ಡೀಸೆಲ್ ಎಂಜಿನ್ ಉತ್ಪಾದನೆಗೆ ಗುಡ್‌ಬೈ ಹೇಳಲಿದೆಯೆಂತೆ ರೆನಾಲ್ಟ್?

ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣಕ್ಕೆ ಪರಿಣಾಮಕಾರಿಯಾಗಿ ಬ್ರೇಕ್ ಹಾಕುವ ಉದ್ದೇಶದಿಂದ ಆಟೋ ಉದ್ಯಮದಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ತರಲಾಗುತ್ತಿದ್ದು, ರೆನಾಲ್ಟ್ ಸೇರಿದಂತೆ ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ಡೀಸೆಲ್ ಎಂಜಿನ್ ಕಾರು ಮಾರಾಟವನ್ನು ಸ್ಥಗಿತಗೊಳಿಸುವ ಸುಳಿವು ನೀಡಿವೆ.

ಡೀಸೆಲ್ ಎಂಜಿನ್ ಉತ್ಪಾದನೆಗೆ ಗುಡ್‌ಬೈ ಹೇಳಲಿದೆಯೆಂತೆ ರೆನಾಲ್ಟ್?

ಹೌದು, ಡೀಸೆಲ್ ಎಂಜಿನ್ ವಾಹನಗಳು ಮಾಲಿನ್ಯ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿದ್ದು, ಮುಂದಿನ ದಿನಗಳಲ್ಲಿ ಜಾರಿಗೆ ಬರಲಿರುವ ಬಿಎಸ್-6 (ಭಾರತ್ ಸ್ಟೇಜ್) ನಿಯಮವು ಕಡಿಮೆ ಸಾಮಾರ್ಥ್ಯದ ಡೀಸೆಲ್ ಎಂಜಿನ್ ಉತ್ಪಾದನೆಗೆ ಬ್ರೇಕ್ ಹಾಕಲಿದೆ. ಹೀಗಾಗಿಯೇ ರೆನಾಲ್ಟ್, ಮಾರುತಿ ಸುಜುಕಿ ಸೇರಿದಂತೆ ಹಲವು ಕಾರು ಉತ್ಪಾದನಾ ಸಂಸ್ಥೆಗಳು ತಮ್ಮ ಜನಪ್ರಿಯ ಡೀಸೆಲ್ ಎಂಜಿನ್ ಕಾರುಗಳ ಮಾರಾಟವನ್ನು ಕೈಬಿಟ್ಟು ಪೆಟ್ರೋಲ್, ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ಆವೃತ್ತಿಗಳ ಉತ್ಪಾದನೆಯತ್ತ ಹೆಚ್ಚಿನ ಗಮನಹರಿಸಲು ಮುಂದಾಗಿವೆ.

ಡೀಸೆಲ್ ಎಂಜಿನ್ ಉತ್ಪಾದನೆಗೆ ಗುಡ್‌ಬೈ ಹೇಳಲಿದೆಯೆಂತೆ ರೆನಾಲ್ಟ್?

ಈಗಾಗಲೇ ಮಾರುತಿ ಸುಜುಕಿ ಸಂಸ್ಥೆಯು ಅಧಿಕೃತವಾಗಿಯೇ ಕಡಿಮೆ ಸಾಮಾರ್ಥ್ಯದ ಡೀಸೆಲ್ ಎಂಜಿನ್‌ ಕಾರುಗಳ ಮಾರಾಟವನ್ನು 2020ರ ಏಪ್ರಿಲ್‌ನಿಂದ ಬಂದ್ ಮಾಡುವುದಾಗಿ ಹೇಳಿಕೊಂಡಿದ್ದು, ಪೆಟ್ರೋಲ್ ಹೈಬ್ರಿಡ್ ಕಾರುಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದೆ.

ಡೀಸೆಲ್ ಎಂಜಿನ್ ಉತ್ಪಾದನೆಗೆ ಗುಡ್‌ಬೈ ಹೇಳಲಿದೆಯೆಂತೆ ರೆನಾಲ್ಟ್?

ಇದೀಗ ರೆನಾಲ್ಟ್ ಕೂಡಾ ಡೀಸೆಲ್ ಎಂಜಿನ್ ಕಾರುಗಳ ಮಾರಾಟಕ್ಕೆ ಗುಡ್‌ಬೈ ಹೇಳುವ ಮುನ್ಸೂಚನೆ ನೀಡಿದ್ದು, ನಿನ್ನೆಯಷ್ಟೇ ಅನಾವರಣಗೊಳಿಸಲಾದ ಟ್ರೈಬರ್ ಎಂಪಿವಿ ಕಾರಿನಲ್ಲೂ ಸಹ ಪೆಟ್ರೋಲ್ ಹೊರತುಪಡಿಸಿ ಡೀಸೆಲ್ ಎಂಜಿನ್ ಆಯ್ಕೆಯನ್ನು ಕೈಬಿಟ್ಟಿದೆ.

ಡೀಸೆಲ್ ಎಂಜಿನ್ ಉತ್ಪಾದನೆಗೆ ಗುಡ್‌ಬೈ ಹೇಳಲಿದೆಯೆಂತೆ ರೆನಾಲ್ಟ್?

ಹಾಗೆಯೇ ಮುಂಬರುವ ದಿನಗಳಲ್ಲಿ ಬಿಡುಗಡೆಗೆ ಸಜ್ಜಾಗುತ್ತಿರುವ ಕ್ಯಾಪ್ಚರ್, ಡಸ್ಟರ್ ಫೇಸ್‌ಲಿಫ್ಟ್ ಆವೃತ್ತಿಗಳಲ್ಲೂ ಡೀಸೆಲ್ ಎಂಜಿನ್ ಆಯ್ಕೆಗಳನ್ನು ತಗ್ಗಿಸಿ ಪೆಟ್ರೋಲ್ ಮತ್ತು ಹೈಬ್ರಿಡ್ ಆವೃತ್ತಿಗಳ ಮಾರಾಟಕ್ಕೆ ಹೆಚ್ಚಿನ ಒತ್ತು ನೀಡಲಿದ್ದು, ತದನಂತರ ನಿಧಾನವಾಗಿ ಡೀಸೆಲ್ ಎಂಜಿನ್‌ಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಲಿದೆ.

ಡೀಸೆಲ್ ಎಂಜಿನ್ ಉತ್ಪಾದನೆಗೆ ಗುಡ್‌ಬೈ ಹೇಳಲಿದೆಯೆಂತೆ ರೆನಾಲ್ಟ್?

ಇನ್ನು 2020ರ ಏಪ್ರಿಲ್ 1ರಿಂದ ದೇಶಾದ್ಯಂತ ಬಿಎಸ್-6 ನಿಯಮವು ಜಾರಿಗೆ ಬರುತ್ತಿದ್ದು, ಚಾಲ್ತಿಯಲ್ಲಿರುವ ಬಿಎಸ್-4 ವಾಹನಗಳ ಉತ್ಪಾದನೆ ಮತ್ತು ಮಾರಾಟವು ಸಂಪೂರ್ಣವಾಗಿ ಬಂದ್ ಆಗಲಿದೆ. ಹೀಗಾಗಿ ಬಿಎಸ್-6 ನಿಯಮಕ್ಕೆ ಅನುಗುಣವಾಗಿ ಉನ್ನತಿಕರಣ ಸಾಧ್ಯವಿಲ್ಲದ ಡೀಸೆಲ್ ಎಂಜಿನ್‌ಗಳನ್ನು ಸ್ಥಗಿತಗೊಳಿಸುವುದು ಅನಿವಾರ್ಯವಾಗಿದೆ.

ಡೀಸೆಲ್ ಎಂಜಿನ್ ಉತ್ಪಾದನೆಗೆ ಗುಡ್‌ಬೈ ಹೇಳಲಿದೆಯೆಂತೆ ರೆನಾಲ್ಟ್?

ಒಂದು ವೇಳೆ ಸದ್ಯ ಮಾರುಕಟ್ಟೆಯಲ್ಲಿರುವ ಬಿಎಸ್-4 ಡೀಸೆಲ್ ಎಂಜಿನ್‌ಗಳನ್ನು ಬಿಎಸ್-6 ನಿಯಮಕ್ಕೆ ಉನ್ನತಿಕರಿಸಿದರೂ ಸಹ ಕಾರಿನ ಬೆಲೆಗಳು ಕನಿಷ್ಠ ರೂ. 1.50 ರಿಂದ ರೂ.2 ಲಕ್ಷ ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿವೆ.

ಡೀಸೆಲ್ ಎಂಜಿನ್ ಉತ್ಪಾದನೆಗೆ ಗುಡ್‌ಬೈ ಹೇಳಲಿದೆಯೆಂತೆ ರೆನಾಲ್ಟ್?

ಇದರಿಂದಾಗಿ ಅಗ್ಗದ ಕಾರು ಉನ್ಪತ್ನಗಳನ್ನು ಮಾರಾಟಮಾಡುವ ಕಾರು ಸಂಸ್ಥೆಗಳಿಗೆ ಇದು ಬಿಸಿತುಪ್ಪವಾಗಿ ಪರಿಣಮಿಸಲಿದ್ದು, ಕಾರುಗಳ ಬೆಲೆಗಳನ್ನು ಒಂದೇ ಬಾರಿಗೆ ರೂ.1.50 ಲಕ್ಷ ರೂ. 2 ಲಕ್ಷ ಹೆಚ್ಚಳ ಮಾಡಿದ್ದಲ್ಲಿ ಗ್ರಾಹಕರನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಡೀಸೆಲ್ ಎಂಜಿನ್ ಉತ್ಪಾದನೆಗೆ ಗುಡ್‌ಬೈ ಹೇಳಲಿದೆಯೆಂತೆ ರೆನಾಲ್ಟ್?

ಹೀಗಾಗಿ ದುಬಾರಿಯಾಗಲಿರುವ ಡೀಸೆಲ್ ಎಂಜಿನ್ ಕಾರುಗಳ ಉನ್ನತಿಕರಣ ಕೈಬಿಡಲು ಮುಂದಾಗಿರುವ ರೆನಾಲ್ಟ್ ಸೇರಿದಂತೆ ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ಡೀಸೆಲ್ ಎಂಜಿನ್ ಸರಿಸಮನಾಗಿ ಪೆಟ್ರೋಲ್ ಎಂಜಿನ್‌ಗಳನ್ನೇ ಮರುಅಭಿವೃದ್ಧಿಪಡಿಸಿ ಬಿಡುಗಡೆಗಾಗಿ ಯೋಜನೆ ರೂಪಿಸಿವೆ.

Article Published On: Thursday, June 20, 2019, 11:39 [IST]
English summary
French car maker, Renault is planning to stop diesel car production in India by next year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+