ ಗರಿಷ್ಠ ಮಟ್ಟದ ಆಫರ್‌ ನೀಡುತ್ತಿದೆ. ರೆನಾಲ್ಟ್ ಸದ್ಯ ಡಸ್ಟರ್ ಫೇಸ್‌ಲಿಫ್ಟ್ ಆವೃತ್ತಿಯ ಮಾರಾಟದಲ್ಲಿ ಮುಂಚೂಣಿಯಲ್ಲಿದ್ದರೂ ಸಹ ಹಳೆಯ ಆವೃತ್ತಿಯ ಮೇಲೆ ಆಕರ್ಷಕ ಆಫರ್‌ಗಳನ್ನು ಪ್ರಕಟಿಸಿದೆ.

ದೀಪಾವಳಿ ಉತ್ಸವಕ್ಕೆ ದಿನಗಣನೆ- ರೆನಾಲ್ಟ್ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್

ಫೇಸ್‌ಲಿಫ್ಟ್ ಆವೃತ್ತಿಗಳ ಮೂಲಕ ಕಾರು ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಲು ಮುಂದಾಗಿರುವ ರೆನಾಲ್ಟ್ ಸಂಸ್ಥೆಯು ಈಗಾಗಲೇ ಡಸ್ಟರ್ ಹೊಸ ಆವೃತ್ತಿಯನ್ನು ಬಿಡುಗಡೆಗೊಳಿಸಿದ್ದು, ಇದೀಗ ಕ್ವಿಡ್ ಮತ್ತು ಕ್ಯಾಚ್ಟರ್ ಕಾರುಗಳ ಫೇಸ್‌ಲಿಫ್ಟ್ ಆವೃತ್ತಿಗಳನ್ನು ಬಿಡುಗಡೆಯ ಯೋಜನೆಯಲ್ಲಿದೆ. ಇದರಿಂದಾಗಿಯೇ ಹಳೆಯ ಸ್ಟಾಕ್ ಮೇಲೆ ದೀಪಾವಳಿ ವಿಶೇಷತೆಗಾಗಿ ಭರ್ಜರಿ ಡಿಸ್ಕೌಂಟ್‌ಗಳನ್ನು ನೀಡಲಾಗುತ್ತಿದ್ದು, ಯಾವ ಕಾರಿನ ಮೇಲೆ ಎಷ್ಟು ಪ್ರಮಾಣದ ಡಿಸ್ಕೌಂಟ್ ಲಭ್ಯವಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...

ದೀಪಾವಳಿ ಉತ್ಸವಕ್ಕೆ ದಿನಗಣನೆ- ರೆನಾಲ್ಟ್ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್

ಡಸ್ಟರ್ ಕಂಪ್ಯಾಕ್ಟ್ ಎಸ್‌ಯುವಿ

ರೆನಾಲ್ಟ್ ಸಂಸ್ಥೆಯು ಹಳೆಯ ಡಸ್ಟರ್ ಆವೃತ್ತಿ ಮೇಲೆ ಗರಿಷ್ಠ ರೂ.1 ಲಕ್ಷದ ತನಕ ಗರಿಷ್ಠ ಡಿಸ್ಕೌಂಟ್ ನೀಡಲಾಗಿದ್ದು, ಪ್ರತಿ ಡೀಸೆಲ್ ವೆರಿಯೆಂಟ್ ಮೇಲೂ ಈ ಡಿಸ್ಕೌಂಟ್ ಲಭ್ಯವಿದ್ದು, ವಿಶೇಷ ಗ್ರಾಹಕರಿಗೆ ಇನ್ನಷ್ಟು ಉಚಿತ ಸರ್ವಿಸ್ ಸೌಲಭ್ಯಗಳನ್ನು ಉಚಿತವಾಗಿ ನೀಡಲಿದೆ.

ದೀಪಾವಳಿ ಉತ್ಸವಕ್ಕೆ ದಿನಗಣನೆ- ರೆನಾಲ್ಟ್ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್

ಕ್ಯಾಪ್ಚರ್ ಕ್ರಾಸ್ಓವರ್

ಎಸ್‌ಯುವಿ ಮಾದರಿಯಾದ ಕ್ಯಾಚ್ಚರ್ ಕಾರು ಖರೀದಿ ಮೇಲೂ ರೂ.1 ಲಕ್ಷದ ತನಕ ಗರಿಷ್ಠ ಮಟ್ಟದ ಡಿಸ್ಕೌಂಟ್ ನೀಡಲಾಗಿದ್ದು, ಕ್ಯಾಪ್ಚರ್ ಆವೃತ್ತಿಯು ಮುಂದಿನ ಕೆಲವೇ ದಿನಗಳಲ್ಲಿ ಫೇಸ್‌ಲಿಫ್ಟ್ ಆವೃತ್ತಿಯೊಂದಿಗೆ ಬಿಡುಗಡೆಯಾಗುತ್ತಿವೆ.

ದೀಪಾವಳಿ ಉತ್ಸವಕ್ಕೆ ದಿನಗಣನೆ- ರೆನಾಲ್ಟ್ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್

ಕ್ವಿಡ್ ಹ್ಯಾಚ್‌ಬ್ಯಾಕ್

ಎಂಟ್ರಿ ಲೆವಲ್ ಕಾರುಗಳಲ್ಲಿ ಉತ್ತಮ ಬೇಡಿಕೆ ಹೊಂದಿರುವ ಕ್ವಿಡ್ ಕಾರುಗಳು ಆಕರ್ಷಕ ಬೆಲೆ ಮತ್ತು ಹೆಚ್ಚಿನ ಮಟ್ಟದ ಮೈಲೇಜ್‌ನೊಂದಿಗೆ ಹ್ಯಾಚ್‌ಬ್ಯಾಕ್ ಪ್ರಿಯರ ಆಯ್ಕೆಯಲ್ಲಿ ಮುಂಚೂಣಿಯಲ್ಲಿದ್ದು, ಈ ಕಾರಿನ ಮೇಲೂ ರೆನಾಲ್ಟ್ ಸಂಸ್ಥೆಯು ರೂ.40 ಸಾವಿರ ಡಿಸ್ಕೌಂಟ್ ಜೊತೆಗೆ ಸೀಮಿತ ಅವಧಿಯಲ್ಲಿ ಖರೀದಿ ಮಾಡಿದ ಗ್ರಾಹಕರಿಗೆ 4 ವರ್ಷಗಳ ಕಾಲ ಉಚಿತ ಸರ್ವಿಸ್ ಸೌಲಭ್ಯವನ್ನು ನೀಡಲು ನಿರ್ಧರಿಸಿದೆ. ಹೀಗಾಗಿ ಇದು ಬಜೆಟ್ ಬೆಲೆಗಳಲ್ಲಿ ಎಂಟ್ರಿ ಲೆವಲ್ ಕಾರು ಖರೀದಿದಾರರಿಗೆ ಉತ್ತಮ ಅವಕಾಶ ಎನ್ನಬಹುದು.

ದೀಪಾವಳಿ ಉತ್ಸವಕ್ಕೆ ದಿನಗಣನೆ- ರೆನಾಲ್ಟ್ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್

ಪೇಟಿಎಂನಲ್ಲಿ ಬುಕ್ ಮಾಡಿದ್ರೆ ಹೆಚ್ಚು ಲಾಭ..!

ಹೌದು, ರೆನಾಲ್ಟ್ ಸಂಸ್ಥೆಯ ಕಾರುಗಳ ಮೇಲೆ ಇನ್ನು ಹೆಚ್ಚಿನ ಡಿಸ್ಕೌಂಟ್ ಬಯಸುವ ಗ್ರಾಹಕರಿಗೆ ಸುವರ್ಣವಕಾಶ ನೀಡಲಾಗಿದ್ದು, ಸೆಪ್ಟೆಂಬರ್ 17ರಿಂದ 28ರ ಅವಧಿಯಲ್ಲಿ ಪೇಟಿಎಂ ಮೂಲಕ ಬುಕ್ ಮಾಡಿದ್ದಲ್ಲಿ ಹೆಚ್ಚುವರಿ ರೂ.5 ಸಾವಿರ ಕ್ಯಾಶ್‌ಬ್ಯಾಕ್ ಆಫರ್ ಅನ್ನು ಸಹ ನೀಡಲಾಗಿದೆ.

ದೀಪಾವಳಿ ಉತ್ಸವಕ್ಕೆ ದಿನಗಣನೆ- ರೆನಾಲ್ಟ್ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್

ಈ ಮೇಲಿನ ಆಫರ್‌ಗಳು ಸೀಮಿತ ಅವಧಿಗೆ ಮಾತ್ರವೇ ಲಭ್ಯವಿರಲಿದ್ದು, ಡೀಲರ್ಸ್ ಮಟ್ಟದಲ್ಲಿ ಇನ್ನು ಕೆಲವು ಹೆಚ್ಚುವರಿ ಆಫರ್‌ಗಳು ದೊರೆಯುವ ಸಾಧ್ಯತೆಗಳಿವೆ. ಹೀಗಾಗಿ ಕಾರು ಖರೀದಿಗೂ ಮುನ್ನ ಆಫರ್ ಬೆಲೆಗಳ ಮೇಲೆ ಕೂಲಂಕುಶವಾಗಿ ವಿಚಾರಿಸಿದ ನಂತರವೇ ಮುಂದಿನ ವ್ಯವಹಾರ ಕೈಗೊಳ್ಳಿ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಭರ್ಜರಿ ಆಫರ್

ದೀಪಾವಳಿ ಉತ್ಸವಕ್ಕೆ ದಿನಗಣನೆ- ರೆನಾಲ್ಟ್ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್

ಇನ್ನು ರೆನಾಲ್ಟ್ ಇಂಡಿಯಾ ಸಂಸ್ಥೆಯು ತನ್ನ ಬಹುನೀರಿಕ್ಷಿತ ಡಸ್ಟರ್ ಫೇಸ್‌ಲಿಫ್ಟ್ ಆವೃತ್ತಿಯನ್ನು ಕಳೆದ ತಿಂಗಳ ಹಿಂದೆಯೇ ಬಿಡುಗಡೆ ಮಾಡಿದ್ದು, ಈ ಹಿಂದಿನ ಆವೃತ್ತಿಗಿಂತ ವಿನ್ಯಾಸದಲ್ಲಿ ತುಸು ಬದಲಾವಣೆಗಳನ್ನು ಪಡೆದುಕೊಳ್ಳುವ ಮೂಲಕ ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಮತ್ತಷ್ಟು ಸದ್ದು ಮಾಡುತ್ತಿದೆ.

MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ದೀಪಾವಳಿ ಉತ್ಸವಕ್ಕೆ ದಿನಗಣನೆ- ರೆನಾಲ್ಟ್ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್

ಡಸ್ಟರ್ ಫೇಸ್‌ಲಿಫ್ಟ್ ಆವೃತ್ತಿಯು ಈ ಹಿಂದಿನಂತೆಯೇ ಒಟ್ಟು ಒಂಬತ್ತು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಕಾರಿನಲ್ಲಿ ನೀಡಲಾಗಿರುವ ಸೌಲಭ್ಯಗಳಿಗೆ ಅನುಗುಣವಾಗಿ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.7.99 ಲಕ್ಷಕ್ಕೆ ಮತ್ತು ಅತ್ಯುತ್ತಮ ಫೀಚರ್ಸ್ ಹೊಂದಿರುವ ಟಾಪ್ ಎಂಡ್ ಮಾದರಿಗೆ ರೂ.12.50 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ದೀಪಾವಳಿ ಉತ್ಸವಕ್ಕೆ ದಿನಗಣನೆ- ರೆನಾಲ್ಟ್ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್

ಇದಲ್ಲದೇ ರೆನಾಲ್ಟ್ ನಿರ್ಮಾಣದ ಕಾರುಗಳಲ್ಲಿ ಮುಂಚೂಣಿಯಲ್ಲಿರುವ ಟ್ರೈಬರ್ ಕೂಡಾ ಇದೀಗ ಹೆಚ್ಚು ಮಾರಾಟದೊಂದಿದೆ ರೆನಾಲ್ಟ್ ಸಂಸ್ಥೆಗೆ ಭಾರೀ ಲಾಭ ತಂದುಕೊಟ್ಟಿದ್ದು, ಟ್ರೈಬರ್ ಎಂಪಿವಿ ಕಾರು ಸಣ್ಣ ಗಾತ್ರದ 7 ಸೀಟರ್ ಕಾರು ಮಾದರಿಯಾಗಿದೆ.

ದೀಪಾವಳಿ ಉತ್ಸವಕ್ಕೆ ದಿನಗಣನೆ- ರೆನಾಲ್ಟ್ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್

1.0-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರುವ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.95 ಲಕ್ಷಕ್ಕೆ ಮತ್ತು ಹೈ ಎಂಡ್ ಮಾದರಿಯು 6.49 ಲಕ್ಷ ಬೆಲೆ ಹೊಂದಿದೆ. ಆದ್ರೆ ಫೇಸ್‌ಲಿಫ್ಟ್ ಡಸ್ಟರ್ ಮತ್ತು ಟ್ರೈಬರ್ ಮೇಲೆ ಯಾವುದೇ ಆಫರ್‌ಗಳನ್ನು ನೀಡಲಾಗಿಲ್ಲ.

Article Published On: Sunday, September 22, 2019, 13:00 [IST]
English summary
Renault India has announced heavy festive discounts on its car models, this festive season.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+